ಕನ್ನಡ ಸುದ್ದಿ  /  Astrology  /  Lucky Crystals Green Aventine Crystal Citric Crystal To Get Success In Life Astrology In Kannada Rsa

Lucky Crystals: ನಿಮ್ಮ ಜೀವನದಲ್ಲಿ ಸಂಪತ್ತು ವೃದ್ಧಿಸಿ ಯಶಸ್ಸನ್ನು ಹೆಚ್ಚಿಸಲು ನೆರವಾಗುತ್ತವೆ ಈ 5 ಸ್ಫಟಿಕಗಳು

Lucky Crystals: ಜಾತಕಕ್ಕೆ ಸರಿ ಹೊಂದುವ ಸ್ಫಟಿಕಗಳನ್ನು ಧರಿಸಿದರೆ ಜೀವನದಲ್ಲಿ ಯಶಸ್ಸು ಹಾಗೂ ಸಂಪತ್ತು ಹೆಚ್ಚುತ್ತದೆ. ಹಾಗಾದರೆ ಯಾವ್ಯಾವ ಸ್ಫಟಿಕಗಳು ಮನುಷ್ಯನ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎನ್ನುವುದಕ್ಕೆ ಮಾಹಿತಿ ಇಲ್ಲಿದೆ.

ಅದೃಷ್ಟ ತರುವ ಸ್ಫಟಿಕಗಳು
ಅದೃಷ್ಟ ತರುವ ಸ್ಫಟಿಕಗಳು (PC: Unsplash)

 Lucky Crystals: ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸಬೇಕು ಎಂದರೆ ವಾಸ್ತು ದೋಷಗಳು ಇರಬಾರದು ಎಂದು ವಾಸ್ತು ಶಾಸ್ತ್ರ ಹೇಳಿದರೆ ಗ್ರಹಗತಿಗಳು ಚೆನ್ನಾಗಿ ಇರಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕೆಲವೊಮ್ಮೆ ಇವೆರಡು ಸರಿಯಾಗಿ ಇದ್ದರೂ ಸಹ ಕೆಲವೊಂದು ಸಂಕಷ್ಟಗಳು ಎದುರಾಗುತ್ತಲೇ ಇರುತ್ತದೆ. ಇದಕ್ಕಾಗಿ ಕೆಲವೊಂದು ಆಯ್ದ ಸ್ಫಟಿಕಗಳಿದ್ದು ಇವುಗಳನ್ನು ನೀವು ಧರಿಸಿದಲ್ಲಿ ಜೀವನದಲ್ಲಿ ಸಂಪತ್ತು ಹಾಗೂ ಸಮೃದ್ಧಿ ಎರಡೂ ಹೆಚ್ಚಲಿದೆ.

ಈ ಸ್ಪಟಿಕಗಳನ್ನು ಬೇರೆ ಬೇರೆ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು. ಕೆಲವೊಂದನ್ನು ನೀವು ಆಭರಣದ ರೀತಿಯಲ್ಲಿ ಧರಿಸಿದರೆ ಇನ್ನೂ ಕೆಲವುಗಳನ್ನು ನೀವು ನಿಮ್ಮ ಮನೆ ಅಥವಾ ಆಫೀಸುಗಳಲ್ಲಿ ಇಟ್ಟುಕೊಳ್ಳಬಹುದು. ಹಾಗಾದರೆ ಆ ಅಮೂಲ್ಯದವಾದ ಸ್ಫಟಿಕಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಗ್ರೀನ್ ಅವೆಂಚುರಿನ್

ಹಸಿರು ಬಣ್ಣದ ಈ ಸ್ಫಟಿಕಗಳು ಜೀವನದಲ್ಲಿ ಅದೃಷ್ಟ , ಸದಾವಕಾಶ ಹಾಗೂ ಸಂಪತ್ತನ್ನು ವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಸ್ಫಟಿಕವನ್ನು ಧರಿಸಿದವರಿಗೆ ಸಾಮಾನ್ಯವಾಗಿ ಹೆಚ್ಚು ಹೆಚ್ಚು ಅವಕಾಶಗಳು ಒದಗಿ ಬರುತ್ತದೆ. ಇದರಿಂದ ಆರ್ಥಿಕವಾಗಿ ಇನ್ನಷ್ಟು ವೃದ್ಧಿಯಾಗಲು ಸಾಧ್ಯವಿದೆ ಎಂಬ ನಂಬಿಕೆಯಿದೆ. ಇದರ ಹಸಿರು ಬಣ್ಣವು ವ್ಯಕ್ತಿಯ ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ.

ಸಿಟ್ರಿನ್

ಇವುಗಳನ್ನು ಸಾಮಾನ್ಯವಾಗಿ ವ್ಯಾಪಾರಿಗಳ ಸ್ಫಟಿಕ ಅಥವಾ ಯಶಸ್ಸಿನ ಸ್ಫಟಿಕ ಎಂದೇ ಕರೆಯುತ್ತಾರೆ. ಈ ಸ್ಫಟಿಕವು ಸಾಮಾನ್ಯವಾಗಿ ಯಶಸ್ಸು ಹಾಗೂ ಸಂಪತ್ತನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಒಂದು ರೀತಿಯಲ್ಲಿ ಚಿನ್ನದ ಅಥವಾ ಸೂರ್ಯನ ಕಿರಣಗಳ ಬಣ್ಣವನ್ನು ಹೊಂದಿರುವ ಈ ಸ್ಫಟಿಕಗಳು ಸೂರ್ಯನಿಂದ ಶಕ್ತಿಯನ್ನು ಪಡೆಯುತ್ತವೆ ಎಂದೂ ಹೇಳಲಾಗುತ್ತದೆ. ಇವುಗಳು ಸೃಜನಶೀಲತೆಯನ್ನು ಉತ್ತೇಜಿಸುವ ಕಾರ್ಯ ಮಾಡುತ್ತವೆ. ವ್ಯಕ್ತಿಗೆ ಆತನ ಜೀವನದಲ್ಲಿ ಸ್ಪಷ್ಟತೆಯನ್ನು ಹೆಚ್ಚಿಸಲು ಈ ಸ್ಫಟಿಕಗಳು ಸಹಾಯಕಾರಿಯಾಗಿವೆ. ಆರ್ಥಿಕ ಸಮೃದ್ಧಿಯನ್ನು ಸಾಧಿಸಲು ಈ ಸ್ಫಟಿಕಗಳು ಸಾಕಷ್ಟು ರೀತಿಯಲ್ಲಿ ನೆರವಾಗುತ್ತವೆ.

ಪೈರೈಟ್

ಇವುಗಳು ಲೋಹದ ಬಣ್ಣವನ್ನು ಹೊಂದಿರುತ್ತವೆ. ಹೊಳೆಯುವ ಖನಿಜದಂತಿರುವ ಈ ಸ್ಫಟಿಕಗಳು ಸಮೃದ್ಧಿ ಹಾಗೂ ಸಂಪತ್ತನ್ನು ಹೆಚ್ಚಿಸುತ್ತವೆ, ಧನಾತ್ಮಕ ಮನಸ್ಥಿತಿಯನ್ನು ಹೆಚ್ಚಿಸುವುದರ ಜೊತೆಯಲ್ಲಿ ಆರ್ಥಿಕವಾಗಿ ಯಶಸ್ಸು ಹಾಗೂ ಸಮೃದ್ಧಿಯನ್ನು ತರುತ್ತವೆ ಎಂದು ನಂಬಲಾಗಿದೆ. ಸಮೃದ್ಧಿಯ ಹಾದಿಯಲ್ಲಿ ಸಾಗಲು ಈ ಸ್ಫಟಿಕಗಳು ಹೆಚ್ಚು ನೆರವಾಗುತ್ತವೆ.

ಹಸಿರು ಜೇಡ್

ಇವುಗಳನ್ನು ಅದೃಷ್ಟ , ಸಮೃದ್ಧಿ ಹಾಗೂ ರಕ್ಷಣೆಯ ಸಂಕೇತವೆಂದು ಶತ ಶತಮಾನಗಳಿಂದ ಪರಿಗಣಿಸಲಾಗುತ್ತಿದೆ. ಇವುಗಳನ್ನು ಸಂಪತ್ತಿನ ಪ್ರಬಲ ಆಕರ್ಷಕ ಸ್ಫಟಿಕ ಎಂದು ಹೇಳಲಾಗುತ್ತದೆ. ಈ ಸ್ಫಟಿಕವು ನಿಮ್ಮ ಜೀವನದಲ್ಲಿ ಯಶಸ್ಸು ಹಾಗೂ ಸಮೃದ್ಧಿಯ ಸಮತೋಲನವನ್ನು ಕಾಪಾಡುವ ಮೂಲಕ ಜೀವನದಲ್ಲಿ ನೆಮ್ಮದಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಮಲಾಕೈಟ್

ಇವುಗಳು ಗಾಢವಾದ ಹಸಿರು ಬಣ್ಣದ ಸ್ಫಟಿಕಗಳಾಗಿವೆ. ಇವುಗಳನ್ನು ಪರಿವರ್ತನೆಯ ಸ್ಫಟಿಕ ಎಂದು ಕರೆಯಲಾಗುತ್ತದೆ. ಇವುಗಳು ವೈಯಕ್ತಿಕ ಬೆಳವಣಿಗೆ ಹಾಗೂ ಆಧ್ಯಾತ್ಮಿಕ ವಿಕಸನದೊಂದಿಗೆ ಸಂಬಂಧ ಹೊಂದಿವೆ . ಮಲಾಕೈಟ್ ಸ್ಫಟಿಕಗಳು ಆರ್ಥಿಕತೆಯ ಮೇಲೆ ಧನಾತ್ಮಕ ಪ್ರಭಾವವನ್ನು ಬೀರುತ್ತವೆ. ಈ ಸ್ಫಟಿಕಗಳು ಜೀವನದ ವಿವಿಧ ಅಡೆತಡೆಗಳು ನಿವಾರಿಸುತ್ತವೆ ಎಂದು ಹೇಳಲಾಗಿದೆ. ಒಬ್ಬರ ಜೀವನದಲ್ಲಿ ಸುಖ ಸಂತೋಷವನ್ನು ತರುವಲ್ಲಿ ಮಲಾಕೈಟ್‌ಗಳು ಪ್ರಮುಖ ಪರಿಣಾಮವನ್ನು ಬೀರುತ್ತವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ವಿಭಾಗ