Lucky Women: ಈ ದಿನಾಂಕಗಳಂದು ಜನಿಸಿದ ಹೆಣ್ಣುಮಕ್ಕಳು ಹೋದ ಮನೆಗೆ ಸೊಸೆಯಲ್ಲ, ಮಗಳಂತೆ ಬಾಳುತ್ತಾರೆ!-lucky women girls born on this date rule in their in laws house numerology prs ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Lucky Women: ಈ ದಿನಾಂಕಗಳಂದು ಜನಿಸಿದ ಹೆಣ್ಣುಮಕ್ಕಳು ಹೋದ ಮನೆಗೆ ಸೊಸೆಯಲ್ಲ, ಮಗಳಂತೆ ಬಾಳುತ್ತಾರೆ!

Lucky Women: ಈ ದಿನಾಂಕಗಳಂದು ಜನಿಸಿದ ಹೆಣ್ಣುಮಕ್ಕಳು ಹೋದ ಮನೆಗೆ ಸೊಸೆಯಲ್ಲ, ಮಗಳಂತೆ ಬಾಳುತ್ತಾರೆ!

Lucky Women: ಸಂಖ್ಯಾ ಶಾಸ್ತ್ರದಂತೆ ಈ ದಿನಾಂಕದಂದು ಜನಿಸಿದ ಹೆಣ್ಣುಮಕ್ಕಳು ತುಂಬಾ ಅಂದರೆ ತುಂಬಾ ಅದೃಷ್ಟವಂತರಂತೆ! ಈ ಹೆಣ್ಣುಮಕ್ಕಳು ಹೋದ ಮನೆಯಲ್ಲಿ ಸೊಸೆಯಂತಲ್ಲ, ಮಗಳಂತೆ ಬಾಳುತ್ತಾರೆ!

ಈ ದಿನಾಂಕಗಳಂದು ಜನಿಸಿದ ಹೆಣ್ಣುಮಕ್ಕಳು ಹೋದ ಮನೆಗೆ ಸೊಸೆಯಲ್ಲ, ಮಗಳಂತೆ ಬಾಳುತ್ತಾರೆ
ಈ ದಿನಾಂಕಗಳಂದು ಜನಿಸಿದ ಹೆಣ್ಣುಮಕ್ಕಳು ಹೋದ ಮನೆಗೆ ಸೊಸೆಯಲ್ಲ, ಮಗಳಂತೆ ಬಾಳುತ್ತಾರೆ

Lucky women: ಜನ್ಮ ನಕ್ಷತ್ರ, ರಾಶಿಯನ್ನು ನೋಡಿ ವ್ಯಕ್ತಿಯ ವ್ಯಕ್ತಿತ್ವ ಮತ್ತು ಗುಣಲಕ್ಷಣಗಳನ್ನು ಅಂದಾಜಿಸುತ್ತಾರೆ. ಸಂಖ್ಯಾ ಶಾಸ್ತ್ರದಲ್ಲಿ ಸಂಖ್ಯೆಗಳು ಸಹ ಅಷ್ಟೇ ಪ್ರಾಮುಖ್ಯತೆ ಹೊಂದಿವೆ. ಪ್ರತಿಯೊಂದು ಸಂಖ್ಯೆಯು ಒಂದೊಂದು ಗ್ರಹದೊಂದಿಗೆ ಸಂಬಂಧಪಟ್ಟಾವಾಗಿವೆ. ಇದು ವ್ಯಕ್ತಿಯ ಜೀವನದ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮ ಬೀರುತ್ತದೆ. ಸಂಖ್ಯಾ ಶಾಸ್ತ್ರದಂತೆ ಈ ದಿನಾಂಕದಂದು ಜನಿಸಿದ ಹೆಣ್ಣುಮಕ್ಕಳು ತುಂಬಾ ಅಂದರೆ ತುಂಬಾ ಅದೃಷ್ಟವಂತರಂತೆ! ಈ ಹೆಣ್ಣುಮಕ್ಕಳು ಹೋದ ಮನೆಯಲ್ಲಿ ಸೊಸೆಯಂತಲ್ಲ, ಮಗಳಂತೆ ಬಾಳುತ್ತಾರೆ!

ರಾಡಿಕ್ಸ್ ಅನ್ನು ಕಂಡು ಹಿಡಿಯಬೇಕೆಂದರೆ ನೀವು ಹುಟ್ಟಿದ ದಿನ, ತಿಂಗಳು, ವರ್ಷವನ್ನು ಯೂನಿಟ್ ಅಂಕಿಗೆ ಜೋಡಿಸಬೇಕು. ಅದರಿಂದ ಬರುವ ಸಂಖ್ಯೆಯೇ ನಿಮ್ಮ ರಾಡಿಕ್ಸ್ ಆಗಿರುತ್ತದೆ. ಉದಾಹರಣೆಗೆ ತಿಂಗಳ 02, 11, 20 ಮತ್ತು 29ರಂದು ಜನಿಸಿದರೆ ರಾಡಿಕ್ಸ್ ಸಂಖ್ಯೆ 02 (2+0 =2, 1+1=2, 2+9=11 (1+1= 2)). ರಾಡಿಕ್ಸ್ ಸಂಖ್ಯೆ 2 ಹೊಂದಿರುವ ಗ್ರಹವು ಚಂದ್ರನಾಗಿದ್ದು, ಈ ದಿನಾಂಕದಂದು ಜನಿಸಿದ ಹೆಣ್ಣುಮಕ್ಕಳು ತುಂಬಾ ಬುದ್ಧಿವಂತರು. ಅಂತಹವರು ಅತ್ತೆ-ಮಾವಂದಿರಿಂದ ಬಹಳಷ್ಟು ಪ್ರೀತಿ ಮತ್ತು ಗೌರವವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.

ಜನ್ಮ ದಿನಾಂಕ - 2

ಯಾವುದೇ ತಿಂಗಳ 2 ನೇ ತಾರೀಖಿನಂದು ಜನಿಸಿದ ಹೆಣ್ಣುಮಕ್ಕಳಿಗೆ ಮನೆಯಲ್ಲಿ ಮತ್ತು ಅತ್ತೆಯಲ್ಲಿ ಸಮಾನ ಗೌರವ ಸಿಗುತ್ತದೆ. ಅವರು ತಮ್ಮ ಎಲ್ಲಾ ಸಂಬಂಧಿಕರಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಾರೆ ಮತ್ತು ಅವರ ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಅಂತಹವರು ಬುದ್ದಿವಂತರು ಹಾಗೂ ಒಳ್ಳೆಯ ಮನಸ್ಸುಳ್ಳವರು ಎಂದು ಹೇಳಲಾಗಿದೆ. ತನ್ನ ಕುಟುಂಬವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಎಲ್ಲರನ್ನೂ ಸಂತೋಷದಿಂದ ಇಡುತ್ತಾರೆ.

ಜನ್ಮ ದಿನಾಂಕ - 11

ಯಾವುದೇ ತಿಂಗಳ 11 ರಂದು ಜನಿಸಿದ ಹೆಣ್ಣುಮಕ್ಕಳು ಸಹ ಅದೃಷ್ಟವಂತರು. ಸಂಖ್ಯಾಶಾಸ್ತ್ರದ ಪ್ರಕಾರ ಆಕೆ ತುಂಬಾ ಸೃಜನಶೀಲಳು. ಅಲ್ಲದೆ, ಈ ದಿನದಂದು ಜನಿಸಿದವರು ಸಂಗೀತ ಮತ್ತು ಕಲೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಅಲ್ಲದೆ, ತನ್ನ ಅತ್ತೆಯ ಮನೆಯಲ್ಲಿ ರಾಣಿಯಂತೆ ವಾಸಿಸುತ್ತಾಳೆ. ಆಕೆಯ ಅಭಿಪ್ರಾಯಗಳನ್ನು ಯಾರೂ ತಿರಸ್ಕರಿಸುವುದಿಲ್ಲ ಮತ್ತು ತುಂಬಾ ಗೌರವಿಸುತ್ತಾರೆ. ದೊಡ್ಡ ಸಮಸ್ಯೆಗಳನ್ನೂ ಕ್ಷಣಾರ್ಧದಲ್ಲಿ ಪರಿಹರಿಸಿಕೊಳ್ಳುವುದು ಇವರ ವಿಶೇಷತೆ.

ಜನ್ಮ ದಿನಾಂಕ - 20

ಯಾವುದೇ ತಿಂಗಳ 20 ರಂದು ಜನಿಸಿದ ಹುಡುಗಿಯರು ಮೃದುವಾಗಿ ಮಾತನಾಡುತ್ತಾರೆ. ಸುಂದರವಾಗಿ ಮತ್ತು ಸರಳವಾಗಿರುತ್ತಾರೆ. ಇವರ ದಾಂಪತ್ಯ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಅತ್ತಿಗೆಯ ಮನೆಯಲ್ಲಿ ಅವರಿಗೆ ಬಹಳ ಗೌರವ ಸಿಗುತ್ತದೆ. ಆಕೆಯು ತನ್ನ ಪ್ರೀತಿ ಪಾತ್ರರನ್ನು ಬಹಳ ಕಾಳಜಿ ವಹಿಸುತ್ತಾಳೆ. ಸಣ್ಣ ವಿಷಯಗಳಿಗೆ ತುಂಬಾ ಭಾವುಕರಾಗುತ್ತಾರೆ. ಅತ್ತೆಯ ಮನೆಯಲ್ಲಿಯೂ ಮಗಳಂತೆ ಬಾಳುತ್ತಾರೆ. ಅಂತಹವರನ್ನು ವರಿಸಿದವರು ಹುಡುಗರು ಅದೃಷ್ಟಶಾಲಿಯಾಗುತ್ತಾರೆ.

ಜನ್ಮ ದಿನಾಂಕ - 29

ಸಂಖ್ಯಾಶಾಸ್ತ್ರದ ಪ್ರಕಾರ, ತಿಂಗಳ 29 ರಂದು ಜನಿಸಿದ ಹುಡುಗಿಯರು ತಮ್ಮ ಅತ್ತೆಯ ಮನೆಗೆ ಸಂಪತ್ತು, ಸಂತೋಷ ಮತ್ತು ಅದೃಷ್ಟವನ್ನು ತರುತ್ತಾರೆ. ಮನೆಗೆ ಬಂದ ಕ್ಷಣದಲ್ಲಿ ಮನೆಯ ತುಂಬಾ ಸಂತೋಷದ ವಾತಾವರಣದಿಂದ ತುಂಬಿರಲಿದೆ. ಅವಳು ತನ್ನ ಅತ್ತೆಯ ಮನೆಯಲ್ಲಿ ತುಂಬಾ ಸಂತೋಷದ ಜೀವನ ನಡೆಸುತ್ತಾಳೆ. ಆಕೆಯ ಆಗಮನದಿಂದ ಗಂಡನ ಮನೆಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದಿಲ್ಲ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.