ಈ ಐದು ರಾಶಿಗಳಿಗೆ ಸೇರಿದವರು ಚಿಂತಿಸುವ ಅಗತ್ಯವಿಲ್ಲ: ವಯಸ್ಸು 30 ಆಗುತ್ತಿದ್ದಂತೆ ಯಶಸ್ಸಿನ ಬಾಗಿಲು ತೆರೆಯುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ಐದು ರಾಶಿಗಳಿಗೆ ಸೇರಿದವರು ಚಿಂತಿಸುವ ಅಗತ್ಯವಿಲ್ಲ: ವಯಸ್ಸು 30 ಆಗುತ್ತಿದ್ದಂತೆ ಯಶಸ್ಸಿನ ಬಾಗಿಲು ತೆರೆಯುತ್ತೆ

ಈ ಐದು ರಾಶಿಗಳಿಗೆ ಸೇರಿದವರು ಚಿಂತಿಸುವ ಅಗತ್ಯವಿಲ್ಲ: ವಯಸ್ಸು 30 ಆಗುತ್ತಿದ್ದಂತೆ ಯಶಸ್ಸಿನ ಬಾಗಿಲು ತೆರೆಯುತ್ತೆ

ಪ್ರತಿಯೊಬ್ಬರಿಗೂ ತಾವು ಯಾವ ವಯಸ್ಸಿನಲ್ಲಿ ಯಶಸ್ಸನ್ನು ಗಳಿಸುತ್ತೇವೆ ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಸರಿಯಾದ ಉತ್ತರಕ್ಕಾಗಿ ಬಹಳಷ್ಟು ಹುಡುಕಾಟ ಮಾಡಿರಬಹುದು. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆ ಉತ್ತರವಿದೆ. ಕೆಲವು ರಾಶಿಗಳಿಗೆ ಸೇರಿದವರ ವಯಸ್ಸು 30 ದಾಟಿದಾಗ ಅವರ ಅದೃಷ್ಟ ಬಲಗೊಳ್ಳುತ್ತದೆ. ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

ಈ ಐದು ರಾಶಿಯವರ ವಯಸ್ಸು 30 ಆಗುತ್ತಿದ್ದಂತೆ ಯಶಸ್ಸಿನ ಬಾಗಿಲು ತೆರೆಯುತ್ತದೆ
ಈ ಐದು ರಾಶಿಯವರ ವಯಸ್ಸು 30 ಆಗುತ್ತಿದ್ದಂತೆ ಯಶಸ್ಸಿನ ಬಾಗಿಲು ತೆರೆಯುತ್ತದೆ (PC: HT File Photo)

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ರಾಶಿಗಳು ವಿವಿಧ ಗ್ರಹಗಳಿಂದ ನಿಯಂತ್ರಿಸಲ್ಪಡುತ್ತವೆ. ಅವುಗಳಿಗೆ ನಿಯೋಜಿಸಿದ ಮನೆಗಳು ಹಾಗೂ ನಕ್ಷತ್ರಗಳ ಆಧಾರದ ಮೇಲೆ ವಿಭಿನ್ನವಾದ ಫಲಿತಾಂಶಗಳನ್ನು ನೀಡುತ್ತವೆ. ಯೋಗ, ರಾಜಯೋಗಗಳು, ಸಂಯೋಗ ಮುಂತಾದವುಗಳನ್ನು ಉಂಟು ಮಾಡುತ್ತವೆ. ವ್ಯಕ್ತಿಯ ವೃತ್ತಿ, ಪ್ರೀತಿ, ದಾಂಪತ್ಯ ಜೀವನ, ಶಿಕ್ಷಣ, ಆರೋಗ್ಯ, ಮಕ್ಕಳ ಭಾಗ್ಯ, ಕಾನೂನು ವ್ಯವಹಾರ ಮುಂತಾದವುಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಅಂದರೆ ಗ್ರಹ, ನಕ್ಷತ್ರ, ರಾಶಿಗಳು ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ವ್ಯಕ್ತಿಯು ಮಾಡುವ ಕಾರ್ಯ ಮತ್ತು ಶ್ರಮದ ಮೇಲೆ ಶುಭ ಮತ್ತು ಅಶುಭ ಫಲಗಳು ದೊರಕುವುದರಲ್ಲಿಯೂ ಮಹತ್ವದ ಪಾತ್ರವನ್ನು ವಹಿಸುತ್ತವೆ.

ಸಂತೋಷ, ದುಃಖ, ಬಡತನ, ಸಿರಿತನ ಇವೆಲ್ಲವು ವಿಧಿಯೊಂದಿಗೆ ಸಂಬಂಧ ಹೊಂದಿದೆ. ಸಾಮಾನ್ಯವಾಗಿ ಯಾರೂ ತಮ್ಮ ಹಣೆಬರಹಕ್ಕೆ ಮುಂಚಿತವಾಗಿ ಏನನ್ನೂ ಪಡೆಯಲು ಸಾಧ್ಯವಿಲ್ಲ. ಅದೃಷ್ಟಕ್ಕಿಂತ ಹೆಚ್ಚಿನದನ್ನೂ ಪಡೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ತಾವು ಯಾವ ವಯಸ್ಸಿನಲ್ಲಿ ಯಶಸ್ಸು ಮತ್ತು ಕೀರ್ತಿಯನ್ನು ಗಳಿಸುತ್ತೇವೆ ಎಂದು ತಿಳಿಯಲು ಕುತೂಹಲವಿರುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜೀವನವು ದ್ವಾದಶ ರಾಶಿಗಳ ಸುತ್ತ ಸುತ್ತುತ್ತವೆ. 12 ರಾಶಿಗಳು ಮತ್ತು 27 ನಕ್ಷತ್ರಗಳಿಂದ ಪ್ರತಿ ವ್ಯಕ್ತಿಯ ಅದೃಷ್ಟವು ವಿಭಿನ್ನವಾಗಿರುತ್ತದೆ. ಕೆಲವು ರಾಶಿಗೆ ಸೇರಿದವರು ಚಿಕ್ಕ ವಯಸ್ಸಿನಲ್ಲಿಯೇ ಸಾಧನೆಯನ್ನು ಮಾಡಿದರೆ ಇನ್ನು ಕೆಲವರು 30 ವರ್ಷ ಆದಾಗ ದೊಡ್ಡ ಯಶಸ್ಸು ಪಡೆಯುತ್ತಾರೆ. ಅಂತಹ ರಾಶಿಗಳ ಬಗ್ಗೆ ಇಲ್ಲಿ ತಿಳಿಯೋಣ.

ವಯಸ್ಸು 30 ಆದಾಗ ದೊಡ್ಡ ಯಶಸ್ಸನ್ನು ಪಡೆಯುವ 5 ರಾಶಿಗಳು

ಕಟಕ ರಾಶಿ: ಈ ರಾಶಿಗೆ ಸೇರಿದವರಿಗೆ ಅವರ 16ನೇ ವಯಸ್ಸಿನಲ್ಲಿ ಯಶಸ್ವಿಯಾಗುವ ಅವಕಾಶವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಆದರೆ ಇವರ ನಿಜವಾದ ಅದೃಷ್ಟದ ಬಾಗಿಲು 29-30ನೇ ವಯಸ್ಸಿನಲ್ಲಿ ದೊರೆಯುತ್ತದೆ. 16ನೇ ವಯಸ್ಸಿನಲ್ಲಿ ಖ್ಯಾತಿ, ಯಶಸ್ಸು, ಪ್ರೀತಿ, ಉತ್ತಮ ಸ್ನೇಹಿತರು ಇತ್ಯಾದಿಗಳನ್ನು ಪಡೆಯುತ್ತಾರೆ. ಆದರೆ ಕೆಲವೊಮ್ಮೆ ಹದಿಹರೆಯದ ವಯಸ್ಸಿನಲ್ಲಿ ಪ್ರಬುದ್ಧತೆಯ ಕೊರತೆಯಿಂದಾಗಿ ವಿಫಲರಾಗುತ್ತಾರೆ. ಆದರೆ ಅವರು 29-30 ವರ್ಷ ತುಲುಪಿದಾಗ, ಅವರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ವಿಯಾಗುತ್ತಾರೆ. ಪ್ರಯತ್ನಗಳಿಗೆ ಸೂಕ್ತ ಯಶಸ್ಸನ್ನು ಪಡೆಯುತ್ತಾರೆ. 30ನೇ ವರ್ಷ ತಲುಪಿದಾಗ ಅದೃಷ್ಟದ ಸಂಪೂರ್ಣ ಲಾಭ ಪಡೆಯುತ್ತಾರೆ. ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ.

ಸಿಂಹ ರಾಶಿ: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿಗೆ ಸೇರಿದವರು ವಯಸ್ಸು 30 ದಾಟುತ್ತಿದ್ದಂತೆ ಅದೃಷ್ಟವು ಹುಡುಕಿಕೊಂಡು ಬರುತ್ತದೆ. ಅವರಾಗಿಯೇ ಯಶಸ್ಸು ಗಳಿಸಲು ಪ್ರಾರಂಭಿಸುತ್ತಾರೆ. 28-32 ವರ್ಷಗಳ ಅಂತರದಲ್ಲಿ ಯಶಸ್ಸನ್ನು ಸಾಧಿಸುವ ಮಾರ್ಗವು ಸುಲಭವಾಗಿರುತ್ತದೆ.

ಕನ್ಯಾ ರಾಶಿ: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕನ್ಯಾ ರಾಶಿಯವರ ಅದೃಷ್ಟವು 30 ವರ್ಷದ ನಂತರ ಬೆಳಗುತ್ತದೆ. ಈ ರಾಶಿಯವರು ವ್ಯಾಪಾರ ಮನೋಭಾವದವರಾಗಿರುತ್ತಾರೆ. ತಮ್ಮ ವ್ಯವಹಾರದಲ್ಲಿ ತುಂಬಾ ಪ್ರಾಮಾಣಿಕರಾಗಿದ್ದಾರೆ. ಕಷ್ಟಪಟ್ಟು ದುಡಿಯುತ್ತಾರೆ. ಕನ್ಯಾ ರಾಶಿಯವರು 30 ವರ್ಷ ದಾಟಿದ ನಂತರ ಶ್ರೀಮಂತರಾಗುತ್ತಾರೆ. ಪೂರ್ವಜರ ಆಸ್ತಿಯಿಂದಲೂ ಲಾಭ ಪಡೆದುಕೊಳ್ಳುವ ಸಾಧ್ಯತೆಯು ತುಂಬಾ ಬಲವಾಗಿರುತ್ತದೆ. ಈ ರಾಶಿಗೆ ಸೇರಿದ ಜನರಿಗೆ ಶನಿ ಮತ್ತು ಬುಧ ಗ್ರಹದ ವಿಶೇಷ ಅನುಗ್ರಹವಿದೆ.

ಕುಂಭ ರಾಶಿ: ಕುಂಭ ರಾಶಿಯವರ ವಯಸ್ಸು 30 ದಾಟಿದಾಗ ಯಶಸ್ಸನ್ನು ಗಳಿಸುತ್ತಾರೆ. ವೈದಿಕ ಜ್ಯೋತಿಷ್ಯದಲ್ಲಿ ಅದೃಷ್ಟದ ರಾಶಿಗಳಲ್ಲಿ ಇದೂ ಒಂದಾಗಿದೆ. ವ್ಯಕ್ತಿಯ ವಯಸ್ಸು 30 ಆದಾಗ ಅವರು ತಮ್ಮ ವೃತ್ತಿ ಮತ್ತು ವ್ಯವಹಾರ ಎರಡರಲ್ಲೂ ಯಶಸ್ಸು ಮತ್ತು ಪ್ರಗತಿಯನ್ನು ಸಾಧಿಸುತ್ತಾರೆ. ಅವರಲ್ಲಿ ಸದಾ ಗೆಲ್ಲವು ಉತ್ಸಾಹವಿರುತ್ತದೆ. ಇದು ಅವರನ್ನು ಇತರರಿಗಿಂತ ವಿಶೇಷರನ್ನಾಗಿ ಮಾಡಿಸುತ್ತದೆ. ಇವರು ಬಹು ಕಾರ್ಯವನ್ನು ಮಾಡಬಲ್ಲವರಾಗಿರುತ್ತಾರೆ. ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ.

ಮೀನ ರಾಶಿ: ಮೀನ ರಾಶಿಗೆ ಸೇರಿದವರು 16ನೇ ವಯಸ್ಸಿನಲ್ಲಿ ಯಶಸ್ಸನ್ನು ಗಳಿಸುತ್ತಾರೆ ಎಂದು ನಂಬಲಾಗಿದೆ. ಆದರೆ ಅವರ ಅದೃಷ್ಟವು 28-55ನೇ ವಯಸ್ಸಿನಲ್ಲಿ ಸಂಪೂರ್ಣವಾಗಿ ಬೆಳಗುತ್ತದೆ. ಈ ಅವಧಿಯಲ್ಲಿ ಮೀನ ರಾಶಿಯವರು ತಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಗಳಿಸುತ್ತಾರೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.