2025 ರಲ್ಲಿ ಎಷ್ಟು ಚಂದ್ರ ಗ್ರಹಣಗಳು ಸಂಭವಿಸುತ್ತವೆ; ಭಾರತದಲ್ಲಿ ಗೋಚರಿಸುತ್ತವೆಯೇ? ದಿನಾಂಕ, ಸಮಯ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ
Lunar eclipse 2025: ನಾಸಾದ ವರದಿಯ ಪ್ರಕಾರ, 2025 ರ ಹೊಸ ವರ್ಷದಲ್ಲಿ 2 ಚಂದ್ರ ಗ್ರಹಣಗಳು ಸಂಭವಿಸಲಿವೆ. ಇದರಲ್ಲಿ 1 ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸುತ್ತದೆ. ಈ ಚಂದ್ರ ಗ್ರಹಣದ ಸೂತಕ ಅವಧಿಯೂ ಮಾನ್ಯವಾಗಿರುತ್ತದೆ. ಸೂತಕ ಕಾಲದಲ್ಲಿ ಧಾರ್ಮಿಕ ಚಟುವಟಿಕೆ ನಿಷೇಧಿಸಲಾಗಿದೆ. 2025 ರಲ್ಲಿ ಎಷ್ಟು ಚಂದ್ರ ಗ್ರಹಣಗಳು ಸಂಭವಿಸಲಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
![2025 ರಲ್ಲಿ ಎಷ್ಟು ಚಂದ್ರ ಗ್ರಹಣಗಳು ಸಂಭವಿಸಲಿ, ಭಾರತದಲ್ಲಿ ಗೋಚರಿಸುವ ಕುರಿತ ಮಾಹಿತಿ ಇಲ್ಲಿದೆ 2025 ರಲ್ಲಿ ಎಷ್ಟು ಚಂದ್ರ ಗ್ರಹಣಗಳು ಸಂಭವಿಸಲಿ, ಭಾರತದಲ್ಲಿ ಗೋಚರಿಸುವ ಕುರಿತ ಮಾಹಿತಿ ಇಲ್ಲಿದೆ](https://images.hindustantimes.com/kannada/img/2024/12/28/550x309/Lunar_Eclipse_2025_1735310741740_1735378914136.jpg)
Lunar eclipse 2025: ಹಿಂದೂ ಧರ್ಮದಲ್ಲಿ ಚಂದ್ರ ಗ್ರಹಣವು ಖಗೋಳಶಾಸ್ತ್ರ, ಅಧ್ಯಾತ್ಮಿಕ ಹಾಗೂ ಧಾರ್ಮಿಕ ದೃಷ್ಟಿಕೋನದಿಂದ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಇದು ಜನರ ಮನಸ್ಸಿನ ಮೇಲೆ ಆಳ ಪರಿಣಾಮ ಬೀರುತ್ತದೆ. ಭೂಮಿಯು ತಿರುಗುವಾಗ ಚಂದ್ರ ಮತ್ತು ಸೂರ್ಯನ ನಡುವೆ ಬಂದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಕಾರಣದಿಂದಾಗಿ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಈ ವಿದ್ಯಮಾನವನ್ನು ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ. ಇದು ಹುಣ್ಣಿಮೆಯ ದಿನ ಸಂಭವಿಸುತ್ತದೆ.
ಚಂದ್ರ ಗ್ರಹಣಗಳಲ್ಲಿ 3 ವಿಧಗಳಿವೆ. ಭಾಗಶಃ ಚಂದ್ರ ಗ್ರಹಣ, ಸಂಪೂರ್ಣ ಚಂದ್ರ ಗ್ರಹಣ ಮತ್ತು ನೆರಳು ಚಂದ್ರ ಗ್ರಹಣ. ಭಾಗಶಃ ಚಂದ್ರ ಗ್ರಹಣದಲ್ಲಿ ಚಂದ್ರನ ಒಂದು ಭಾಗ ಮಾತ್ರ ಭೂಮಿಯ ನೆರಳನ್ನು ಪ್ರವೇಶಿಸುತ್ತದೆ. ಭಾಗಶಃ ಚಂದ್ರ ಗ್ರಹಣದ ಸಮಯದಲ್ಲಿ, ಭೂಮಿಯ ನೆರಳಿನ ಮಸುಕಾದ ಹೊರಭಾಗವು ಚಂದ್ರನ ಮೇಲ್ಮೈ ಮೇಲೆ ಬೀಳುತ್ತದೆ. ಈ ಗ್ರಹಣವನ್ನು ನೋಡುವುದು ಸ್ವಲ್ಪ ಕಷ್ಟ. ಭೂಮಿಯ ನೆರಳು ಇಡೀ ಚಂದ್ರನ ಮೇಲ್ಮೈ ಮೇಲೆ ಬಿದ್ದಾಗ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತದೆ. 2025 ರಲ್ಲಿ ಎಷ್ಟು ಚಂದ್ರ ಗ್ರಹಣಗಳು ಸಂಭವಿಸುತ್ತವೆ ಎಂದು ತಿಳಿಯೋಣ?
2025 ರಲ್ಲಿ ಎಷ್ಟು ಚಂದ್ರ ಗ್ರಹಣಗಳು ಸಂಭವಿಸುತ್ತೆ
ನಾಸಾ ವರದಿಯ ಪ್ರಕಾರ, 2025 ರ ಮೊದಲ ಚಂದ್ರ ಗ್ರಹಣವು 2025ರ ಮಾರ್ಚ್ 14 ರಂದು ಸಂಭವಿಸಲಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ, ಚಂದ್ರ ಗ್ರಹಣವು ಬೆಳಿಗ್ಗೆ 10:41 ಕ್ಕೆ ಪ್ರಾರಂಭವಾಗಿ ಸಂಜೆ 2:18 ಕ್ಕೆ ಕೊನೆಗೊಳ್ಳುತ್ತದೆ. ಯುರೋಪ್, ಆಫ್ರಿಕಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಆರ್ಕ್ಟಿಕ್ ಮಹಾಸಾಗರ, ಪೂರ್ವ ಏಷ್ಯಾ ಹಾಗೂ ಅಂಟಾರ್ಟಿಕಾದಲ್ಲಿ ಮೊದಲ ಗ್ರಹಣ ಗೋಚರಿಸಲಿದೆ.
2025 ರ ಎರಡನೇ ಚಂದ್ರ ಗ್ರಹಣ: 2025 ರಲ್ಲಿ ಎರಡನೇ ಚಂದ್ರ ಗ್ರಹಣವು ಸೆಪ್ಟೆಂಬರ್ 07 ರಂದು ಸಂಭವಿಸಲಿದೆ. ಈ ಚಂದ್ರ ಗ್ರಹಣವು ಪೂರ್ಣ ಚಂದ್ರ ಗ್ರಹಣವೂ ಆಗಿರುತ್ತದೆ. ಇದು ರಾತ್ರಿ 9.57 ಕ್ಕೆ ಪ್ರಾರಂಭವಾಗಿ ಮರು ದಿನ ಮಧ್ಯಾಹ್ನ 1.26 ರವರೆಗೆ ಇರುತ್ತದೆ. ಈ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸುತ್ತದೆ. ಜೊತೆಗೆ ಆಸ್ಟ್ರೇಲಿಯಾ, ಯುರೋಪ್, ನ್ಯೂಜಿಲೆಂಡ್, ಆಫ್ರಿಕಾ, ವಾಯುವ್ಯ ಅಮೆರಿಕ, ಏಷ್ಯಾದ ಇತರ ದೇಶಗಳಲ್ಲಿಯೂ ಕಾಣಬಹುದು. 2025 ರ ಎರಡನೇ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸಲಿದೆ. ಆದ್ದರಿಂದ ಸೂತಕ ಅವಧಿಯೂ ಮಾನ್ಯವಾಗಿರುತ್ತದೆ. ಸೂತಕ ಕಾಲದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
(ಗಮನಿಸಿ: ಇದು ಕೆಲವೊಂದು ವೈಜ್ಞಾನಿಕ, ನಂಬಿಕೆ ಹಾಗೂ ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
![Whats_app_banner Whats_app_banner](https://kannada.hindustantimes.com/static-content/1y/wBanner.png)