Chandra Grahana; ಸೆ 18 ಕ್ಕೆ ಚಂದ್ರಗ್ರಹಣ; ಅಂದು ಭಾರತಕ್ಕೆ ಹಾರ್ವೆಸ್ಟ್‌ ಮೂನ್ ಗೋಚರ, ಇವತ್ತೇ ಕ್ಯಾಲೆಂಡರ್‌ನಲ್ಲಿ ಗುರುತು ಹಾಕಿಕೊಳ್ಳಿ-lunar eclipse on sep 18 harvest moon will be visible for india on that day mark it in your calendar today uks ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Chandra Grahana; ಸೆ 18 ಕ್ಕೆ ಚಂದ್ರಗ್ರಹಣ; ಅಂದು ಭಾರತಕ್ಕೆ ಹಾರ್ವೆಸ್ಟ್‌ ಮೂನ್ ಗೋಚರ, ಇವತ್ತೇ ಕ್ಯಾಲೆಂಡರ್‌ನಲ್ಲಿ ಗುರುತು ಹಾಕಿಕೊಳ್ಳಿ

Chandra Grahana; ಸೆ 18 ಕ್ಕೆ ಚಂದ್ರಗ್ರಹಣ; ಅಂದು ಭಾರತಕ್ಕೆ ಹಾರ್ವೆಸ್ಟ್‌ ಮೂನ್ ಗೋಚರ, ಇವತ್ತೇ ಕ್ಯಾಲೆಂಡರ್‌ನಲ್ಲಿ ಗುರುತು ಹಾಕಿಕೊಳ್ಳಿ

Lunar eclipse 2024; ಖಗೋಳ ವಿಸ್ಮಯ ಕೂಡ ಇದೇ ತಿಂಗಳು ಘಟಿಸುತ್ತಿದ್ದು, ವಿಶೇಷ ಎಂದರೆ ಈ ಬಾರಿ ಭಾಗಶಃ ಚಂದ್ರಗ್ರಹಣ ಪಿತೃಪಕ್ಷದಲ್ಲೇ ನಡೆಯುತ್ತಿದೆ. ಇನ್ನು ಸೂಪರ್ ಮೂನ್ ಅಥವಾ ಸುಗ್ಗಿ ಚಂದ್ರ ಕೂಡ ಕಾಣಸಿಗುತ್ತಾನೆ. ಸೆ 18 ಕ್ಕೆ ಚಂದ್ರಗ್ರಹಣ. ಅಂದು ಭಾರತಕ್ಕೆ ಹಾರ್ವೆಸ್ಟ್‌ ಮೂನ್ ಗೋಚರ. ಇವತ್ತೇ ಕ್ಯಾಲೆಂಡರ್‌ನಲ್ಲಿ ಗುರುತು ಹಾಕಿಕೊಳ್ಳಿ. ಉಳಿದ ವಿವರ ಇಲ್ಲಿದೆ.

ಸೆ 18 ಕ್ಕೆ ಚಂದ್ರಗ್ರಹಣ; ಅಂದು ಭಾರತಕ್ಕೆ ಹಾರ್ವೆಸ್ಟ್‌ ಮೂನ್ ಗೋಚರ (ಸಾಂಕೇತಿಕ ಚಿತ್ರ)
ಸೆ 18 ಕ್ಕೆ ಚಂದ್ರಗ್ರಹಣ; ಅಂದು ಭಾರತಕ್ಕೆ ಹಾರ್ವೆಸ್ಟ್‌ ಮೂನ್ ಗೋಚರ (ಸಾಂಕೇತಿಕ ಚಿತ್ರ) (Canva)

ಪಿತೃ ಪಕ್ಷದಲ್ಲಿ ಈ ಸಲ ಚಂದ್ರಗ್ರಹಣ ಸಂಭವಿಸುತ್ತಿರುವುದು ವಿಶೇಷ. ಇದು ಭಾಗಶಃ ಚಂದ್ರಗ್ರಹಣ. ಅಷ್ಟೇ ಅಲ್ಲ, ಇದೇ ವೇಳೆ ಸೂಪರ್ ಹಾರ್ವೆಸ್ಟ್ ಮೂನ್ (ಸುಗ್ಗಿ ಚಂದ್ರ) ಕೂಡ ಕಾಣಿಸುತ್ತಾನೆ. ಭಾರತದಲ್ಲಿ ಚಂದ್ರಗ್ರಹಣ ಮತ್ತು ಸುಗ್ಗಿಚಂದ್ರನ ದರ್ಶನವಾಗುವುದು ಸೆಪ್ಟೆಂಬರ್ 18ಕ್ಕೆ ನೆನಪಿರಲಿ.

ನಾಸಾದ ವೆಬ್‌ಸೈಟ್ ಪ್ರಕಾರ, ಸೆಪ್ಟೆಂಬರ್ 16 ರಾತ್ರಿಯಿಂದ ಸೆಪ್ಟೆಂಬರ್ 17 ಸೂರ್ಯೋದಯದ ಒಳಗೆ ಅಮೆರಿಕ, ಯುರೋಪ್ ಮತ್ತು ಆಫ್ರಿಕಾದಲ್ಲಿ ಭಾಗಶಃ ಚಂದ್ರಗ್ರಹಣ ಗೋಚರಿಸುತ್ತದೆ.

ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ದಿನ ಭಾದ್ರಪದ ಮಾಸದ ಶುಕ್ಲ ಪಕ್ಷ ಪೂರ್ಣಿಮಾ ತಿಥಿ. ಈ ದಿನ ಪೂರ್ವಭಾದ್ರಪದ ನಕ್ಷತ್ರವಿರುತ್ತದೆ. ಈ ಚಂದ್ರಗ್ರಹಣವು ಸೆಪ್ಟೆಂಬರ್ 17 ರಾತ್ರಿಯಿಂದ ಶುರುವಾಗುತ್ತದೆ. ಭಾರತೀಯ ಕಾಲಮಾನ ಸೆಪ್ಟೆಂಬರ್ 18 ರಂದು ಬೆಳಿಗ್ಗೆ 6:11 ಕ್ಕೆ ಪ್ರಾರಂಭವಾಗುತ್ತದೆ. ಇದು ಬೆಳಗ್ಗೆ 10:17 ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣವು ಒಟ್ಟು 4 ಗಂಟೆ 6 ನಿಮಿಷಗಳ ಕಾಲ ಇರುತ್ತದೆ.

ಸೂಪರ್ ಹಾರ್ವೆಸ್ಟ್ ಮೂನ್ ಅಥವಾ ಸುಗ್ಗಿ ಚಂದ್ರ ಎಂದರೇನು

ಸೂಪರ್ ಮೂನ್ ಬಗ್ಗೆ ನಿಮಗೆಲ್ಲರಿಗೂ ಗೊತ್ತು. ಸೂಪರ್ ಮೂನ್ ಎಂದರೆ ಚಂದ್ರನು ಭೂಮಿಗೆ ಅತ್ಯಂತ ಸಮೀಪದಲ್ಲಿರುವಾಗ, ಭೂಮಿಗೆ ಚಂದ್ರ ಅತ್ಯಂತ ಸಮೀಪ ಇರುವುದರಿಂದಾಗಿ, ದೊಡ್ಡ ಗಾತ್ರ ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. ಹಾರ್ವೆಸ್ಟ್ ಮೂನ್ ಅನ್ನು ಸರಳವಾಗಿ ಹೇಳಬೇಕು ಎಂದರೆ ಸುಗ್ಗಿ ಚಂದ್ರ ಎನ್ನಬಹುದು. ಚಂದ್ರನ ಬೆಳಕು ತುಂಬಾ ವಿಶೇಷವಾಗಿರುತ್ತದೆ. ಕೊಯ್ಲು ಮಾಡುವುದಕ್ಕೆ ಪೂರ್ವಜರು ಇದೇ ಚಂದ್ರನ ಬೆಳಕನ್ನು ಆಶ್ರಯಿಸಿದ್ದರು ಎಂಬ ಪ್ರತೀತಿ ಇದೆ. ಶರತ್‌ಕಾಲದ ವಿಷುವತ್ ಸಂಕ್ರಾಂತಿಯ ಸಮೀಪದ ಹುಣ್ಣಿಮೆಯಾಗಿದೆ. ಇದು ಈ ಬಾರಿ ಸೆಪ್ಟೆಂಬರ್ 18 ರಂದು.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಕಾರ, ರೈತರು ಈ ದಿನ ತಮ್ಮ ಬೆಳೆಗಳನ್ನು ಸಂಜೆಯವರೆಗೂ ಕೊಯ್ಲು ಮಾಡಲು ಚಂದ್ರನ ಬೆಳಕನ್ನು ಅವಲಂಬಿಸಿದ್ದರು. ವಿದ್ಯುತ್ ಪತ್ತೆ ಮಾಡಿ ಬಳಸುವ ಮೊದಲು ಚಾಲ್ತಿಯಲ್ಲಿದ್ದ ಪದ್ಧತಿ ಇದು. ಹೀಗಾಗಿ, ಇದಕ್ಕೆ ಹಾರ್ವೆಸ್ಟ್ ಮೂನ್ ಎಂಬ ಹೆಸರು ಬಂತು.

ಭಾಗಶಃ ಚಂದ್ರಗ್ರಹಣವು ಹೇಗೆ ಭಾಸವಾಗುತ್ತದೆ?

ಸೂರ್ಯ, ಭೂಮಿ ಮತ್ತು ಚಂದ್ರನ ಅಪೂರ್ಣ ಜೋಡಣೆಯ ಪರಿಣಾಮವಾಗಿ ಚಂದ್ರನು ಭೂಮಿಯ ನೆರಳಿನ ಒಂದು ಭಾಗವನ್ನು ಮಾತ್ರ ಹಾದುಹೋಗುತ್ತಾನೆ. ಚಂದ್ರನ ಅವಧಿಯನ್ನು ಸಂಪೂರ್ಣವಾಗಿ ಆವರಿಸದೆಯೇ ನೆರಳು ಬೆಳೆಯುತ್ತದೆ ಮತ್ತು ಹಿಮ್ಮೆಟ್ಟುತ್ತದೆ.

ಅಂದ ಹಾಗೆ, ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ ಅದರ ಸೂತಕ ಅವಧಿಯನ್ನು ಪರಿಗಣಿಸಲಾಗುವುದಿಲ್ಲ. ಈ ದಿನ ಸಮಯಕ್ಕೆ ಸರಿಯಾಗಿ ಶ್ರಾದ್ಧ ಆಚರಣೆಗಳು ನಡೆಯುತ್ತವೆ. ಇದಲ್ಲದೇ ದೇವಸ್ಥಾನಗಳ ಬಾಗಿಲು ತೆರೆದಿದ್ದು, ಸಮಯಕ್ಕೆ ತಕ್ಕಂತೆ ಪೂಜೆ ನಡೆಯಲಿದೆ. ಈ ದಿನ ಪೂರ್ಣಿಮಾ ಉಪವಾಸದ ದಾನ ಮತ್ತು ಪೂಜೆಯನ್ನು ಸಹ ಮಾಡಲಾಗುತ್ತದೆ.

ಈ ಖಗೋಳ ಘಟನೆಯನ್ನು ವೀಕ್ಷಿಸಲು ನೀವು ಉತ್ಸುಕರಾಗಿದ್ದರೆ, ಯುರೋಪ್, ಉತ್ತರ ಮತ್ತು ದಕ್ಷಿಣ ಅಮೇರಿಕಾ, ಆಫ್ರಿಕಾ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಚಂದ್ರಗ್ರಹಣವು ಸಂಪೂರ್ಣವಾಗಿ ಗೋಚರಿಸುತ್ತದೆ. ನೀವು ವಿಶ್ವಾದ್ಯಂತ ವೀಕ್ಷಣಾಲಯಗಳು ಮತ್ತು ಬಾಹ್ಯಾಕಾಶ ಏಜೆನ್ಸಿಗಳಿಂದ ಲೈವ್ ಸ್ಟ್ರೀಮ್‌ಗಳನ್ನು ಸಹ ಗಮನಿಸಬಹುದು. ಅದರಲ್ಲಿ ನೇರ ಪ್ರಸಾರ ಶುರುವಾಗುತ್ತಿರುವಂತೆಯೇ ನೋಡಬಹುದು.

mysore-dasara_Entry_Point

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.