Magha Masam: ಏಳು ಜನ್ಮದ ಪಾಪ ಕಳೆಯಲು ಮಾಘ ಮಾಸದಲ್ಲಿ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Magha Masam: ಏಳು ಜನ್ಮದ ಪಾಪ ಕಳೆಯಲು ಮಾಘ ಮಾಸದಲ್ಲಿ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

Magha Masam: ಏಳು ಜನ್ಮದ ಪಾಪ ಕಳೆಯಲು ಮಾಘ ಮಾಸದಲ್ಲಿ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

Magha Masam 2024: ಮಾಘ ಮಾಸದಲ್ಲಿ ಬರುವ ಪ್ರತಿಯೊಂದು ದಿನವು ಶುಭಕರವಾಗಿರುತ್ತದೆ. ದಾನ ಧರ್ಮಾದಿಗಳಿಂದ, ಪುಣ್ಯ ಸ್ನಾನದಿಂದ ಉಪಯುಕ್ತ ಫಲಗಳು ದೊರೆಯುತ್ತವೆ. (ಲೇಖನ: ಜ್ಯೋತಿಷಿ- ಎಚ್‌. ಸತೀಶ್‌, ಬೆಂಗಳೂರು)

ಮಾಘ ಸ್ನಾನ (ಸಾಂದರ್ಭಿಕ ಚಿತ್ರ)
ಮಾಘ ಸ್ನಾನ (ಸಾಂದರ್ಭಿಕ ಚಿತ್ರ)

ಮಾಘ ಮಾಸದಲ್ಲಿ ಗಂಗಾ ಸ್ನಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಅದರಲ್ಲಿಯೂ ಮಾಘ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ವ್ಯಾಸ ಪೂರ್ಣಿಮಾ ಮತ್ತು ಭಾರತ ಹುಣ್ಣಿಮೆ ಎಂದು ಕರೆಯುತ್ತೇವೆ. ಇಂದಿನ ದಿನ ಗುರು, ಶನಿ ಮತ್ತು ಚಂದ್ರ ಗ್ರಹಗಳ ಶಾಂತಿಯಿಂದ ವಿಶೇಷ ಫಲ ದೊರೆಯುತ್ತದೆ. ವೈಶಾಖ ಕಾರ್ತಿಕ ಮತ್ತು ಮಾಘ ಮಾಸಗಳಲ್ಲಿ ಪುಣ್ಯ ಸ್ನಾನ ಮಾಡುವುದು ಅತಿ ಶ್ರೇಷ್ಠಕರ. ಅದರಲ್ಲಿಯೂ ಮಾಘ ಮಾಸಕ್ಕೆ ವಿಶೇಷವಾದ ಆದ್ಯತೆಯನ್ನು ನೀಡಲಾಗಿದೆ. ಮಾಘ ಮಾಸದಲ್ಲಿ ಬರುವ ಪ್ರತಿಯೊಂದು ದಿನವು ಶುಭಕರವಾಗಿರುತ್ತದೆ. ದಾನ ಧರ್ಮಾದಿಗಳಿಂದ, ಪುಣ್ಯ ಸ್ನಾನದಿಂದ ಉಪಯುಕ್ತ ಫಲಗಳು ದೊರೆಯುತ್ತವೆ.

ಈ ದಿನಗಳಂದು ಎಳ್ಳು ತುಂಬಿದ ಪಾತ್ರೆ, ಉಡುವ ತೊಡುವ ಬಟ್ಟೆಗಳು ಮತ್ತು ಕಂಬಳಿಯನ್ನು ದಾನ ನೀಡಬೇಕು. ಇದರಿಂದ ಏಳು ಜನ್ಮಗಳಲ್ಲಿ ಮಾಡಿದ ಪಾಪ ಕರ್ಮಗಳಿಂದ ನಿವೃತ್ತಿಯಾಗಬಹುದು. ಹುಣ್ಣಿಮೆಯ ನಂತರ ಬರುವ ಬರುವ ಅಷ್ಟಮಿಯಂದು ಯಾವುದೇ ಶ್ರಾದ್ಧವನ್ನು ಮಾಡಬಹುದು. ಆ ದಿನವನ್ನು ಮಾಗಿ ಅಷ್ಟಕ ಎಂದು ಕರೆಯುತ್ತೇವೆ. ಇದರ ಬಗ್ಗೆ ಪಾರಿಜಾತ ಪ್ರಯೋಗದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ. ಒಂದು ವೇಳೆ ಶ್ರಾದ್ಧವನ್ನು ಮಾಡಲು ಸಾಧ್ಯವಿಲ್ಲದೆ ಹೋದಲ್ಲಿ ಇಬ್ಬರು ವ್ಯಕ್ತಿಗಳಿಗೆ ಸಾಕಾಗುವಷ್ಟು ದಿನಸಿ ಪದಾರ್ಥಗಳು, ತರಕಾರಿಗಳು, ಹಾಲು, ಮೊಸರು, ಬೆಣ್ಣೆ, ತುಪ್ಪ ಆದಿಯಾಗಿ ದಾನ ನೀಡಬೇಕು. ಇದು ಆಯವಂಶದ ಪರಂಪರೆಯನ್ನು ಸಹ ಅವಲಂಬಿಸುತ್ತದೆ. ಈ ದಿನದಂದು ಹಸುವಿನ ವಿಗ್ರಹವನ್ನು ದಾನ ಮಾಡಿದರೆ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬರುತ್ತದೆ.

ಶಿವನ ದೇವಾಲಯದಲ್ಲಿ ಎಳ್ಳಿನಿಂದ ಕೂಡಿದ ಎಣ್ಣೆ ಅಥವಾ ಎಣ್ಣೆಳ್ಳೆಣ್ಣೆಯಿಂದ ದೀಪವನ್ನು ಹಚ್ಚಬೇಕು. ಆದರೆ ಮನೆಯಲ್ಲಿ ಎಳ್ಳಿನ ದೀಪವನ್ನು ಹೊತ್ತಿಸಬಾರದು. ಹಾಗೆಯೇ ಜೀವಂತ ಪಿತೃಗಳು ಅಂದರೆ ತಂದೆ ಇರುವ ಗಂಡು ಮಕ್ಕಳು ಸಹ ಎಳ್ಳಿನ ದೀಪವನ್ನು ಹೊತ್ತಿಸಬಾರದು. ಎಳ್ಳನ್ನು ಹಚ್ಚಿಕೊಂಡು ಸ್ನಾನವನ್ನು ಸಹ ಮಾಡುತ್ತಾರೆ. ಶಿವನ ದೇವಸ್ಥಾನದಲ್ಲಿ ತಿಲಹೋಮ ಮಾಡಿಸಬೇಕು ಮತ್ತು ಎಳ್ಳನ್ನು ಯೋಗ್ಯ ದಕ್ಷಣಯ ಸಹಿತ ದಾನ ನೀಡಬೇಕು. ಇದರಿಂದಾಗಿ ಜೀವನದಲ್ಲಿ ಇರುವ ಎಲ್ಲಾ ರೀತಿಯ ದುಃಖಗಳು ಕಷ್ಟನಷ್ಟಗಳು ದೂರವಾಗುತ್ತವೆ.

ಸೂರ್ಯೋದಯಕ್ಕೆ ಮುನ್ನ ಸ್ನಾನವನ್ನು ಮಾಡಿ ತಿಲತರ್ಪಣವನ್ನು ನೀಡಬೇಕು. ಇದರಿಂದ ಸರ್ವ ಪಾಪಗಳಿಂದಲೂ ಪಾರಾಗುತ್ತಾರೆ. ಕುಂದ ಪುಷ್ಪಗಳಿಂದ ಶ್ರೀ ಶಿವನಿಗೆ ಪೂಜೆಯನ್ನು ಮಾಡಿದಲ್ಲಿ ಶ್ರೀಮಹಾಲಕ್ಷ್ಮಿಯ ಅನುಗ್ರಹವಾಗಿ ಹಣಕಾಸಿನ ತೊಂದರೆಯು ದೂರವಾಗುತ್ತದೆ. ಮಾಘ ಮಾಸದಲ್ಲಿನ ಸಂಕ್ರಮಣವಾಗಲಿ ಅಥವಾ ಇನ್ನಾವುದೇ ದಿನಗಳಲ್ಲಿ ತರ್ಪಣ ಬಿಡುವುದರಿಂದ ದೊರೆವ ಫಲಗಳು 1000 ಸೂರ್ಯಗ್ರಹಣದಲ್ಲಿ ಸಿಗುವ ಫಲಕ್ಕೆ ಸಮನಾಗಿರುತ್ತದೆ. ಹಾಗೆಯೇ ಸೂರ್ಯನಿಗೆ ಅರ್ಘ್ಯವನ್ನು ನೀಡಿದಾಗ ಅದು 1000 ಪಟ್ಟು ಹೆಚ್ಚಾದ ಶುಭಫಲಗಳನ್ನು ನೀಡುತ್ತದೆ.

ನದಿ ತೀರದಲ್ಲಿ ಸತ್ಯನಾರಾಯಣ ಪೂಜೆಯನ್ನು ಮಾಡಿದವರು ಎರಡು ದೀಪಗಳನ್ನು ಪ್ರತ್ಯೇಕವಾಗಿ ಶಿವ ಮತ್ತು ನಾರಾಯಣರಿಗಾಗಿ ತೇಲಿ ಬಿಡಬೇಕು. ಇದು ಪಾಪಕರ್ಮಗಳಿಂದ ಮುಕ್ತಿ ನೀಡಿ ಶುಭಫಲಗಳನ್ನು ದೊರಕಿಸಿ ಕೊಡುತ್ತದೆ. ಒಂದು ಕಬ್ಬಿನ ತುಂಡಿನಿಂದ ನೀರನ್ನು ಕಲಕಿ ಸ್ನಾನ ಮಾಡಿದರೆ ಕುಂಡಲಿಯಲ್ಲಿನ ಶಾಪಗಳಿಂದ ದೂರವಾಗಬಹುದು. ಮಕ್ಕಳಿಗೆ ತಿನ್ನಲು ಕಬ್ಬು ಮತ್ತು ಹಸಿಬೆಲ್ಲವನ್ನು ನೀಡಬೇಕು. ಕಬ್ಬಿನ ಹಾಲನ್ನು ಸಹ ನೀಡಬಹುದು. ಇದರಿಂದ ಸಂತಾನ ಹೀನರಿಗೆ ಒಳ್ಳೆಯ ಸಂತಾನವಾಗುತ್ತದೆ. ಸ್ನಾನ ಮಾಡುವ ವೇಳೆ ನದಿಯಲ್ಲಿ ಕನಿಷ್ಠಪಕ್ಷ ಸೊಂಟದವರೆಗೂ ಮುಳುಗಬೇಕು. ಆನಂತರ ಪೂರ್ವ ದಿಕ್ಕಿಗೆ ತಿರುಗಿ ಈ ಕೆಳಕಂಡಂತೆ ಸಂಕಲ್ಪ ಮಾಡಿ ಮಂತ್ರಮುಖೇನ ಪುಣ್ಯ ಸ್ನಾನವನ್ನು ಮಾಡಬೇಕು. ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಯನ್ನು ಧರಿಸ ಸ್ನಾನವನ್ನು ಮಾಡಿದಲ್ಲಿ ಪುನ: ಅದನ್ನು ಧರಿಸಬಾರದು.

ಸಂಕಲ್ಪ-ಮಂತ್ರ ಹೀಗಿದೆ:

ಶುಭಾಭ್ಯಾಂ ಶುಭೇ ಶೋಭನೇ ಮುಹೂರ್ತೇ ಅದ್ಯ ಬ್ರಹ್ಮಣ: ದ್ವಿತೀಯಪರಾರ್ಧೇ ಶ್ವೇತವರಾಹಕಲ್ಪೇ ವೈವಸ್ವತಮನ್ವಂತರೇ ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭರತವರ್ಷೇ ಭರತಖಂಡೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲಿವಾಹನಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೆ ಚಾಂದ್ರಾಮಾನೇನಾಸ್ಯ ಪ್ರಭವಾದಿ ಷಷ್ಥಿಸಂವತ್ಸರಾಣಾಂ ಮಧ್ಯೇ ಶ್ರೀಮತ್ ಶೋಭನಕೃತು ನಾಮಸಂವತ್ಸರೇ ದಕ್ಷಿಣಾಯನೆ ವರ್ಷಋತೌ ನಿಜಶ್ರಾವಣಮಾಸೇ ಕೃಷ್ಣಪಕ್ಷೇ ತ್ರಯೋದಶ್ಯಾಂ ಭೌಮವಾಸರಯುಕ್ತಾಯಾಂ ಶುಭನಕ್ಷತ್ರ ಶುಭಯೋಗ ಶುಭಕರಣ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಮಮ (ಮನಸ್ಸಿನಲ್ಲಿ ಅವಿವಾಹಿತರು ಹೇಳಬೇಕು ) ಉಪಾತ್ತ ಸಮಸ್ತ ದುರಿತಕ್ಷಯದ್ವಾರ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಅಸ್ಮಾಕಂ ( ವಿವಾಹಿತರು ಹೇಳಬೇಕು ) ಸಹಕುಟುಂಬಾನಾಂ ಕ್ಷೇಮಸ್ಠೈರ್ಯ ವಿಜಯ ವೀರ್ಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ

ಧರ್ಮಾರ್ಥ ಕಾಮಮೋಕ್ಷ ಚತುರ್ವಿದ ಫಲಪುರುಷಾರ್ಥ ಸಿಧ್ಯರ್ಥಂ, ಅಪಮೃತ್ಯು ಪೀಡಾ ಪರಿಹಾ ದ್ವಾರಾ ದೀರ್ಘಾಯುಷ್ಯ ಅಭಿವೃದ್ಧ್ಯರ್ಥಂ ಅಚಂಚಲ ಭಕ್ತಿಸಿದ್ಧ್ಯರ್ಥಂ ಇಷ್ಟಕಾಮ್ಯಾರ್ಥ ಸಿದ್ಧ್ಯರ್ಥಂ ಸಮಸ್ತಕಾರ್ಯೇಷು ನಿರ್ವಿಘ್ನಪೂರ್ವಕ ಜಯಪ್ರಾಪ್ತ್ಯರ್ಥಂ ಭೂತ ಬಾದಾ ನಿವೃತ್ಯರ್ಥಂ ಸಕಲದೋಷಾದಿ ಸಕಲ ಪಾಪ ನಿವಾರರಾರ್ಥಂ ಋಣಭಾದಾ ನಿವೃತ್ಯರ್ಥಂ ಗಂಗಾ ಸ್ನಾನಂಚ ಕರಿಷ್ಯೇ

ಯದಾ ಜನ್ಮ ಕ್ರುತಂ ಪಾಪಂ ಮಯಾಜನ್ಮ ಸುಜನ್ಮಸು

ತನ್ಮೇ ರೋಗಂಚ ಶೋಕಂಚ ಮಾಕರೀ ಹಂತು ಸಪ್ತಮಿ

ಏತಜ್ಜನ್ಮ ಕ್ರುತಂ ಪಾಪಂ ಯಶ್ಚಜನ್ಮಾಂತರಾರ್ಜಿತಂ

ಮನೋವಾಕ್ಕಾ ಯಜಂ ಯಚ್ಚ ಜ್ಞಾತಾಜ್ಞಾತೇಚಯೇಪುನ:

ಇತಿ ಸಪ್ತ ವಿಧಂ ಪಾಪಂ ಸ್ನಾನಾನ್ಮೇ ಸಪ್ತ ಸಪ್ತಕೇ

ಸಪ್ತವ್ಯಾದಿ ಸಮಾಯುಕ್ತಂ ಹರಮಾಕರಿ ಸಪ್ತಮೀ

ಗಂಗೇಚೆ ಯಮುನೆ ಚೈವ ಗೋದಾವರಿ ಸರಸ್ವತಿ

ನರ್ಮದೇ ಸಿಂಧ್ಕುಕಾವೇರಿ ಜಲೈಸ್ಮಿನ್ ಸಂಧಿನಿಂ ಕುರು

---------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.