Maha Shivaratri 2024: ಮಹಾ ಶಿವರಾತ್ರಿಯಂದು ನಂದಿ ವಿಗ್ರಹ ಸೇರಿದಂತೆ ಈ 6 ವಸ್ತುಗಳನ್ನು ಮನೆಗೆ ತಂದರೆ ಶಂಕರನ ಆಶೀರ್ವಾದ ದೊರೆತಂತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Maha Shivaratri 2024: ಮಹಾ ಶಿವರಾತ್ರಿಯಂದು ನಂದಿ ವಿಗ್ರಹ ಸೇರಿದಂತೆ ಈ 6 ವಸ್ತುಗಳನ್ನು ಮನೆಗೆ ತಂದರೆ ಶಂಕರನ ಆಶೀರ್ವಾದ ದೊರೆತಂತೆ

Maha Shivaratri 2024: ಮಹಾ ಶಿವರಾತ್ರಿಯಂದು ನಂದಿ ವಿಗ್ರಹ ಸೇರಿದಂತೆ ಈ 6 ವಸ್ತುಗಳನ್ನು ಮನೆಗೆ ತಂದರೆ ಶಂಕರನ ಆಶೀರ್ವಾದ ದೊರೆತಂತೆ

Maha Shivaratri 2024: ಮಹಾ ಶಿವರಾತ್ರಿ ಸಮೀಪಿಸುತ್ತಿದೆ. ಭಕ್ತರು ಶಿವನ ಪೂಜೆಗೆ ಕಾಯುತ್ತಿದ್ದಾರೆ. ಹಬ್ಬದಂದು ಮನೆಗೆ ಕೆಲವೊಂದು ವಸ್ತುಗಳನ್ನು ತಂದರೆ ಶುಭವಾಗುತ್ತದೆ. ಹಾಗೇ ಶಿವರಾತ್ರಿಯಂದು ನಂದಿ ವಿಗ್ರಹ, ಬಿಲ್ವಪತ್ರೆ ಸೇರಿದಂತೆ ಕೆಲವು ವಸ್ತುಗಳನ್ನು ತಂದರೆ ಶಂಕರನ ಆಶೀರ್ವಾದ ದೊರೆತಷ್ಟೇ ಒಳ್ಳೆಯದಾಗುತ್ತದೆ.

ಮಹಾ ಶಿವರಾತ್ರಿಯಂದು ನಂದಿ ವಿಗ್ರಹ ಸೇರಿದಂತೆ ಈ 6 ವಸ್ತುಗಳನ್ನು ಮನೆಗೆ ತಂದರೆ ಶುಭ
ಮಹಾ ಶಿವರಾತ್ರಿಯಂದು ನಂದಿ ವಿಗ್ರಹ ಸೇರಿದಂತೆ ಈ 6 ವಸ್ತುಗಳನ್ನು ಮನೆಗೆ ತಂದರೆ ಶುಭ (PC: Pixabay)

ಮಹಾ ಶಿವರಾತ್ರಿ 2024: ದೇಶಾದ್ಯಂತ ಮಹಾ ಶಿವರಾತ್ರಿಗೆ ಸಿದ್ಧತೆ ನಡೆಯುತ್ತಿದೆ. ದೊಡ್ಡ ದೊಡ್ಡ ದೇವಾಲಯಗಳಲ್ಲಿ ಕೂಡಾ ಭಕ್ತರು ಒಟ್ಟಿಗೆ ಸೇರಿ ಶಿವರಾತ್ರಿ ಜಾಗರಣೆ ಆಚರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಜನರು ಕೂಡಾ ಪರಶಿವನ ಆರಾಧನೆ ಮಾಡಲು ಕಾಯುತ್ತಿದ್ದಾರೆ. ಈ ಬಾರಿ ಶಿವರಾತ್ರಿ ಹಬ್ಬಕ್ಕೆ ಮನೆಗೆ ಏನು ಕೊಂಡು ತರಬಹುದು ಎಂದು ಪ್ಲಾನ್‌ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಅಕ್ಷಯ ತೃತೀಯ, ದೀಪಾವಳಿ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಮನೆಗೆ ಕೆಲವು ವಸ್ತುಗಳನ್ನು ತಂದರೆ, ಮನೆಗೆ ಒಳ್ಳೆಯದು ಎಂಬ ನಂಬಿಕೆ ಇದೆ. ಶಿವರಾತ್ರಿ ದಿನ ಕೂಡಾ ಈ ವಸ್ತುಗಳನ್ನು ಮನೆಗೆ ತಂದರೆ ಸಂಪತ್ತು ತುಂಬಿ ತುಳುಕುತ್ತದೆ ಎಂಬ ನಂಬಿಕೆ ಇದೆ. ಆ ವಸ್ತುಗಳು ಯಾವುವು ನೋಡೋಣ.

ಶಿವ ಲಿಂಗ

ಶಿವ ಪಾರ್ವತಿಯರ ಫೋಟೋ ಇದ್ದರೂ ಭಕ್ತರು ಶಿವಲಿಂಗವನ್ನು ಪೂಜಿಸದಿದ್ದರೆ ಪೂಜೆ ಸಂಪೂರ್ಣ ಎನಿಸುವುದಿಲ್ಲ. ಆದ್ದರಿಂದ ದೇವರ ಮನೆಯಲ್ಲಿ ಶಿವಲಿಂಗ ಇಡುತ್ತಾರೆ. ಶಿವರಾತ್ರಿ ದಿನ ನೀವು ಮನೆಗೆ ಶಿವಲಿಂಗ ತಂದರೆ ನಿಮಗೆ ಶಿವನ ಆಶೀರ್ವಾದ ದೊರೆತಂತೇ ಆಗುತ್ತದೆ. ಅದರಲ್ಲೂ ರತ್ನದಿಂದ ಮಾಡಿದ ಶಿವಲಿಂಗವನ್ನು ತಂದರೆ ಮನೆಯಲ್ಲಿನ ಎಲ್ಲಾ ಸಮಸ್ಯೆಗಳೂ ದೂರಾಗುತ್ತದೆ ಎಂಬ ನಂಬಿಕೆ ಇದೆ.

ನಂದಿ ವಿಗ್ರಹ

ನಂದಿಯು ಶಿವನ ಭಕ್ತ ಮಾತ್ರವಲ್ಲ ಅವನ ವಾಹನ ಕೂಡಾ. ಹಬ್ಬದಂದು ಬೆಳ್ಳಿಯ ನಂದಿ ವಿಗ್ರಹವನ್ನು ಮನೆಗೆ ತಂದರೆ ಎಲ್ಲವೂ ಶುಭ ಜರುತ್ತದೆ. ಪುಟ್ಟ ನಂದಿ ವಿಗ್ರಹವನ್ನು ಮನೆಗೆ ತಂದು ಅದನ್ನು ಪೂಜಿಸಿದರೆ ಶಿವನನ್ನು ಪೂಜಿಸಿದಷ್ಟೇ ನಿಮಗೆ ಅನುಗ್ರಹ ದೊರೆಯುತ್ತದೆ.

ಏಕಮುಖ ರುದ್ರಾಕ್ಷಿ

ರುದ್ರಾಕ್ಷಿಯು ಶಿವನಿಗೆ ಬಹಳ ಇಷ್ಟ. ಮಹಾಶಿವರಾತ್ರಿಯಂದು ರುದ್ರಾಕ್ಷಿಯನ್ನು ಮನೆಗೆ ತಂದರೆ ನಿಮಗೆ ಎಲ್ಲವೂ ಶುಭವೇ ನಡೆಯುತ್ತದೆ. ರುದ್ರಾಕ್ಷಿಯಲ್ಲಿ ವಿವಿಧ ರೀತಿಯ ರುದ್ರಾಕ್ಷಿಗಳಿವೆ. ಅದರಲ್ಲಿ ಏಕ ಮುಖ ರುದ್ರಾಕ್ಷಿಯನ್ನು ಮನೆಗೆ ತನ್ನಿ. ಹಿಂದೂ ಸಂಪ್ರದಾಯದಲ್ಲಿ ರುದ್ರಾಕ್ಷಿಯು ಸಂತೋಷದ ಸಂಕೇತ ಎಂದು ನಂಬಲಾಗಿದೆ. ಕುಟುಂಬದವರಿಗೆ ಸುಖ , ಸಮೃದ್ಧಿ ಶಾಂತಿಯನ್ನು ನೀಡುತ್ತದೆ. ಶಿವರಾತ್ರಿಯಂದು ಏಕಮುಖ ರುದ್ರಾಕ್ಷಿಯನ್ನು ಮನೆಗೆ ತಂದು ಶಿವನ ಮಂತ್ರಗಳನ್ನು ಪಠಿಸುತ್ತಾ ಪೂಜಿಸಿದರೆ ಒಳ್ಳೆಯದು.

ಮಹಾ ಮೃತ್ಯುಂಜಯ ಯಂತ್ರ

ಮಹಾ ಮೃತ್ಯುಂಜಯ ಯಂತ್ರವನ್ನು ಬಹಳ ಪರಿಣಾಮಕಾರಿ ಎಂದು ನಂಬಲಾಗಿದೆ. ಶಿವರಾತ್ರಿಯಂದು ಈ ಯಂತ್ರವನ್ನು ತಂದು ವಿಧಿ ವಿಧಾನಗಳ ಮೂಲಕ ಪೂಜೆ ನೆರವೇರಿಸಿದರೆ ಮನೆಯಲ್ಲಿ ಏನೇ ದೋಷವಿದ್ದರೂ ನಿವಾರಣೆ ಆಗುತ್ತದೆ. ದುಷ್ಟಶಕ್ತಿಗಳಿಂದ ಮನೆಯನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಇದೆ.

ಬಿಲ್ವ ಪತ್ರೆ

ಶಿವನ ಪೂಜೆಗೆ ಬಿಲ್ವಪತ್ರೆ ಬಹಳ ಶ್ರೇಷ್ಠವಾದದ್ದು. ಬಿಲ್ವಪತ್ರೆ ಇಲ್ಲದೆ ಶಿವನ ಪೂಜೆ ಸಂಪೂರ್ಣವಾಗುವುದೇ ಇಲ್ಲ. ಆದ್ದರಿಂದ ಶಿವರಾತ್ರಿಯಂದು ನೀವು ಬಿಲ್ವಪತ್ರೆಯನ್ನು ಮನೆಗೆ ತಂದರೆ ಬಹಳ ಶುಭ.

ಮಲ್ಲಿಗೆ ಹೂ

ಮಹಾಶಿವರಾತ್ರಿಯಂದು ಮಲ್ಲಿಗೆ ಹೂಗಳನ್ನು ಮನೆಗೆ ತಂದರೆ ಶುಭ. ಏಕೆಂದರೆ ಈ ಹೂವು ಪಾರ್ವತಿ ದೇವಿಗೆ ಬಹಳ ಪ್ರಿಯವಾಗಿರುವುದರಿಂದ ನಿಮಗೆ ಪಾರ್ವತಿಯ ಅನುಗ್ರಹ ಕೂಡಾ ದೊರೆಯಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.