ಕನ್ನಡ ಸುದ್ದಿ  /  Astrology  /  Maha Shivaratri 2024 Way To Worship Shiva With Bilva Patre Medicinal Benefits Of Bilva Patra Leaf Sts

Maha Shivaratri: ಶಿವನಿಗೆ ಶ್ರೇಷ್ಠವಾದ ಬಿಲ್ವಪತ್ರೆಯಿಂದ ಪೂಜೆ ಮಾಡುವ ವಿಧಾನ ಇಲ್ಲಿದೆ: ಬಿಲ್ಪತ್ರೆಯ ಔಷಧೀಯ ಗುಣಗಳೂ ತಿಳಿಯಿರಿ

Bilva Patra: ಶಿವನ ಪೂಜೆಯು ಸಂಪೂರ್ಣವಾಗಬೇಕೆಂದರೆ ಬಿಲ್ಪತ್ರೆಯಿಂದ ಪೂಜೆ ಸಲ್ಲಿಸಬೇಕು. ಅದರಲ್ಲಿಯೂ ಶಿವರಾತ್ರಿಯಂದು ಬಿಲ್ವಪತ್ರೆ ಬೇಕೇ ಬೇಕು. ಇದು ಹಲವು ಔಷಧೀಯ ಗುಣಗಳನ್ನೂ ಹೊಂದಿದೆ. (ಲೇಖನ: ಎಚ್‌. ಸತೀಶ್‌, ಜ್ಯೋತಿಷಿ)

ಶಿವನಿಗೆ ಶ್ರೇಷ್ಠವಾದ ಬಿಲ್ವಪತ್ರೆ
ಶಿವನಿಗೆ ಶ್ರೇಷ್ಠವಾದ ಬಿಲ್ವಪತ್ರೆ

ಪ್ರತಿಯೊಂದು ದೇವರಿಗೂ ಹೂವಿನ ಜೊತೆಯಲ್ಲಿ ಪತ್ರೆಯ ಪೂಜೆಯನ್ನು ಮಾಡಲಾಗುತ್ತದೆ. ಇದೇ ರೀತಿ ಶಿವನಿಗೂ ಸಹ ಬಿಲ್ವಪತ್ರೆಯ (ಬಿಲ್ಪತ್ರೆ) ಪೂಜೆ ಅತಿ ಶ್ರೇಷ್ಠವೆನಿಸುತ್ತದೆ. ಶಿವರಾತ್ರಿಯ ದಿನ ಕತ್ತಲಾದ ಕಾರಣ ಬೇಡರ ಕಣ್ಣಪ್ಪನು ಮರವನ್ನೇರುತ್ತಾನೆ. ಅದು ಬಿಲ್ವಪತ್ರೆಯ ಮರವಾಗಿರುತ್ತದೆ. ಪ್ರಾಣಿ ಹಿಂಸೆಯಿಂದಲೇ ಜೀವನ ನಡೆಸುತ್ತಿದ್ದ ಬೇಡನು ನಿದ್ದೆ ಬರಬಹುದೆಂಬ ಭಯದಿಂದ ಸೊಪ್ಪನ್ನು ಕೆಳಗೆ ರಾತ್ರಿಯೆಲ್ಲಾ ಎಸೆಯುತ್ತಾನೆ. ಅದೃಷ್ಟವೆಂಬತೆ ಮರದ ಕೆಳಗೆ ಒಂದು ಶಿವಲಿಂಗವಿರುತ್ತದೆ. ಇವನು ಎಸೆಯುವ ಬಿಲ್ವಪತ್ರೆಯು ಶಿವನ ಮೇಲೆ ಬೀಳುತ್ತದೆ. ಬೆಳಗಾದ ಮೇಲೆ ಬೇಡನ ಕಣ್ಣಿಗೆ ಶಿವಲಿಂಗವು ಕಾಣುತ್ತದೆ. ಅರ್ಚಕನು ಮಾಡಿದ ಪೂಜೆಯನ್ನು ಪಕ್ಕಕ್ಕಿರಿಸಿ ಇವನು ಮಾಂಸವನ್ನೇ ಶಿವನಿಗೆ ಅರ್ಪಿಸುತ್ತಾನೆ. ಅದರ ಜೊತೆಗೆ ಬಿಲ್ವಪತ್ರೆಯಿಂದ ಪೂಜಿಸುತ್ತಾನೆ. ಇದರಿಂದಲೇ ಶಿವನು ಸಹ ಬೇಡಪ್ಪನಿಗೆ ಪ್ರತ್ಯಕ್ಷನಾಗುತ್ತಾನೆ.

ಶಿವನ ಪೂಜೆಯು ಸಂಪೂರ್ಣವಾಗಬೇಕೆಂದರೆ ಬಿಲ್ಪತ್ರೆಯಿಂದ ಪೂಜೆ ಸಲ್ಲಿಸಬೇಕು. ಸಾಮಾನ್ಯವಾಗಿ ಬಿಲ್ಪತ್ರೆಯು ಮೂರು ದಳಗಳನ್ನು ಹೊಂದಿರುತ್ತವೆ. ಆದರೆ ಕೆಲವೆಡೆ ನಾಲ್ಕು, ಐದು ಮತ್ತು ಆರು ದಳಗಳನ್ನು ಹೊಂದಿರುವ ಬಿಲ್ವಪತ್ರೆಯೂ ಕಾಣ ಸಿಗುತ್ತದೆ. ನೆಲದ ಮೇಲೆ ಇರುವ ಬಿಲ್ಪತ್ರೆಯನ್ನು ದೇವರಿಗೆ ಎಂದಿಗೂ ಅರ್ಪಿಸಬಾರದು. ಮರದಿಂದ ಬಿಡಿಸಿದ ಬಿಲ್ವಪತ್ರೆಗಳನ್ನು ಮಾತ್ರ ಬಳಸಬೇಕು. ರುದ್ರ ಪಾರಾಯಣ ಮಾಡುತ್ತಾ ಬಿಲ್ವಪತ್ರೆಯನ್ನು ಕೈಯಲ್ಲಿ ಹಿಡಿದು ನೀರಿನ ಅಭಿಷೇಕವನ್ನು ಮಾಡಬಹುದು. ಸಾಧ್ಯವಾಗದೆ ಹೋದಲ್ಲಿ ಶಿವನ ಅಷ್ಟೋತ್ತರವನ್ನು ಪಠಿಸುತ್ತ ಬಿಲ್ವಪತ್ರೆಯ ಪೂಜೆಯನ್ನು ಮಾಡಬಹುದು. ಇದು ಸಾಧ್ಯವಾಗದೇ ಹೋದಲ್ಲಿ ಬಿಲ್ವಾಷ್ಟಕವನ್ನು ಹೇಳಿಕೊಂಡು ಬಿಲ್ವಪತ್ರೆಯಿಂದ ಪೂಜಿಸಬಹುದು.

ಮನೆಯಲ್ಲಿ ಇರುವ ಶಿವ ಸಾಲಿಗ್ರಾಮ ಅಥವಾ ಶಿವಲಿಂಗಕ್ಕೆ ಬಿಲ್ವಪತ್ರೆಯಿಂದ ಪ್ರತಿನಿತ್ಯ ಪೂಜೆ ಮಾಡಿದರೆ ಅದರ ಪ್ರಖರತೆ ಹೆಚ್ಚುತ್ತದೆ. ಅಲ್ಲದೆ ಅದರಿಂದ ಧನಾತ್ಮಕ ಶಕ್ತಿಯು ಮನೆಯನ್ನು ಆವರಿಸುತ್ತದೆ. ಇದರಿಂದ ಬಿಲ್ವಪತ್ರೆಯೂ ಬಹುಮುಖ್ಯವಾಗುತ್ತದೆ. ಅಮಾವಾಸ್ಯೆಗಳಂದು ಶಿವನ ದೇಗುಲದಲ್ಲಿ ಬಿಲ್ವಪತ್ರೆಯ ಮೂಲಕ ಪೂಜೆ ಮಾಡಿಸಿದಲ್ಲಿ ಅಪಮೃತ್ಯು ಪರಿಹಾರವಾಗುತ್ತದೆ. ಮನೆಯಲ್ಲಿನ ಋಣಾತ್ಮಕ ಶಕ್ತಿಯು ಕಡೆಮೆಯಾಗುತ್ತದೆ. ಬಿಲ್ವಪತ್ರೆಯು ಕೇವಲ ಪೂಜೆಗೆ ಮಾತ್ರ ಸೀಮಿತವಾಗಿಲ್ಲ. ಔಷಧೀಯ ರೂಪದಲ್ಲಿ ಇದರಿಂದ ಬಹಳ ಉಪಯೋಗವಿದೆ.

ಬಿಲ್ವಪತ್ರೆ ಔಷಧೀಯ ಗುಣಗಳು

  1. ಬಿಲ್ವಪತ್ರೆಯಿಂದ ಹಳ್ಳಿಗಳಲ್ಲಿ ಪ್ರಸಿದ್ಧಿಯಾಗಿರುವ ತಂಬುಳಿಯನ್ನು ತಯಾರಿಸಬಹುದು. ಇದನ್ನು ಬಿಸಿಯಾಗಿರುವ ಅನ್ನದೊಂದಿಗೆ ತಿಂದರೆ ಮುಖ್ಯವಾಗಿ ಮಧುಮೇಹವು ನಿಯಂತ್ರಣಕ್ಕೆ ಬರುತ್ತದೆ.

2. ಬೆಲ್ಲವನ್ನು ಸೇರಿಸಿ ಇದರ ಕಷಾಯವನ್ನು ತಯಾರಿಸಿ ಸೇವಿಸಿದರೆ ಬುದ್ದಿ ಶಕ್ತಿ ಹೆಚ್ಚುತ್ತದೆ. ಅಲ್ಲದೆ ನಮ್ಮ ಜ್ಞಾಪಕ ಶಕ್ತಿಯು ಹೆಚ್ಚುತ್ತದೆ. ಆದ್ದರಿಂದ ಇದು ವಿದ್ಯಾರ್ಥಿಗಳಿಗೆ ಬಹುಮುಖ್ಯ.

3. ಒಂದು ಟೀ ಚಮಚ ಬಿಲ್ವಪತ್ರೆಯ ರಸಕ್ಕೆ ಒಂದು ಟೀ ಚಮಚವನ್ನು ಜೇನನ್ನು ಬೆರೆಸಿ ಸೇವಿಸಿದರೆ ಅರಿಶಿಣ ಕಾಮಾಲೆ ರೋಗವು ದೂರವಾಗುವುದು. ದಿನಕ್ಕೆ ಮೂರು ಬಾರಿ ಇದನ್ನು ಸೇವಿಸಬೇಕು.

4. ಬಿಲ್ವಪತ್ರೆಯನ್ನು ನುಣ್ಣಗೆ ಅರೆದು ಅದನ್ನು ಬೆನ್ನು ಮತ್ತು ಎದೆಯ ಭಾಗದಲ್ಲಿ ಲೇಪಿಸಿದರೆ ಕಫದ ತೊಂದರೆ ದೂರವಾಗುತ್ತದೆ.

5. ದೇಹದಲ್ಲಿ ಯಾವುದೇ ಭಾಗದಲ್ಲಿ ಊತ ಕಂಡು ಬಣ್ಣದಲ್ಲಿ ಒಂದು ಚಮಚದಷ್ಟು ಬಿಲ್ವಪತ್ರೆಯ ರಸವನ್ನು ಸೇವಿಸಿದರೆ ಊತವು ಕಡಿಮೆಯಾಗುವುದು.

6. ಬಿಲ್ವಪತ್ರೆಯ 12 ದಳಗಳನ್ನು ಪ್ರತಿದಿನ ಆಗಿದ್ದು ತಿಂದರೆ, ಇನ್ಸುಲಿನ್ ಉತ್ಪತ್ತಿಯಾಗುವುದು. ಇದರಿಂದ ಮಧುಮೇಹವು ದೂರವಾಗುತ್ತದೆ.

7. ಒಂದು ಟೀ ಚಮಚ ಬಿಲ್ವಪತ್ರೆಗೆ ರಸವನ್ನು ಹಾಲಿನೊಂದಿಗೆ ಸೇವಿಸಿದರೆ ಹೆಣ್ಣು ಮಕ್ಕಳಲ್ಲಿ ಬಿಳಿಮುಟ್ಟು ಹೋಗುವುದು ನಿಲ್ಲುತ್ತದೆ. ಹಾಗೆಯೇ ಅತಿಯಾದ ರಕ್ತ ಸ್ರಾವವು ಕಡಿಮೆಯಾಗುತ್ತದೆ. ಇದರಿಂದ ಮುಟ್ಟಿನ ವೇಳೆ ಬರುವ ಹೊಟ್ಟೆ ನೋವು ದೂರವಾಗುತ್ತದೆ.

8. ಬಿಲ್ವಪತ್ರೆಗಳನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಸೀಗೆ ಪುಡಿಯೊಂದಿಗೆ ಬಳಸಿದರೆ ಅಥವಾ ಕಡಲೆ ಹಿಟ್ಟಿನೊಂದಿಗೆ ಬಳಸಿದರೆ ದೇಹದ ಕೆಟ್ಟ ವಾಸನೆಯು ದೂರವಾಗುತ್ತದೆ.

9. ಬಿಲ್ವಪತ್ರೆಯನ್ನು ಚೆನ್ನಾಗಿ ಅರೆದು ನೀರಿನಿಂದ ಬಿಲ್ಲೆಗಳನ್ನಾಗಿ ಮಾಡಿಕೊಳ್ಳಬೇಕು. ಇದನ್ನು ಕಣ್ಣನ್ನು ಮುಚ್ಚಿ ರೆಪ್ಪೆಯ ಮೇಲೆ ಇಟ್ಟುಕೊಂಡು ಮಲಗಿದರೆ ಕಣ್ಣಿನ ಉರಿ ಮತ್ತು ಕಣ್ಣಿನ ನೋವು ಮರೆಯಾಗುತ್ತದೆ.

ಲೇಖನ: ಎಚ್‌. ಸತೀಶ್‌, ಜ್ಯೋತಿಷಿ -ಬೆಂಗಳೂರು

ಮೊಬೈಲ್:‌ 8546865832