ಕನ್ನಡ ಸುದ್ದಿ  /  Astrology  /  Maha Shivaratri 2024 Which Mantra Can Be Chant How To Perform Pooja To Get Lord Shiva Blessings Rsm

Maha Shivaratri 2024: ಶಿವರಾತ್ರಿಯಂದು ಯಾವ ರಾಶಿಯವರು ಶಿವನನ್ನು ಯಾವ ರೀತಿ ಆರಾಧಿಸಬೇಕು? ಯಾವ ಮಂತ್ರಗಳನ್ನು ಪಠಿಸಬೇಕು?

Maha Shivaratri 2024: ಶಿವರಾತ್ರಿಯಂದು ಭಕ್ತರು ರಾಶಿಗೆ ಅನುಗುಣವಾಗಿ ಮೃತ್ಯುಂಜಯ ಮಂತ್ರ, ಓಂ ನಮಃ ಶಿವಾಯ ಮಂತ್ರ ಪಠಿಸಿದರೆ ಶಿವನ ಅನುಗ್ರಹ ದೊರೆಯುತ್ತದ. ಎಲ್ಲಾ ಸಮಸ್ಯೆಗಳಿಂದಲೂ ಮುಕ್ತಿ ದೊರೆಯುತ್ತದೆ.

ರಾಶಿಗೆ ಅನುಗುಣವಾಗಿ ಶಿವಮಂತ್ರ ಜಪಿಸಿದವರಿಗೆ ಶಿವನ ಆಶೀರ್ವಾದ ದೊರೆಯಲಿದೆ
ರಾಶಿಗೆ ಅನುಗುಣವಾಗಿ ಶಿವಮಂತ್ರ ಜಪಿಸಿದವರಿಗೆ ಶಿವನ ಆಶೀರ್ವಾದ ದೊರೆಯಲಿದೆ

ಮಹಾ ಶಿವರಾತ್ರಿ 2024: ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಹಾ ಶಿವರಾತ್ರಿಯೂ ಒಂದು. ಆ ದಿನ ಎಲ್ಲಾ ಶಿವಾಲಯಗಳು ಶಿವನ ನಾಮ ಸ್ಮರಣೆಯಿಂದ ಮೊಳಗುತ್ತವೆ. ಶಿವರಾತ್ರಿಯ ದಿನ ಉಪವಾಸ ಮತ್ತು ಜಾಗರಣೆ ಮತ್ತು ಭಕ್ತಿಯಿಂದ ಶಿವನನ್ನು ಪೂಜಿಸಲಾಗುತ್ತದೆ. ಕೆಲವರು ವಿಶೇಷವಾಗಿ ಅಭಿಷೇಕ ಮಾಡುತ್ತಾರೆ.

ಜ್ಯೋತಿಷಿಗಳು ಹೇಳುವ ಪ್ರಕಾರ ಶಿವರಾತ್ರಿಯಂದು ನೀವು ಪೂಜೆ ಮಾಡಬೇಕೆಂದರೆ ನಿಮ್ಮ ರಾಶಿಚಕ್ರದ ಪ್ರಕಾರ ಈ ರೀತಿ ಪೂಜೆಯನ್ನು ಮಾಡುವುದರಿಂದ ಶುಭ ಫಲಗಳು ಸಿಗುತ್ತವೆ. ಯಾವ ರಾಶಿಚಕ್ರದವರು ಯಾವ ಮಂತ್ರಗಳನ್ನು ಪಠಿಸಬೇಕು ಮತ್ತು ಪೂಜಿಸಬೇಕು ನೋಡೋಣ.

ಮೇಷ ರಾಶಿ

ಮೇಷ ರಾಶಿಯವರು ಶಿವನಿಗೆ ಕೆಂಪು ಹೂವುಗಳನ್ನು ಅರ್ಪಿಸಬೇಕು. ಅಲ್ಲದೆ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಶಿವನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಉಪವಾಸ ಮಾಡಿ ಶಿವನನ್ನು ಸ್ತುತಿಸಿದರೆ ನೀವು ಮಾಡುವ ಕಾರ್ಯದಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ.

ವೃಷಭ ರಾಶಿ

ವೃಷಭ ರಾಶಿಯವರು ಶಿವನಿಗೆ ಪ್ರಿಯವಾದ ಬಿಳಿ ಹೂವುಗಳನ್ನು ಅರ್ಪಿಸಬೇಕು. ರುದ್ರಾಭಿಷೇಕ ಪೂಜೆಯಲ್ಲಿ ಭಾಗವಹಿಸುವುದರಿಂದ ಶಂಕರನ ಆಶೀರ್ವಾದ ಸಿಗುತ್ತದೆ. ಪೂಜೆಯ ಸಮಯದಲ್ಲಿ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಪಠಿಸುವುದರಿಂದ ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತದೆ.

ಮಿಥುನ ರಾಶಿ

ಮಿಥುನ ರಾಶಿಯವರು ಮಹಾ ಮೃತ್ಯುಂಜಯ ಹವನ ಮಾಡಿ ಶಿವನಿಗೆ ಹಸಿರು ಹಣ್ಣುಗಳನ್ನು ಅರ್ಪಿಸಬೇಕು. ಹಾಗೆಯೇ ಓಂ ನಮಃ ಶಿವಾಯ ಮಂತ್ರವನ್ನು ಪಠಿಸುವುದರಿಂದ ನೀವು ಆರೋಗ್ಯವಾಗಿರುತ್ತೀರಿ. ಯಶಸ್ಸಿನ ಹಾದಿಗಳು ಸುಗಮವಾಗುತ್ತವೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ಶಿವನಿಗೆ ಹಾಲು ಬಿಳಿ ಹೂವುಗಳನ್ನು ಅರ್ಪಿಸಿ ಮಹಾ ಮೃತ್ಯುಂಜಯ ಪೂಜೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆಯಬಹುದು. ಇಂದು ಉಪವಾಸ ಮಾಡುವುದರಿಂದ ನಿಮಗೆ ಆರೋಗ್ಯ ಮತ್ತು ಯಶಸ್ಸು ಉಂಟಾಗುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯವರು ರುದ್ರಾಭಿಷೇಕ ಪೂಜೆ ಮಾಡಿ ಹೂಗಳನ್ನು ಅರ್ಪಿಸಿ ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ. ಈ ರಾಶಿಯವರು ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಆರೋಗ್ಯ ಸುಧಾರಿಸುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರು ಶಿವನಿಗೆ ಹಾಲು ಮತ್ತು ಬಿಳಿ ಹೂವುಗಳನ್ನು ಅರ್ಪಿಸಬೇಕು. ಪವಿತ್ರ ರುದ್ರಾಭಿಷೇಕ ಪೂಜೆಯಲ್ಲಿ ಭಾಗವಹಿಸಿ ಮತ್ತು ಶಿವನನ್ನು ಸ್ಮರಿಸುತ್ತಾ ಓಂ ನಮಃ ಶಿವಾಯ ಮಂತ್ರವನ್ನು ಪಠಿಸುವುದರಿಂದ ಆರೋಗ್ಯ ಮತ್ತು ಸಮೃದ್ಧಿ ದೊರೆಯುತ್ತದೆ.

ತುಲಾ ರಾಶಿ

ಈ ರಾಶಿಯವರು ಶಿವನಿಗೆ ಪ್ರಿಯವಾದ ಬಿಳಿ ಹೂವುಗಳನ್ನು ಅರ್ಪಿಸಬೇಕು. ಪವಿತ್ರವಾದ ಮಹಾ ಮೃತ್ಯುಂಜಯ ಪೂಜೆಯಲ್ಲಿ ಭಾಗವಹಿಸುವುದು ಒಳ್ಳೆಯದು. ಓಂ ನಮಃ ಶಿವಾಯ ಮಂತ್ರವನ್ನು ಜಪಿಸಬೇಕು. ಹೀಗೆ ಮಾಡುವುದರಿಂದ ಆರೋಗ್ಯ ಮತ್ತು ಯಶಸ್ಸು ಸಿಗುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಈ ಶುಭ ದಿನದಂದು ರುದ್ರಾಭಿಷೇಕ ಮಾಡಬೇಕು. ಶಕ್ತಿಯುತವಾದ ಕೆಂಪು ಹೂವುಗಳನ್ನು ಶಿವನಿಗೆ ಅರ್ಪಿಸಬೇಕು. ಹಾಗೆಯೇ ಉಪವಾಸ ಮಾಡಿದರೆ ಶುಭ ಫಲ ಸಿಗುತ್ತದೆ.

ಧನು ರಾಶಿ

ಧನು ರಾಶಿಯವರು ಶಂಕರನಿಗೆ ಹಳದಿ ಹೂಗಳನ್ನು ಅರ್ಪಿಸಬೇಕು. ಮಹಾ ಮೃತ್ಯುಂಜಯ ಪೂಜೆಯಲ್ಲಿ ಪಾಲ್ಗೊಂಡರೆ ಯಶಸ್ಸು ಲಭಿಸುತ್ತದೆ. ಜೊತೆಗೆ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಬೇಕು. ಇದು ಅವರ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

ಮಕರ ರಾಶಿ

ಮಕರ ರಾಶಿಯವರು ರುದ್ರಾಭಿಷೇಕ ಮಾಡುವ ಮೂಲಕ ಶಿವನ ಆಶೀರ್ವಾದ ಪಡೆಯಬಹುದು. ಜೊತೆಗೆ ಶಂಕರನಿಗೆ ನೀಲಿ ಹೂವುಗಳನ್ನು ಅರ್ಪಿಸಬೇಕು. ಉಪವಾಸ ಮಾಡಿದರೆ ಇನ್ನಷ್ಟು ಆರೋಗ್ಯವನ್ನು ನೀಡುತ್ತದೆ. ನಿಯಮಬದ್ಧವಾಗಿ ಪೂಜೆ ಮಾಡಿ.

ಕುಂಭ ರಾಶಿ

ಕುಂಭ ರಾಶಿಯವರು ಶಿವನಿಗೆ ಶುದ್ಧ ಬಿಳಿ ಹೂವುಗಳನ್ನು ಅರ್ಪಿಸಬೇಕು. ಮಹಾ ಮೃತ್ಯುಂಜಯ ಪೂಜೆಯಲ್ಲಿ ಭಾಗವಹಿಸಿ ಮತ್ತು ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ನಿಮ್ಮ ಬದುಕು ಹಸನಾಗುತ್ತದೆ.

ಮೀನ ರಾಶಿ

ಮೀನ ರಾಶಿಯವರು ರುದ್ರಾಭಿಷೇಕ ಪೂಜೆಯನ್ನು ಮಾಡಿ ಹಳದಿ ಹೂಗಳನ್ನು ಅರ್ಪಿಸಬೇಕು. ಉಪವಾಸ ಮಾಡಿದರೆ ನಿಮ್ಮ ಗುರಿಗಳನ್ನು ಸಾಧಿಸಲು ಸಹಾಯವಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.