ಮಹಾ ಶಿವರಾತ್ರಿ ಶುಭಾಶಯ 2025: ಜಾಗರಣೆಯ ಈ ರಾತ್ರಿ ನಿಮ್ಮ ಬಾಳಲ್ಲಿ ಜಾಗೃತಿಯ ರಾತ್ರಿಯೂ ಆಗಲಿ, ಆತ್ಮೀಯರಿಗೆ ಹೀಗೆ ಶುಭ ಹಾರೈಸಿ
ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿವರ್ಷ ಮಹಾ ಶಿವರಾತ್ರಿಯನ್ನು ಫಾಲ್ಗುಣ ಮಾಸದ ಕೃಷ್ಣಪಕ್ಷದ 14ನೇ ದಿನ ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ಮಾರ್ಚ್ 26 ರಂದು ಮಹಾ ಶಿವರಾತ್ರಿ ಆಚರಿಸಲಾಗುತ್ತಿದೆ. ಶಿವನನ್ನು ಆರಾಧಿಸುವ ಈ ಶುಭ ದಿನದಂದು ನಿಮ್ಮ ಆತ್ಮೀಯರಿಗೆ ಈ ರೀತಿ ಶುಭ ಹಾರೈಸಿ.

ಶಿವನ ಭಕ್ತರು ಮಹಾ ಶಿವರಾತ್ರಿ ಆಚರಿಸಲು ಭಕ್ತಿಯಿಂದ ಎದುರು ನೋಡುತ್ತಿದ್ದಾರೆ. ಆಚರಣೆಗೆ ಇನ್ನೂ ಒಂದು ತಿಂಗಳು ಬಾಕಿ ಇರುವಂತೆಯೇ ಈಗಿನಿಂದಲೇ ತಯಾರಿ ಆರಂಭವಾಗಿದೆ. ಶಿವ ಹಾಗೂ ಗೌರಿ ವಿವಾಹವಾದ ದಿನವನ್ನು ಮಹಾಶಿವರಾತ್ರಿಯನ್ನಾಗಿ ಆಚರಿಸುತ್ತಾ ಬರಲಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿವರ್ಷ ಮಹಾ ಶಿವರಾತ್ರಿಯನ್ನು ಫಾಲ್ಗುಣ ಮಾಸದ ಕೃಷ್ಣಪಕ್ಷದ 14ನೇ ದಿನ ಆಚರಿಸಲಾಗುತ್ತದೆ.
ಈ ವರ್ಷ ಮಹಾ ಶಿವರಾತ್ರಿಯನ್ನು ಫೆಬ್ರವರಿ 26ರಂದು ಆಚರಿಸಲಾಗುತ್ತಿದೆ. ಆ ದಿನ ಬೆಳಗ್ಗೆ 6:19 ರಿಂದ 9:26 ಮೊದಲ ಪೂಜೆಗೆ ಶುಭ ಮುಹೂರ್ತವಿದೆ. ರಾತ್ರಿ 9:26 ರಿಂದ 12:34 ವರೆಗೆ ಎರಡನೇ ಪೂಜಾ ಸಮಯ, ಮಧ್ಯರಾತ್ರಿ (ಫೆ 27) 12:34 ರಿಂದ ಬೆಳಗಿನ ಜಾವ 3:41 ವರೆಗೆ ಮೂರನೇ ಪೂಜಾ ಸಮಯ ಹಾಗೂ ಬೆಳಗಿನ ಜಾವ 3:41 ರಿಂದ 6:41 ವರೆಗೆ ನಾಲ್ಕನೇ ಪೂಜೆಯನ್ನು ಮಾಡಬಹುದು. ಮಹಾ ಶಿವರಾತ್ರಿಯಂದು ಉಪವಾಸವಿದ್ದು, ರಾತ್ರಿ ಜಾಗರಣೆ ಇದ್ದು ಶಿವನ ಪೂಜೆ ಮಾಡಿದರೆ ಮನಸ್ಸಿನ ಅಭೀಷ್ಟಗಳೆಲ್ಲಾ ಸಿದ್ಧಿಸುತ್ತದೆ, ಮೋಕ್ಷ ದೊರೆಯುತ್ತದೆ ಎಂದು ನಂಬಲಾಗಿದೆ.
ಹಬ್ಬ, ಹರಿದಿನಗಳಂದು ಆತ್ಮೀಯರಿಗೆ ಶುಭ ಕೋರುವುದು ಸಾಮಾನ್ಯ. ಶಿವರಾತ್ರಿ ಹತ್ತಿರ ಬರುತ್ತಿದೆ, ಈ ವಿಶೇಷ ದಿನದಂದು ನಿಮ್ಮ ಆತ್ಮೀಯರಿಗೂ ನೀವು ವಿಭಿನ್ನವಾಗಿ ಶುಭಾಶಯ ಕೋರಬಹುದು.
ಶಿವರಾತ್ರಿಯಂದು ನಿಮ್ಮ ಆತ್ಮೀಯರಿಗೆ ಈ ರೀತಿ ಶುಭ ಕೋರಿ
- ಮಹಾ ಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ, ಆ ಶಂಕರನು ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ಜಯಿಸಲು ನಿಮಗೆ ಶಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ನೀಡಲಿ, ಮಹಾ ಶಿವರಾತ್ರಿ ಶುಭಾಶಯಗಳು.
- ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಭಕ್ತಿ, ಆಧ್ಯಾತ್ಮಿಕತೆ ಮತ್ತು ದೈವಿಕ ಆಶೀರ್ವಾದದಿಂದ ತುಂಬಿದ ಮಹಾ ಶಿವರಾತ್ರಿಯ ಶುಭಾಶಯಗಳು.
- ಬೋಲೇನಾಥನ ಆಶೀರ್ವಾದವು ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಮಹಾ ಶಿವರಾತ್ರಿ 2025 ರ ಶುಭಾಶಯಗಳು.
- ಪರಮೇಶ್ವರನ ದಿವ್ಯ ಬೆಳಕು, ನಿಮ್ಮ ಮಾರ್ಗವನ್ನು ಯಶಸ್ಸು ಮತ್ತು ಸಮೃದ್ಧಿಯ ಕಡೆಗೆ ಹೊರಳಿಸುವಂತೆ ದಾರಿ ತೋರಲಿ, ಮಹಾ ಶಿವರಾತ್ರಿ 2025 ರ ಶುಭಾಶಯಗಳು.
- ಪಾರ್ವತಿ ವಲ್ಲಭ ಗಂಗಾಧರನು ಶಾಶ್ವತ ಪ್ರೀತಿ ಮತ್ತು ಶಕ್ತಿಯನ್ನು ನಿಮಗೆ ಧಾರೆ ಎರೆಯಲಿ. ನಿಮಗೂ, ನಿಮ್ಮ ಕುಟುಂಬಕ್ಕೂ ಸಂತೋಷ ಮತ್ತು ಶಾಂತಿ ನೀಡಲಿ, ಶಿವನ ಸಕಲ ಆಶೀರ್ವಾದ ದೊರೆಯಲಿ, ಮಹಾ ಶಿವರಾತ್ರಿ ಶುಭಾಶಯಗಳು.
- ಓಂ ತ್ರಯಂಬಕಂ ಯಜಮಾಹೇ ಸುಗಂಧಿಂ ಪುಷ್ಠಿವರ್ಧನಂ ಊರ್ವರುಕಮೀವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್, ಚಂದ್ರಮೌಳಿಯು ನಿಮ್ಮ ಕಷ್ಟಗಳನ್ನು ಪರಿಹರಿಸಿ, ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಲಿ, ಮಹಾ ಶಿವರಾತ್ರಿಯ ಶುಭ ಹಾರೈಕೆಗಳು.
ಇದನ್ನೂ ಓದಿ: ಮಾಘ ಮಾಸದಲ್ಲಿ ಈ ಕೆಲಸಗಳನ್ನು ಮಾಡಿದರೆ ಶುಭಫಲ ನಿಮ್ಮದಾಗುತ್ತೆ; ಪಾರ್ವತಿಗೆ ಶಿವ ಹೇಳುವ ಕಥೆ ಇಲ್ಲಿದೆ
- ಮಹಾ ಶಿವರಾತ್ರಿಯು ನಿಮಗೆ ಜಾಗರಣೆಯ ರಾತ್ರಿಯೊಂದೇ ಆಗಿರದೆ, ಜಾಗೃತಿಯ ರಾತ್ರಿಯೂ ಆಗಿರಲಿ, ಮಹಾದೇವನು ನಿಮ್ಮ ಬಾಳಿನ ಅಂಧಕಾರವನ್ನು ತೊಳೆದು, ಸಂತೋಷವೆಂಬ ಬೆಳಕನ್ನು ನೀಡಲಿ, ನಿಮ್ಮ ಜೀವನದಲ್ಲಿ ಹೊಸ ಬೆಳಲು ಮೂಡಲಿ, ನಿಮಗೂ ನಿಮ್ಮ ಕುಟುಂಬಕ್ಕೂ ಮಹಾ ಶಿವರಾತ್ರಿಯ ಶುಭಾಶಯಗಳು.
- ಮಹಾ ಶಿವರಾತ್ರಿಯ ಈ ಶುಭದಿನದಂದು ಪಶುಪತಿಯ ಪ್ರಾರ್ಥನೆ ಮಾಡೋಣ, ನಂಜುಂಡೇಶ್ವರನ ದಿವ್ಯ ಸಾನ್ನಿಧ್ಯ, ದೈವಿಕ ಅನುಗ್ರಹವು ನಿಮ್ಮೊಂದಿಗೆ ಇರಲಿ, ಶಿವನು ಶಾಶ್ವತ ಪ್ರೀತಿ ಮತ್ತು ಶಕ್ತಿ ನಿಮಗೆ ಕರುಣಿಸಲಿ, ಮಹಾ ಶಿವರಾತ್ರಿ ಶುಭಾಶಯಗಳು
- ಶಿವನ ಈ ರಾತ್ರಿಯು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಪರಿಶುದ್ಧತೆಯ ಅಲೆಯನ್ನು ತರಲಿ, ಬ್ರಹ್ಮಾಂಡದ ರಕ್ಷಕನಾದ ಶಿವನಲ್ಲಿ, ಕಷ್ಟಗಳನ್ನು ಎದುರಿಸಲು ಧೈರ್ಯ ಕೊಡುವಂತೆ ಪ್ರಾರ್ಥನೆ ಮಾಡೋಣ, ಹರ ಹರ ಮಹಾದೇವ, ಮಹಾ ಶಿವರಾತ್ರಿ ಶುಭಾಶಯಗಳು.
- ಸರ್ವರಿಗೂ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು, ಶಿವ ಪಾರ್ವತಿಯರು ನಾಡಿಗೆ ಒಳಿತು ಮಾಡಲಿ, ರುದ್ರನು ಶಾಂತಿಯಿಂದ ಇರಲು, ನಮಗೆ ಆಶೀರ್ವದಿಸಲು ನಾವು ಮೊದಲು ಎಲ್ಲರಿಗೂ ಒಳಿತನ್ನು ಬಯಸೋಣ, ಪ್ರಕೃತಿಯನ್ನು ಉಳಿಸಿಕೊಳ್ಳೋಣ, ಪ್ರತಿ ಜೀವಿಯನ್ನೂ ಪ್ರೀತಿಸೋಣ.
ಪತ್ರ, ವಾಟ್ಸಾಪ್ ಅಥವಾ ಇನ್ನಿತರ ಸೋಷಿಯಲ್ ಮೀಡಿಯಾ ಮೂಲಕ ನಿಮ್ಮ ಆತ್ಮೀಯರಿಗೆ ಮಹಾ ಶಿವರಾತ್ರಿ ಶುಭಾಶಯಗಳನ್ನು ಕೋರಿ.
