ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಕರ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಹಣಕಾಸು, ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಎಚ್ಚರ ಅಗತ್ಯ

ಮಕರ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಹಣಕಾಸು, ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಎಚ್ಚರ ಅಗತ್ಯ

ಮಕರ ರಾಶಿಯ ಯುಗಾದಿ ವರ್ಷ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಮಕರ ರಾಶಿಯ ಜಾತಕರಿಗೆ ಮಧ್ಯಮ ಫಲಿತಾಂಶವಿದೆ. ಆರಂಭದಲ್ಲಿ ತೊಂದರೆಗಳು ಎದುರಾದರೂ ನಂತರ ಅನುಕೂಲವಿದೆ. ಆರೋಗ್ಯ, ಹಣಕಾಸಿನ ವಿಚಾರಗಳಲ್ಲಿ ಎಚ್ಚರ ಅವಶ್ಯ. ಸಮಸ್ಯೆಗಳ ಪರಿಹಾರಕ್ಕೆ ಏನು ಮಾಡಬೇಕು ಎಂಬ ಮಾಹಿತಿಯನ್ನೂ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಶಾಸ್ತ್ರಿ ಈ ಬರಹದಲ್ಲಿ ನೀಡಿದ್ದಾರೆ.

ಮಕರ ರಾಶಿಯ ಮಾಸವಾರು ಯುಗಾದಿ ಭವಿಷ್ಯ
ಮಕರ ರಾಶಿಯ ಮಾಸವಾರು ಯುಗಾದಿ ಭವಿಷ್ಯ

ಯುಗಾದಿ ವರ್ಷ ಭವಿಷ್ಯ 2024: ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ಮಕರ ರಾಶಿಯವರಿಗೆ ಆರಂಭದಲ್ಲಿ ಸಂಕಷ್ಟವಿದ್ದರೂ ನಂತರದ ದಿನಗಳಲ್ಲಿ ಅನುಕೂಲವಿದೆ. ಉದ್ಯೋಗಿಗಳಿಗೆ ಕೆಲಸದ ವಾತಾವರಣ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿನ ಹಲವು ಸಮಸ್ಯೆಗಳು ದೂರಾಗುವುದಲ್ಲದೇ, ಬಡ್ತಿ ಸಿಗುವ ಸಾಧ್ಯತೆಯೂ ಇದೆ. ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಉದ್ಯಮಿಗಳಿಗೆ ಹೆಚ್ಚು ಅನುಕೂಲವಿದೆ. ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಅನಾರೋಗ್ಯದ ತೊಂದರೆಗಳು ಎದುರಾಗುವ ಸಾಧ್ಯತೆ ಇದ್ದು, ಆರೋಗ್ಯದ ಕಾಳಜಿ ವಹಿಸಬೇಕು. ರೈತರಿಗೆ ಸಾಧಾರಣ ಫಲಿತಾಂಶವಿದೆ. ಸಿನಿ ಮತ್ತು ಮಾಧ್ಯಮದವರು ಮಧ್ಯಮದಿಂದ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದಾರೆ. ವಿದ್ಯಾರ್ಥಿಗಳು ಈ ವರ್ಷ ಕೆಲವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ವಿದೇಶಕ್ಕೆ ತೆರಳಲು ಬಯಸುವ ನಿಮ್ಮ ಪ್ರಯತ್ನಗಳಿಗೆ ಫಲ ದೊರಕಲಿದೆ. ಮಹಿಳೆಯರು ಆರೋಗ್ಯ ಮತ್ತು ಕೌಟುಂಬಿಕ ವ್ಯವಹಾರಗಳ ಬಗ್ಗೆ ಕಾಳಜಿ ವಹಿಸಬೇಕು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅನುಕೂಲವಿದೆ.

ಶನಿ ದೇವರ ಆರಾಧನೆ ಮಾಡಿ 

2024-25ರ ಕ್ರೋಧಿನಾಮ ಸಂವತ್ಸರದಲ್ಲಿ ಹೆಚ್ಚು ಶುಭಫಲಗಳನ್ನು ಪಡೆಯಲು ಬಯಸಿದರೆ ಶನಿವಾರದಂದು ಶನಿಗೆ ತೈಲಾಭಿಷೇಕ ಮಾಡಿ, ಪೂಜೆ ಮಾಡಿ. ಶನಿವಾರದಂದು ವೆಂಕಟೇಶ್ವರನ ದರ್ಶನ ಮಾಡುವುದು ಉತ್ತಮ. ಶನಿಸ್ತೋತ್ರಗಳನ್ನು ಪಠಿಸಿ. ಅಲ್ಲದೆ ದಶರಥ ಪ್ರೋಕ್ತ ಶನಿ ಸ್ತೋತ್ರಂ ಪಠಿಸುವುದರಿಂದ ಹೆಚ್ಚಿನ ಶುಭ ಫಲಗಳು ದೊರೆಯುತ್ತವೆ. ಗುರು ದಕ್ಷಿಣಾಮೂರ್ತಿಯ ಸ್ತೋತ್ರವನ್ನು ಪಠಿಸುವುದು ಉತ್ತಮ.

ಧರಿಸಬೇಕಾದ ನವರತ್ನ: ಮಕರ ರಾಶಿಯವರು ಧರಿಸಬೇಕಾದ ನವರತ್ನವೆಂದರೆ ಇಂದ್ರನೀಲ.

ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಮಕರ ರಾಶಿಯ ಮಾಸವಾರು ಭವಿಷ್ಯ

ಏಪ್ರಿಲ್: ಈ ತಿಂಗಳು ನಿಮಗೆ ಅಷ್ಟೊಂದು ಅನುಕೂಲಕರವಾಗಿಲ್ಲ. ಗುರುವಿನ ಬಲದಿಂದ ಕೆಲಸ ಕಾರ್ಯಗಳಲ್ಲಿ ಆರಂಭದಲ್ಲಿ ಅಡ್ಡಿಯಿದ್ದರೂ ಅಂತಿಮವಾಗಿ ಯಶಸ್ಸು ಸಿಗುತ್ತದೆ. ಹಣದ ಖರ್ಚು ಹೆಚ್ಚಿರುವ ಕಾರಣ ನಿಗಾ ವಹಿಸುವುದು ಉತ್ತಮ. ಬಹುತೇಕ ದಿನಗಳನ್ನು ಪ್ರಯಾಣದಲ್ಲಿ ಕಳೆಯಲಿದ್ದೀರಿ. 

ಮೇ: ಈ ತಿಂಗಳು ಮಕರ ರಾಶಿಯವರಿಗೆ ಉತ್ತಮವಾಗಿಲ್ಲ. ಸೋಮಾರಿತನ ಕಾಡಲಿದೆ. ಹಣದ ವಿಚಾರದಲ್ಲಿ ಎಚ್ಚರ ಅವಶ್ಯ. ಹೊಸ ಸ್ನೇಹ ಸಂಪರ್ಕವಾಗಲಿದೆ. ವ್ಯಾಪಾರದಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗಿ ವ್ಯಾಪಾರ ಸುಗಮವಾಗಿ ನಡೆಯುತ್ತದೆ.

ಜೂನ್: ಈ ತಿಂಗಳು ಕೂಡ ಈ ರಾಶಿಯವರಿಗೆ ಅನುಕೂಲಕರವಾಗಿಲ್ಲ. ಕೆಟ್ಟವರ ಸಹವಾಸದಲ್ಲಿ ಸಿಲುಕಲಿದ್ದೀರಿ. ಮನಸ್ಸನ್ನು ನಿಗ್ರಹಿಸುವುದು ಕಷ್ಟವಾಗಲಿದೆ. ಪದೇ ಪದೇ ಆರೋಗ್ಯ ಕೆಡುವ ಕಾರಣ ಯಾವಾಗಲೂ ಔಷಧಿ ಸೇವಿಸಬೇಕಾಗಬಹುದು. ದೇವಸ್ಥಾನಗಳಿಗೆ ಭೇಟಿ ನೀಡಲಿದ್ದೀರಿ. ಪೋಷಕರಿಂದ ಸೌಕರ್ಯ ಲಭಿಸಲಿದೆ. ಒಡಹುಟ್ಟಿದವರ ನಡುವೆ ಹಗೆತನ ವಿಚಾರಗಳು ಬರಬಹುದು, ಎಚ್ಚರದಿಂದಿರಿ.

ಜುಲೈ: ಈ ತಿಂಗಳು ನಿಮಗೆ ಸಾಮಾನ್ಯವಾಗಿದೆ. ಸಂತೋಷಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಪ್ರಯಾಣದಲ್ಲಿ ಅಡೆತಡೆಗಳು ಎದುರಾಗಲಿದೆ. ಕೆಲಸ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಒಟ್ಟಾರೆ ಫಲಿತಾಂಶಗಳು ನಿರೀಕ್ಷೆಯಂತೆ ಇರುವುದಿಲ್ಲ.

ಆಗಸ್ಟ್: ಈ ತಿಂಗಳು ಮಕರ ರಾಶಿಯವರಿಗೆ ಅನುಕೂಲವಾಗಿಲ್ಲ. ಹಣಕಾಸಿನ ಕೊರತೆ ಕಾಡಬಹುದು. ಮಾನಸಿಕ ಸ್ಥಿರತೆಯ ಇಲ್ಲದ ಕಾರಣ ತೊಂದರೆ ಎದುರಾಗಬಹುದು. ಸ್ನೇಹಿತರೊಂದಿಗೆ ಸಣ್ಣಪುಟ್ಟ ಮನಸ್ತಾಪ ಉಂಟಾಗಬಹುದು. ಕುಟುಂಬದವರು ನಿಮ್ಮ ಮೇಲೆ ಅಸಮಾಧಾನ ವ್ಯಕ್ತಪಡಿಸಬಹುದು.

ಸೆಪ್ಟೆಂಬರ್: ಈ ತಿಂಗಳು ನಿಮಗೆ ಉತ್ತಮ ಸಮಯ. ಆರೋಗ್ಯ ಪರಿಸ್ಥಿತಿ ಉತ್ತಮವಾಗಿರುತ್ತದೆ. ಮನೆಯಲ್ಲಿ ಸಂತಸ ನೆಲೆಸಿರುತ್ತದೆ. ವಾಹನದಿಂದ ಲಾಭವಿದೆ. ಉಷ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೇಹವನ್ನು ಭಾಧಿಸಬಹುದು. ಮನೋಭಿಲಾಷೆಗಳು ಈಡೇರುತ್ತವೆ. ಮೃಷ್ಟಾನ ಭೋಜನ ಸವಿಯಲಿದ್ದೀರಿ. ಮಕ್ಕಳಿಂದ ಯಶಸ್ಸು ಸಿಗಲಿದೆ.

ಅಕ್ಟೋಬರ್: ಈ ತಿಂಗಳು ನಿಮಗೆ ಹೆಚ್ಚು ಅನುಕೂಲಕರವಾಗಿಲ್ಲ. ಹೆಂಡತಿಯೊಂದಿಗೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ಕುಟುಂಬದ ಸೌಕರ್ಯ ಒದಗಲಿದೆ. ಬಂಧುಮಿತ್ರರ ಸಮಾಗಮವಾಗುತ್ತದೆ. ಸರ್ಕಾರದಿಂದ ಸಿಗುವ ಲಾಭಗಳು ಲಭಿಸಲಿವೆ. ಹಣಕಾಸಿನ ಲಾಭದ ಸೂಚನೆಗಳಿವೆ. ಸುತ್ತಮುತ್ತಲಿನ ಜನರ ದ್ವೇಷ ಎದುರಿಸಬೇಕಾಗಬಹುದು. ವ್ಯಾಪಾರಿಗಳು ವ್ಯಾಪಾರ ಚಟುವಟಿಕೆಗಳನ್ನು ವಿಸ್ತರಿಸುತ್ತಾರೆ.

ನವೆಂಬರ್: ಮಕರ ರಾಶಿಯವರಿಗೆ ಈ ತಿಂಗಳು ಮಧ್ಯಮ. ವಾದ ವಿವಾದಗಳಿಂದ ದೂರವಿರಿ.ದೈಹಿಕ ತೊಂದರೆಗಳು ಎದುರಾಗಬಹುದು. ದೇಹದಲ್ಲಿ ಆಲಸ್ಯವಿರುತ್ತದೆ. ಒಳ್ಳೆಯ ಮಾತು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ಸ್ನೇಹಿತರ ಭೇಟಿ, ದೂರ ಪ್ರಯಾಣ ಸಾಧ್ಯತೆ. ದೈವಿಕ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದೀರಿ.

ಡಿಸೆಂಬರ್: ಈ ತಿಂಗಳು ನಿಮಗೆ ಉತ್ತಮವಾಗಿಲ್ಲ. ಖಿನ್ನತೆ ಕಾಡಲಿದೆ. ಇತರರು ನಿಮ್ಮನ್ನು ದೂಷಿಸುತ್ತಾರೆ. ಖರ್ಚು ವೆಚ್ಚಗಳಿದ್ದರೂ ನಿಧಾನಗತಿಯ ಲಾಭವಿರುತ್ತದೆ. ಧಾರ್ಮಿಕ ಚಟುವಟಿಕೆಗಳನ್ನು ನಡೆಸುವ ಸಾಧ್ಯತೆ ಇದೆ. ವ್ಯಾಪಾರಿಗಳು ಬುದ್ಧಿವಂತರಾಗಿರದ್ದರೆ ಲಾಭ ಗಳಿಸಬಹುದು.

ಜನವರಿ 2025: ಈ ತಿಂಗಳು ನಿಮಗೆ ಅನುಕೂಲಕರವಾಗಿದೆ. ಹೊಸ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಹಣಕಾಸಿನ ಸಮಸ್ಯೆಗಳು ದೂರಾಗಲಿವೆ. ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಬಂಧುಮಿತ್ರ ಸಮಾಗಮವಾಗಲಿದೆ. ವಿನಾಕಾರಣ ಆಪಾದನೆ ಬರಬಹುದು, ಕೆಲಸ-ಕಾರ್ಯಗಳಲ್ಲಿ ಎಚ್ಚರ ಅವಶ್ಯ. ತೀರ್ಥಯಾತ್ರೆಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

ಫೆಬ್ರವರಿ 2025: ಈ ತಿಂಗಳು ನಿಮಗೆ ಉತ್ತಮವಾಗಿದೆ. ಕುಟುಂಬದಲ್ಲಿ ಸಂತೋಷ ನೆಲೆಸಿರುತ್ತದೆ. ಹಣಕಾಸಿನ ಲಾಭವಿದೆ. ಶುಭ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೀರಿ. ಪಿತ್ತಕೋಶದ ಸಮಸ್ಯೆ ಕಾಡಬಹುದು. ಕುಟುಂಬದಲ್ಲಿ ಖ್ಯಾತಿ ಹೆಚ್ಚುವ ಸೂಚನೆಗಳಿವೆ. ಒಳ್ಳೆಯ ಸುದ್ದಿ ಕೇಳಿಲಿದ್ದೀರಿ.

ಮಾರ್ಚ್ 2025: ಮಕರ ರಾಶಿಯವರಿಗೆ ಈ ತಿಂಗಳು ಹೆಚ್ಚು ಅನುಕೂಲಕರವಾಗಿಲ್ಲ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ವಾಹನದ ವೇಗವನ್ನು ಕಡಿಮೆ ಮಾಡಿ ಪ್ರಯಾಣಿಸುವುದು ಉತ್ತಮ. ನ್ಯಾಯಾಲಯದ ಕಲಾಪಗಳನ್ನು ಎಚ್ಚರಿಕೆಯಿಂದ ಗಮನಿಸುವುದು ಉತ್ತಮ. ನಿಕಟ ಸಂಬಂಧಿಗಳು ಅನಾರೋಗ್ಯದಿಂದ ಬಳಲಬಹುದು.

ಬರಹ: ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ

 

ವಿಭಾಗ