ಮಕರ ಸಂಕ್ರಾಂತಿ ಹಬ್ಬದ ದಿನ ಈ ವಸ್ತುಗಳನ್ನು ದಾನ ಮಾಡಿ; ಸಂತೋಷ, ಸುಖ, ಶಾಂತಿ ನೆಲೆಸುವ ಜೊತೆಗೆ ಸಂಪತ್ತು ವೃದ್ಧಿಯಾಗುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಕರ ಸಂಕ್ರಾಂತಿ ಹಬ್ಬದ ದಿನ ಈ ವಸ್ತುಗಳನ್ನು ದಾನ ಮಾಡಿ; ಸಂತೋಷ, ಸುಖ, ಶಾಂತಿ ನೆಲೆಸುವ ಜೊತೆಗೆ ಸಂಪತ್ತು ವೃದ್ಧಿಯಾಗುತ್ತೆ

ಮಕರ ಸಂಕ್ರಾಂತಿ ಹಬ್ಬದ ದಿನ ಈ ವಸ್ತುಗಳನ್ನು ದಾನ ಮಾಡಿ; ಸಂತೋಷ, ಸುಖ, ಶಾಂತಿ ನೆಲೆಸುವ ಜೊತೆಗೆ ಸಂಪತ್ತು ವೃದ್ಧಿಯಾಗುತ್ತೆ

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಗೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈಗಾಗಲೇ ಜನರು ಹಬ್ಬದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಕರ ಸಂಕ್ರಾಂತಿಯಂದು ದಾನ ಮಾಡುವುದರಿಂದ ಅದೃಷ್ಟ ಬರುತ್ತದೆ ಎಂಬ ನಂಬಿಕೆಯಿದೆ. ಮಕರ ಸಂಕ್ರಾಂತಿಯಂದು ಯಾವ ವಸ್ತುಗಳನ್ನು ದಾನ ಮಾಡಬೇಕು ಎನ್ನುವ ವಿವರ ಇಲ್ಲಿದೆ.

ಮಕರ ಸಂಕ್ರಾಂತಿ ಹಬ್ಬಕ್ಕೆ ಈ ವಸ್ತುಗಳನ್ನು ದಾನ ಮಾಡಿ
ಮಕರ ಸಂಕ್ರಾಂತಿ ಹಬ್ಬಕ್ಕೆ ಈ ವಸ್ತುಗಳನ್ನು ದಾನ ಮಾಡಿ

ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನದಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಭಾರತದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ರೀತಿಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಸಂಕ್ರಾಂತಿ, ಆಂಧ್ರ-ತೆಲಂಗಾಣದಲ್ಲಿ ಭೋಗಿ, ತಮಿಳುನಾಡಿನಲ್ಲಿ ಪೊಂಗಲ್ ಹೀಗೆ ಹಲವಾರು ಹೆಸರಿನಿಂದ ಈ ಹಬ್ಬವನ್ನು ಕರೆಯಲಾಗುತ್ತದೆ. ಈ ವರ್ಷದ ಮೊದಲ ಹಬ್ಬಕ್ಕೆ ಜನರು ಕಾತರದಿಂದ ಕಾಯುತ್ತಿದ್ದಾರೆ. ಮಕರ ಸಂಕ್ರಾಂತಿ ಹಬ್ಬದಂದು ದಾನಕ್ಕೆ ವಿಶೇಷ ಮಹತ್ವ ಇದೆ. ಈ ವರ್ಷ ಜನವರಿ 14, 2025 ರಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬದಂದು ಕೆಲ ವಸ್ತುಗಳನ್ನು ದಾನ ಮಾಡುವುದರಿಂದ ಜೀವನದಲ್ಲಿ ಅದೃಷ್ಟ ಬರುತ್ತದೆ ಎಂದು ನಂಬಲಾಗಿದೆ. ಏನೆಲ್ಲಾ ದಾನ ಮಾಡಿದರೆ ಅದೃಷ್ಟ ಬರುತ್ತದೆ ಎನ್ನುವ ವಿವರ ಇಲ್ಲಿದೆ.

ಸಂಕ್ರಾಂತಿ ಹಬ್ಬದಂದು ಈ ವಸ್ತುಗಳನ್ನು ದಾನ ಮಾಡಿ

ಧಾನ್ಯಗಳು: ಸಂಕ್ರಾಂತಿ ಹಬ್ಬದಂದು ಧಾನ್ಯಗಳನ್ನು ದಾನ ಮಾಡುತ್ತಾರೆ. ಹಾಗೆ ಮಾಡುವುದರಿಂದ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ. ಸಂಪತ್ತು ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.

ಬೆಲ್ಲ: ಜ್ಯೋತಿಷ್ಯದ ಪ್ರಕಾರ, ಬೆಲ್ಲವನ್ನು ದಾನ ಮಾಡುವುದು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಮಕರ ಸಂಕ್ರಾಂತಿಯಂದು ಬೆಲ್ಲವನ್ನು ದಾನ ಮಾಡುವುದರಿಂದ ಅದೃಷ್ಟದ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಕಪ್ಪು ಎಳ್ಳು: ಮಕರ ಸಂಕ್ರಾಂತಿಯಂದು ಕರಿ ಎಳ್ಳು ದಾನ ಮಾಡುವುದು ತುಂಬಾ ಶುಭಕರ ಎಂದು ಪರಿಗಣಿಸಲಾಗಿದೆ. ಈ ದಿನದಂದು ಕಪ್ಪು ಎಳ್ಳನ್ನು ನೀರಿನಲ್ಲಿ ನೆನೆಸಿ ಸೂರ್ಯನಿಗೆ ಅರ್ಪಿಸುವುದು ಶ್ರೇಯಸ್ಕರ ಎಂದು ನಂಬಲಾಗಿದೆ. ಹೀಗೆ ಮಾಡಿದರೆ ಸೂರ್ಯನ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.

ವಸ್ತ್ರ ದಾನ: ಮಕರ ಸಂಕ್ರಾಂತಿಯ ದಿನದಂದು ಬಟ್ಟೆ, ಹೊದಿಕೆ ಅಥವಾ ಕಂಬಳಿಗಳನ್ನು ದಾನ ಮಾಡುವುದು ಶುಭಕರ. ಇದರಿಂದ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆಯಿದೆ.

ತುಪ್ಪ: ಮಕರ ಸಂಕ್ರಾಂತಿಯಂದು ತುಪ್ಪವನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ ಪ್ರಕಾರ, ಮಕರ ಸಂಕ್ರಾಂತಿಯಂದು ತುಪ್ಪವನ್ನು ದಾನ ಮಾಡುವುದರಿಂದ ಆರ್ಥಿಕ ಪ್ರಗತಿ ಮತ್ತು ಸಂತೋಷವನ್ನು ತರುತ್ತದೆ.

ಮೇಲೆ ತಿಳಿಸಿದ ವಸ್ತುಗಳನ್ನು ದಾನ ಮಾಡುವ ಮೂಲಕ ದೇವರ ಸುಖ, ಶಾಂತಿ, ಸಂಪತ್ತು ದೊರಕುತ್ತದೆ ಎನ್ನುವ ನಂಬಿಕೆಯಿದೆ. ಮಕರ ಸಂಕ್ರಾಂತಿ ಹಬ್ಬದ ದಿನದಂದು ಈ ವಸ್ತುಗಳನ್ನು ದಾನ ಮಾಡುವುದು ಪುಣ್ಯಕರ ಎಂದು ಹಿರಿಯರು ಹೇಳುತ್ತಾರೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಸಂಪ್ರದಾಯವನ್ನು ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಪ್ರತಿಪಾದಿಸುವುದಿಲ್ಲ)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.