Makara Sankranti 2025: ಈ 4 ರಾಶಿಯವರಿಗೆ ಅದೃಷ್ಟ ತರಲಿದೆ ಮಕರ ಸಂಕ್ರಾಂತಿ; ನಿಮ್ಮನ್ನು ಹುಡುಕಿ ಬರಲಿವೆ ಹಲವು ಶುಭಫಲಗಳು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Makara Sankranti 2025: ಈ 4 ರಾಶಿಯವರಿಗೆ ಅದೃಷ್ಟ ತರಲಿದೆ ಮಕರ ಸಂಕ್ರಾಂತಿ; ನಿಮ್ಮನ್ನು ಹುಡುಕಿ ಬರಲಿವೆ ಹಲವು ಶುಭಫಲಗಳು

Makara Sankranti 2025: ಈ 4 ರಾಶಿಯವರಿಗೆ ಅದೃಷ್ಟ ತರಲಿದೆ ಮಕರ ಸಂಕ್ರಾಂತಿ; ನಿಮ್ಮನ್ನು ಹುಡುಕಿ ಬರಲಿವೆ ಹಲವು ಶುಭಫಲಗಳು

ಮಕರ ಸಂಕ್ರಾಂತಿ ದಿನದಂದು ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಸೂರ್ಯನ ಸ್ಥಾನಪಲ್ಲಟವು ಈ 4 ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಹಾಗಾದರೆ ಮಕರ ಸಂಕ್ರಾಂತಿಯಿಂದ ಯಾವೆಲ್ಲಾ ರಾಶಿಯವರಿಗೆ ಅದೃಷ್ಟವಿದೆ, ಏನೆಲ್ಲಾ ಒಳಿತಾಗಲಿದೆ ಎಂಬುದನ್ನು ನೋಡೋಣ.

ಮಕರ ಸಂಕ್ರಾಂತಿ 2025
ಮಕರ ಸಂಕ್ರಾಂತಿ 2025 (PC: Canva)

ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಇದು ವರ್ಷದ ಮೊದಲ ಹಬ್ಬ. ದಕ್ಷಿಣ ಭಾರತದಲ್ಲಿ ಮಕರ ಸಂಕ್ರಾಂತಿ ಆಚರಣೆ ಬಲು ಜೋರು. ಮಕರ ಸಂಕ್ರಾಂತಿಯ ದಿನ ಸೂರ್ಯನು ಧನು ರಾಶಿಯನ್ನು ಬಿಟ್ಟು, ಮಕರ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡಿದ ಕ್ಷಣಗಳಿಂದ ಕರ್ಮಗಳು ಕಳೆದು, ಒಳ್ಳೆಯ ದಿನಗಳು ಆರಂಭವಾಗುತ್ತವೆ ಎಂಬ ನಂಬಿಕೆ ಇದೆ.

ಮಕರ ರಾಶಿಯನ್ನು ಶನಿ ಆಳುತ್ತಾನೆ. ಸೂರ್ಯ ಮತ್ತು ಶನಿಯ ನಡುವೆ ತಂದೆ-ಮಗನ ಸಂಬಂಧವಿದೆ. ಹಾಗಾಗಿ ಮಕರ ಸಂಕ್ರಮಣವು ತಂದೆ–ಮಗನ ಸಂಯೋಜನೆಯನ್ನು ಸೂಚಿಸುತ್ತದೆ. ಈ ಸಂಯೋಜನೆಯು ಕೆಲವು ರಾಶಿಯವರಿಗೆ ವಿಶೇಷವನ್ನು ಉಂಟು ಮಾಡುತ್ತದೆ.

ಈ ಬಾರಿಯ ಮಕರ ಸಂಕ್ರಮಣವು ಮೇಷದಿಂದ ಮೀನ ರಾಶಿವರೆಗೆ ವಿವಿಧ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಈ ಮಕರ ಸಂಕ್ರಾಂತಿಯು ಕೆಲವು ರಾಶಿಯವರಿಗೆ ಅದೃಷ್ಟವನ್ನು ಉಂಟು ಮಾಡುತ್ತದೆ, ಇವರಿಗೆ ಹಲವು ಶುಭಫಲಗಳು ಸಂಭವಿಸಲಿವೆ. ಹಾಗಾದರೆ ಮಕರ ಸಂಕ್ರಾಂತಿಯಿಂದ ಯಾವೆಲ್ಲಾ ರಾಶಿಗೆ ಶುಭವಾಗಲಿದೆ ನೋಡಿ.

ಮೇಷ ರಾಶಿ

ಈ ರಾಶಿಯವರಿಗೆ ವಸ್ತು ಸುಖ ಹೆಚ್ಚಾಗುತ್ತದೆ. ಭೂಮಿ, ಕಟ್ಟಡ, ವಾಹನ ಖರೀದಿಗೆ ಉತ್ತಮ ಅವಕಾಶಗಳಿವೆ. ಸಂಗಾತಿಯ ಬೆಂಬಲ ದೊರೆಯುತ್ತದೆ. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಮಕ್ಕಳು ನಿಮಗೆ ಬೆಂಬಲವಾಗಿ ನಿಲ್ಲುತ್ತಾರೆ. ಕೆಂಪು ವಸ್ತುವನ್ನು ಹತ್ತಿರ ಇಟ್ಟುಕೊಳ್ಳುವುದರಿಂದ ಇನ್ನಷ್ಟು ಮಂಗಳಕರ ಫಲಿತಾಂಶ ದೊರೆಯಲು ಸಹಕಾರಿಯಾಗುತ್ತದೆ.

ವೃಷಭ ರಾಶಿ

ವೃಷಭ ರಾಶಿಯವರು ಅದೃಷ್ಟವಂತರು. ಉದ್ಯೋಗಿಗಳಿಗೆ ಬಡ್ತಿ ಸಿಗುವ ಅವಕಾಶವಿದೆ. ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ವಿಸ್ತರಣೆಯಾಗಬಹುದು. ಪ್ರೀತಿಯ ಜೀವನ ಉತ್ತಮವಾಗಿರುತ್ತದೆ. ಸಂತಾನದಿಂದ ಒಳ್ಳೆಯ ಸುದ್ದಿ ಸಿಗಲಿದೆ. ಹಸಿರು ವಸ್ತುಗಳನ್ನು ಹತ್ತಿರ ಇಟ್ಟುಕೊಳ್ಳುವುದು ಈ ದಿನ ನಿಮಗೆ ಒಳ್ಳೆಯದು.

ಮಕರ ರಾಶಿ

ಮಕರ ರಾಶಿಯವರ ಉದ್ಯೋಗ ಪರಿಸ್ಥಿತಿ ತುಂಬಾ ಉತ್ತಮವಾಗಿದೆ. ಉದ್ಯೋಗದಲ್ಲಿ ಬಡ್ತಿ ಅಥವಾ ಬದಲಾವಣೆ ಕಾಣಲಿದ್ದೀರಿ. ಕೆಲವರಿಗೆ ಆದಾಯ ಹೆಚ್ಚಾಗುತ್ತದೆ. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗೆ ಸಂತೋಷದ ಸಮಯವನ್ನು ಕಳೆಯಲಿದ್ದೀರಿ. ವ್ಯಾಪಾರ ಪರಿಸ್ಥಿತಿಗಳು ಪ್ರಬಲವಾಗಿವೆ. ಶನೈಶ್ಚರನನ್ನು ಪೂಜಿಸುವುದರಿಂದ ಮಂಗಳಕರ ಫಲಿತಾಂಶ ಲಭಿಸಲಿದೆ.

ಕುಂಭ ರಾಶಿ

ಈ ಸಮಯದಲ್ಲಿ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಶತ್ರುಗಳ ಮೇಲೆ ಜಯ ಸಿಗುತ್ತದೆ. ಸದ್ಗುಣ ಮತ್ತು ಜ್ಞಾನವು ದೊರೆಯುತ್ತದೆ. ಹಳೆಯ ರೋಗಗಳಿಂದ ಮುಕ್ತಿ ಸಿಗಲಿದೆ. ಮಕ್ಕಳು ನಿಮ್ಮೊಂದಿಗೆ ಇರುತ್ತಾರೆ. ವ್ಯಾಪಾರವೂ ಉತ್ತಮವಾಗಿರುತ್ತದೆ. ಕೆಂಪು ವಸ್ತುವನ್ನು ಹತ್ತಿರ ಇಡುವುದು ಉತ್ತಮ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.