Makaravilakku 2024: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಯಾವಾಗ? ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Makaravilakku 2024: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಯಾವಾಗ? ಇಲ್ಲಿದೆ ವಿವರ

Makaravilakku 2024: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಯಾವಾಗ? ಇಲ್ಲಿದೆ ವಿವರ

Sankranti Markara Jyothi 2024: ಶಬರಿಮಲೆ ಅಯ್ಯಪ್ಪ ಸ್ವಾಮಿಯ ಲಕ್ಷಾಂತರ ಭಕ್ತರು ಕಾತರದಿಂದ ನಿರೀಕ್ಷಿಸುತ್ತಿರುವ ಮಕರ ಜ್ಯೋತಿ ದರ್ಶನದ ದಿನಾಂಕ ಮತ್ತು ಸಮಯವನ್ನು ಅಯ್ಯಪ್ಪ ಸ್ವಾಮಿ ದೇಗುಲ ಮೂಲಗಳು ಬಹಿರಂಗಪಡಿಸಿವೆ.

ಶಬರಿಮಲೆಯ ಮಕರಜ್ಯೋತಿ ದರ್ಶನಕ್ಕೆ ಸಮಯ, ದಿನಾಂಕ ನಿಗದಿಯಾಗಿದೆ.
ಶಬರಿಮಲೆಯ ಮಕರಜ್ಯೋತಿ ದರ್ಶನಕ್ಕೆ ಸಮಯ, ದಿನಾಂಕ ನಿಗದಿಯಾಗಿದೆ.

ಕೇರಳದ ಪ್ರಸಿದ್ದ ಯಾತ್ರಾ ಸ್ಥಳ ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಗೆ ಮೂರು ತಿಂಗಳ ಮುಂಚೆಯೇ ಶಬರಿ ಮಲೆಯಾತ್ರೆ ಆರಂಭವಾಗುತ್ತದೆ. ಅಯ್ಯಪ್ಪ ಮಾಲೆ ಧರಿಸಿದ ಭಕ್ತರು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಸಹಿತ ನಾನಾ ಭಾಗಗಳಿಂದ ಆಗಮಿಸುತ್ತಾರೆ. ಶಬರಿಮಲೆ ಬೆಟ್ಟವನ್ನು ಏರಿ ಅಲ್ಲಿ ಪೂಜೆ ಸಲ್ಲಿಸುವುದು ಲಕ್ಷಾಂತರ ಭಕ್ತರ ನಂಬಿಕೆ. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಶಬರಿ ಮಲೆ ಬೆಟ್ಟದಲ್ಲಿ ಸಂಕ್ರಾಂತಿಯಂದು ಪ್ರತಿ ವರ್ಷ ನಡೆಯುವ ವಿಶೇಷ ಪೂಜೆಗೆ ಶಬರಿಮಲೆ ಮಕರವಿಳಕ್ಕು ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಮಕರ ಸಂಕ್ರಮಣದ ಕಾಲದಲ್ಲಿಯೇ ಶಬರಿಮಲೆ ಮಕರ ವಿಳಕ್ಕು ಪೂಜೆಗಳು ನಡೆಯುವುದರಿಂದ ಇದರಿಂದ ಮಕರ ಜ್ಯೋತಿ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ.

ಮೂರು ತಿಂಗಳು ಬಂದು ಪೂಜೆ ಸಲ್ಲಿಸಿ ಹೋದವರನ್ನು ಬಿಟ್ಟರೂ ಮಕರ ಜ್ಯೋತಿಯ ದಿನ ಲಕ್ಷಾಂತರ ಭಕ್ತರು ಶಬರಿ ಮಲೆ ಬೆಟ್ಟ ಏರುತ್ತಾರೆ. ಮಕರ ಸಂಕ್ರಮಣದ ದಿನ ಬೆಟ್ಟದಲ್ಲಿ ಇರಬೇಕು. ಪೂಜೆ ಸಲ್ಲಿಸಬೇಕು ಎನ್ನುವುದು ಹಲವು ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಬಯಕೆ. ಅದರಲ್ಲೂ ಮಕರ ಜ್ಯೋತಿ ದರ್ಶನದ ವೇಳೆ ಇದ್ದರೆ ಅದು ನಿಜಕ್ಕೂ ಅಮೃತ ಕ್ಷಣ ಎಂದೇ ಭಕ್ತರು ಭಾವಿಸುತ್ತಾರೆ.

ಮೂರು ಬಾರಿ ಮಕರ ಜ್ಯೋತಿ

ಮಕರ ಜ್ಯೋತಿ ಸಂಕ್ರಮಣದ ದಿನದಂದು ಶಬರಿಮಲೆಯ ಮಕರ ಜ್ಯೋತಿ ಕ್ಷಣ 2 ರಿಂದ 3 ನಿಮಿಷ ಮಾತ್ರ ಇರುತ್ತದೆ. ಅದರೂ ಮೂರು ಬಾರಿ ಮಕರ ಜ್ಯೋತಿ ಕಂಡು ಬರುತ್ತದೆ. ಇದನ್ನು ದರ್ಶನ ಮಾಡಿದ ಅಯ್ಯಪ್ಪ ಮಾಲಾಧಾರಿಗಳು ಪುಳಕಗೊಂಡು ಜೈಕಾರ ಹಾಕಿ ಭಕ್ತಿ ಭಾವ ಮೆರೆಯುವುದು ಕಂಡು ಬರುತ್ತದೆ. ನಮ್ಮೆಲ್ಲ ಕಷ್ಟಗಳು ದೂರಾಗಲಿ, ಬಯಸಿದ್ದು ಲಭಿಸಲಿ, ಒಳಿತಾಗಲಿ ಎನ್ನುವ ಆಶಯದೊಂದಿಗೆ ಪೂಜೆಯನ್ನೂ ಅಂದು ಸಲ್ಲಿಸಲಾಗುತ್ತದೆ.

ಈ ಬಾರಿಯೂ ಜನವರಿ 15ರ ಸೋಮವಾರ ಮಕರ ಸಂಕ್ರಮಣ. ಅಂದೇ ಮಕರ ಜ್ಯೋತಿಯ ದರ್ಶನವೂ ಆಗಲಿದೆ. ಸಂಜೆ 6.30 ರಿಂದ 7ಗಂಟೆ ಒಳಗೆ ಮೂರು ಬಾರಿ ಮಕರ ದರ್ಶನವಾಗಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಶಬರಿಮಲೆ ಮಕರ ಸಂಕ್ರಮಣಕ್ಕೆ ಬರಬೇಕು ಎಂದರೇ ಮೊದಲೇ ಬುಕ್ಕಿಂಗ್‌ ಮಾಡಿಸಿಕೊಂಡಿದ್ದರೆ ಒಳ್ಳೆಯದು. ಇಲ್ಲದೇ ಇದ್ದರೆ ದಿನವಿಡೀ ಬೆಟ್ಟ ಏರಲು ಕಾಯಬೇಕಾಗುತ್ತದೆ. ಏಕೆಂದರೆ ಆ ದಿನ ಪ್ರತಿ ದಿನದ ನಾಲ್ಕರಿಂದ ಐದು ಪಟ್ಟು ಭಕ್ತರು ಅಲ್ಲಿಗೆ ಆಗಮಿಸುತ್ತಾರೆ. ಆನ್‌ಲೈನ್‌ನಲ್ಲಿ ಅವಕಾಶ ಸಿಕ್ಕರೆ ಶಬರಿಮಲೆ ದರ್ಶನಕ್ಕೆ ಬುಕ್ಕಿಂಗ್‌ ಮಾಡಿಕೊಳ್ಳಬಹುದು.

ಈ ಬಾರಿಯ ಮಕರ ದರ್ಶನದ ವಿವರಗಳು ಇಲ್ಲಿವೆ

  1. ಶಬರಿಮಲೆ ಮಕರವಿಳಕ್ಕು 2024ರ ದಿನಾಂಕವನ್ನು ಜನವರಿ 15ರಂದು ನಿಗದಿಪಡಿಸಲಾಗಿದೆ. ಸಂಜೆ 6.30 ರಿಂದ 7ಗಂಟೆ ಒಳಗೆ ಮಕರ ಜ್ಯೋತಿಯ ದರ್ಶನವಾಗಲಿದೆ.
  2. ಶಬರಿಮಲೆ ದೇವಸ್ಥಾನ ಅಭಿವೃದ್ದಿ ಮಂಡಳಿಯು ಮಕರವಿಳಕ್ಕು ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದೆ. ಈ ಕಾರ್ಯಕ್ರಮಕ್ಕಾಗಿಯೇ ಹಲವು ದಿನಗಳಿಂದ ಸಿದ್ದತೆಗಳು ನಡೆದಿರುತ್ತವೆ.
  3. ಮಕರ ಜ್ಯೋತಿಯ ದಿನ ಆಗಮಿಸುವ ಲಕ್ಷಾಂತರ ಭಕ್ತರ ಸುರಕ್ಷತೆಗೆ ವಿಶೇಷ ಒತ್ತು ನೀಡಿ ವ್ಯವಸ್ಥೆಯನ್ನು ದೇವಸ್ಥಾನ ಆಡಳಿತ ಮಂಡಳಿ. ಪೊಲೀಸ್‌ ಇಲಾಖೆ ಹಾಗೂ ವಿವಿಧ ಇಲಾಖೆಗಳು ಮಾಡಿಕೊಂಡಿವೆ.
  4. ಮಕರ ಜ್ಯೋತಿಯನ್ನು ದೇವಸ್ಥಾನದಲ್ಲಿಯೇ ನೋಡಲು ಕೆಲವರಿಗೆ ಮಾತ್ರ ಸಾಧ್ಯವಾಗುವುದರಿಂದ ಭಕ್ತರು ಅಲ್ಲಲ್ಲಿ ನಿಂತು ನೋಡಲೆಂದು ಟಿವಿ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಕೆಲವು ಕಡೆ ವೀಕ್ಷಣಾ ಸ್ಥಳಗಳನ್ನೂ ನಿಗದಿಪಡಿಸಿ ಅಲ್ಲಿಂದಲೂ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
  5. ಮಕರ ಜ್ಯೋತಿ ಕ್ಷಣವನ್ನು ವಿವಿಧ ಚಾನೆಲ್‌ಗಳ ಮೂಲಕ ವೀಕ್ಷಣೆಗೂ ದೇವಸ್ಥಾನ ಆಡಳಿತ ಮಂಡಳಿಯು ವ್ಯವಸ್ಥೆ ಮಾಡಿದೆ.
  6. ಮಕರ ಜ್ಯೋತಿ ದಿನದ ಭೇಟಿಗೆ ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆ ಇದೆ. ಮಕರ ಜ್ಯೋತಿ ದಿನ ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡಿಕೊಳ್ಳುವುದು ಕಡ್ಡಾಯ.
  7. ವಿವರಗಳಿಗೆ https://tirumalatirupationline.com/sabarimala-makaravilakku-2024-date-jyothi-timings-darshan/

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.