ಮೇ 19ರಂದು ವೃಷಭ ರಾಶಿಗೆ ಶುಕ್ರನ ಸಂಚಾರ; ಈ 3 ರಾಶಿಯವರಿಗೆ ಅಷ್ಟೈಶ್ವರ ಹೊತ್ತು ತರಲಿದೆ ಮಾಲವ್ಯ ಯೋಗ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೇ 19ರಂದು ವೃಷಭ ರಾಶಿಗೆ ಶುಕ್ರನ ಸಂಚಾರ; ಈ 3 ರಾಶಿಯವರಿಗೆ ಅಷ್ಟೈಶ್ವರ ಹೊತ್ತು ತರಲಿದೆ ಮಾಲವ್ಯ ಯೋಗ

ಮೇ 19ರಂದು ವೃಷಭ ರಾಶಿಗೆ ಶುಕ್ರನ ಸಂಚಾರ; ಈ 3 ರಾಶಿಯವರಿಗೆ ಅಷ್ಟೈಶ್ವರ ಹೊತ್ತು ತರಲಿದೆ ಮಾಲವ್ಯ ಯೋಗ

Malavya Yoga 2024: ಮೇ 19 ರಂದು ಶುಕ್ರನು ವೃಷಭ ರಾಶಿಯನ್ನು ಪ್ರವೇಶಿಸುತ್ತಿದ್ದು ಮಾಲವ್ಯ ಯೋಗ ಉಂಟಾಗಲಿದೆ. ಇದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರಿದರೂ 3 ರಾಶಿಗಳು ಮಾತ್ರ ಹೆಚ್ಚು ಶುಭ ಫಲಗಳನ್ನು ಪಡೆಯುತ್ತಾರೆ. ಯಾವ ರಾಶಿಯವರು ಯಾವ ರೀತಿಯ ಅನುಕೂಲ ಪಡೆಯುತ್ತಾರೆ ನೋಡೋಣ.

ಮೇ 19ರಂದು ವೃಷಭ ರಾಶಿಗೆ ಶುಕ್ರನ ಸಂಚಾರ ಈ 3 ರಾಶಿಯವರಿಗೆ ಅಷ್ಟೈಶ್ವರ ಹೊತ್ತು ತರಲಿದೆ ಮಾಲವ್ಯ ಯೋಗ
ಮೇ 19ರಂದು ವೃಷಭ ರಾಶಿಗೆ ಶುಕ್ರನ ಸಂಚಾರ ಈ 3 ರಾಶಿಯವರಿಗೆ ಅಷ್ಟೈಶ್ವರ ಹೊತ್ತು ತರಲಿದೆ ಮಾಲವ್ಯ ಯೋಗ

ಗ್ರಹಗಳ ರಾಶಿ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಶುಭ ಮತ್ತು ಕೆಲವರಿಗೆ ಅಶುಭ ಯೋಗಗಳು ಉಂಟಾಗುತ್ತವೆ. ರಾಜಯೋಗಗಳು ರೂಪುಗೊಂಡರೆ ಅವುಗಳ ಪರಿಣಾಮವು ಜನರ ಜೀವನದಲ್ಲಿ ಸಂತೋಷದ ಫಲಿತಾಂಶಗಳನ್ನು ತೋರಿಸುತ್ತದೆ. ಮೇ ತಿಂಗಳಲ್ಲಿ ಶುಕ್ರನು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ.

ಪ್ರಸ್ತುತ ಮೇಷರಾಶಿಯಲ್ಲಿ ಸಂಚರಿಸುತ್ತಿರುವ ಶುಕ್ರವು ಮೇ 19 ರಂದು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನು ವೃಷಭ ರಾಶಿಗೆ ಪ್ರವೇಶಿಸುವುದರಿಂದ ಮಾಲವ್ಯ ರಾಜಯೋಗ ಉಂಟಾಗುತ್ತದೆ. ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಪರಿಣಾಮ ಬೀರುತ್ತದೆ. ಆದರೆ 3 ರಾಶಿಯರು ಇತರರಿಗಿಂತ ಹೆಚ್ಚು ಶುಭ ಫಲಗಳನ್ನು ಪಡೆಯುತ್ತಾರೆ.

ಮಾಲವ್ಯ ರಾಜಯೋಗ ಎಂದರೇನು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಂಚ ಮಹಾಪುರುಷ ಯೋಗಗಳಿವೆ. ಅದರಲ್ಲಿ ಮಾಳವ್ಯ ರಾಜಯೋಗವೂ ಒಂದು. ಈ ಯೋಗವು ಶುಕ್ರ ಗ್ರಹದೊಂದಿಗೆ ಸಂಬಂಧಿಸಿದೆ. ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಒಂದು ವರ್ಷದ ನಂತರ ಶುಕ್ರನು ವೃಷಭ ರಾಶಿಯಲ್ಲಿ ಮಾಲವ್ಯ ರಾಜಯೋಗವನ್ನು ರೂಪಿಸುತ್ತಾನೆ.

ಶುಕ್ರನು ತುಲಾ, ವೃಷಭ, ಮೀನ ರಾಶಿಗಳಲ್ಲಿ ಚ೦ದ್ರನೊಡನೆ ಪ್ರಥಮ, ಚತುರ್ಥ, ಸಪ್ತಮ, ಹತ್ತನೇ ಮನೆಯಲ್ಲಿ ಅಥವ ಚ೦ದ್ರನಿ೦ದ ಲಗ್ನದವರೆಗೆ ಕೇ೦ದ್ರ ಮನೆಗಳಲ್ಲಿದ್ದಾಗ ಮಾಲವ್ಯ ಯೋಗವು ಉಂಟಾಗುತ್ತದೆ. ಜಾತಕದಲ್ಲಿ ಈ ಯೋಗವಿದ್ದರೆ ಶುಭ ಫಲವಿದೆ. ಅನುಕೂಲಕರ ಪರಿಣಾಮಗಳೊಂದಿಗೆ ಸಮೃದ್ಧಿ, ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಈ ಯೋಗದಿಂದ ನೀವು ಸಾರ್ಥಕ ಜೀವನ ನಡೆಸುವಿರಿ. ಮಾಲವ್ಯ ರಾಜಯೋಗ ಯಾವ ರಾಶಿಯವರಿಗೆ ಯಾವ ರೀತಿಯ ಫಲಗಳನ್ನು ನೀಡಲಿದೆ ನೋಡೋಣ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಮಾಲವ್ಯ ಯೋಗವು ತುಂಬಾ ಪ್ರಯೋಜನಕಾರಿಯಾಗಿದೆ . ಈ ಯೋಗದಿಂದ ಕುಂಭ ರಾಶಿಯವರು ಎಲ್ಲಾ ಭೌತಿಕ ಸಂತೋಷಗಳನ್ನು ಅನುಭವಿಸುತ್ತಾರೆ. ಉದ್ಯೋಗದಲ್ಲಿರುವವರು ಬಡ್ತಿ ಪಡೆಯುತ್ತಾರೆ. ಸಂಬಳ ಹೆಚ್ಚಾಗಲಿದೆ. ಹೊಸ ಆದಾಯ ಮಾರ್ಗಗಳನ್ನು ಪಡೆಯುವಿರಿ. ಹೊಸ ಆಸ್ತಿ ಅಥವಾ ಕಾರನ್ನು ಖರೀದಿಸುವಿರಿ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಜನರು ಗಣನೀಯ ಲಾಭವನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಕನ್ಯಾ ರಾಶಿ

ಮಾಳವ್ಯ ರಾಜಯೋಗವು ಕನ್ಯಾ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಅದೃಷ್ಟವು ನಿಮಗೆ ಸಹಾಯ ಮಾಡುತ್ತದೆ. ವೃತ್ತಿಪರ ಯಶಸ್ಸಿಗೆ ಉತ್ತಮ ಅವಕಾಶಗಳಿವೆ. ಮೇಲಧಿಕಾರಿಗಳು ನಿಮಗೆ ಬಡ್ತಿ ನೀಡಲು ಪ್ರಯತ್ನಿಸುತ್ತಾರೆ. ಜೀವನವು ಸಂತೋಷ, ಸಮೃದ್ಧಿಯಿಂದ ತುಂಬಿರುತ್ತದೆ. ಉದ್ಯೋಗಕ್ಕಾಗಿ ದೂರದ ಊರಿಗೆ ಪ್ರಯಾಣಿಸಲಿದ್ದೀರಿ. ವಿದೇಶ ಪ್ರಯಾಣ ಯೋಗವಿದೆ. ನಿಮ್ಮ ಪ್ರಯಾಣವು ಸಮೃದ್ಧ ಮತ್ತು ಯಶಸ್ವಿಯಾಗುತ್ತದೆ. ನಿಮ್ಮ ತಂತ್ರಗಳನ್ನು ಕಾರ್ಯಗತಗೊಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ.

ವೃಷಭ ರಾಶಿ

ವೃಷಭ ರಾಶಿಯಲ್ಲಿ ಶುಕ್ರನ ಸಂಚಾರವು ಈ ರಾಶಿಯಲ್ಲಿ ಮಾಲವ್ಯ ಯೋಗ ಉಂಟು ಮಾಡುತ್ತದೆ. ಇದರ ಪರಿಣಾಮದಿಂದಾಗಿ, ಈ ರಾಶಿಯವರು ಸಂತೋಷದ ದಿನಗಳನ್ನು ನೋಡುತ್ತಾರೆ. ಈ ಯೋಗದಿಂದ ಹೆಚ್ಚಿನ ಲಾಭವನ್ನು ಪಡೆಯಲಿದ್ದೀರಿ. ಎಲೆ ಮರೆಯಂತಿದ್ದ ನಿಮ್ಮ ವ್ಯಕ್ತಿತ್ವ ಇತರರಿಗೆ ತಿಳಿಯುತ್ತದೆ. ಈ ರಾಶಿಯ ಉದ್ಯಮಿಗಳಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಈ ಸಮಯದಲ್ಲಿ ಅವಿವಾಹಿತರಿಗೆ ಮದುವೆ ಆಗುವ ಸಾಧ್ಯತೆಗಳಿವೆ. ಪತಿ-ಪತ್ನಿಯರ ನಡುವೆ ಅಪಾರ ಪ್ರೀತಿ, ಸಹಕಾರ ಇರುತ್ತದೆ. ಈ ಯೋಗದ ಅನುಕೂಲಕರ ಪರಿಣಾಮದಿಂದ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.