ಮದುವೆ ಸಾಧ್ಯತೆಗಳು 2025: ಪ್ರೇಮ ವಿವಾಹವಾಗಲು ಬಯಸುವ ಸಿಂಹ ರಾಶಿಯವರಿಗೆ ಈ ವರ್ಷ ಉತ್ತಮ, ತುಲಾ ರಾಶಿಯವರಿಗೆ ಸಮಸ್ಯೆ
Marriage Probabilities 2025: ಹೊಸ ಕನಸುಗಳು, ಹೊಸ ಗುರಿಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲರೂ ಸಜ್ಜಾಗಿದ್ದಾರೆ. 2025ರಲ್ಲಿ ಯಾವ ರಾಶಿಯವರಿಗೆ ಗುರುಬಲ ಪ್ರಬಲವಾಗಿದೆ? ಯಾರು ಇನ್ನೂ ಕಾಯಬೇಕು? ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಮದುವೆ ಸಾಧ್ಯತೆಗಳು 2025, ವಿವರ ಇಲ್ಲಿದೆ.
ಮದುವೆ ಸಾಧ್ಯತೆಗಳು 2025: ಮದುವೆ ಎಲ್ಲರ ಜೀವನದಲ್ಲೂ ಪ್ರಮುಖ ಘಟ್ಟ, ಇದೊಂದು ಶುಭ ಕಾರ್ಯ. ಮದುವೆ ಎರಡು ಕುಟುಂಬಗಳನ್ನು ಒಗ್ಗೂಡಿಸುತ್ತದೆ. ಎರಡು ಮನಸ್ಸುಗಳನ್ನು ಬೆಸೆಯುತ್ತದೆ. ಜೀವನದುದ್ದಕ್ಕೂ ಕಷ್ಟ ಸುಖಗಳಲ್ಲಿ ಜೊತೆಯಾಗಿ ಇರಲು ವಧು-ವರರ ಒಬ್ಬರಿಗೊಬ್ಬರು ಭರವಸೆ ನೀಡುತ್ತಾರೆ. ಎಲ್ಲರಿಗೂ ಸರಿಯಾದ ವಯಸ್ಸಿಗೆ ಮದುವೆ ಆಗುವುದಿಲ್ಲ. ಇದಕ್ಕೆ ಜಾತಕದಲ್ಲಿರುವ ದೋಷಗಳೂ ಕಾರಣವಾಗಿದೆ.
ಮದುವೆಗೆ ಗುರುಬಲ ಚೆನ್ನಾಗಿರಬೇಕು, ಶುಕ್ರ ಕೂಡಾ ಪ್ರೀತಿಯನ್ನು ಬೆಂಬಲಿಸಬೇಕು, ಹೀಗಿದ್ದಲ್ಲಿ ಯಶಸ್ವಿ ವೈವಾಹಿಕ ಜೀವನ ಸಾಧ್ಯ. 2025ರಲ್ಲಿ ಯಾವ ರಾಶಿಯರ ಮದುವೆ ಫಿಕ್ಸ್ ಆಗಬಹುದು, ಯಾರ ನಿಶ್ಚಿತಾರ್ಥವಾಗಬಹುದು? ಯಾವ ರಾಶಿಯವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ? 2025 ಮದುವೆ ಸಾಧ್ಯತೆಗಳು ಹೀಗಿದೆ.
ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಮದುವೆ ಸಾಧ್ಯತೆಗಳು 2025
ಸಿಂಹ ರಾಶಿ
ಮದುವೆ ಆಗಲು ಬಯಸುತ್ತಿರುವ ಸಿಂಹ ರಾಶಿಯವರಿಗೆ ಈ ಅವಧಿ ಅದ್ಭುತವಾಗಿದೆ. 2025 ರಲ್ಲಿ, ಮೇ ಮಧ್ಯದ ನಂತರದ ಸಮಯವು ಮದುವೆಯಲ್ಲಿ ಸಂತೋಷ ತರುತ್ತದೆ. ನೀವು 2025 ರಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲು ಅಥವಾ ಮದುವೆಯಾಗಲು ಯೋಜಿಸುತ್ತಿದ್ದರೆ, ಈ ವರ್ಷ ಇಬ್ಬರಿಗೂ ಉತ್ತಮವಾಗಿರುತ್ತದೆ. ಪ್ರೇಮ ವಿವಾಹ ಆಗಲು ಬಯಸುತ್ತಿರುವವರಿಗೆ ಕೂಡಾ ಈ ವರ್ಷ ಬಹಳ ಉತ್ತಮವಾಗಿದೆ.
ಕನ್ಯಾ ರಾಶಿ
ಮದುವೆ ದೃಷ್ಟಿಯಿಂದ ಕನ್ಯಾ ರಾಶಿಯವರಿಗೆ ವರ್ಷದ ಮೊದಲಾರ್ಧ ತುಂಬಾ ಒಳ್ಳೆಯದು. ಗುರುವು ಕನ್ಯಾ ರಾಶಿಯವರ ಜಾತಕದಲ್ಲಿ ಮಂಗಳಕರ ಸ್ಥಾನದಲ್ಲಿದೆ. ತಮ್ಮ ಪೂರ್ವ ಜನ್ಮದ ಕರ್ಮಗಳ ಆಧಾರದ ಮೇಲೆ ಈ ರಾಶಿಯವರಿಗೆ ಜೀವನ ಸಂಗಾತಿ ದೊರೆಯಲಿದ್ದಾರೆ. ಆದರೆ ಮೇ ಮಧ್ಯದ ನಂತರ ಮದುವೆ ಆಗುವುದನ್ನು ತಡೆಯುವುದು ಒಳ್ಳೆಯದು.
ತುಲಾ ರಾಶಿ
ತುಲಾ ರಾಶಿಯವರಿಗೆ ವರ್ಷದ ಆರಂಭದ ತಿಂಗಳುಗಳು ದುರ್ಬಲವಾಗಿರುತ್ತವೆ. ಇದರಿಂದ ಮದುವೆ ಅಥವಾ ನಿಶ್ಚಿತಾರ್ಥದಲ್ಲಿ ತೊಂದರೆ ಉಂಟಾಗಬಹುದು. ಈ ಅವಧಿಯಲ್ಲಿ ಮದುವೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಆದರೆ, ವರ್ಷದ ದ್ವಿತೀಯಾರ್ಧವು ಮದುವೆಯಾಗಲು ಬಯಸುವ ವ್ಯಕ್ತಿಗಳಿಗೆ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ. ಅಂದರೆ, ಮೇ ಮಧ್ಯದ ನಂತರದ ಅವಧಿಯು ನಿಶ್ಚಿತಾರ್ಥ ಮತ್ತು ಮದುವೆಗೆ ಸೂಕ್ತವಾಗಿರುತ್ತದೆ.
ವೃಶ್ಚಿಕ ರಾಶಿ
ಮದುವೆಯಾಗಲು ಬಯಸುವ ವೃಶ್ಚಿಕ ರಾಶಿಯವರಿಗೆ 2025 ರ ಮೊದಲಾರ್ಧವು ಬಹಳ ಮಂಗಳಕರವಾಗಿದೆ. 2025 ರ ಮೇ ಮಧ್ಯದವರೆಗಿನ ಅವಧಿಯಲ್ಲಿ ನಿಮ್ಮ ಪ್ರಯತ್ನ ಯಶಸ್ವಿಯಾಗಬಹುದು. ಗುರುವಿನ ಶುಭ ಸ್ಥಾನವು ಮದುವೆಯಾಗುವ ಬಯಕೆಯನ್ನು ಪೂರೈಸಲು ಸಹಾಯ ಮಾಡುತ್ತದೆ. ಪ್ರೀತಿಯಲ್ಲಿರುವವರು ಕೂಡಾ ಮದುವೆ ಆಗಲು ಇದು ಉತ್ತಮ ಸಮಯ. ಮನೆಯಲ್ಲಿ ನಿಮ್ಮ ಪ್ರೀತಿಯ ವಿಚಾರವನ್ನು ತಿಳಿಸಿದರೆ ಅದು ಯಶಸ್ವಿಯಾಗುತ್ತದೆ. ಆದರೆ ಮೇ 2025 ರ ಮಧ್ಯದ ನಂತರ ಮದುವೆಯಂಥ ಶುಭ ಕಾರ್ಯಗಳನ್ನು ಮಾಡುವುದನ್ನು ತಪ್ಪಿಸಬೇಕು.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
ವಿಭಾಗ