ಮಿಥುನದಲ್ಲಿ ಕುಜ: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಮೇಲೇನು ಪರಿಣಾಮ; ಅತಿಆತ್ಮವಿಶ್ವಾಸದಿಂದ ಹಾನಿಯೇ ಅಧಿಕ, ಹಣಕಾಸಿನ ಬಗ್ಗೆ ಇರಲಿ ಎಚ್ಚರ-mars transit to gemini what are the impact on aries taurus gemini cancer from august 26th to october 20 sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಿಥುನದಲ್ಲಿ ಕುಜ: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಮೇಲೇನು ಪರಿಣಾಮ; ಅತಿಆತ್ಮವಿಶ್ವಾಸದಿಂದ ಹಾನಿಯೇ ಅಧಿಕ, ಹಣಕಾಸಿನ ಬಗ್ಗೆ ಇರಲಿ ಎಚ್ಚರ

ಮಿಥುನದಲ್ಲಿ ಕುಜ: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಮೇಲೇನು ಪರಿಣಾಮ; ಅತಿಆತ್ಮವಿಶ್ವಾಸದಿಂದ ಹಾನಿಯೇ ಅಧಿಕ, ಹಣಕಾಸಿನ ಬಗ್ಗೆ ಇರಲಿ ಎಚ್ಚರ

ಕುಜ ಸಂಕ್ರಮಣ: ಮಿಥುನ ರಾಶಿಗೆ ಮಂಗಳ ಗ್ರಹ ಪ್ರವೇಶವಾಗಿದೆ. ಮುಂದಿನ 2 ತಿಂಗಳು ಹಲವು ರಾಶಿಗಳಿಗೆ ಶುಭಫಲ ಸಿಗುತ್ತದೆ. ಕೆಲವರು ಮಾತ್ರ ಹೆಚ್ಚು ಎಚ್ಚರದಿಂದ ಇರಬೇಕು. ಕುಜ ಸಂಚಾರದಿಂದ ಮೇಷ, ವೃಷಭ, ಮಿಥುನ, ಕಟಕ ರಾಶಿಗಳಿಗೆ ಏನು ಫಲ ಎನ್ನುವ ವಿವರ ಇಲ್ಲಿದೆ. (ಬರಹ: ಸತೀಶ್ ಎಚ್‌.)

ಮಿಥುನದಲ್ಲಿ ಕುಜ: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಮೇಲೇನು ಪರಿಣಾಮ
ಮಿಥುನದಲ್ಲಿ ಕುಜ: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಮೇಲೇನು ಪರಿಣಾಮ

ಮಿಥುನ ರಾಶಿಗೆ ಇದೇ ಕೃಷ್ಣಾಷ್ಟಮಿಯಂದು (ಆಗಸ್ಟ್ 26) ಮಂಗಳನ (ಕುಜ) ಪ್ರವೇಶವಾಗಿದೆ. ಅಕ್ಟೋಬರ್ ತಿಂಗಳ 20 ನೇ ತಾರೀಖಿನವರೆಗೂ ಮಂಗಳ ಇದೇ ರಾಶಿಯಲ್ಲಿ ಇರುತ್ತಾನೆ. ಈ ಅವಧಿಯಲ್ಲಿ ಹಲವು ರಾಶಿಗಳಿಗೆ ಶುಭ ಫಲ ಕೊಡುತ್ತಾನೆ. ಕೆಲ ರಾಶಿಗಳಿಗೆ ಸೇರಿದವರು ಮಾತ್ರ ಎಚ್ಚರವಹಿಸಬೇಕು. ದುಡುಕುತನವು ಯಾವುದೇ ರಾಶಿಗೆ ಒಳ್ಳೆಯದಲ್ಲ. ಕುಜ ಸಂಚಾರದಿಂದ ಮೇಷ, ವೃಷಭ, ಮಿಥುನ, ಕಟಕ ರಾಶಿಗಳಿಗೆ ಏನು ಫಲ ಎನ್ನುವ ವಿವರ ಇಲ್ಲಿದೆ.

ಮೇಷ ರಾಶಿ: ಹೆಚ್ಚಿನ ಪ್ರಯತ್ನ ಅಗತ್ಯ

ಸುಲಭವಾಗಿ ನಡೆಯಬೇಕಾದ ಕೆಲಸ ಕಾರ್ಯಗಳಿಗೂ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇರುತ್ತದೆ. ಹಿರಿಯ ಸೋದರ ಅಥವಾ ಸೋದರಿಯ ಸಹಾಯ ಸಹಕಾರ ಜೀವನದಲ್ಲಿ ಯಶಸ್ಸು ನೀಡುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ. ಅನಿರೀಕ್ಷಿತ ಧನಲಾಭವಿರುತ್ತದೆ. ಆದರೆ ದೊರೆಯುವ ಅವಕಾಶವನ್ನು ಪರಿಪಕ್ವವಾಗಿ ಬಳಸಿಕೊಳ್ಳಬೇಕಾಗುತ್ತದೆ. ಸಿಡುಕಿನ ಮಾತಿನಿಂದ ಬಂಧು ಬಳಗದವರಲ್ಲಿ ವೈರತ್ವ ಉಂಟಾಗುತ್ತದೆ. ಉದ್ಯೋಗದಲ್ಲಿ ಹೊಂದಾಣಿಕೆಯ ಅವಶ್ಯಕತೆ ಬಹಳಷ್ಟಿದೆ. ಹಿರಿಯ ಅಧಿಕಾರಿಗಳ ಸಹಕಾರ ದೊರೆಯುವ ಕಾರಣ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸಹೋದ್ಯೋಗಿಗಳ ನಡವಳಿಕೆಯ ಬಗ್ಗೆ ಬೇಸರ ವ್ಯಕ್ತಪಡಿಸುವಿರಿ. ಕುಟುಂಬದ ಹಿರಿಯರ ಒಡನಾಟವು ಸಂತಸಕ್ಕೆ ಕಾರಣವಾಗುತ್ತದೆ. ದಾಂಪತ್ಯದಲ್ಲಿ ವಾದವಿವಾದ ಇರುತ್ತದೆ. ಮಕ್ಕಳ ಆಟಪಾಠಗಳಲ್ಲಿ ಯಶಸ್ಸು ಕಂಡುಬರುತ್ತದೆ.

ವೃಷಭ ರಾಶಿ: ಹಣ ಉಳಿಸುವುದು ಕಷ್ಟಕಷ್ಟ

ವೃಷಭ ರಾಶಿಯವರಿಗೆ ಈ ಅವಧಿಯಲ್ಲಿ ಉತ್ತಮ ಆದಾಯವೇನೋ ಇರುತ್ತದೆ. ಆದರೆ ಹಣವನ್ನು ಸರಿಯಾಗಿ ಉಳಿಸಲು ಸಾಧ್ಯವಾಗುವುದಿಲ್ಲ. ಬೇರೆಯವರ ವಿಚಾರಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಸಂಗಾತಿಯ ಜೊತೆಯಲ್ಲಿ ಉತ್ತಮ ಅನುಬಂಧವಿರುತ್ತದೆ. ನಿಮ್ಮ ಮಾತಿನಲ್ಲಿ ದುಡುಕುತನವಿದ್ದರೂ ಸಹ ಆತ್ಮೀಯರು ಪ್ರೀತಿ ವಿಶ್ವಾಸದಿಂದ ವರ್ತಿಸುತ್ತಾರೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ವಿರೋಧವಿದ್ದರೂ ಸಹೋದ್ಯೋಗಿಗಳ ಸಹಾಯ, ಸಹಕಾರ ನಿಮಗೆ ನೆರವಾಗುತ್ತದೆ. ಕುಟುಂಬದಲ್ಲಿ ಸಂತೋಷಕರ ವಾತಾವರಣವಿರುತ್ತದೆ. ನೀವು ತೆಗೆದುಕೊಳ್ಳುವ ಕೆಲ ನಿರ್ಧಾರಗಳು ಕುಟುಂಬದ ಹಿರಿಯರ ಜೀವನವನ್ನು ಬದಲಿಸುತ್ತದೆ. ಸದಾಕಾಲ ಉತ್ತಮ ಚಿಂತನೆಯನ್ನು ಮಾಡುವ ಕಾರಣ ಮನಸ್ಸಿಗೆ ನೆಮ್ಮದಿ ಇರುತ್ತದೆ. ದಾಂಪತ್ಯದಲ್ಲಿ ಇದ್ದ ಒಡಕು ಸರಿಯಾಗುತ್ತದೆ. ಮಕ್ಕಳೊಂದಿಗೆ ಮಕ್ಕಳಿನಂತೆ ಸಂತಸದಿಂದ ಬಾಳುವಿರಿ. ಉತ್ತಮ ಆರೋಗ್ಯವು ನೆಮ್ಮದಿಯನ್ನು ನೀಡುತ್ತದೆ.

ಮಿಥುನ ರಾಶಿ: ಅತಿಆತ್ಮವಿಶ್ವಾಸದಿಂದ ಹಾನಿ

ಬಹುದಿನದಿಂದ ನಡೆಯಬೇಕಿದ್ದ ಕೆಲಸವೊಂದನ್ನು ಪೂರ್ಣಗೊಳಿಸುವಿರಿ. ಆದರೆ ಅತಿಯಾದ ಆತ್ಮವಿಶ್ವಾಸವು ಹಾನಿಯನ್ನು ಉಂಟುಮಾಡಬಲ್ಲದು. ಹಿರಿಯ ಸೋದರನ ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತದೆ. ಬಹುದಿನದಿಂದ ಬರಬೇಕಿದ್ದ ಹಣವು ಅನಿರೀಕ್ಷಿತವಾಗಿ ನಿಮ್ಮ ಕೈ ಸೇರುತ್ತದೆ. ಉದ್ಯೋಗದಲ್ಲಿ ಅಪರಿಚಿತದಿಂದ ಉಂಟಾಗುವ ತೊಂದರೆಯನ್ನು ಯಶಸ್ವಿಯಾಗಿ ಎದುರಿಸುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವುದು ಒಳ್ಳೆಯದು. ಮಾಡುವ ತಪ್ಪನ್ನು ಸರಿಪಡಿಸಿಕೊಳ್ಳಲು ಉತ್ತಮ ಅವಕಾಶ ದೊರೆಯುತ್ತದೆ. ಅವಶ್ಯಕತೆ ಇದ್ದಲ್ಲಿ ಉದ್ಯೋಗವನ್ನು ಬದಲಿಸಬಹುದು. ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ ಕಂಡುಬರುತ್ತದೆ. ಗುರುಹಿರಿಯರ ಒಡನಾಟದಿಂದ ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ಕುಟುಂಬಕ್ಕೆ ಸೇರಿದ ಆಸ್ತಿಯ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ವೈವಾಹಿಕ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ಮಕ್ಕಳೊಂದಿಗೆ ಸಂತಸದಿಂದ ಬಾಳುವಿರಿ. ಹೊಸ ವಾಹನವನ್ನು ಕೊಳ್ಳುವ ಆಸೆ ಈಡೇರಲಿದೆ.

ಕಟಕ ರಾಶಿ: ಸಂಯಮವಿದ್ದರೆ ಸಕಲವೂ ದೊರೆತೀತು

ನಿಮ್ಮ ದುಡುಕುತನದಿಂದ ಉದ್ಯೋಗ ಬದಲಿಸುವಿರಿ. ಶಾಂತಿ ಸಂಯಮದಿಂದ ವರ್ತಿಸಿದಷ್ಟೂ ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ನಿಮ್ಮ ಮಕ್ಕಳಿಗೆ ದೃಷ್ಟಿದೋಷ ಬರಬಹುದು. ಕಷ್ಟಪಟ್ಟು ದುಡಿದ ಹಣವು ಕ್ಷಣಮಾತ್ರದಲ್ಲಿ ಖರ್ಚಾಗುವ ಸಾಧ್ಯತೆಗಳಿವೆ. ಬಾಳಸಂಗಾತಿಯ ಜೊತೆಯಲ್ಲಿ ಅನವಶ್ಯಕ ವಿವಾದಗಳು ಸಾಮಾನ್ಯವಾಗಿರುತ್ತವೆ. ಸಹೋದ್ಯೋಗಿಗಳು ನಿಮ್ಮ ಅಭಿವೃದ್ಧಿಗೆ ಅಡ್ಡಗಾಲಾಗಬಹುದು ಎಚ್ಚರಿಕೆ ಇರಲಿ. ಷೇರುಪೇಟೆಯಲ್ಲಿ ಹೂಡಿಕೆ ಮಾಡುವುದರಿದ್ದರೆ ತುಂಬಾ ಎಚ್ಚರಿಕೆ ಬೇಕು. ಕುಟುಂಬದ ಹಿರಿಯರ ಅನುಭವವನ್ನು ಬಳಸಿಕೊಳ್ಳಿರಿ. ಬೇಸರ ಕಳೆಯಲು ಮಕ್ಕಳೊಂದಿಗೆ ದೀರ್ಘಕಾಲದ ಪ್ರವಾಸಕ್ಕೆ ತೆರಳುವಿರಿ.

(ಗಮನಿಸಿ: ಇದು ನಂಬಿಕೆ ಮತ್ತು ಪ್ರಚಲಿತ ಕಥೆಗಳನ್ನು ಆಧರಿಸಿದ ಬರಹ. ಇಲ್ಲಿರುವ ಯಾವ ಸಂಗತಿಯನ್ನೂ 'ಹಿಂದೂಸ್ತಾನ್ ಟೈಮ್ಸ್‌ ಕನ್ನಡ' ಜಾಲತಾಣದ ಸಿಬ್ಬಂದಿ ಪುಷ್ಟೀಕರಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ. ಓದುಗರಿಗೆ ಮಾಹಿತಿ ಕೊಡುವ ಉದ್ದೇಶದಿಂದ ಮಾತ್ರ ಈ ಬರಹ ಪ್ರಕಟಿಸಲಾಗಿದೆ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.