ಮಿಥುನದಲ್ಲಿ ಕುಜ: ಧನು, ಮಕರ, ಕುಂಭ, ಮೀನ ರಾಶಿಯವರ ಮೇಲೆ ಏನೆಲ್ಲಾ ಪರಿಣಾಮ; ಮದುವೆ ಭಾಗ್ಯ, ನವವಿವಾಹಿತರಿಗೆ ಸಂತಾನ ಲಾಭ-mars transit to gemini what are the impact on sagittarius capricorn aquarius pisces from august 26th to october 20 sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಿಥುನದಲ್ಲಿ ಕುಜ: ಧನು, ಮಕರ, ಕುಂಭ, ಮೀನ ರಾಶಿಯವರ ಮೇಲೆ ಏನೆಲ್ಲಾ ಪರಿಣಾಮ; ಮದುವೆ ಭಾಗ್ಯ, ನವವಿವಾಹಿತರಿಗೆ ಸಂತಾನ ಲಾಭ

ಮಿಥುನದಲ್ಲಿ ಕುಜ: ಧನು, ಮಕರ, ಕುಂಭ, ಮೀನ ರಾಶಿಯವರ ಮೇಲೆ ಏನೆಲ್ಲಾ ಪರಿಣಾಮ; ಮದುವೆ ಭಾಗ್ಯ, ನವವಿವಾಹಿತರಿಗೆ ಸಂತಾನ ಲಾಭ

ಮಿಥುನ ರಾಶಿಗೆ ಇದೇ ಕೃಷ್ಣಾಷ್ಟಮಿಯಂದು (ಆಗಸ್ಟ್ 26) ಮಂಗಳನ (ಕುಜ) ಪ್ರವೇಶವಾಗಿದೆ. ಅಕ್ಟೋಬರ್ ತಿಂಗಳ 20ನೇ ತಾರೀಖಿನವರೆಗೂ ಮಂಗಳ ಇದೇ ರಾಶಿಯಲ್ಲಿ ಇರುತ್ತಾನೆ. ಈ ಅವಧಿಯಲ್ಲಿ ಕೆಲವು ರಾಶಿಯವರು ಶುಭಫಲ ಅನುಭವಿಸಿದರೆ, ಕೆಲವರಿಗೆ ನಷ್ಟವಾಗುವ ಸಾಧ್ಯತೆ ಇದೆ. ಕುಜ ಸಂಚಾರದಿಂದ ಧನು, ಮಕರ, ಕುಂಭ, ಮೀನು ರಾಶಿಗಳಿಗೆ ಏನು ಫಲ ಎಂಬ ವಿವರ ಇಲ್ಲಿದೆ. (ಬರಹ: ಸತೀಶ್ ಎಚ್‌.)

ಮಿಥುನದಲ್ಲಿ ಕುಜ: ಧನು, ಮಕರ, ಕುಂಭ, ಮೀನ ರಾಶಿಯವರ ಮೇಲೆ ಏನೆಲ್ಲಾ ಪರಿಣಾಮ
ಮಿಥುನದಲ್ಲಿ ಕುಜ: ಧನು, ಮಕರ, ಕುಂಭ, ಮೀನ ರಾಶಿಯವರ ಮೇಲೆ ಏನೆಲ್ಲಾ ಪರಿಣಾಮ

ಮಿಥುನ ರಾಶಿಗೆ ಇದೇ ಕೃಷ್ಣಾಷ್ಟಮಿಯಂದು (ಆಗಸ್ಟ್ 26) ಮಂಗಳನ (ಕುಜ) ಪ್ರವೇಶವಾಗಿದೆ. ಅಕ್ಟೋಬರ್ ತಿಂಗಳ 20ನೇ ತಾರೀಖಿನವರೆಗೂ ಮಂಗಳ ಇದೇ ರಾಶಿಯಲ್ಲಿ ಇರುತ್ತಾನೆ. ಈ ಅವಧಿಯಲ್ಲಿ ಹಲವು ರಾಶಿಗಳಿಗೆ ಶುಭ ಫಲ ಕೊಡುತ್ತಾನೆ. ಕೆಲ ರಾಶಿಗಳಿಗೆ ಸೇರಿದವರು ಮಾತ್ರ ಎಚ್ಚರವಹಿಸಬೇಕು. ದುಡುಕುತನವು ಯಾವುದೇ ರಾಶಿಗೆ ಒಳ್ಳೆಯದಲ್ಲ. ಕುಜ ಸಂಚಾರದಿಂದ ಧನು, ಮಕರ, ಕುಂಭ, ಮೀನ ರಾಶಿಗಳಿಗೆ ಏನು ಫಲ ಎನ್ನುವ ವಿವರ ಇಲ್ಲಿದೆ.

ಧನು ರಾಶಿ: ಇದು ಮದುವೆಯಾಗುವ ಕಾಲ

ಧೈರ್ಯದ ಗುಣವು ನಿಮ್ಮನ್ನು ಜಯದ ಹಾದಿಯಲ್ಲಿ ನಡೆಸುತ್ತದೆ. ಸಾಧ್ಯವಾದಷ್ಟು ದೃಢವಾದ ಮನಸ್ಥಿತಿ ಇರುವುದು ಒಳ್ಳೆಯದು. ಕುಟುಂಬದ ಬಗ್ಗೆ ವಿಶೇಷ ಪ್ರೀತಿ-ವಿಶ್ವಾಸ ಉಂಟಾಗುತ್ತದೆ. ನಿಮ್ಮ ಮನಸ್ಸಿನ ಆಸೆಯಂತೆ ಸಣ್ಣ ಪ್ರಮಾಣದ ವ್ಯಾಪಾರ ಆರಂಭಿಸುವ ಸಾಧ್ಯತೆಗಳಿವೆ. ಮಕ್ಕಳೊಂದಿಗೆ ಇದ್ದ ಮನಸ್ತಾಪವು ದೂರವಾಗುತ್ತದೆ. ಅವಿವಾಹಿತರಿಗೆ ಹೆಚ್ಚಿನ ಪ್ರಯತ್ನದಿಂದ ವಿವಾಹ ನಿಶ್ಚಯವಾಗಬಹುದು. ಸೋದರರ ನಡುವೆ ಮನಸ್ತಾಪ ಉಂಟಾದರೂ ಅದು ಕ್ಷಣಿಕವಾಗುತ್ತದೆ. ಬಾಕಿಯಿದ್ದ ಭೂವಿವಾದವೊಂದು ಪರಿಹಾರಗೊಳ್ಳುತ್ತದೆ. ನಿಮ್ಮದು ಭೂ ಸಂಬಂಧಿತ ವ್ಯವಹಾರವಾದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಆದರೆ ಎಚ್ಚರಿಕೆ ವಹಿಸಬೇಕು. ಆತ್ಮೀಯರ ಜೊತೆಗೂಡಿ ಆಸ್ತಿಯನ್ನು ಖರೀದಿಸುವ ಪ್ರಯತ್ನ ಕೈಗೂಡುತ್ತದೆ. ವಿದ್ಯಾರ್ಥಿಗಳು ಚುರುಕುತನದಿಂದ ಕಲಿಕೆಯಲ್ಲಿ ತೊಡಗಬೇಕು. ಉದ್ಯೋಗದಲ್ಲಿ ಇದ್ದ ಸಮಸ್ಯೆಗಳು ಕ್ರಮೇಣ ದೂರವಾಗಲಿವೆ.

ಮಕರ ರಾಶಿ: ಆರೋಗ್ಯದ ಬಗ್ಗೆ ಸದಾ ಇರಲಿ ಗಮನ

ಧೈರ್ಯಕ್ಕೆ ಕೊರತೆ ಇರುವುದಿಲ್ಲ. ಕುಟುಂಬದವರ ಸಹಕಾರ ನಿಮಗೆ ದೊರೆಯುತ್ತದೆ. ಆದರೆ ಕುಟುಂಬದ ಸ್ತ್ರೀಯರ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಉದ್ಯೋಗದಲ್ಲಿನ ಮುಖ್ಯ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿದೆ. ಆರೋಗ್ಯದ ಬಗ್ಗೆ ಗಮನವಿರುವುದು ಒಳ್ಳೆಯದು. ಹಣಕಾಸಿನ ಕೊರತೆ ಕಂಡುಬರುವುದಿಲ್ಲ. ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಹಣ ಉಳಿಸಲು ಉತ್ತಮ ಯೋಜನೆಯ ಅಗತ್ಯವಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಖರ್ಚು ವೆಚ್ಚಗಳು ಎದುರಾಗಲಿದೆ. ಮನಸ್ಸಿನಲ್ಲಿ ಒಂದು ರೀತಿಯ ಬೇಸರವು ಸದಾ ಕಾಡುತ್ತದೆ. ಕೆಲಸ ಕಾರ್ಯಗಳ ಒತ್ತಡವು ಅತಿಯಾಗಿರುತ್ತದೆ. ಭೂವ್ಯವಹಾರದಲ್ಲಿ ಆತಂಕದ ಪರಿಸ್ಥಿತಿಯು ಎದುರಾಗಲಿದೆ. ಮನದ ಬೇಸರದಿಂದ ದೂರವಾಗಲು ಮನರಂಜನೆಯನ್ನು ಆಶ್ರಯಿಸುವಿರಿ.

ಕುಂಭ ರಾಶಿ: ನಿಮ್ಮ ಮರೆವು ನಿಮ್ಮ ಕುಟುಂಬದ ನೆಮ್ಮದಿಗೆ ಆಸರೆ

ಮನದಲ್ಲಿಯೇ ಯೋಜನೆಯನ್ನು ರೂಪಿಸಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ನಿಮ್ಮ ಮಾತನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದು. ಮನ ಬಿಚ್ಚಿ ಮಾತನಾಡಿದರೆ ಕಷ್ಟಕಾರ್ಪಣ್ಯಗಳು ತಾನಾಗಿಯೇ ದೂರವಾಗಲಿದೆ. ಅನಿರೀಕ್ಷಿತ ಧನಲಾಭ ಇರುತ್ತದೆ. ಕುಟುಂಬದ ಹಿರಿಯರ ಜೊತೆಯಲ್ಲಿ ಅನಾವಶ್ಯಕವಾದ ವಾದ ವಿವಾದಗಳು ಇರಲಿವೆ. ಆದರೆ ನಿಮ್ಮಲ್ಲಿನ ಮರೆವಿನ ಗುಣದಿಂದ ಕೊನೆಗೆ ಒಳ್ಳೆಯದೇ ಆಗುತ್ತದೆ. ಕುಟುಂಬದಲ್ಲಿ ಕ್ರಮೇಣ ಶಾಂತಿ ನೆಮ್ಮದಿ ಮೂಡುತ್ತದೆ. ಉದ್ಯೋಗದಲ್ಲಿ ಮನಸ್ಸಿಗೆ ಸಮಾಧಾನ ಉಂಟಾಗುವ ಸನ್ನಿವೇಶ ಬರುತ್ತದೆ. ಅನಿವಾರ್ಯವಾದಲ್ಲಿ ಆತ್ಮೀಯರಿಂದ ಹಣದ ನೆರವು ದೊರೆಯುತ್ತದೆ. ನಿಮ್ಮ ಒಳ್ಳೆಯತನವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಜನರಿಂದ ದೂರವಿರಿ. ದಾಂಪತ್ಯ ಜೀವನದಲ್ಲಿ ಉತ್ತಮ ಅನುಬಂಧ ಕಂಡು ಬರುತ್ತದೆ. ಮಕ್ಕಳ ಸಾಧನೆಗಳು ನಿಮಗೆ ಕೀರ್ತಿ ಪ್ರತಿಷ್ಠೆಯನ್ನು ನೀಡುತ್ತದೆ. ಸಮಾಜದಲ್ಲಿ ಗೌರವದ ಸ್ಥಾನಮಾನ ಗಳಿಸುವಿರಿ.

ಮೀನ ರಾಶಿ: ನವವಿವಾಹಿತರಿಗೆ ಸಂತಾನ ಲಾಭ

ಇದು ನಿಮ್ಮ ನಿರೀಕ್ಷೆಯಂತೆ ಕೆಲಸಗಳು ಸುಗಮವಾಗಿ ನಡೆಯುವ ಕಾಲ. ಈ ಹಂತದಲ್ಲಿ ನಿಮ್ಮ ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ನಿಮ್ಮ ತಾಯಿಯವರಿಗೆ ಸಂಬಂಧಿಸಿದ ಹಣ ಅಥವಾ ಆಸ್ತಿಯು ನಿಮ್ಮ ಕೈ ಪಾಲಾಗಲಿದೆ. ಆಸ್ತಿಗೆ ಸಂಬಂಧಿಸಿದ ಆತಂಕವು ಪರಿಹಾರಗೊಳ್ಳುತ್ತದೆ. ಭೂ ಲಾಭವಿದೆ. ವಿದ್ಯಾರ್ಥಿಗಳು ವಿಶೇಷ ಸಾಧನೆ ಮತ್ತು ಗೌರವಕ್ಕೆ ಪಾತ್ರರಾಗುತ್ತಾರೆ. ನವವಿವಾಹಿತರಿಗೆ ಸಂತಾನ ಲಾಭವಿದೆ. ಉದ್ಯೋಗದಲ್ಲಿ ಯಾವುದೇ ರೀತಿಯ ಆತಂಕದ ಪರಿಸ್ಥಿತಿ ಎದುರಾಗುವುದಿಲ್ಲ. ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುವ ಸಾಧ್ಯತೆಗಳಿವೆ. ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆ ಎದುರಾಗದು. ಸಂಗಾತಿ ಮತ್ತು ಮಕ್ಕಳೊಂದಿಗೆ ದೀರ್ಘಕಾಲದ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಕಲಾವಿದರು ಮತ್ತು ಬರಹಗಾರರಿಗೆ ಅಪೂರ್ವ ಅವಕಾಶ ದೊರೆಯಲಿದೆ.

(ಗಮನಿಸಿ: ಇದು ನಂಬಿಕೆ ಮತ್ತು ಪ್ರಚಲಿತ ಕಥೆಗಳನ್ನು ಆಧರಿಸಿದ ಬರಹ. ಇಲ್ಲಿರುವ ಯಾವ ಸಂಗತಿಯನ್ನೂ 'ಹಿಂದೂಸ್ತಾನ್ ಟೈಮ್ಸ್‌ ಕನ್ನಡ' ಜಾಲತಾಣದ ಸಿಬ್ಬಂದಿ ಪುಷ್ಟೀಕರಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ. ಓದುಗರಿಗೆ ಮಾಹಿತಿ ಕೊಡುವ ಉದ್ದೇಶದಿಂದ ಮಾತ್ರ ಈ ಬರಹ ಪ್ರಕಟಿಸಲಾಗಿದೆ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.