ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Swapna Shastra: ಕನಸಿನಲ್ಲಿ ಒಡೆದ ಕನ್ನಡಿ, ಹರಿದ ಬಟ್ಟೆ ಕಂಡರೆ ಏನರ್ಥ; ಇದರ ಮುನ್ಸೂಚನೆಯೇನು?

Swapna Shastra: ಕನಸಿನಲ್ಲಿ ಒಡೆದ ಕನ್ನಡಿ, ಹರಿದ ಬಟ್ಟೆ ಕಂಡರೆ ಏನರ್ಥ; ಇದರ ಮುನ್ಸೂಚನೆಯೇನು?

Swapna Shastra in Kannada: ಕನಸಿನಲ್ಲಿ ಕಾಣುವ ಕೆಲವೊಂದು ಘಟನೆ ಅಥವಾ ಸನ್ನಿವೇಶಗಳು, ಮುಂದಿನ ದಿನಗಳಲ್ಲಿ ಬರುವ ಅಪಾಯದ ಸಂಕೇತ ಕೂಡಾ ಆಗಿರುತ್ತದೆ. ಸ್ವಪ್ನಶಾಸ್ತ್ರದ ಪ್ರಕಾರ, ಈ ಕೆಳಗಿನ ಕನಸುಗಳು ಕಂಡರೆ ಮುಂದೆ ದುರಾದೃಷ್ಟಕರ ಸನ್ನಿವೇಶ ಎದುರಿಸುವ ಸಂಭಾವ್ಯತೆ ಸಾಧ್ಯತೆ ಇರುತ್ತದೆ.

ಕನಸಿನಲ್ಲಿ ಒಡೆದ ಕನ್ನಡಿ, ಹರಿದ ಬಟ್ಟೆ ಕಂಡರೆ ಏನರ್ಥ; ಇದರ ಮುನ್ಸೂಚನೆಯೇನು?
ಕನಸಿನಲ್ಲಿ ಒಡೆದ ಕನ್ನಡಿ, ಹರಿದ ಬಟ್ಟೆ ಕಂಡರೆ ಏನರ್ಥ; ಇದರ ಮುನ್ಸೂಚನೆಯೇನು? (pixabay)

ಮನುಷ್ಯಜೀವಿ ಕನಸು ಕಾಣುವುದು ಸಾಮಾನ್ಯ. ಹಲವು ಬಾರಿ ಸಂತಸದ ಘಟನೆಗಳು ಜರುಗಿದಂತೆ ಕನಸು ಬೀಳುತ್ತವೆ. ಇನ್ನೂ ಕೆಲವು ಕನಸು ಕಂಡಾಗ ಭಯಪಟ್ಟು ಎಚ್ಚರಗೊಳ್ಳುವವರೂ ಇದ್ದಾರೆ. ಕೆಲವು ಸಂದರ್ಭಗಳಲ್ಲಿ ನಿದ್ದೆಯಲ್ಲಿ ಕಂಡ ಕನಸು ಬೆಳಗ್ಗೆ ಏಳುವಷ್ಟರಲ್ಲಿ ಮರೆತು ಹೋಗುತ್ತದೆ. ಇನ್ನೂ ಕೆಲವೊಮ್ಮೆ ಬೀಳುವ ಕನಸು ಅಚ್ಚರಿಯ ರೀತಿಯಲ್ಲಿ ನೆನಪಿನಲ್ಲಿ ಉಳಿಯುತ್ತದೆ. ಕೆಲವೊಬ್ಬರು ರಾತ್ರಿ ಕಂಡ ಕನಸಿನ ಬಗ್ಗೆಯೇ ದೀರ್ಘಕಾಲ ಯೋಚಿಸುತ್ತಾರೆ. ಕೆಟ್ಟ ಕನಸು ನಿಜವಾಗುತ್ತಾ ಎಂಬ ಭೀತಿಯಲ್ಲಿ ಇರುತ್ತಾರೆ.

ಹೆಚ್ಚಿನ ಸಮಯದಲ್ಲಿ ನಾವು ಊಹಿಸಲೂ ಸಾಧ್ಯವಾಗದಂಥ ಕನಸುಗಳು ಬೀಳುವುದುಂಟು. ಜೀವನದಲ್ಲಿ ಹಿಂದೆಂದೂ ನೋಡಿರದ ಘಟನೆಗಳು ಅಥವಾ ವಸ್ತುಗಳ ಬಗ್ಗೆಯೂ ಕನಸು ಕಾಣುತ್ತೇವೆ. ಸ್ವಪ್ನಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಾಣುವ ಕೆಲವೊಂದು ವಸ್ತುಗಳು ಅಥವಾ ಘಟನೆಗಳಿಗೆ ಕೆಲವೊಂದು ಅರ್ಥಗಳಿವೆ. ಕೆಲವೊಂದು ವಸ್ತುಗಳನ್ನು ಕನಸಿನಲ್ಲಿ ನೋಡುವುದು ದುರದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ.

ಹರಿದ ಬಟ್ಟೆ

ಕನಸಿನಲ್ಲಿ ಹರಿದ ಬಟ್ಟೆಗಳನ್ನು ನೋಡಿದರೆ, ಇದು ಕೂಡಾ ನಿಮ್ಮ ಗುರಿ ಮತ್ತು ಮಹತ್ವಾಕಾಂಕ್ಷೆಗಳಿಗೆ ಸಂಬಂಧಿಸಿದೆ ಎಂಬುದನ್ನು ಸ್ಪಪ್ನಶಾಸ್ತ್ರ ಹೇಳುತ್ತದೆ. ಹರಿದ ಬಟ್ಟೆಗಳು ಭವಿಷ್ಯದಲ್ಲಿ ನೀವು ಎದುರಿಸಬಹುದಾದ ವೈಫಲ್ಯಗಳನ್ನು ಸೂಚಿಸುತ್ತವೆ. ಜೀವನದಲ್ಲಿ ಏರುಪೇರುಗಳಾದಾಗ, ಮನಸ್ಸಿನಲ್ಲಿ ಅಭದ್ರತೆಯ ಭಾವ ಇದ್ದಾಗ, ಅಸ್ಥಿರತೆ ಕಾಡಿದಾಗ ಇಂಥಾ ಕನಸುಗಳು ಕಾಣುತ್ತವೆ.

ಒಡೆದ ಕನ್ನಡಿ

ಸ್ವಪ್ನಶಾಸ್ತ್ರದ ಪ್ರಕಾರ, ಕನಸಿನಲ್ಲಿ ಒಡೆದ ಕನ್ನಡಿಯನ್ನು ಕಂಡರೆ ಅದು ದುರದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಎರಡು ರೀತಿಯ ಅರ್ಥವಿದೆ. ಒಂದು, ಒಬ್ಬರ ಬದುಕಿನ ಗುರಿಗಳು ಅಥವಾ ಮಹತ್ವಾಕಾಂಕ್ಷೆಗಳು ಹಳಿತಪ್ಪುವ ಸುಳಿವು. ಇನ್ನೊಂದು, ದಾಂಪತ್ಯದಲ್ಲಿ ಬಿರುಕು, ವಿಚ್ಛೇದನ, ಪ್ರೇಮಿಗಳ ಬ್ರೇಕಪ್‌, ಆಪ್ತರೊಂದಿಗೆ ಸಂಬಂಧ ಮುರಿದುಹೋಗುವ ಸಾಧ್ಯತೆಯನ್ನು ಈ ಕನಸು ಸೂಚಿಸುತ್ತದೆ. ಅಂದರೆ, ಮುರಿದ ಕನ್ನಡಿಯು ನಕಾರಾತ್ಮಕ ಶಕ್ತಿಯನ್ನು ಬಿಂಬಿಸುತ್ತದೆ.

ಬಿರುಗಾಳಿ, ಜಲಪಾತದ ಕನಸು

ಜೋರಾಗಿ ಬೀಸುವ ಬಿರುಗಾಳಿ, ಆಳವಾದ ಜಲಪಾತಗಳು ಕನಸಿನಲ್ಲಿ ಕಂಡರೆ ಕುಟುಂಬದಲ್ಲಿ ಜಗಳ ನಡೆಯುವ ಸಾಧ್ಯತೆಯನ್ನು ಸೂಚಿಸುತ್ತದೆ. ಆಳವಾದ ಜಲಪಾತಗಳನ್ನು ನೋಡುವುದು ಭಾವನಾತ್ಮಕವಾಗಿ ಪ್ರಕ್ಷುಬ್ಧತೆ ಎದುರಿಸುವ ಸೂಚನೆಯಾಗಿದೆ. ಗಾಳಿ ಅಥವಾ ಬೀಸುವ ಅಲೆಗಳನ್ನು ನೋಡಿದರೆ, ಮುಂದೆ ಬರುವ ಸಮಸ್ಯೆಗಳನ್ನು ಬಹಳ ಎಚ್ಚರಿಕೆಯಿಂದ ಎದುರಿಸಬೇಕು ಎಂದರ್ಥ.

ಹಲ್ಲಿನ ನಷ್ಟ

ಸ್ಪಪ್ನಶಾಸ್ತ್ರದ ಪ್ರಕಾರ, ಹಲ್ಲುಗಳು ಶಕ್ತಿ, ಸಂವಹನ ಮತ್ತು ಅಭಿವ್ಯಕ್ತಿಯ ಸಂಕೇತಗಳಾಗಿವೆ. ಹಲ್ಲು ಹೋದಂತೆ ಕನಸು ಕಾಣುವುದು ಅಭದ್ರತೆ ಮತ್ತು ಮುಂಬರುವ ದುರದೃಷ್ಟವನ್ನು ಸೂಚಿಸುತ್ತದೆ. ಅಧಿಕಾರ ಕೈ ತಪ್ಪುವ ಸಾಧ್ಯತೆಯ ಸುಳಿವು ಇದಾಗಿದೆ. ಇದು ನಕಾರಾತ್ಮಕ ಶಕ್ತಿಯನ್ನು ಎದುರಿಸಲು ನೀವು ನಿಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಎಂಬುದನ್ನು ಈ ಕನಸು ಸೂಚಿಸುತ್ತದೆ.

ಕನಸಿನಲ್ಲಿ ಗೊಂದಲಕ್ಕೊಳಗಾಗುವುದು

ಕೆಲವೊಮ್ಮೆ ಕಾಣುವ ಕನಸುಗಳು ಗೊಂದಲಮಯವಾಗಿರುತ್ತವೆ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆಗದಿರುವುದು, ಕನಸಿನಲ್ಲಿ ಕಳೆದುಹೋಗುವುದು ಹೀಗೆ ಗೊಂದಲ ಉಂಟಾಗುತ್ತದೆ. ಇವುಗಳನ್ನು ಎಚ್ಚರಿಕೆಯ ಸೂಚನೆ ಎಂದು ಪರಿಗಣಿಸಬೇಕು. ಇದಕ್ಕೆ ಗುರಿಗಳನ್ನು ಮರುಹೊಂದಿಸುವುದು, ನಿರ್ಧಾರ ಬದಲಿಸುವುದು ಮಾಡಬೇಕಾಗಬಹುದು. ಇಂಥಾ ಕನಸುಗಳು ಮುಂದೆ ಎಚ್ಚರಿಕೆಯ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ವಿಭಾಗ