ಧನಸ್ಸು ರಾಶಿಯಲ್ಲಿ ಅಸ್ತಂಗತನಾದ ಬುಧ; ಮೇಷ ಸೇರಿದಂತೆ ಈ 4 ರಾಶಿಯವರಿಗೆ ಆರ್ಥಿಕ ನಷ್ಟ, ಆರೋಗ್ಯ ಸಮಸ್ಯೆ
Mercury Combust: ಇದೇ ವರ್ಷ ಜನವರಿ 4 ರಂದು ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ಪ್ರವೇಶಿಸಿದ್ದ ಬುಧನು ಜನವರಿ 18 ರಂದು ಅದೇ ರಾಶಿಯಲ್ಲಿ ಅಸ್ತಂಗತನಾಗಿದ್ದಾನೆ. ಇದರಿಂದ ಮೇಷ, ಧನಸ್ಸು ಸೇರಿದಂತೆ 4 ರಾಶಿಯವರಿಗೆ ಸಣ್ಣ ಪುಟ್ಟ ಸಮಸ್ಯೆಗಳು ಉಂಟಾಗಲಿದೆ.

ಬುಧ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರಯಾಣಿಸಲು 21 ದಿನಗಳು ಸಮಯ ಬೇಕು. ಸದ್ಯಕ್ಕೆ ಬುಧನು ಧನಸ್ಸು ರಾಶಿಯಲ್ಲಿದ್ದಾನೆ. ಜನವರಿ 4 ರಂದು ಬುಧನು ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ಪ್ರವೇಶಿಸಿದ್ದಾನೆ. ಜನವರಿ 18, ಶನಿವಾರ ಬೆಳಗ್ಗೆ 6.55ಕ್ಕೆ ಬುಧನು ಧನಸ್ಸು ರಾಶಿಯಲ್ಲಿ ಅಸ್ತಂಗತನಾಗಿದ್ದಾನೆ.
ಧನಸ್ಸು ರಾಶಿಯಲ್ಲಿ ಬುಧ ಅಸ್ತಂಗತನಾಗುವುದರಿಂದ ಕೆಲವು ರಾಶಿಯವರು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಸಮಸ್ಯೆ ಉಂಟಾದರೆ ಕೆಲವರಿಗೆ ಆರ್ಥಿಕ ನಷ್ಟ ಎದುರಾಗುತ್ತದೆ. ಹಾಗಾಗಿ ಕೆಲವು ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು. ಬುಧನ ಅಸ್ತಂಗತ್ವದಿಂದ ಯಾವ ರಾಶಿಯವರಿಗೆ ಏನು ಸಮಸ್ಯೆ ಉಂಟಾಗಲಿದೆ ನೋಡೋಣ.
ಮೇಷ ರಾಶಿ
ಮೇಷ ರಾಶಿಯವರು ಈ ಸಮಯದಲ್ಲಿ ಜಾಗರೂಕರಾಗಿರಬೇಕು. ಪ್ರಮುಖ ಕೆಲಸಗಳಲ್ಲಿ ತೊಂದರೆ ಉಂಟಾಗಬಹುದು. ಸೋಲು ಎದುರಿಸಬೇಕಾಗುತ್ತದೆ. ಹಾಗಾಗಿ ಎಚ್ಚರಿಕೆ ವಹಿಸುವುದು ಉತ್ತಮ. ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗುವುದರಿಂದ ಬಹಳ ಜಾಗರೂಕರಾಗಿರಬೇಕು. ಪ್ರೀತಿಯಲ್ಲಿರುವವರು ಅತಿಯಾದ ಕೆಲಸದಿಂದಾಗಿ, ನಿಮ್ಮ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗದಿರಬಹುದು. ಇದರಿಂದ ಸಣ್ಣ ಪುಟ್ಟ ಮನಸ್ತಾಪ ಉಂಟಾಗಬಹುದು. ಆದರೆ ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸಿ, ಇಲ್ಲವಾದರೆ ಸಣ್ಣಪುಟ್ಟ ಸಮಸ್ಯೆಗಳೇ ದೊಡ್ಡದಾಗಬಹುದು.
ವೃಷಭ ರಾಶಿ
ವೃಷಭ ರಾಶಿಯವರಿಗೆ ಬುಧನ ಅಸ್ತಂಗತ್ವದ ಸಮಯವು ಕಷ್ಟಕರವಾಗಿರುತ್ತದೆ. ನೀವು ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮನಸ್ಸಿನಲ್ಲಿ ಬೇಡದ ಚಿಂತೆ ಉಂಟಾಗಬಹುದು. ನಿಮ್ಮ ಕೆಲಸದ ಕಡೆ ನೀವು ಹೆಚ್ಚು ಗಮನ ಹರಿಸಬೇಕಿದೆ. ಮತ್ತೊಬ್ಬರ ಮಾತಿನ ಬಗ್ಗೆ ಗಮನ ಹರಿಸಬೇಡಿ. ನಿಮ್ಮ ಕೆಲಸವನ್ನು ನೀವೇ ಮಾಡಲು ಪ್ರಯತ್ನಿಸುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿಯವರು ಕೂಡಾ ಈ ಸಮಯದಲ್ಲಿ ಜಾಗರೂಕರಾಗಿರಬೇಕು. ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ತೊಂದರೆಗಳಿರಬಹುದು. ವಿದ್ಯಾರ್ಥಿಗಳಿಗೂ ಕಷ್ಟದ ಸಮಯಗಳು ಬರಲಿವೆ. ವೆಚ್ಚವೂ ಹೆಚ್ಚಾಗುತ್ತದೆ. ಹಾಗಾಗಿ ಸಿಂಹ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು.
ಧನಸ್ಸು ರಾಶಿ
ಬುಧನು ಧನಸ್ಸು ರಾಶಿಯಲ್ಲಿ ಅಸ್ತಮಿಸಿದ ಕಾರಣ ಧನಸ್ಸು ರಾಶಿಯವರಿಗೆ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ವೆಚ್ಚಗಳು ಹೆಚ್ಚಾಗಬಹುದು. ಆಹಾರ ಮತ್ತು ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಯಾವುದೇ ಕೆಲಸದಲ್ಲಿ ಅವಸರ ಮಾಡಬೇಡಿ. ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿಂದ ಇರಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
