ಪುನರ್ವಸು ನಕ್ಷತ್ರದಲ್ಲಿ ಬುಧ ಸಂಚಾರ; ಬದಲಾವಣೆಗೆ ಒಗ್ಗಿಕೊಂಡವರಿಗೆ ವ್ಯಕ್ತಿ ವಿಕಸನಕ್ಕೆ ದಾರಿ, ಆರೋಗ್ಯದ ಬಗ್ಗೆ ಕಾಳಜಿ ಇರಲಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪುನರ್ವಸು ನಕ್ಷತ್ರದಲ್ಲಿ ಬುಧ ಸಂಚಾರ; ಬದಲಾವಣೆಗೆ ಒಗ್ಗಿಕೊಂಡವರಿಗೆ ವ್ಯಕ್ತಿ ವಿಕಸನಕ್ಕೆ ದಾರಿ, ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಪುನರ್ವಸು ನಕ್ಷತ್ರದಲ್ಲಿ ಬುಧ ಸಂಚಾರ; ಬದಲಾವಣೆಗೆ ಒಗ್ಗಿಕೊಂಡವರಿಗೆ ವ್ಯಕ್ತಿ ವಿಕಸನಕ್ಕೆ ದಾರಿ, ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ಸಂಚಾರ ಸಾಮಾನ್ಯ. ಇದರಂತೆ, ಪುನರ್ವಸು ನಕ್ಷತ್ರದಲ್ಲಿ ಬುಧ ಸಂಚಾರವಾಗಿದ್ದು, ಎಲ್ಲ ರಾಶಿಚಕ್ರದವರ ಮೇಲೂ ಇದರ ಪರಿಣಾಮವಾಗಲಿದೆ. ಬದಲಾವಣೆಗೆ ಒಗ್ಗಿಕೊಂಡವರಿಗೆ ವ್ಯಕ್ತಿ ವಿಕಸನಕ್ಕೆ ದಾರಿ, ಆರೋಗ್ಯದ ಬಗ್ಗೆ ಕಾಳಜಿ ಇರಬೇಕು ಎನ್ನುತ್ತಿದೆ ಶಾಸ್ತ್ರ.

ಪುನರ್ವಸು ನಕ್ಷತ್ರದಲ್ಲಿ ಬುಧ ಸಂಚಾರ; ಬದಲಾವಣೆಗೆ ಒಗ್ಗಿಕೊಂಡವರಿಗೆ ವ್ಯಕ್ತಿ ವಿಕಸನಕ್ಕೆ ದಾರಿ, ಆರೋಗ್ಯದ ಬಗ್ಗೆ ಕಾಳಜಿ ಇರಲಿ (ಸಾಂಕೇತಿಕ ಚಿತ್ರ)
ಪುನರ್ವಸು ನಕ್ಷತ್ರದಲ್ಲಿ ಬುಧ ಸಂಚಾರ; ಬದಲಾವಣೆಗೆ ಒಗ್ಗಿಕೊಂಡವರಿಗೆ ವ್ಯಕ್ತಿ ವಿಕಸನಕ್ಕೆ ದಾರಿ, ಆರೋಗ್ಯದ ಬಗ್ಗೆ ಕಾಳಜಿ ಇರಲಿ (ಸಾಂಕೇತಿಕ ಚಿತ್ರ) (Live Hindustan)

Mercury Transit 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಸಂಚಾರ ಈಗ ಪ್ರಾಮುಖ್ಯತೆ ಪಡೆದಿದೆ. ಬುಧ ಗ್ರಹವು ಸಂವಹನ ಮತ್ತು ಕಲಿಕೆಗೆ ಸಂಬಂಧಿಸಿದ ಗ್ರಹವಾಗಿದ್ದು, ಗ್ರಹಗತಿಗೆ ಅನುಗುಣವಾಗಿ ಜೂನ್ 24ಕ್ಕೆ ಬೆಳಗ್ಗೆ 8.16ರ ಸಮಯದಲ್ಲಿ ಪುನರ್ವಸು ನಕ್ಷತ್ರವನ್ನು ಪ್ರವೇಶಿಸಿದೆ. ಈ ಸಂಚಾರವು ವಿವಿಧ ರಾಶಿಚಕ್ರದವರ ಜೀವನದ ಮೇಲೆ ಪರಿಣಾಮ ಬೀರುವಂಥದ್ದು. ಇದರಲ್ಲಿ ಕೆಲವರಿಗೆ ಒಳಿತಾದರೆ ಇನ್ನು ಕೆಲವರಿಗೆ ಕೆಡುಕು, ಇನ್ನು ಕೆಲವರಿಗೆ ಮಿಶ್ರಫಲ ದೊರಕಬಹುದು.

ವೈದಿಕ ಜ್ಯೋತಿಷ್ಯದ ಪ್ರಕಾರ ಹೇಳುವುದಾದರೆ, ಪುನರ್ವಸು ನಕ್ಷತ್ರವು ಬದಲಾವಣೆ ಮತ್ತು ನವಚೈತನ್ಯಕ್ಕೆ ಸಂಬಂಧಿಸಿದ್ದಾಗಿದೆ. ಈ ನಕ್ಷತ್ರದ ಒಡತಿ ಅದಿತಿ ದೇವಿ. ನಕ್ಷತ್ರಗಳ ಪೈಕಿ ಪುನರ್ವಸು ನಕ್ಷತ್ರ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಿ. ಪುನರ್ವಸು ಎಂಬುದು ಅಕ್ಷರಶಃ ಹೇಳಬೇಕು ಎಂದರೆ ಹಿಂದಿರುಗುವವನು ಅಥವಾ ಪುನರಾವರ್ತಕ, ಮತ್ತೆ ಮತ್ತೆ ಬರುವವನು ಎಂಬರ್ಥ. ಈ ನಕ್ಷತ್ರದ ಉಸ್ತುವಾರಿಯಾಗಿರುವ ಅದಿತಿ ದೇವಿ ದೇವತೆಗಳ ತಾಯಿ. ಮರುಜನ್ಮ ಅಥವಾ ಪುನರ್‌ಜನ್ಮವನ್ನು ಸಂಕೇತಿಸುವಂಥದ್ದು. ಗುರುವಿನ ಆಳ್ವಿಕೆ ಇಲ್ಲಿದೆ.

ಬದಲಾವಣೆಗೆ ಒಗ್ಗಿಕೊಳ್ಳಬೇಕು; ವ್ಯಕ್ತಿ ವಿಕಸನಕ್ಕೆ ದಾರಿ ಮಾಡಿಕೊಡುವ ಬುಧ ಸಂಚಾರ

ಬುಧ ಗ್ರಹವು ಪುನರ್ವಸು ನಕ್ಷತ್ರಕ್ಕೆ ಪ್ರವೇಶಿಸಿದ್ದು, ಈ ಸಮಯದಲ್ಲಿ, ಜೀವನದ ಘಟನೆಗಳಿಗೆ ಅಂಟಿಕೊಳ್ಳದೆ ಮುನ್ನಡೆಯಬೇಕು. ಬದಲಾವಣೆಯನ್ನು ಸಹಜವಾಗಿಯೆ ಸ್ವೀಕರಿಸಲು ಮುಂದಾಗಬೇಕು. ಪುನರ್ವಸುವಿನ ಶಕ್ತಿಗಳು ನಮ್ಯತೆ ಮತ್ತು ಬದಲಾವಣೆಗಳಿಗೆ ಸುಲಭವಾಗಿ ಹೊಂದಿಕೊಳ್ಳಲು ಸಹಾಯಕವಾಗಿವೆ. ಜೀವನದಲ್ಲಿ ಆಗುವ ಬದಲಾವಣೆಗಳನ್ನು ಒಪ್ಪಿಕೊಳ್ಳುವುದು ಬಹಳ ಮುಖ್ಯ, ಏಕೆಂದರೆ ಅವು ಪ್ರಯೋಜನಕಾರಿಯಾಗಿ ಹೊರಹೊಮ್ಮುತ್ತವೆ. ವ್ಯಕ್ತಿಯ ವಿಕಸನಕ್ಕೆ ಸಹಾಯ ಮಾಡುತ್ತವೆ. ಇದು ತಾಳ್ಮೆ ಮತ್ತು ಧ್ಯಾನದ ಸಮಯವೂ ಆಗಿದೆ. ನಿಮ್ಮ ಮನಸ್ಸು ವಿನಮ್ರ ಮತ್ತು ಸ್ಥಿರವಾಗಿದ್ದರೆ, ನೀವು ಈ ಸವಾಲುಗಳನ್ನು ಸೊಬಗು ಮತ್ತು ಬುದ್ಧಿವಂತಿಕೆಯಿಂದ ನೌಕಾಯಾನ ಮಾಡತ್ತು ಬದುಕಿನ ಇನ್ನೊಂದು ತುದಿ ತಲುಪಬಹುದು.

ಬುಧ ಸಂಚಾರದಿಂದ ಉದ್ಯೋಗದ ಮೇಲೇನು ಪರಿಣಾಮ

ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಈ ಬುಧ ಸಂಚಾರವು ಪ್ರಯೋಜನಕಾರಿ. ಪರಸ್ಪರ ಸಂವಹನ ಕೌಶಲ ಮತ್ತು ಒಟ್ಟಾರೆ ನೋಟವನ್ನು ಹೆಚ್ಚಿಸುತ್ತದೆ. ಸಂದರ್ಶನ ಅಥವಾ ಸಭೆಗಳಲ್ಲಿ ಇವು ನಿಮ್ಮ ನೆರವಿಗೆ ಬರುತ್ತವೆ. ಆದಾಗ್ಯೂ, ಪ್ರಕ್ರಿಯೆಯಲ್ಲಿ ವಿಳಂಬ, ಟ್ವಿಸ್ಟ್‌ ಇದ್ದರೆ ಅದನ್ನು ಗಮನಿಸಿ ಅಚ್ಚರಿಗೊಳಗಾಗಬೇಡಿ.

ಈಗಾಗಲೇ ಉದ್ಯೋಗದಲ್ಲಿರುವವರಿಗೆ, ಈ ಅವಧಿಯು ಸ್ಥಾನಪಲ್ಲಟಗಳಿಗೆ ಕಾರಣವಾಗಬಹುದು. ಈ ಬದಲಾವಣೆಗಳನ್ನು ವ್ಯಕ್ತಿಗಳ ವೃತ್ತಿಪರ ಅಭಿವೃದ್ಧಿಯನ್ನು ಹೆಚ್ಚಿಸುವ ಮಾರ್ಗವಾಗಿ ಸ್ವಾಗತಿಸಬೇಕು. ಏಕೆಂದರೆ ಅವರು ಹೊಸ ಪದರು ಮತ್ತು ಸಿಬ್ಬಂದಿಯ ಬೆಳವಣಿಗೆಗೆ ವೇದಿಕೆಯನ್ನು ಒದಗಿಸುತ್ತಾರೆ.

ಪುನರ್ವಸುವಿನಲ್ಲಿ ಬುಧ ಸಂಚಾರ; ಹಣಕಾಸು, ಹೂಡಿಕೆ ವಿಚಾರ

ಪುನರ್ವಸು ನಕ್ಷತ್ರದಲ್ಲಿ ಬುಧ ಸಂಚಾರದ ಪರಿಣಾಮ, ಆಸ್ತಿ ಖರೀದಿ, ಮಾರಾಟಕ್ಕೆ ಯೋಜಿಸುವವರಿಗೆ ಉತ್ತೇಜನದಾಯಕ. ಹೊಸ ಕಾರು ಖರೀದಿ, ಹೊಸ ವ್ಯಾಪಾರಕ್ಕೆ ಇದು ಸಕಾಲ. ಪ್ರಗತಿಗೆ ಪೂರಕವಾದ ಸಮಯ ಸಂದರ್ಭ ಇದಾಗಿದೆ. ಅದೇ ರೀತಿ, ಷೇರುಗಳ ಮೇಲಿನ ಹೂಡಿಕೆಗೂ ಕೆಲವರು ಆಸಕ್ತಿ ತೋರಬಹುದು. ಆದರೆ ಹೂಡಿಕೆ ಮಾಡುವಾಗ ಜಾಗರೂಕರಾಗಿರಬೇಕು. ಷೇರುಪೇಟೆ ಅಸ್ಥಿರತೆ, ಏರಿಳಿತಗಳಿಂದ ಕೂಡಿದ್ದಾಗಿದೆ. ಸರಿಯಾದ ತಿಳಿವಳಿಕೆ ಪಡೆದು ಹೂಡಿಕೆ ಮಾಡುವುದು ಉತ್ತಮ ಮತ್ತು ಪ್ರಯೋಜನಕಾರಿ. ಹೂಡಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಸಣ್ಣ ಅಕ್ಷರಗಳಲ್ಲಿ ಇದ್ದರೂ ಗಮನವಿಟ್ಟು ಓದಿಕೊಳ್ಳಿ.

ಪುನರ್ವಸು ನಕ್ಷತ್ರದಲ್ಲಿ ಬುಧ ಸಂಚಾರ; ಪ್ರೀತಿ ಮತ್ತು ಸಂಬಂಧ

ಪ್ರೀತಿ ಮತ್ತು ಸಂಬಂಧದ ವಿಚಾರಕ್ಕೆ ಬಂದರೆ ಬುಧ ಸಂಚಾರವು, ಒಂಟಿಯಾಗಿರುವವರಿಗೆ ಹೊಸ ಸಂಬಂಧ ಹುಡುಕಲು ಶುರುಮಾಡಲು ಇದು ಸಕಾಲ. ಅದೇ ರೀತಿ ಬ್ರೇಕ್ ಅಪ್ ಆಗಿದ್ದರೆ, ಅವರೊಂದಿಗೆ ಮರುಸಂಬಂಧ ಶುರು ಮಾಡುವುದಕ್ಕೂ ಇದು ಉತ್ತಮ ಸನ್ನಿವೇಶ ಒದಗಿಸಲಿದೆ. ಯಾವುದಕ್ಕೂ ಮುಕ್ತ ಮನಸ್ಸಿನಿಂದ ಎಲ್ಲವನ್ನೂ ಸ್ವಾಗತಿಸಬೇಕು. ಆದಾಗ್ಯೂ, ನೀವು ಹೇಳುವ ಮಾತು ಅಥವಾ ಮಾಡುವ ಕೆಲಸಕ್ಕೆ ತಪ್ಪು ಅರ್ಥವನ್ನು ನೀಡದಂತೆ ಜಾಗರೂಕರಾಗಿರಿ. ಪುನರ್ವಸು ಬದಲಾವಣೆಯ ಶಕ್ತಿ ಹೊಂದಿದೆ. ಆದ್ದರಿಂದ, ಪ್ರಾಮಾಣಿಕತೆಯೊಂದಿಗೆ ಹೊಸ ಸಂಬಂಧಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ.

ಇನ್ನು ಕುಟುಂಬದ ವಿಚಾರಕ್ಕೆ ಬಂದರೆ ಈ ಅವಧಿಯು ಪಾಲಕರೊಂದಿಗಿನ ಸಂಬಂಧ ಸುಧಾರಣೆಗೆ, ಸಹೋದರ, ಸಹೋದರಿಯರ ನಡುವೆ ಸಂಬಂಧ ಸುಧಾರಣೆಗೆ ಅವಕಾಶ ಒದಗಿಸುತ್ತದೆ. ಪರಸ್ಪರ ಗೌರವದೊಂದಿಗೆ ಪ್ರಾಮಾಣಿಕ ಮತ್ತು ಮುಕ್ತ ಮನಸ್ಸಿನ ಮಾತುಕತೆ ಎಲ್ಲದಕ್ಕೂ ಮುಖ್ಯ.

ಆರೋಗ್ಯದ ಬಗ್ಗೆ ಕಾಳಜಿವಹಿಸಿ: ಪುನರ್ವಸು ನಕ್ಷತ್ರದಲ್ಲಿ ಬುಧ ಸಂಚಾರದ ಕಾರಣ, ಕೆಲವರಿಗೆ ಆರೋಗ್ಯ ಸಮಸ್ಯೆ ಕಾಡಬಹುದು. ವಿಶೇಷವಾಗಿ ನರ ಸಂಬಂಧಿ, ಉಸಿರಾಟ, ಜೀರ್ಣಕ್ರಿಯೆ ಮುಂತಾದವುಗಳ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಈ ಸಮಯದಲ್ಲಿ, ಆತಂಕ, ಒತ್ತಡ, ಅಲರ್ಜಿಗಳು ಅಥವಾ ಜೀರ್ಣಕಾರಿ ಅಸ್ವಸ್ಥತೆಗಳಂತಹ ಪರಿಸ್ಥಿತಿಗಳನ್ನು ಪ್ರಚೋದಿಸುವ ಚಟುವಟಿಕೆಗಳನ್ನು ತಪ್ಪಿಸುವುದು ಒಳ್ಳೆಯದು.

ಗಮನಿಸಿ: ಈ ಲೇಖನದಲ್ಲಿರುವ ಮಾಹಿತಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿ ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ಪ್ರವಚನಗಳು / ಧರ್ಮಗಳು / ಧರ್ಮಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" (HT ಕನ್ನಡ) ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.