ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Mercury Transit: ಜೂನ್‌ 29ವರೆಗೆ ಮಿಥುನ ರಾಶಿಯಲ್ಲಿ ನೆಲೆಸುವ ಬುಧ; ಭದ್ರ ಯೋಗದಿಂದ ಬದಲಾಗಲಿದೆ ಈ 4 ರಾಶಿಯವರ ಜೀವನ

Mercury Transit: ಜೂನ್‌ 29ವರೆಗೆ ಮಿಥುನ ರಾಶಿಯಲ್ಲಿ ನೆಲೆಸುವ ಬುಧ; ಭದ್ರ ಯೋಗದಿಂದ ಬದಲಾಗಲಿದೆ ಈ 4 ರಾಶಿಯವರ ಜೀವನ

Mercury Transit: ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರಯಾಣಿಸಿದಾಗ ಕೆಲವರಿಗೆ ಶುಭ, ಕೆಲವರಿಗೆ ಅಶುಭ ಫಲಿತಾಂಶಗಳು ದೊರೆಯುತ್ತದೆ. ಕೆಲವೇ ದಿನಗಳಲ್ಲಿ ಭದ್ರ ಯೋಗ ಉಂಟಾಗಲಿದ್ದು ಇದರಿಂದ ಕೆಲವು ರಾಶಿಚಕ್ರದ ಜನರಿಗೆ ಬಹಳ ಶುಭ ಜರುಗುತ್ತದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಜೂನ್‌ 29ವರೆಗೆ ಮಿಥುನ ರಾಶಿಯಲ್ಲಿ ನೆಲೆಸುವ ಬುಧ; ಭದ್ರ ಯೋಗದಿಂದ ಬದಲಾಗಲಿದೆ ಈ 4 ರಾಶಿಯವರ ಜೀವನ
ಜೂನ್‌ 29ವರೆಗೆ ಮಿಥುನ ರಾಶಿಯಲ್ಲಿ ನೆಲೆಸುವ ಬುಧ; ಭದ್ರ ಯೋಗದಿಂದ ಬದಲಾಗಲಿದೆ ಈ 4 ರಾಶಿಯವರ ಜೀವನ

ಗ್ರಹಗಳ ಸ್ಥಾನ ಬದಲಾವಣೆಯಿಂದ ಜನರ ಜೀವನ ಕೂಡಾ ಬದಲಾಗುತ್ತದೆ. ಕೆಲವೊಂದು ಗ್ರಹಗಳು ನಿಧಾನವಾಗಿ ಚಲಿಸಿದರೆ, ಇನ್ನೂ ಕೆಲವು ಬಹಳ ನಿಧಾನವಾಗಿ ಚಲಿಸುತ್ತದೆ. ಈ ರೀತಿ ಗ್ರಹಗಳ ಸಂಕ್ರಮಣದಿಂದಲಾಗಿ ಕೆಲವೊಮ್ಮೆ ಯೋಗಗಳು ಉಂಟಾಗುತ್ತದೆ.

ಜೂನ್ ತಿಂಗಳ 29 ರ ವರೆಗೂ ಬುಧನು ತನ್ನ ಸ್ವಕ್ಷೇತ್ರವಾದ ಮಿಥುನ ರಾಶಿಯಲ್ಲಿ ಇರುತ್ತಾನೆ. ಇದರಿಂದ ಭದ್ರ ಯೋಗ ರೂಪುಗೊಳ್ಳುತ್ತಿದ್ದು ಮಿಥುನ, ಕನ್ಯಾ, ಧನಸ್ಸು ಮತ್ತು ಮೀನ ರಾಶಿಯವರಿಗೆ ವಿಶೇಷ ಫಲಗಳು ದೊರೆಯಲಿವೆ.

ಮಿಥುನ ರಾಶಿ

ಮಿಥುನ ರಾಶಿಯವರು ಯೋಜಿಸಿರುವ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರುತ್ತವೆ. ತಮ್ಮಲ್ಲಿರುವ ವಿದ್ಯೆ ಬುದ್ಧಿಕ್ಕೆ ತಕ್ಕ ಉದ್ಯೋಗ ದೊರೆಯುತ್ತದೆ. ಯಾವುದೇ ರೀತಿಯ ಅಪಜಯ ಇವರಿಗೆ ಇರುವುದಿಲ್ಲ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟ ತಲುಪುತ್ತಾರೆ. ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಮನದಲ್ಲಿ ಇದ್ದ ಅಳುಕಿನ ಸ್ವಭಾವ ದೂರವಾಗುತ್ತದೆ. ಯಾರನ್ನೂ ಆಶಯಿಸದೆ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗುತ್ತಾರೆ. ಒಳ್ಳೆ ಕೆಲಸಗಳಿಗೆ ಹಣ ಖರ್ಚು ಮಾಡುತ್ತಾರೆ. ಸೋದರ ಮಾವನ ಜೊತೆ ಇದ್ದ ಮನಸ್ತಾಪ ದೂರವಾಗುತ್ತದೆ. ಆತ್ಮವಿಶ್ವಾಸ ಹೆಚ್ಚಲಿದೆ. ಯಾವುದೇ ಕೆಲಸ ಇವರಿಗೆ ಕಷ್ಟವೆನಿಸುವುದಿಲ್ಲ. ತಮ್ಮೊಂದಿಗೆ ತಮ್ಮ ಜೊತೆಯಲ್ಲಿ ಇರುವವರನ್ನು ಯಶಸ್ಸಿನ ಹಾದಿಯಲ್ಲಿ ಕರೆದೊಯ್ಯುತ್ತಾರೆ. ಆತ್ಮೀಯರಿಗೆ ನೀಡಿದ್ದ ಹಣವು ಮರಳಿ ಕೈ ಸೇರುವ ಕಾರಣ ಕಷ್ಟಗಳು ದೂರವಾಗುತ್ತವೆ. ದಾಂಪತ್ಯದಲ್ಲಿ ಇದ್ದ ಮನಸ್ತಾಪ ಮರೆಯಾಗುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಗುರುಬಲ ಇರುವ ಕಾರಣ ಜೀವನದ ತೊಂದರೆಗಳು ಮರೆಯಾಗುತ್ತವೆ. ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ತಾಯಿಯ ಮನೆಯ ಸಂಬಂಧದಲ್ಲಿ ವಿವಾಹವಾಗುತ್ತದೆ. ಉದ್ಯೋಗದಲ್ಲಿದ್ದ ಅಡಚಣೆಗಳು ದೂರವಾಗಿ ಉನ್ನತ ಅಧಿಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆ ಬೆಳೆಸಿಕೊಂಡು ವಿಶೇಷ ಸಾಧನೆಗೆ ಪಾತ್ರರಾಗುತ್ತಾರೆ. ಕೆಲಸ ಹುಡುಕುತ್ತಿರುವವರಿಗೆ ಉದ್ಯೋಗ ದೊರೆಯುತ್ತದೆ. ವಿದೇಶಿ ಸಂಸ್ಥೆಗಳಲ್ಲಿ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ತಾಯಿಯ ಆರೋಗ್ಯದಲ್ಲಿ ಇದ್ದ ತೊಂದರೆ ದೂರವಾಗುತ್ತದೆ. ಇವರಿಂದ ಕುಟುಂಬದ ದೊಡ್ಡ ಸಮಸ್ಯೆಯೊಂದು ನಿವಾರಣೆಯಾಗುತ್ತದೆ. ಜೀವನದಲ್ಲಿ ನೆನಪಿನಲ್ಲಿ ಇಡಬೇಕಾದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ವಂಶಾಧಾರಿತ ಕೆಲಸವನ್ನು ಮುಂದುವರೆಸುವ ಸಾಧ್ಯತೆಯೂ ಇದೆ.

ಧನಸ್ಸು ರಾಶಿ

ಧನಸ್ಸು ರಾಶಿಯಲ್ಲಿ ಜನಿಸಿದವರು ಹಣದ ಸಮಸ್ಯೆಯಿಂದ ದೂರವಾಗುತ್ತಾರೆ. ನಿರೀಕ್ಷಿತ ಮಟ್ಟದಲ್ಲಿ ಹಣ ಸಂಪಾದಿಸುತ್ತಾರೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಜೊತೆ ಇದ್ದ ವಿರಸ ಮರೆಯಾಗುತ್ತದೆ. ಪಾಲುದಾರಿಕೆ ವ್ಯಾಪಾರವಿದ್ದರೆ ಆದಾಯಕ್ಕೆ ಕೊರತೆ ಇರುವುದಿಲ್ಲ. ಆರಂಭಿಸಿದ ಯಾವುದೇ ಕೆಲಸ ಕಾರ್ಯಗಳಲ್ಲಿ ನಿರೀಕ್ಷೆಗೂ ಮೀರಿದ ಶುಭಫಲಗಳು ದೊರೆಯುತ್ತವೆ. ವಿದ್ಯಾರ್ಥಿಗಳು ಉನ್ನತ ವಿದ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ಪಡೆಯುತ್ತಾರೆ. ಅವಿವಾಹಿತರಿಗೆ ವಿವಾಹವಾಗುತ್ತದೆ. ದಂಪತಿ ನಡುವೆ ಇದ್ದ ಅಸಮಾಧಾನ ದೂರವಾಗುತ್ತದೆ. ಮಕ್ಕಳ ಜೊತೆ ಸಂತೋಷದಿಂದ ಬಾಳುತ್ತಾರೆ. ಸಾಲವಾಗಿ ಪಡೆದಿದ್ದ ಹಣ ಮರುಪಾವತಿ ಮಾಡುತ್ತಾರೆ. ಆರೋಗ್ಯ ಸುಧಾರಿಸುತ್ತದೆ. ಹೊಸ ವಾಹನ ಅಥವಾ ಮನೆಯನ್ನು ಕೊಳ್ಳುವ ಯೋಜನೆಗೆ ಎಲ್ಲರ ಸಹಕಾರ ದೊರೆಯುತ್ತದೆ.

ಮೀನ ರಾಶಿ

ಮೀನ ರಾಶಿಯವರಿಗೆ ಸುಖ ಸಂತೋಷದ ಜೀವನವಿರುತ್ತದೆ. ತಮ್ಮ ಕೆಲಸ ಕಾರ್ಯಗಳಲ್ಲಿ ಜಯ ಗಳಿಸುತ್ತಾರೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಗೆಳೆತನ ಹೊಸ ಗೆಲುವನ್ನು ನೀಡುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸುವಿರಿ. ದಂಪತಿ ನಡುವೆ ಉತ್ತಮ ಬಾಂಧವ್ಯ ರೂಪುಗೊಳ್ಳುತ್ತದೆ. ತಾಯಿಯವರಿಂದ ದೊರೆಯುವ ಹಣದ ಸಹಾಯವು ನಿಮ್ಮ ಜೀವನವನ್ನು ಹೊಸ ದಿಕ್ಕಿನಡೆ ನಡೆಸುತ್ತದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮನದಲ್ಲಿರುವ ಆತಂಕದ ಭಾವನೆಯನ್ನು ಬಿಟ್ಟಲ್ಲಿ ಕಷ್ಟಗಳು ಮರೆಯಾಗುತ್ತವೆ. ನಿಮ್ಮ ಪ್ರಯತ್ನಕ್ಕೆ ತಕ್ಕಂಥ ಪ್ರತಿಫಲವು ನಿಮಗೆ ದೊರೆಯುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.