ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃಷಭ ರಾಶಿಯಲ್ಲಿ ಬುಧ ಸಂಕ್ರಮಣ, ಕೆಲವರಿಗೆ ಉದ್ಯೋಗದಲ್ಲಿ ಬಡ್ತಿ, ಕೆಲವರಿಗೆ ಆರ್ಥಿಕ ನಷ್ಟ; ನಿಮ್ಮ ದೆಸೆ ಹೇಗಿದೆ ನೋಡಿ

ವೃಷಭ ರಾಶಿಯಲ್ಲಿ ಬುಧ ಸಂಕ್ರಮಣ, ಕೆಲವರಿಗೆ ಉದ್ಯೋಗದಲ್ಲಿ ಬಡ್ತಿ, ಕೆಲವರಿಗೆ ಆರ್ಥಿಕ ನಷ್ಟ; ನಿಮ್ಮ ದೆಸೆ ಹೇಗಿದೆ ನೋಡಿ

Mercury Transit: ಸಂವಹನದ ಗ್ರಹ ಎಂದೇ ಕರೆಯುವ ಬುಧ ಗ್ರಹವು ಮೇ 31ರ ಮಧ್ಯಾಹ್ನ ಮೇಷ ರಾಶಿಯನ್ನು ಬಿಟ್ಟು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ವೃಷಭ ರಾಶಿಯಲ್ಲಿ ಬುಧ ಸಂಕ್ರಮಣ, ಕೆಲವರಿಗೆ ಉದ್ಯೋಗದಲ್ಲಿ ಬಡ್ತಿ, ಕೆಲವರಿಗೆ ಆರ್ಥಿಕ ನಷ್ಟ ತರಲಿದೆ. ಬುಧನ ನಿಮಗೆ ಯಾವ ರೀತಿ ಫಲ ತರಲಿದ್ದಾನೆ? ಇಲ್ಲಿದೆ ವಿವರ.

ವೃಷಭ ರಾಶಿಯಲ್ಲಿ ಬುಧ ಸಂಕ್ರಮಣ, ಕೆಲವರಿಗೆ ಉದ್ಯೋಗದಲ್ಲಿ ಬಡ್ತಿ, ಕೆಲವರಿಗೆ ಆರ್ಥಿಕ ನಷ್ಟ; ನಿಮ್ಮ ದೆಸೆ ಹೇಗಿದೆ ನೋಡಿ
ವೃಷಭ ರಾಶಿಯಲ್ಲಿ ಬುಧ ಸಂಕ್ರಮಣ, ಕೆಲವರಿಗೆ ಉದ್ಯೋಗದಲ್ಲಿ ಬಡ್ತಿ, ಕೆಲವರಿಗೆ ಆರ್ಥಿಕ ನಷ್ಟ; ನಿಮ್ಮ ದೆಸೆ ಹೇಗಿದೆ ನೋಡಿ

ಬುಧ ಸಂಕ್ರಮಣ: ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಬುದ್ಧಿವಂತಿಕೆ, ವಿವೇಚನೆ, ಮಾತು, ಸಂತೋಷ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಬುಧನು ಮೇ ತಿಂಗಳಲ್ಲಿ ಮತ್ತೊಮ್ಮೆ ತನ್ನ ಚಿಹ್ನೆಯನ್ನು ಬದಲಾಯಿಸುತ್ತಿದ್ಧಾನೆ.

ಮೇ 31ರ ಮಧ್ಯಾಹ್ನ ಬುಧನು ಮೇಷ ರಾಶಿಯನ್ನು ಬಿಟ್ಟು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜೂನ್ 14ರವರೆಗೆ ಇದೇ ರಾಶಿಯಲ್ಲಿರುತ್ತಾರೆ. ಸೂರ್ಯ, ಗುರು ಮತ್ತು ಶುಕ್ರ ಈಗಾಗಲೇ ಈ ರಾಶಿಯಲ್ಲಿದೆ. ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ ಬುಧ ಸಂಕ್ರಮಣವು ಬುಧಾದಿತ್ಯ ಯೋಗ, ಗಜಲಕ್ಷ್ಮಿ ರಾಜಯೋಗ ಮತ್ತು ಲಕ್ಷ್ಮೀನಾರಾಯಣ ಯೋಗ ಸೇರಿದಂತೆ ಅನೇಕ ಮಂಗಳಕರ ಘಟನೆಗಳನ್ನು ಸೃಷ್ಟಿಸುತ್ತದೆ . ಇದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಆದರೆ ಕೆಲವರು ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬುಧ ಸಂಕ್ರಮಣದಿಂದ ದ್ವಾದಶ ರಾಶಿಗಳಿಗೆ ಯಾವ ರೀತಿ ಫಲ ದೊರೆಯಲಿದೆ ನೋಡೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಬುಧ ಸಂಕ್ರಮಣವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ನಿರ್ಧಾರಗಳು ಯಶಸ್ಸಿಗೆ ದಾರಿ ಮಾಡಿಕೊಡುತ್ತವೆ. ಇಷ್ಟು ದಿನ ನೀವು ಮಾಡಿದ ಕೆಲಸಕ್ಕೆ ಪ್ರತಿಫಲ ದೊರೆಯಲಿದೆ. ಹಳೆಯ ಹೂಡಿಕೆಗಳಿಂದ ಲಾಭ ದೊರೆಯಲಿದೆ. ವ್ಯಾಪಾರ ವಿಸ್ತರಿಸುತ್ತದೆ. ಈ ಸಮಯದಲ್ಲಿ ಮೇಷ ರಾಶಿಯವರು ನಿರ್ಗತಿಕರಿಗೆ ಹಸಿರು ವಸ್ತುಗಳನ್ನು ದಾನ ಮಾಡಬೇಕು.

ವೃಷಭ ರಾಶಿ

ಬುಧನು ವೃಷಭ ರಾಶಿಯನ್ನು ಪ್ರವೇಶಿಸಿದಾಗ ಅವರ ಅದೃಷ್ಟ ಹೆಚ್ಚುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ಅರ್ಧಕ್ಕೆ ನಿಲ್ಲಿಸಿದ ಕೆಲಸಗಳನ್ನು ಮಾಡಲು ಬಯಸುತ್ತಾರೆ. ಮಾನಸಿಕ ನೆಮ್ಮದಿ ಸಿಗುತ್ತದೆ. ನಿಮ್ಮ ಎಲ್ಲಾ ಕನಸುಗಳು ನನಸಾಗುತ್ತವೆ. ಆರಂಭಿಸಿದ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತವೆ. ಕಚೇರಿಯಲ್ಲಿ ಪ್ರತಿಭೆಯನ್ನು ಪ್ರದರ್ಶಿಸಲು ಹಲವು ಅವಕಾಶಗಳಿವೆ. ಹಸಿರು ಬಣ್ಣದ ಬಟ್ಟೆಗಳನ್ನು ದಾನ ಮಾಡಿದರೆ ಇನ್ನಷ್ಟು ಶುಭ ಫಲ ದೊರೆಯುತ್ತದೆ.

ಮಿಥುನ ರಾಶಿ

ಬುಧ ಸಂಕ್ರಮಣವು ಮಿಥುನ ರಾಶಿಯವರ ಜೀವನದಲ್ಲಿ ಏರಿಳಿತಗಳನ್ನು ಉಂಟುಮಾಡುತ್ತದೆ. ಈ ರಾಶಿಯವರು ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಗತಕಾಲದ ನೆನಪುಗಳಿಂದ ಮನಸ್ಸು ವಿಚಲಿತವಾಗುತ್ತದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುತ್ತಾರೆ. ಅಶುಭ ಪರಿಣಾಮಗಳನ್ನು ತಪ್ಪಿಸಲು ಪ್ರತಿ ಗುರುವಾರ ಹೆಸರುಕಾಳನ್ನು ದಾನ ಮಾಡಬೇಕು . ಅವುಗಳನ್ನು ತಿನ್ನುವುದು ಸಹ ಒಳ್ಳೆಯದು.

ಕರ್ಕಾಟಕ ರಾಶಿ

ಈ ರಾಶಿಯವರಿಗೆ ಬಂಧು ಮಿತ್ರರಿಂದ ಬೆಂಬಲ ದೊರೆಯುತ್ತದೆ. ಹೊಸ ಆಲೋಚನೆಗಳೊಂದಿಗೆ ಮಾಡಿದ ಕೆಲಸಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ. ಕಚೇರಿಯಲ್ಲಿನ ಮೇಲಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ವ್ಯಾಪಾರದಲ್ಲಿ ಲಾಭವಿರುತ್ತದೆ, ಸಂತೋಷ ಇರುತ್ತದೆ. ಸಂಗಾತಿಯೊಂದಿಗಿನ ಬಾಂಧವ್ಯ ಬಲವಾಗಿರುತ್ತದೆ.

ಸಿಂಹ ರಾಶಿ

ಸಾಮಾಜಿಕ ಪ್ರತಿಷ್ಠೆ ಹೆಚ್ಚುತ್ತದೆ. ಕಚೇರಿಯಲ್ಲಿ ನಿಮ್ಮ ಸಂವಹನ ಕೌಶಲ್ಯಗಳನ್ನು ಪ್ರಶಂಸಿಸಲಾಗುತ್ತದೆ. ಬಡ್ತಿ ದೊರೆಯುವ ಸಾಧ್ಯತೆಗಳಿವೆ. ವ್ಯಾಪಾರದಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ಹಿರಿಯರ ಸಲಹೆಯನ್ನು ಸಹ ಎಚ್ಚರಿಕೆಯಿಂದ ಆಲಿಸಿದರೆ ಪ್ರಗತಿಯ ದಾರಿ ಇನ್ನಷು ಸುಲಭವಾಗಬಹುದು. ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸಲು ಬುಧನಿಗೆ ಸಂಬಂಧಿಸಿದ ಮಂತ್ರಗಳನ್ನು ಪ್ರತಿದಿನ ಜಪಿಸಬೇಕು.

ಕನ್ಯಾರಾಶಿ

ಬುಧದ ಸಂಕ್ರಮಣ ಪ್ರಭಾವದಿಂದಾಗಿ ಕನ್ಯಾ ರಾಶಿಯವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಗೊಂದಲಕ್ಕೊಳಗಾಗುತ್ತಾರೆ. ಆದರೆ ವಿದ್ಯಾರ್ಥಿಗಳು ಮತ್ತು ನ್ಯಾಯಶಾಸ್ತ್ರ ಮತ್ತು ಸಂಸ್ಕೃತಿಯಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ವೃತ್ತಿಯಲ್ಲಿ ಪ್ರಗತಿ ಹೊಂದುತ್ತಾರೆ. ಜೀವನದಲ್ಲಿ ಹೊಸ ವಿಷಯಗಳನ್ನು ಅನ್ವೇಷಿಸಲು ಆಸಕ್ತಿ ಉಂಟಾಗುತ್ತದೆ.

ತುಲಾ ರಾಶಿ

ಹೂಡಿಕೆಗಳು ಉತ್ತಮ ಆದಾಯವನ್ನು ನೀಡುತ್ತವೆ. ವೃತ್ತಿಯಲ್ಲಿ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ಕೆಲಸವು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ನೀವು ಆರ್ಥಿಕ ಲಾಭವನ್ನು ಪಡೆಯುತ್ತೀರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಬುಧನ ಕೃಪೆಗಾಗಿ ಸಮಾಜ ಸೇವೆಯಲ್ಲಿ ತೊಡಗುವಿರಿ. ಬಡವರಿಗೆ ಕೈಲಾದಷ್ಟು ಸಹಾಯ ಮಾಡಬೇಕು.

ವೃಶ್ಚಿಕ ರಾಶಿ

ಬುಧನ ಸಂಚಾರದಿಂದ ವೃಶ್ಚಿಕ ರಾಶಿಯವರು ತಮ್ಮ ವ್ಯಾಪಾರವನ್ನು ವಿಸ್ತರಿಸುತ್ತಾರೆ. ಕಚೇರಿಯಲ್ಲಿ ಮೆಚ್ಚುಗೆ ದೊರೆಯುತ್ತದೆ. ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೀರಿ. ಸಂಬಂಧಗಳ ನಡುವಿನ ಸಮಸ್ಯೆಗಳನ್ನು ಪರಿಹರಿಸಲು ಈ ಸಮಯ ಸೂಕ್ತವಾಗಿದೆ. ನೀವು ಹಸಿರು ವಸ್ತುಗಳನ್ನು ನಿಮ್ಮೊಂದಿಗೆ ಇಟ್ಟುಕೊಂಡರೆ, ನೀವು ಬುಧನ ಅನುಗ್ರಹವನ್ನು ಪಡೆಯುತ್ತೀರಿ .

ಧನು ರಾಶಿ

ಬುಧನ ಸಂಕ್ರಮಣದಿಂದ ಧನು ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗುತ್ತವೆ. ಕಠಿಣ ಪರಿಶ್ರಮವು ಉತ್ತಮ ಯಶಸ್ಸಿಗೆ ಕಾರಣವಾಗುತ್ತದೆ. ಸೋಮಾರಿತನವನ್ನು ತಪ್ಪಿಸಿ. ಅತಿಯಾದ ಖರ್ಚು ಬೇಸರಕ್ಕೆ ಕಾರಣವಾಗಬಹುದು. ಹಣವನ್ನು ಉಳಿಸಲು ಪ್ರಯತ್ನಿಸಿ. ವೃತ್ತಿ ಬೆಳವಣಿಗೆಯ ಈ ಸಮಯದಲ್ಲಿ ಹೊಸ ಕೋರ್ಸ್‌ಗಳನ್ನು ಕಲಿಯುವುದು ಒಳ್ಳೆಯದು.

ಮಕರ ರಾಶಿ

ಬುಧನು ಮಕರ ರಾಶಿಯವರಿಗೆ ಸಂತೋಷ ತರುತ್ತಾನೆ. ಕುಟುಂಬದೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ. ಆತ್ಮಸ್ಥೈರ್ಯ ಹೆಚ್ಚುತ್ತದೆ. ಆಲೋಚನೆಗಳೊಂದಿಗೆ ಮಾಡಿದ ಕಾರ್ಯಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಆರ್ಥಿಕ ಲಾಭದ ಅವಕಾಶಗಳನ್ನು ಹೆಚ್ಚಿಸುತ್ತದೆ. ಗಣಪತಿಯನ್ನು ಪೂಜಿಸುವುದರಿಂದ ಅನೇಕ ಶುಭ ಫಲಗಳು ದೊರೆಯುತ್ತವೆ.

ಕುಂಭ ರಾಶಿ

ಕುಂಭ ರಾಶಿಯಲ್ಲಿ ಬುಧ ಸಂಕ್ರಮಣವು ಜೀವನದಲ್ಲಿ ಧನಾತ್ಮಕತೆಯನ್ನು ಹೆಚ್ಚಿಸುತ್ತದೆ. ಮಾನಸಿಕವಾಗಿ ಬಲಗೊಳಿಸುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಾರೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲಿದ್ದೀರಿ. ವೃತ್ತಿ ಸಮಸ್ಯೆಗಳು ದೂರವಾಗುತ್ತವೆ. ಗುರಿಗಳ ಮೇಲೆ ಕೇಂದ್ರೀಕರಿಸಿ. ಹೊಸ ಕೌಶಲ್ಯಗಳನ್ನು ಕಲಿಯುವುದು ವೃತ್ತಿ ಬೆಳವಣಿಗೆಗೆ ಅನೇಕ ಅವಕಾಶಗಳನ್ನು ನೀಡುತ್ತದೆ. ಮೋದಕ ಅರ್ಪಿಸಿ ಗಣೇಶನ ಪೂಜೆ ಮಾಡಿದರೆ ಇನ್ನಷ್ಟು ಒಳ್ಳೆಯದಾಗುತ್ತದೆ.

ಮೀನ ರಾಶಿ

ಬುಧ ಸಂಕ್ರಮಣದಿಂದ ಮೀನ ರಾಶಿಯವರ ಜೀವನದಲ್ಲಿ ಕೊಂಚ ಏರು ಪೇರು ಉಂಟಾಗುತ್ತದೆ. ಈ ಸಮಯದಲ್ಲಿ ಏಕಾಗ್ರತೆಯ ಕೊರತೆ ಇರುತ್ತದೆ. ವೃತ್ತಿಯಲ್ಲಿ ಸವಾಲುಗಳು ಹೆಚ್ಚಾಗಲಿವೆ. ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ. ಕಚೇರಿಯಲ್ಲಿ ಕೆಲಸದ ನಿಮಿತ್ತ ಹೆಚ್ಚು ಸಮಯ ಕಳೆಯಬೇಕಾಗುತ್ತದೆ. ಇದರಿಂದಾಗಿ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಈ ಅವಧಿಯಲ್ಲಿ ಯಾವುದೇ ವ್ಯಾಪಾರ ಆರಂಭಿಸಬೇಡಿ. ಈ ಸಮಯದಲ್ಲಿ ಹಿತ್ತಾಳೆ, ಹೆಸರುಕಾಳು ಹಣ್ಣುಗಳನ್ನು ದಾನ ಮಾಡುವುದು ಒಳ್ಳೆಯದು .

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.