Mercury Transit: ಏ.4 ರಂದು ಮೇಷ ರಾಶಿಗೆ ಬುಧನ ಪ್ರವೇಶ, 3 ರಾಶಿಯವರಿಗೆ ನಕಾರಾತ್ಮಕ ಫಲಿತಾಂಶ; ಇದರಿಂದ ಪಾರಾಗುವುದು ಹೇಗೆ?
Mercury Transit: ಏಪ್ರಿಲ್ 4 ರಂದು, ಗ್ರಹಗಳ ಅಧಿಪತಿ ಬುಧನು ತನ್ನ ಸ್ಥಾನವನ್ನು ಬದಲಾಯಿಸಲಿದ್ದಾನೆ. ಬುಧನು ಮೇಷ ರಾಶಿಯಲ್ಲಿ ಅಸ್ತಮಿಸಲಿದ್ದು, ಈ ಕಾರಣದಿಂದಾಗಿ ಕೆಲವು ರಾಶಿಚಕ್ರದ ಜನರ ಜೀವನದಲ್ಲಿ ಮೇಲೆ ಪರಿಣಾಮ ಬೀರಲಿದ್ದಾರೆ. ಅಂಥವರು ಬಹಳ ಜಾಗರೂಕರಾಗಿರಬೇಕು. ಪ್ರತಿ ಹೆಜ್ಜೆಯಲ್ಲೂ ಎಚ್ಚರದಿಂದ ಇರಬೇಕು.
ಬುಧ ಸಂಕ್ರಮಣ 2024: ಬುಧನು ಪ್ರಸ್ತುತ ಮೇಷ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿ ಸಾಗುತ್ತಿದ್ದಾನೆ. ಏಪ್ರಿಲ್ 4, ಗುರುವಾರದಂದು ತನ್ನ ಸ್ಥಾನವನ್ನು ಬದಲಿಸುತ್ತಿದ್ದಾನೆ. ಬುಧನು ಮೇಷ ರಾಶಿಯಲ್ಲಿ ಅಸ್ತಮಿಸಲಿದ್ದಾನೆ.
ಬುಧದ ರಾಶಿ ಬದಲಾವಣೆಯಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು ಆದರೆ ಕೆಲವರಿಗೆ ಕಷ್ಟದ ಸಮಯ ಪ್ರಾರಂಭವಾಗಬಹುದು. ಮೇಷರಾಶಿಯಲ್ಲಿ ಬುಧ ಗ್ರಹವು ನೆಲೆಗೊಳ್ಳುವುದರಿಂದ ಯಾವ ರಾಶಿಯವರು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ನೋಡೋಣ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಬುಧನ ಸ್ಥಾನ ಬದಲಾವಣೆ ಶುಭವಲ್ಲ. ಈ ರಾಶಿಯವರು ಹಣಕಾಸಿನ ಪರಿಸ್ಥಿತಿ ಬದಲಾಗಲಿದೆ. ಆರ್ಥಿಕವಾಗಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಯಾವ ಕೆಲಸವಾದರೂ ನಕಾರಾತ್ಮಕ ಫಲಿತಾಂಶ ಉಂಟಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯದ ಪರಿಸ್ಥಿತಿ ಉದ್ಭವಿಸಬಹುದು. ಆರೋಗ್ಯವೂ ಹದಗೆಡುವ ಸಾಧ್ಯತೆ ಇದೆ. ಆದ್ದರಿಂದ ಈ ರಾಶಿಯವರು ಪ್ರತಿಯೊಂದು ಕೆಲಸದಲ್ಲೂ ಎಚ್ಚರಿಕೆಯಿಂದ ಇರಬೇಕು.
ವೃಶ್ಚಿಕ ರಾಶಿ
ಮೇಷ ರಾಶಿಯಲ್ಲಿ ಬುಧನ ಸಂಚಾರವು ವೃಶ್ಚಿಕ ರಾಶಿಯವರಿಗೆ ಕೂಡಾ ಅಷ್ಟು ಒಳ್ಳೆಯದಲ್ಲ. ಈ ರಾಶಿಯವರಿಗೆ ವೃತ್ತಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಾಗ್ವಾದದ ಸನ್ನಿವೇಶ ಉಂಟಾಗಬಹುದು. ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅತಿಯಾದ ಖರ್ಚಿನಿಂದ ನೀವು ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ. ಏನೇ ಪರಿಸ್ಥಿತಿ ಎದುರಾದರೂ ತಾಳ್ಮೆಯಿಂದ ನಿಭಾಯಿಸಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಬುಧನ ಸಂಚಾರದಿಂದ ಆರ್ಥಿಕ ಜೀವನದಲ್ಲಿ ಏರಿಳಿತಗಳಿರುತ್ತವೆ. ಜೀವನದಲ್ಲಿ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗಬಹುದು. ಕೆಲಸವನ್ನು ಪೂರ್ಣಗೊಳಿಸಲು ಅಡೆತಡೆಗಳು ಉಂಟಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯದ ಬಗ್ಗೆ ವಿಶೇಷವಾಗಿ ಗಮನ ಹರಿಸಬೇಕು.
ಪರಿಹಾರ
ಬುಧ ಗ್ರಹದ ಸಂಚಾರದಿಂದ ಈ ಮೂರೂ ರಾಶಿಯವರಿಗೆ ಉಂಟಾಗುವ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಲು ಕೆಲವೊಂದು ಪರಿಹಾರಗಳಿವೆ. ಬುಧವಾರ ಹಸುವಿಗೆ ಹಸಿರು ಮೇವನ್ನು ತಿನ್ನಿಸಿ. ಬುಧ ಗ್ರಹವನ್ನು ಮೆಚ್ಚಿಸಿ ಅನುಗ್ರಹ ಪಡೆಯಲು ಓಂ ಬುಮ್ ಬುಧಾಯ ನಮಃ, ಓಂ ಐಂ ಶ್ರೀಂ ಶ್ರೀಂ ಬುಧಾಯ ನಮಃ, ಓಂ ಬ್ರಾಂ ಬ್ರೀಂ ಬ್ರೌನ್ ಸಃ ಬುಧಾಯ ನಮಃ ಎಂಬ ಬೀಜ ಮಂತ್ರಗಳನ್ನು ಪಠಿಸಬೇಕು. ಅಲ್ಲದೆ, ಬುಧವಾರದಂದು ಹಸಿರು ತರಕಾರಿಗಳು ಅಥವಾ ಆಹಾರ ಧಾನ್ಯಗಳನ್ನು ದಾನ ಮಾಡುವ ಮೂಲಕ, ನೀವು ಬುಧನ ಆಶೀರ್ವಾದ ಪಡೆದು ಕಷ್ಟಗಳಿಂದ ಪಾರಾಗಬಹುದು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.