Mercury Venus Transit: ಒಂದೇ ದಿನ ಬುಧ-ಶುಕ್ರ ಸಂಕ್ರಮಣ, 4 ರಾಶಿಯವರಿಗೆ ದುಪ್ಪಟ್ಟು ಲಾಭ; ಗ್ರಹಗಳ ಸ್ಥಾನ ಬಲಪಡಿಸಲು ಏನು ಪರಿಹಾರ?
Mercury Venus Transit: ಮಾರ್ಚ್ 7, ಗುರುವಾರ ಬುಧ ಹಾಗೂ ಶುಕ್ರ ಎರಡೂ ಗ್ರಹಗಳು ಬೇರೆ ರಾಶಿಗೆ ಪ್ರವೇಶಿಸಲಿವೆ. ಬುಧನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರನು ಕೂಡಾ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ 4 ರಾಶಿಯವರ ಜೀವನದಲ್ಲಿ ಆಕಸ್ಮಿಕ ಬದಲಾವಣೆಗಳಾಗಲಿವೆ.
ಬುಧ ಶುಕ್ರ ಸಂಕ್ರಮಣ: ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಸಂಕ್ರಮಣಕ್ಕೆ ಬಹಳ ಪ್ರಾಮುಖ್ಯತೆ ಇದೆ. ನಿರ್ದಿಷ್ಟ ಸಮಯದ ನಂತರ ಗ್ರಹಗಳು ತಮ್ಮ ಚಿಹ್ನೆಗಳನ್ನು ಬದಲಾಯಿಸುತ್ತವೆ. ಮಾರ್ಚ್ ತಿಂಗಳಲ್ಲಿ ಅನೇಕ ಗ್ರಹಗಳು ಚಿಹ್ನೆಗಳನ್ನು ಬದಲಾಯಿಸುತ್ತವೆ ಮತ್ತು ಇತರ ಗ್ರಹಗಳೊಂದಿಗೆ ಸಂಯೋಜನೆ ಹೊಂದುತ್ತದೆ. 2 ಪ್ರಮುಖ ಗ್ರಹಗಳು ಒಂದೇ ದಿನದಲ್ಲಿ ಚಿಹ್ನೆಗಳನ್ನು ಬದಲಾಯಿಸುವುದು ಬಹಳ ಪ್ರಮುಖವಾದುದು.
ಮಾರ್ಚ್ 7 ರಂದು ಗ್ರಹಗಳ ಅಧಿಪತಿ ಬುಧನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರನು ಕೂಡಾ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಒಂದೇ ದಿನದಲ್ಲಿ ಬುಧ ಮತ್ತು ಶುಕ್ರ ಸಂಕ್ರಮಣವು 4 ರಾಶಿಗಳಿಗೆ ದುಪಟ್ಟು ಲಾಭ ನೀಡಲಿದೆ. ಜಾತಕದಲ್ಲಿ ಬುಧನು ಬಲವಾಗಿದ್ದರೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಬುಧನು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ. ಬುಧವು ಪ್ರಬಲವಾಗಿರುವುದರಿಂದ ವ್ಯಕ್ತಿಯ ಸಂವಹನ ಕೌಶಲ್ಯವು ಅತ್ಯುತ್ತಮವಾಗಿರುತ್ತದೆ. ಬುದ್ಧಿವಂತರಾಗಲಿದ್ದೀರಿ. ಕೆಲಸದಲ್ಲಿ ಬಹಳ ಸಕ್ರಿಯರಾಗಿರಲಿದ್ದೀರಿ. ವ್ಯವಹಾರದಲ್ಲಿ ಯಶಸ್ವಿಯಾಗುತ್ತಾರೆ.
ಶುಕ್ರನು ಮಂಗಳಕರಾಗಿದ್ದರೆ ವ್ಯಕ್ತಿಯ ದಾಂಪತ್ಯ ಜೀವನವು ಯಾವುದೇ ಅಡೆತಡೆಗಳಿಲ್ಲದೆ ಸಾಗುತ್ತದೆ. ಪತಿ-ಪತ್ನಿಯರ ನಡುವೆ ಪ್ರೀತಿ ಹೆಚ್ಚುತ್ತದೆ. ಪ್ರೀತಿಯಲ್ಲಿರುವವರ ಜೀವನದಲ್ಲಿ ಪ್ರಣಯ ಹೆಚ್ಚಾಗುತ್ತದೆ. ಅನೇಕ ಭೌತಿಕ ಸುಖಗಳನ್ನು ಪಡೆಯಲಿದ್ದೀರಿ. ಸಾಹಿತ್ಯ ಮತ್ತು ಕಲೆಯಲ್ಲಿ ಹೆಚ್ಚು ಆಸಕ್ತಿ ಉಂಟಾಗುತ್ತದೆ. ಈ ಎರಡು ಗ್ರಹಗಳ ಸಂಚಾರದಿಂದಾಗಿ ಮಾಧ್ಯಮ ಮತ್ತು ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಜನರು ತಮ್ಮ ವೃತ್ತಿಜೀವನದಲ್ಲಿ ಉತ್ಕೃಷ್ಟರಾಗುತ್ತಾರೆ. ನಿಮ್ಮ ಕೆಲಸಕ್ಕೆ ಮನ್ನಣೆ ದೊರೆಯಲಿದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ಈ ಎರಡು ಗ್ರಹಗಳ ಸಂಚಾರವು ಯಾವ ರಾಶಿಯವರಿಗೆ ಉತ್ತಮ ಫಲ ನೀಡಲಿದೆ ನೋಡೋಣ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ 9ನೇ ಮನೆಯಲ್ಲಿ ಬುಧ ಸಂಚಾರ ಹಾಗೂ ಶುಕ್ರ 8 ಮನೆಯಲ್ಲಿ ಸಾಗುತ್ತಾನೆ. ಈ ಎರಡು ಗ್ರಹಗಳ ಪ್ರಭಾವದಿಂದಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಅನುಕೂಲಕರ ಅವಕಾಶವಿರುತ್ತದೆ. ವಿದೇಶದಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಮೇಲಧಿಕಾರಿಗಳು ಉದ್ಯೋಗದಲ್ಲಿ ನಿಮ್ಮ ಆಲೋಚನೆಗಳನ್ನು ಗೌರವಿಸುತ್ತಾರೆ. ಆರ್ಥಿಕವಾಗಿ, ಕರ್ಕಾಟಕ ರಾಶಿಯವರು ನಿರೀಕ್ಷಿತ ಲಾಭವನ್ನು ಪಡೆಯುತ್ತಾರೆ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮಲ್ಲಿ ಆಧ್ಯಾತ್ಮಿಕತೆ ಬೆಳೆಯುತ್ತದೆ.
ವೃಶ್ಚಿಕ ರಾಶಿ
ಬುಧ ಸಂಕ್ರಮಣವು ವೃಶ್ಚಿಕ ರಾಶಿಯ 5ನೇ ಮನೆಯಲ್ಲಿ ನಡೆದರೆ, ಶುಕ್ರನ ಸಂಚಾರವು 4ನೇ ಮನೆಯಲ್ಲಿ ನಡೆಯುತ್ತದೆ. ಈ ಎರಡು ಗ್ರಹಗಳ ಸಂಚಾರವು ವೃತ್ತಿಪರವಾಗಿ ಕೆಲವು ಲಾಭಗಳನ್ನು ತರುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ವೃತ್ತಿಜೀವನವು ಉತ್ತಮವಾಗಿರುತ್ತದೆ. ಆರ್ಥಿಕವಾಗಿ ತೃಪ್ತಿ. ಭವಿಷ್ಯದಲ್ಲಿ ನಿಮಗೆ ಅನುಕೂಲವಾಗುವ ಸಂಪತ್ತನ್ನು ನೀವು ಪಡೆಯುತ್ತೀರಿ. ನೀವು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಕೆಲವು ವೈಯಕ್ತಿಕ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳದಿರುವುದು ಉತ್ತಮ.
ಧನು ರಾಶಿ
ಧನು ರಾಶಿಯ ನಾಲ್ಕನೇ ಮನೆಯಲ್ಲಿ ಬುಧ ಸಂಕ್ರಮಿಸಿದರೆ, ಶುಕ್ರ ಮೂರನೇ ಮನೆಯಲ್ಲಿ ಸಾಗುತ್ತಾನೆ. ಇವುಗಳ ಪ್ರಭಾವದಿಂದಾಗಿ ನೀವು ವೃತ್ತಿಜೀವನದ ದೃಷ್ಟಿಯಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವ್ಯಾಪಾರಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುವಿರಿ. ಬುಧ ಶುಕ್ರನ ಸಂಚಾರವು ಅದೃಷ್ಟವನ್ನು ತರಲಿದೆ. ಬುದ್ಧಿವಂತಿಕೆಯಿಂದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಿ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದರೆ ಲಾಭ ಸಿಗುವ ಸಾಧ್ಯತೆ ಇದೆ.
ಬುಧದ ಸ್ಥಾನವನ್ನು ಬಲಪಡಿಸಲು ಪರಿಹಾರಗಳು
ನಿಮ್ಮ ಜಾತಕದಲ್ಲಿ ಬುಧನ ಸ್ಥಾನ ದುರ್ಬಲವಾಗಿದ್ದರೆ ರುದ್ರಾಕ್ಷ ಮಾಲೆಯಲ್ಲಿ ಹಸಿರು ರತ್ನದ ಉಂಗುರವನ್ನು ಧರಿಸಿದರೆ ಬುಧ ಗ್ರಹದ ಆಶೀರ್ವಾದ ಸಿಗುತ್ತದೆ. ಸಹಸ್ರನಾಮ ಪಠಿಸುವುದರೊಂದಿಗೆ ವಿಷ್ಣುವಿನ ಆರಾಧನೆ ಮಾಡಿ. ಸಾಧ್ಯವಾದರೆ ಬುಧವಾರ ಉಪವಾಸ ಮಾಡಿ.
ಶುಕ್ರನ ಸ್ಥಾನ ಬಲಪಡಿಸಲು ಪರಿಹಾರಗಳು
ಜಾತಕದಲ್ಲಿ ಶುಕ್ರನ ಸ್ಥಾನವನ್ನು ಬಲಪಡಿಸಲು ನೀವು 6 ಮುಖದ ರುದ್ರಾಕ್ಷಿ ಮಾಲೆಯನ್ನು ಧರಿಸಬೇಕು. ಇದು ನಿಮಗೆ ಅದೃಷ್ಟವನ್ನು ತರುತ್ತದೆ. ಲಕ್ಷ್ಮಿ ದೇವಿಯನ್ನು ನಿಯಮಿತವಾಗಿ ಪೂಜಿಸಬೇಕು. ಜೊತೆಗೆ ಶ್ರೀಸೂಕ್ತವನ್ನು ಪಠಿಸಬೇಕು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
