ಮೇಷ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀ ಕ್ರೋಧಿ ನಾಮ ಸಂವತ್ಸರದಲ್ಲಿ ಇವರಿಗೆ ಶಾಂತಿ, ಸಂತಸ, ನೆಮ್ಮದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೇಷ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀ ಕ್ರೋಧಿ ನಾಮ ಸಂವತ್ಸರದಲ್ಲಿ ಇವರಿಗೆ ಶಾಂತಿ, ಸಂತಸ, ನೆಮ್ಮದಿ

ಮೇಷ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀ ಕ್ರೋಧಿ ನಾಮ ಸಂವತ್ಸರದಲ್ಲಿ ಇವರಿಗೆ ಶಾಂತಿ, ಸಂತಸ, ನೆಮ್ಮದಿ

ಮೇಷ ರಾಶಿಯ ಯುಗಾದಿ ವರ್ಷ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಮೇಷ ರಾಶಿಯ ಜಾತಕರಿಗೆ ಈ ವರ್ಷ ಅನುಕೂಲಕರ ಫಲಿತಾಂಶಗಳಿವೆ. ಇದು ನಿಮಗೆ ನೆಮ್ಮದಿ ಸಿಗುವ, ನಿಮ್ಮ ನೆಮ್ಮದಿ ಹೆಚ್ಚಾಗುವ ವರ್ಷ. ಯಾವ ದೇವರ ಆರಾಧನೆ ಒಳ್ಳೆಯದು ಎಂಬ ಮಾಹಿತಿಯನ್ನೂ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಶಾಸ್ತ್ರಿ ಈ ಬರಹದಲ್ಲಿ ನೀಡಿದ್ದಾರೆ.

ಮೇಷ ರಾಶಿಯವರ ಶ್ರೀ ಕ್ರೋಧಿ ಸಂವತ್ಸರದ ರಾಶಿಫಲ ಪ್ರಕಾರ ಈ ಸಂವತ್ಸರದಲ್ಲಿ  ಹಣ, ಆರೋಗ್ಯ ಸೂಪರ್,ಪ್ರೇಮ, ವೃತ್ತಿ ಪ್ರಗತಿಯ ವಿವರಣೆ ಇದರಲ್ಲಿದೆ. (ಸಾಂಕೇತಿಕ ಚಿತ್ರ)
ಮೇಷ ರಾಶಿಯವರ ಶ್ರೀ ಕ್ರೋಧಿ ಸಂವತ್ಸರದ ರಾಶಿಫಲ ಪ್ರಕಾರ ಈ ಸಂವತ್ಸರದಲ್ಲಿ ಹಣ, ಆರೋಗ್ಯ ಸೂಪರ್,ಪ್ರೇಮ, ವೃತ್ತಿ ಪ್ರಗತಿಯ ವಿವರಣೆ ಇದರಲ್ಲಿದೆ. (ಸಾಂಕೇತಿಕ ಚಿತ್ರ) (canva)

ಯುಗಾದಿ ವರ್ಷ ಭವಿಷ್ಯ 2024: ಯುಗಾದಿ ಹಬ್ಬದ ಆಚರಣೆಯೊಂದಿಗೆ ಶ್ರೀ ಕ್ರೋಧಿ ನಾಮ ಸಂವತ್ಸರ ಶುರುವಾಗುತ್ತದೆ. ಚಿಲಕಮರ್ತಿ ಪಂಚಾಂಗದ ಲೆಕ್ಕಾಚಾರದ ಪ್ರಕಾರ, ಈ ಸಂವತ್ಸರದಲ್ಲಿ ಮೇಷ ರಾಶಿಯವರು ಹೆಚ್ಚು ಅನುಕೂಲಕರ ಫಲಗಳನ್ನು ಪಡೆಯಲಿದ್ದಾರೆ. ಗುರುವು ಧನಸ್ಥಾನದಲ್ಲಿ, ಶನಿಯು ಲಾಭಸ್ಥಾನದ ಮುಂಧೆ, ರಾಹು ವ್ಯಯಸ್ಥಾನದ ಎದುರು, ಕೇತುವು ಆರನೇ ಮನೆಯಲ್ಲಿ ಅನುಕೂಲಕರವಾಗಿ ಸಂಕ್ರಮಿಸುವ ಕಾರಣ, ಮೇಷ ರಾಶಿಯವರಿಗೆ ಈ ವರ್ಷ ಎಲ್ಲ ರೀತಿಯಲ್ಲೂ ಅನುಕೂಲಕರ ಫಲಿತಾಂಶ.

ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಕ್ರೋಧಿ ನಾಮ ಸಂವತ್ಸರವು ಮೇಷ ರಾಶಿಯವರಿಗೆ ಕೂಡಿ ಬರುವ ವರ್ಷ. ಮೇಷ ರಾಶಿಯ ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಅಭಿವೃದ್ಧಿ ಹೊಂದುತ್ತಾರೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ಬಡ್ತಿ ಮತ್ತು ಇತರೆ ಉದ್ಯೋಗ ಕೊಡುಗೆಗಳನ್ನು ನಿರೀಕ್ಷಿಸಬಹುದಾದ ವರ್ಷ ಇದಾಗಿದೆ.

ವಿದೇಶ ಪ್ರಯಾಣ ಇತ್ಯಾದಿ ಅನುಕೂಲವಾಗಲಿದೆ. ಉದ್ಯಮಿಗಳಿಗೆ ಲಾಭದಾಯಕ. ಯೋಜಿತ ಕಾರ್ಯಗಳು ಯೋಜಿತ ರೀತಿಯಲ್ಲಿ ಪೂರ್ಣಗೊಳ್ಳಲಿವೆ. ಧನ ಮತ್ತು ಮಾತಿನ ಮನೆಯಲ್ಲಿ ಗುರುವಿನ ಪ್ರಭಾವದಿಂದ ಮೇಷ ರಾಶಿಯವರಿಗೆ ಈ ವರ್ಷ ಧನಲಾಭ, ದ್ರವ್ಯ ಲಾಭ, ಧನ ವೃದ್ಧಿ, ಕೌಟುಂಬಿಕ ಸೌಕರ್ಯ ಮತ್ತು ಸಂತೋಷ ಸಿಗಲಿದೆ.

ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಲಾಭದಾಯಕ ಸ್ಥಾನದಲ್ಲಿ ಶನಿಯ ಪ್ರಭಾವವು ಹೊಸ ಮನೆ ಮತ್ತು ವ್ಯಾಪಾರ ವಿಷಯಗಳಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಧೈರ್ಯದಿಂದ ಮುನ್ನಡೆಯಿರಿ. ದೈವ ಬಲವೂ ಕೂಡಿ ಬರುತ್ತದೆ. ಈ ಕ್ರೋಧಿ ನಾಮ ಸಂವತ್ಸರದಲ್ಲಿ ನೀವು ನಿಮ್ಮ ಮಾತಿಗೆ ಎದುರಾಡುವವರು ಇರಲ್ಲ. ಶತ್ರುಗಳ ಮೇಲೆ ಜಯವನ್ನು ಪಡೆಯುವಿರಿ.

ವ್ಯಯ ಸ್ಥಾನದಲ್ಲಿ ರಾಹುವಿನ ಪ್ರಭಾವವು ವ್ಯಸನಗಳನ್ನು ತಪ್ಪಿಸುವ ಸೂಚನೆ ನೀಡುತ್ತಿದೆ. ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಧನಾತ್ಮಕ ಫಲಿತಾಂಶಗಳನ್ನು ಹೊಂದುತ್ತಾರೆ. ವಿದೇಶಿ ಶಿಕ್ಷಣಕ್ಕಾಗಿ ಮಾಡುವ ಪ್ರಯತ್ನಗಳು ಫಲಪ್ರದವಾಗುತ್ತವೆ.

ಈ ಸಂವತ್ಸರದಲ್ಲಿ ಮಹಿಳೆಯರಿಗೆ ಕೌಟುಂಬಿಕ ನೆಮ್ಮದಿ ಮತ್ತು ಮಾನಸಿಕ ಸಂತೋಷ ಸಿಗಲಿದೆ. ಗೃಹ ಲಾಭ, ಆಸ್ತಿ ಲಾಭ ಮತ್ತು ವಸ್ತು ಲಾಭ ಇರುತ್ತದೆ. ಕೀರ್ತಿಯೂ ಇರಲಿದೆ. ರೈತರು ಮತ್ತು ಚಿತ್ರರಂಗದವರು ಈ ವರ್ಷ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ.

ಈ ಸಂವತ್ಸವರದಲ್ಲಿ ಮೇಷ ರಾಶಿಯವರು ಹೆಚ್ಚು ಶುಭ ಫಲಗಳನ್ನು ಪಡೆಯಬೇಕಾದರೆ ಆದಿತ್ಯ ಹೃದಯಂ ಮತ್ತು ವಿಷ್ಣು ಸಹಸ್ರನಾಮವನ್ನು ನಿತ್ಯವೂ ಪಠಿಸಬೇಕು.

ಮೇಷ ರಾಶಿ- ವೈವಾಹಿಕ ಬದುಕು

ಮೇಷ ರಾಶಿಯವರಿಗೆ ಕ್ರೋಧಿ ನಾಮ ಸಂವತ್ಸರದಲ್ಲಿ ಗುರುಬಲವು ಅನುಕೂಲಕರ. ಹೀಗಾಗಿ ಪ್ರೇಮ ಜೀವನ, ವೈವಾಹಿಕ ಬದುಕು ಮುಂತಾದ ವಿಚಾರಗಳಲ್ಲಿ ಅನುಕೂಲ ಇರಲಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಆರಾಮ ಮತ್ತು ಸಂತೋಷದ ಸಮಯವನ್ನು ಕಾಣುವಿರಿ. ಪ್ರೀತಿ, ಪ್ರೇಮದಂತಹ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಮಕ್ಕಳ ಪ್ರಯತ್ನಗಳು ಫಲ ನೀಡುತ್ತವೆ.

ಮೇಷ ರಾಶಿಯವರಿಗೆ ಆರ್ಥಿಕ ಅನುಕೂಲ

ಕ್ರೋಧಿ ನಾಮ ಸಂವತ್ಸರವು ಮೇಷ ರಾಶಿಯವರಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದಕ್ಕೆ ಅತ್ಯಂತ ಅನುಕೂಲಕರವಾಗಿರುವ ವರ್ಷ. ಮೇಷ ರಾಶಿಯವರು ಈ ಅವಧಿಯಲ್ಲಿ ಜನಪ್ರಿಯತೆ, ಖ್ಯಾತಿ ಮತ್ತು ಆರ್ಥಿಕ ಸಮೃದ್ಧಿಯನ್ನು ಪಡೆಯುತ್ತದೆ. ರಿಯಲ್ ಎಸ್ಟೇಟ್‌ನಂತಹ ಕ್ಷೇತ್ರಗಳಲ್ಲಿ ಹೂಡಿಕೆ ನಿರೀಕ್ಷಿಸಬಹುದು. ಮನೆ ಖರೀದಿಗೆ ಅನುಕೂಲಕರ ವರ್ಷ. ಈ ವರ್ಷವು ಷೇರು ಮಾರುಕಟ್ಟೆ ಮತ್ತು ಊಹಾಪೋಹ ವಲಯಗಳಲ್ಲಿನ ಹೂಡಿಕೆಗಳೊಂದಿಗೆ ಮಿಶ್ರವಾಗಿರುತ್ತದೆ. ಚಿನ್ನ ಮತ್ತು ಬೆಳ್ಳಿ ಖರೀದಿಸುವ ಸುಳಿವುಗಳಿವೆ.

ಮೇಷ ರಾಶಿಯವರ ವೃತ್ತಿ ಬದುಕು

ವೃತ್ತಿ ಬದುಕಿನ ದೃಷ್ಟಿಯಿಂದ ನೋಡಿದರೆ ಈ ಸಂವತ್ಸರದಲ್ಲಿ ಮೇಷ ರಾಶಿಯವರಿಗೆ ಮಿಶ್ರ ಫಲ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರವೇಶವು ಸ್ಪಷ್ಟವಾಗಿದೆ. ಉದ್ಯೋಗಿಗಳು ಬಡ್ತಿ ಮತ್ತು ವರ್ಗಾವಣೆಯನ್ನು ನಿರೀಕ್ಷಿಸಬಹುದು. ಉದ್ಯೋಗ ಬದಲಾವಣೆಯ ಪ್ರಯತ್ನಗಳು ಫಲ ನೀಡುತ್ತವೆ. ವಿದೇಶಿ ಉದ್ಯೋಗಾಕಾಂಕ್ಷಿಗಳಿಗೆ ಈ ವರ್ಷ ಉತ್ತಮ.

ಮೇಷ ರಾಶಿಯವರ ಆರೋಗ್ಯ

ಮೇಷ ರಾಶಿಯವರಿಗೆ ಈ ಸಲದ ಯುಗಾದಿಗೆ ಶುರುವಾಗ ಸಂವತ್ಸರದಲ್ಲಿ ಸಂತೋಷ ಸೇರಿ ಶುಭಫಲಗಳು ಹೆಚ್ಚು. ಆರೋಗ್ಯದ ವಿಷಯದಲ್ಲಿ, ಈ ಸಂವತ್ಸರದಲ್ಲಿ ಶನಿಯು ಅನುಕೂಲಕರವಾಗಿರುವುದರಿಂದ ಮತ್ತು ಗುರುವು ಬಲವನ್ನು ಪಡೆಯುವುದರಿಂದ ಮೇಷ ರಾಶಿಯವರು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಆರೋಗ್ಯವು ಸಂತೋಷವನ್ನು ತರುತ್ತದೆ. ಸೌಕರ್ಯಗಳನ್ನು ಆನಂದಿಸುವಿರಿ.

ಮೇಷ ರಾಶಿಯವರಿಗೆ ಪರಿಹಾರಗಳು

ಕ್ರೋಧಿ ನಾಮ ಸಂವತ್ಸರದಲ್ಲಿ ಮೇಷ ರಾಶಿಯವರಿಗೆ ಹೆಚ್ಚು ಶುಭ ಫಲಗಳು ಸಿಗಬೇಕಾದರೆ, ದುರ್ಗಾದೇವಿಯ ಆರಾಧನೆ, ದೇವಿ ಉಪಾಸನೆ, ಶ್ರೀ ಲಲಿತಾ ಸಹಸ್ರನಾಮಗಳನ್ನು ಪಠಿಸುವುದು, ಸುಬ್ರಹ್ಮಣ್ಯ ಅಷ್ಟಕ ಪಾರಾಯಣ ಮಾಡಬೇಕು. ಇದರಿಂದ ಹೆಚ್ಚಿನ ಶುಭ ಫಲಗಳು ಲಭಿಸುತ್ತವೆ ಎಂದು ಪ್ರಭಾಕರ ಶಾಸ್ತ್ರಿ ಹೇಳುತ್ತಾರೆ.

ಮೇಷ ರಾಶಿಯವರು ಧರಿಸಬೇಕಾದ್ದು ನವರತ್ನದ ಉಂಗುರ. ಜ್ಯೋತಿಷಿ ಬ್ರಹ್ಮಶ್ರೀ ಚಿಲಕಮೃತಿ ಪ್ರಭಾಕರ ಚಕ್ರವರ್ತಿ ಶಾಸ್ತ್ರಿಯವರ ಪ್ರಕಾರ ಸುಬ್ರಹ್ಮಣ್ಯ ಮತ್ತು ದುರ್ಗಾದೇವಿ (ತಾಯಿ) ಮೇಷ ರಾಶಿಯವರು ಪೂಜಿಸಬೇಕಾದ ದೇವ, ದೇವತೆಗಳು.

ನವರತ್ನದ ಉಂಗುರ: ಮೇಷ ರಾಶಿಯವರು ನವರತ್ನದ ಉಂಗುರ ಧರಿಸಬೇಕು. ಅದನ್ನು ಧರಿಸುವುದರಿಂದ ಕುಜಗ್ರಹನ ಅನುಗ್ರಹದಿಂದ ಸಮೃದ್ಧಿ ಮತ್ತು ಯಶಸ್ಸು ದೊರೆಯುತ್ತದೆ.

ಪೂಜಿಸಬೇಕಾದ ದೇವರು: ಮೇಷ ರಾಶಿಯವರು ಪೂಜಿಸಬೇಕಾದ ದೇವರು ಇವರು -ಸೂರ್ಯನಾರಾಯಣಮೂರ್ತಿ ಮತ್ತು ಸುಬ್ರಹ್ಮಣ್ಯ .

ಮೇಷ ರಾಶಿಯ ಮಾಸವಾರು ಯುಗಾದಿ ಭವಿಷ್ಯ

ಏಪ್ರಿಲ್ 2024: ಮೇಷ ರಾಶಿಯವರಿಗೆ ಅನುಕೂಲಕರ ತಿಂಗಳು. ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳಿವೆ. ವಯಸ್ಕರ ಆದಾಯವೂ ಹೆಚ್ಚಾಗುತ್ತದೆ. ಮನೆಗೆಲಸ ಫಲ ನೀಡಲಿದೆ. ಮದುವೆ, ಭೂಮಿ ಮತ್ತು ಮನೆಯಲ್ಲಿ ಲಾಭವಿದೆ.

ಮೇ 2024: ಈ ತಿಂಗಳಲ್ಲಿ ಮೇಷ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳಿವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳಿವೆ. ಮದುವೆಯ ಪ್ರಯತ್ನಗಳು ಫಲ ನೀಡುತ್ತವೆ. ನಿಂದೆಗಳೂ ಮಾಯವಾಗಬಹುದು. ಉದ್ಯಮಿಗಳಿಗೆ ವ್ಯಾಪಾರ ಬೆಳವಣಿಗೆ. ಕೆಲವು ಸಮಸ್ಯೆಗಳು ಬಂದರೂ ಅವು ದೂರವಾಗುತ್ತವೆ.

ಜೂನ್ 2024: ಈ ತಿಂಗಳು ನಿಮಗೆ ಸಾಧಾರಣ ಫಲಿತಾಂಶ. ಪ್ರೇಮ ವ್ಯವಹಾರಗಳಲ್ಲಿ ವಿನಯ ಇದ್ದರೆ ಒಳ್ಳೆಯದು. ಇತರರಿಗೆ ಸ್ವಲ್ಪ ಕಷ್ಟವಾಗಬಹುದು. ಹಣಕಾಸಿನ ಪರಿಸ್ಥಿತಿ ಅನುಕೂಲಕರ. ಜಮೀನು ಮತ್ತು ಮನೆಯ ವಿಷಯಗಳು ಇತ್ಯರ್ಥವಾಗುತ್ತವೆ.

ಜುಲೈ 2024: ಈ ತಿಂಗಳು ಮೇಷ ರಾಶಿಯವರಿಗೆ ಮಧ್ಯಮ ರೀತಿಯಲ್ಲಿ ಅನುಕೂಲಕರ. ಸಂಬಂಧಿಕರು ನಿಮ್ಮ ಸಾಂಗತ್ಯವನ್ನು ಬಯಸುತ್ತಾರೆ. ವ್ಯಾಪಾರ ಲಾಭ ಹೆಚ್ಚಾಗುತ್ತದೆ. ರಾಜಕೀಯ ನಾಯಕರಿಗೆ ಮನ್ನಣೆ. ವೃತ್ತಿಯಲ್ಲಿ ಅನುಕೂಲ. ಯೋಜಿತ ಕಾರ್ಯಗಳು ನೆರವೇರಲಿವೆ. ಗುರು ಮತ್ತು ಶನಿಯ ಬಲದಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.

ಆಗಸ್ಟ್ 2024: ಮೇಷ ರಾಶಿಯವರಿಗೆ ಈ ತಿಂಗಳು ಹೆಚ್ಚು ಅನುಕೂಲಕರವಲ್ಲ. ದೂರದೂರಿನಲ್ಲಿರುವ ನೌಕರರಿಗೆ ಸ್ವಸ್ಥಾನಕ್ಕೆ ಮರಳಿ ವರ್ಗವಾಗುವ ಸಾಧ್ಯತೆ ಇದೆ. ಸಂತಾನ ಭಾಗ್ಯವಿದ್ದರೂ, ಸಣ್ಣ ಪುಟ್ಟ ಸಮಸ್ಯೆಗಳು ಕಿರಿಕಿರಿ ಉಂಟುಮಾಡಬಹುದು. ಆದಾಯ ಹೆಚ್ಚಳದ ಸೂಚನೆ ಇದೆ. ಸ್ವಲ್ಪ ಅಸ್ವಸ್ಥತೆ ಉಂಟಾಗುವ ಸೂಚನೆಯೂ ಇದೆ.

ಸೆಪ್ಟೆಂಬರ್ 2024: ಈ ತಿಂಗಳು ನಿಮಗೆ ಮಧ್ಯಮ ರೀತಿಯಲ್ಲಿ ಅನುಕೂಲಕರ. ಹೊಸ ಪ್ರಯತ್ನಗಳಲ್ಲಿ ಫಲವಿದೆ. ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಉತ್ತಮ. ವಾಹನ ಖರೀದಿ ಅವಕಾಶವಿದೆ. ಭೋಜನ ಮನರಂಜನೆಯಲ್ಲಿ ಭಾಗವಹಿಸುವಿರಿ.

ಅಕ್ಟೋಬರ್ 2024: ಈ ತಿಂಗಳು ಮೇಷ ರಾಶಿಯವರಿಗೆ ಅನುಕೂಲಕರ. ಹೊಸ ಪ್ರಯತ್ನಗಳನ್ನು ಮಾಡುವಿರಿ. ಭೋಜನಕೂಟ, ಮನರಂಜನೆಯಲ್ಲಿ ಭಾಗವಹಿಸುವಿರಿ. ವಸ್ತು ವಾಹನಾದಿಗಳನ್ನು ಖರೀದಿಸುವ ಯೋಗವಿದೆ. ನಿಮ್ಮ ಮನೋಭಿಲಾಷೆಗಳು ಈಡೇರಲಿವೆ.

ನವೆಂಬರ್ 2024: ಮೇಷ ರಾಶಿಯವರಿಗೆ ಈ ತಿಂಗಳು ಸಾಧಾರಣ ಫಲಿತಾಂಶ. ಆದಾಯವಿದ್ದರೂ ಖರ್ಚು-ವೆಚ್ಚಗಳು ಹೆಚ್ಚು. ಸ್ವಲ್ಪ ತೊಂದರೆ ನಿರೀಕ್ಷಿತ. ವಾಹನ ಬದಲಾವಣೆ ಆಲೋಚನೆ ಕಂಡುಬರಲಿದೆ. ಹೊಸ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಿರಿ. ಕರಕುಶಲಕರ್ಮಿಗಳಿಗೆ ಉತ್ತಮ ಫಲ.

ಡಿಸೆಂಬರ್ 2024: ಈ ತಿಂಗಳು ನಿಮಗೆ ಮಧ್ಯಮ ಫಲದಾಯಕವಾಗಿದೆ. ಈ ತಿಂಗಳ ಅವಧಿಯಲ್ಲಿ ತೀರ್ಥಯಾತ್ರೆ ಮಾಡುವ ಆಲೋಚನೆಗಳು ಫಲ ನೀಡುತ್ತವೆ. ಚರ ಮತ್ತು ಸ್ಥಿರಾಸ್ತಿ ವಿಚಾರದಲ್ಲಿನ ಭಿನ್ನಾಭಿಪ್ರಾಯಗಳಿದ್ದರೆ ಅಂಥವು ಬಗೆಹರಿಯಲಿವೆ. ಮದುವೆಯ ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ತಿಂಗಳ ಕೊನೆಯಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ.

ಜನವರಿ 2024: ಮೇಷ ರಾಶಿಯವರಿಗೆ ಈ ತಿಂಗಳು ಅನುಕೂಲಕರವಲ್ಲ. ರಾಜಕಾರಣಿಗಳಿಗೆ ಮನ್ನಣೆ ದೊರೆಯುತ್ತದೆ. ಉದ್ಯಮಿಗಳು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವರು. ಪ್ರಯತ್ನ ಮತ್ತು ಒತ್ತಡ ಇದ್ದರೂ ಅದು ಕಾರ್ಯ ಸಾಧನೆಯ ಮೂಲಕ ಬದಲಾಗುತ್ತದೆ. ವಾಹನ ಚಾಲನೆ ಮಾಡುವಾಗ ಸರಿಯಾದ ಕಾಳಜಿ ವಹಿಸಬೇಕಾದ್ದು ಅವಶ್ಯ.

ಫೆಬ್ರವರಿ 2024 : ಈ ತಿಂಗಳಲ್ಲಿನಿಮಗೆ ಮಧ್ಯಮ ಫಲ. ವಾಹನ, ವಸ್ತು ಇತ್ಯಾದಿ ಖರೀದಿ ಭಾಗ್ಯ. ಹಣದ ಖರ್ಚು ಹೆಚ್ಚು. ಸಣ್ಣಪುಟ್ಟ ಕಿರಿಕಿರಿಗಳು ಇದ್ದೇ ಇರುತ್ತವೆ. ಶುಭ ಕಾರ್ಯ ಸಿದ್ಧಿಯಾಗಲಿದೆ. ಕೌಟುಂಬಿಕ ಪರಿಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ. ರಾಜಕೀಯ ಲಾಭ. ಎದುರಾಳಿಗಳಿಂದ ಕೆಲವು ತೊಂದರೆಗಳು ಉಂಟಾಗುತ್ತವೆ.

ಮಾರ್ಚ್ 2024: ಮೇಷ ರಾಶಿಯವರಿಗೆ ಈ ತಿಂಗಳು ಅನುಕೂಲಕರವಲ್ಲ. ಮದುವೆ ಮುಂತಾದ ಶುಭ ಕಾರ್ಯಗಳಿವೆ. ಕಾರ್ಯಕ್ರಮಗಳು ಲಾಭದಾಯಕವೆನಿಸಲಿವೆ. ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಉತ್ತಮ. ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯನ್ನು ನಿರೀಕ್ಷಿಸಬಹುದು.

  • ಜ್ಯೋತಿಷಿ ಶ್ರೀ ಚಿಲಕಮರ್ತಿ ಪ್ರಭಾಕರ ಶಾಸ್ತ್ರಿ

ಜ್ಯೋತಿಷಿ ಶ್ರೀ ಚಿಲಕಮರ್ತಿ ಪ್ರಭಾಕರ ಶಾಸ್ತ್ರಿ
ಜ್ಯೋತಿಷಿ ಶ್ರೀ ಚಿಲಕಮರ್ತಿ ಪ್ರಭಾಕರ ಶಾಸ್ತ್ರಿ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.