ಹಣಕಾಸು ಭವಿಷ್ಯ ಆಗಸ್ಟ್ 27: ಈ ರಾಶಿಯವರು ಐಷಾರಾಮಿ ವಸ್ತುಗಳಿಗೆ ಹಣ ಖರ್ಚು ಮಾಡಿ ತೊಂದರೆಗೆ ಸಿಲುಕಲಿದ್ದಾರೆ
Money Astrological Predictions August 27, 2024: ಹಣಕಾಸು ಭವಿಷ್ಯ ಆಗಸ್ಟ್ 27ರ ಪ್ರಕಾರ, ಈ ರಾಶಿಯವರು ಐಷಾರಾಮಿ ವಸ್ತುಗಳಿಗೆ ಹಣ ಖರ್ಚು ಮಾಡಿ ತೊಂದರೆಗೆ ಸಿಲುಕಲಿದ್ದಾರೆ. ಈ ರಾಶಿಯವರಿಗೆ ಷೇರು ಹೂಡಿಕೆಯಿಂದ ಲಾಭ. ಉಳಿದ ರಾಶಿಯವರಿಗೆ ಏನಿದೆ ಫಲ, 12 ರಾಶಿಗಳ ಆರ್ಥಿಕ ಭವಿಷ್ಯ ಏನು ಎಂಬಿತ್ಯಾದಿ ವಿವರಗಳು ಇಲ್ಲಿವೆ.
ಹಣಕಾಸು ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲದಲ್ಲಿದೆ. ನೀವು ಅದನ್ನು ಓದಬಹುದು.
ಮೇಷ ರಾಶಿ ಹಣಕಾಸು ಭವಿಷ್ಯ (Aries Money Horoscope)
ಇಂದು ಹಣದ ಹರಿವು ಚೆನ್ನಾಗಿರುತ್ತದೆ. ಆದರೆ ಹಣ ಖರ್ಚು ಮಾಡುವಾಗ ನಿಮ್ಮ ಅಗತ್ಯಗಳಿಗೆ ಮಾತ್ರ ಆದ್ಯತೆ ನೀಡಿ. ಇದು ಹಣವನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಐಷಾರಾಮಿ ವಸ್ತುಗಳಿಗೆ ಅತಿಯಾಗಿ ಖರ್ಚು ಮಾಡಬೇಡಿ ಕೌಟುಂಬಿಕ ಕಾರ್ಯಕ್ರಮಕ್ಕಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು.
ವೃಷಭ ರಾಶಿ ಹಣಕಾಸು ಭವಿಷ್ಯ (Taurus Money Horoscope)
ಸಂಪತ್ತು ಧನಾತ್ಮಕವಾಗಿರುತ್ತದೆ. ಹಿಂದಿನ ಹೂಡಿಕೆಗಳಿಂದ ಉತ್ತಮ ಆದಾಯ ಗಳಿಸಲಿದ್ದೀರಿ. ಆ ಕಾರಣದಿಂದ ಯಾವುದೇ ಹೆಚ್ಚಿನ ಆರ್ಥಿಕ ಸಮಸ್ಯೆಗಳು ಎದುರಾಗುವುದಿಲ್ಲ. ಎಲ್ಲಾ ಬಾಕಿಗಳನ್ನು ನೀವಿಂದು ಕ್ಲಿಯರ್ ಮಾಡಲಿದ್ದೀರಿ. ದಿನದ ದ್ವಿತೀಯಾರ್ಧವು ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಫ್ಯಾಷನ್ ಪರಿಕರಗಳ ಶಾಪಿಂಗ್ಗೆ ಉತ್ತಮವಾಗಿದೆ. ವಿದ್ಯಾರ್ಥಿಗಳು ಇಂದು ಶುಲ್ಕ ಮತ್ತು ಪುಸ್ತಕಗಳಿಗಾಗಿ ಖರ್ಚು ಮಾಡಬೇಕಾಗಬಹುದು.
ಮಿಥುನ ರಾಶಿ ಹಣಕಾಸು ಭವಿಷ್ಯ (Gemini Money Horoscope)
ಇಂದು ನೀವು ಆರ್ಥಿಕವಾಗಿ ಸಮೃದ್ಧರಾಗುತ್ತೀರಿ, ಆದರೆ ಪ್ರಯಾಣ ಮಾಡುವಾಗ ಅಪರಿಚಿತರಿಗೆ ಹಣವನ್ನು ನೀಡಬೇಡಿ. ಸ್ತ್ರೀಯರು ಪೂರ್ವಿಕರ ಆಸ್ತಿಯಿಂದ ಆರ್ಥಿಕ ಲಾಭ ಪಡೆಯಬಹುದು. ಕಳೆದು ಹೋದ ಹಣವನ್ನು ಮರಳಿ ಪಡೆಯುವಲ್ಲಿ ತೊಂದರೆಗಳು ಎದುರಾಗಬಹುದು. ಹಣದ ವಿಚಾರದಲ್ಲಿ ಒಡಹುಟ್ಟಿದವರು ಅಥವಾ ಆಪ್ತರೊಂದಿಗೆ ವಾದ ಮಾಡಬೇಡಿ. ಜವಳಿ, ಸೌಂದರ್ಯವರ್ಧಕ, ಚರ್ಮ ಮತ್ತು ಕಂಪ್ಯೂಟರ್ ಪರಿಕರಗಳಲ್ಲಿ ತೊಡಗಿರುವವರು ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುತ್ತಾರೆ.
ಕಟಕ ರಾಶಿ ಹಣಕಾಸು ಭವಿಷ್ಯ (Cancer Money Horoscope)
ದಿನದ ಮೊದಲಾರ್ಧದಲ್ಲಿ ಹಣಕಾಸಿನ ಸಮಸ್ಯೆಗಳು ನಿಮ್ಮನ್ನು ತೊಂದರೆಗೊಳಿಸಬಹುದು. ಆದರೆ ದಿನವು ದ್ವಿತೀಯಾರ್ಧ ತಲುಪುತ್ತಿದ್ದಂತೆ ವಿಷಯಗಳು ಮತ್ತೆ ಟ್ರ್ಯಾಕ್ ಆಗುತ್ತದೆ. ದಿನದ ಎರಡನೇ ಭಾಗವು ಸ್ನೇಹಿತನೊಂದಿಗೆ ಹಣಕಾಸಿನ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಉತ್ತಮವಾಗಿದೆ.
ಸಿಂಹ ರಾಶಿ ಹಣಕಾಸು ಭವಿಷ್ಯ (Leo Money Horoscope)
ಖರ್ಚಿನ ಬಗ್ಗೆ ಎಚ್ಚರವಿರಲಿ. ಸಂಪತ್ತು ಬಂದರೂ ಭವಿಷ್ಯಕ್ಕಾಗಿ ಉಳಿತಾಯ ಮಾಡುವುದು ನಿಮ್ಮ ಆದ್ಯತೆಯಾಗಿರಬೇಕು. ಇಂದು ವೈದ್ಯಕೀಯ ತುರ್ತುಸ್ಥಿತಿ ಕೂಡ ಬರಲಿದೆ ಮತ್ತು ನಿಮ್ಮ ಬೊಕ್ಕಸದಲ್ಲಿ ಸಾಕಷ್ಟು ಹಣವಿದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಪೀಠೋಪಕರಣಗಳನ್ನು ಖರೀದಿಸಲು ಉತ್ತಮ ದಿನ.
ಕನ್ಯಾ ರಾಶಿ ಆರ್ಥಿಕ ಜಾತಕ (Virgo Money Horoscope)
ಇಂದು ಅನೇಕ ಮೂಲಗಳಿಂದ ಹಣ ಗಳಿಸಲಿದ್ದೀರಿ.ಆದರೆ ನಿಮ್ಮ ಖರ್ಚುಗಳನ್ನು ನಿಯಂತ್ರಿಸಬೇಕಾಗುತ್ತದೆ. ಆಸ್ತಿಗೆ ಸಂಬಂಧಿಸಿದ ಕಾನೂನು ವಿವಾದಗಳಲ್ಲಿ ಗೆಲುವು ನಿಮ್ಮದಾಗುತ್ತದೆ. ಉದ್ಯಮಿಗಳಿಗೆ ವಿದೇಶಿ ಗ್ರಾಹಕರಿಂದ ಆರ್ಥಿಕ ಲಾಭವಾಗಲಿದೆ. ವ್ಯಾಪಾರ ವಿಸ್ತರಣೆಯಾಗಲಿದೆ. ಇಂದು ನೀವು ಹೊಸ ವ್ಯಾಪಾರ, ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಬಹುದು.
ತುಲಾ ರಾಶಿ ಹಣಕಾಸು ಭವಿಷ್ಯ (Libra Money Horoscope)
ಇಂದು ಆಸ್ತಿ ಅಥವಾ ವಾಹನದಂತಹ ಪ್ರಮುಖ ಖರೀದಿ ಬೇಡ. ವಿದೇಶಿ ಕ್ಲೈಂಟ್ಗಳೊಂದಿಗೆ ವ್ಯವಹರಿಸುವ ಉದ್ಯಮಿಗಳು ಮುಂಗಡ ಪಾವತಿಗಳನ್ನು ಸ್ವೀಕರಿಸುತ್ತಾರೆ, ಅದು ವ್ಯಾಪಾರ ವಿಸ್ತರಣೆಗಳಿಗೆ ಪ್ರಯೋಜನ ನೀಡುತ್ತದೆ. ನೀವು ಚಾರಿಟಿಗೆ ಹಣವನ್ನು ದಾನ ಮಾಡುವ ಕೆಲಸ ಮಾಡಿ. ಬಡವರಿಗೆ ದಾನ ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ.
ವೃಶ್ಚಿಕ ರಾಶಿ ಹಣಕಾಸು ಭವಿಷ್ಯ ( Scorpio money horoscope)
ಆರ್ಥಿಕವಾಗಿ ಇಂದು ನಿಮಗೆ ಉತ್ತಮ ದಿನ. ನೀವು ಮನೆಯನ್ನು ನವೀಕರಿಸಬಹುದು. ಬಾಕಿ ಇರುವ ಬಿಲ್ ಪಾವತಿಯತ್ತ ಗಮನ ಹರಿಸಿ. ಕೆಲವು ವೃಶ್ಚಿಕ ರಾಶಿಯವರು ತಮ್ಮ ಒಡಹುಟ್ಟಿದವರಿಗೆ ಸಹಾಯ ಮಾಡುತ್ತಾರೆ. ಮಹಿಳೆಯರು ಆನುವಂಶಿಕ ಆಸ್ತಿ ಪಡೆಯುತ್ತಾರೆ. ವ್ಯಾಪಾರಸ್ಥರು ಪಾಲುದಾರಿಕೆಯ ಮೂಲಕ ಹೆಚ್ಚುವರಿ ಹಣವನ್ನು ಪಡೆಯುತ್ತಾರೆ.
ಧನು ರಾಶಿ ಹಣಕಾಸು ಭವಿಷ್ಯ (Sagittarius Money Horoscope)
ಇಂದು ಹಣಕಾಸಿನ ವ್ಯವಹಾರಗಳಲ್ಲಿ ಏರಿಳಿತಗಳು ಕಂಡುಬರುತ್ತವೆ. ಹಣಕಾಸಿಗೆ ಸಂಬಂಧಿಸಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ಆದರೆ ದೈನಂದಿನ ಜೀವನದ ಮೇಲೆ ಇದು ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಮನೆ ದುರಸ್ತಿ ಮಾಡಲು ಅಥವಾ ಒಳಾಂಗಣವನ್ನು ನವೀಕರಿಸಲು ಹಣ ಖರ್ಚು ಮಾಡಬೇಕಾಗಬಹುದು. ಐಷಾರಾಮಿ ವಸ್ತುಗಳ ಮೇಲೆ ಹೆಚ್ಚು ಖರ್ಚು ಮಾಡದಿರುವುದು ಉತ್ತಮ.
ಮಕರ ರಾಶಿ ಆರ್ಥಿಕ ಭವಿಷ್ಯ (Capricorn Money Horoscope)
ಹಣದ ವಿಷಯದಲ್ಲಿ ನೀವು ಅದೃಷ್ಟವಂತರು. ಸಂಪತ್ತು ಬಹು ಮೂಲಗಳಿಂದ ಹರಿದುಬರುತ್ತದೆ ಮತ್ತು ನೀವು ಇಂದು ನಿರ್ಣಾಯಕ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ದಿನದ ಎರಡನೇ ಭಾಗವು ವಾಹನವನ್ನು ಖರೀದಿಸಲು ಉತ್ತಮವಾಗಿದೆ. ನೀವು ಷೇರು ಹೂಡಿಕೆಯಿಂದ ಲಾಭ ಗಳಿಸುತ್ತೀರಿ.
ಕುಂಭ ರಾಶಿ ಆರ್ಥಿಕ ಭವಿಷ್ಯ (Aquarius Money Horoscope)
ನೀವು ವೈಯಕ್ತಿಕ ಸಂತೋಷಕ್ಕಾಗಿ ಹಣವನ್ನು ಖರ್ಚು ಮಾಡಬಹುದು, ಆದರೆ ಅದನ್ನು ಅನಗತ್ಯ ವಿಷಯಗಳಿಗೆ ಖರ್ಚು ಮಾಡದಂತೆ ನೋಡಿಕೊಳ್ಳಿ. ದೀರ್ಘಾವಧಿಯಲ್ಲಿ ಉಳಿತಾಯವೂ ಮುಖ್ಯವಾಗಿದೆ. ದಿನದ ಎರಡನೇ ಭಾಗವು ಸಂಬಂಧಿಕರು ಅಥವಾ ಒಡಹುಟ್ಟಿದವರು ಸೇರಿದಂತೆ ಯಾರಿಗಾದರೂ ಹಣವನ್ನು ಸಾಲವಾಗಿ ನೀಡುವ ಸಂಭವ ಇದೆ.
ಮೀನ ರಾಶಿ ಆರ್ಥಿಕ ಭವಿಷ್ಯ (Pisces Money Horoscope)
ಹಿಂದಿನ ಹೂಡಿಕೆಗಳಿಂದ ಸಂಪತ್ತನ್ನು ಪಡೆಯುತ್ತೀರಿ. ಆಸ್ತಿಯನ್ನು ಮಾರಾಟ ಮಾಡಬಹುದು ಅಥವಾ ಹೊಸ ಆಸ್ತಿ ಖರೀದಿಸಬಹುದು. ಸ್ನೇಹಿತರು ಅಥವಾ ಒಡಹುಟ್ಟಿದವರೊಂದಿಗಿನ ಹಣಕಾಸಿನ ವಿವಾದವನ್ನು ಪರಿಹರಿಸಲು ದಿನದ ಎರಡನೇ ಭಾಗ ಒಳ್ಳೆಯದು. ಕೆಲವು ಮೀನ ರಾಶಿಯವರು ಷೇರು ಮತ್ತು ವ್ಯಾಪಾರದಿಂದ ಸಾಕಷ್ಟು ಲಾಭ ಗಳಿಸಬಹುದು. ನೀವು ಚಿನ್ನ ಅಥವಾ ರಿಯಾಲ್ಟಿಯಲ್ಲಿ ಹೂಡಿಕೆ ಮಾಡಬಹುದು ಅದು ಭವಿಷ್ಯದಲ್ಲಿ ಅದೃಷ್ಟವನ್ನು ತರುತ್ತದೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.