ಹಣಕಾಸು ಭವಿಷ್ಯ ಜುಲೈ 31: ವೃಷಭ ರಾಶಿಯವರಿಗೆ ಮ್ಯೂಚುವಲ್‌ ಫಂಡ್‌ನಿಂದ ಲಾಭ, ಧನು ರಾಶಿಯವರು ಖರ್ಚಿನ ಮೇಲೆ ನಿಗಾ ವಹಿಸಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹಣಕಾಸು ಭವಿಷ್ಯ ಜುಲೈ 31: ವೃಷಭ ರಾಶಿಯವರಿಗೆ ಮ್ಯೂಚುವಲ್‌ ಫಂಡ್‌ನಿಂದ ಲಾಭ, ಧನು ರಾಶಿಯವರು ಖರ್ಚಿನ ಮೇಲೆ ನಿಗಾ ವಹಿಸಿ

ಹಣಕಾಸು ಭವಿಷ್ಯ ಜುಲೈ 31: ವೃಷಭ ರಾಶಿಯವರಿಗೆ ಮ್ಯೂಚುವಲ್‌ ಫಂಡ್‌ನಿಂದ ಲಾಭ, ಧನು ರಾಶಿಯವರು ಖರ್ಚಿನ ಮೇಲೆ ನಿಗಾ ವಹಿಸಿ

Money Astrological Predictions July 31, 2024: ಹಣಕಾಸು ಭವಿಷ್ಯ ಜುಲೈ 31ರ ಪ್ರಕಾರ ವೃಷಭ ರಾಶಿಯವರಿಗೆ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುವುದರಿಂದ ಲಾಭವಾಗಲಿದೆ. ಧನು ರಾಶಿಯವರು ಖರ್ಚಿನ ಮೇಲೆ ನಿಗಾ ವಹಿಸುವುದು ಉತ್ತಮ. ಉಳಿದ ರಾಶಿಯವರ ಹಣಕಾಸಿನ ಪರಿಸ್ಥಿತಿ ಹೇಗಿದೆ, 12 ರಾಶಿಗಳ ಆರ್ಥಿಕ ಭವಿಷ್ಯ ಏನು ಎಂಬಿತ್ಯಾದಿ ವಿವರಗಳು ಇಲ್ಲಿವೆ.

ಹಣಕಾಸು ಭವಿಷ್ಯ ಜುಲೈ 31: ವೃಷಭ ರಾಶಿಯವರಿಗೆ ಮ್ಯೂಚುವಲ್‌ ಫಂಡ್‌ನಿಂದ ಲಾಭ, ಧನು ರಾಶಿಯವರು ಖರ್ಚಿನ ಮೇಲೆ ನಿಗಾ ವಹಿಸಿ
ಹಣಕಾಸು ಭವಿಷ್ಯ ಜುಲೈ 31: ವೃಷಭ ರಾಶಿಯವರಿಗೆ ಮ್ಯೂಚುವಲ್‌ ಫಂಡ್‌ನಿಂದ ಲಾಭ, ಧನು ರಾಶಿಯವರು ಖರ್ಚಿನ ಮೇಲೆ ನಿಗಾ ವಹಿಸಿ

ಬಹುತೇಕ ಎಲ್ಲರ ದಿನಚರಿ ಶರುವಾಗುವುದು ಇವತ್ತು ಹೇಗಪ್ಪ ಹಣಕಾಸು ಹೊಂದಿಸುವುದು ಎನ್ನುವ ಆಲೋಚನೆಯೊಂದಿಗೆ. ನಿತ್ಯವೂ ದಿನ ಭವಿಷ್ಯ ಓದುವವರು ಹಣಕಾಸು ಭವಿಷ್ಯದ ಕಡೆಗೂ ಕಣ್ಣು ಹಾಯಿಸುತ್ತಾರೆ. ಅಂಥವರ ಕುತೂಹಲ ತಣಿಸುವುದಕ್ಕಾಗಿ, ಇಲ್ಲಿ 12 ರಾಶಿಗಳ ಆರ್ಥಿಕ ಭವಿಷ್ಯದ ವಿವರವನ್ನು ಒದಗಿಸಲಾಗಿದೆ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲದಲ್ಲಿದೆ. ನೀವು ಅದನ್ನು ಓದಬಹುದು.

ಮೇಷ ರಾಶಿಯವರ ಹಣಕಾಸು ಭವಿಷ್ಯ (Aries Money Horoscope)

ಆದಾಯದ ಮೂಲಗಳಿಂದ ಪ್ರಯೋಜನವಾಗಲಿದೆ. ಹೊಸ ಆಸ್ತಿ ಅಥವಾ ವಾಹನ ಖರೀದಿ ಬಗ್ಗೆ ಯೋಚಿಸಬಹುದು. ಹಣಕ್ಕೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸಿ. ಉದ್ಯಮಿಗಳು ಹಣವನ್ನು ಹೂಡಿಕೆ ಮಾಡುವ ಮೊದಲು ಮಾರುಕಟ್ಟೆ ಸಂಶೋಧನೆ ಮಾಡಬೇಕು. ಪೂರ್ವಾಪರಗಳಿಲ್ಲದೇ ಹೂಡಿಕೆ ಮಾಡುವುದು ನಷ್ಟಕ್ಕೆ ಕಾರಣವಾಗಬಹುದು ಎಚ್ಚರ.

ವೃಷಭ ರಾಶಿಯವರ ಹಣಕಾಸು ಭವಿಷ್ಯ (Taurus Money Horoscope)

ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಐಷಾರಾಮಿ ವಸ್ತುಗಳಲ್ಲಿ ದೊಡ್ಡ ಮಟ್ಟಿನ ಹೂಡಿಕೆ ಸಲ್ಲ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಇದ್ದಕ್ಕಿದ್ದಂತೆ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಉಳಿತಾಯದ ಕಡೆ ಗಮನ ಕೊಡಿ.

ಮಿಥುನ ರಾಶಿಯವರ ಹಣಕಾಸು ಭವಿಷ್ಯ (Gemini Money Horoscope)

ಇಂದು ಸಣ್ಣಪುಟ್ಟ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಖರ್ಚುಗಳ ಮೇಲೆ ನಿಯಂತ್ರಣವಿರಲಿ. ಉದ್ಯಮಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಹಲವು ಕಡೆಗಳಿಂದ ಹಣ ಪಡೆಯುತ್ತಾರೆ. ವಾಹನ ಖರೀದಿಸುವ ಮೊದಲು ಎಚ್ಚರಿಕೆಯಿಂದ ಯೋಚಿಸಿ.

ಕಟಕ ರಾಶಿಯವರ ಹಣಕಾಸು ಭವಿಷ್ಯ (Cancer Money Horoscope)

ಅನಾವಶ್ಯಕ ಖರ್ಚುಗಳ ಮೇಲೆ ನಿಗಾ ಇರಲಿ. ಐಷಾರಾಮಿ ವಸ್ತುಗಳ ಮೇಲೆ ಖರ್ಚು ಮಾಡುವುದನ್ನು ಕಡಿಮೆ ಮಾಡಿ. ಹೊಸ ಹೂಡಿಕೆಗಳಿಂದ ದೂರವಿರಬೇಕು. ಅಗತ್ಯವಿದ್ದಾಗ ಹಣಕಾಸು ತಜ್ಞರ ಮಾರ್ಗದರ್ಶನ ಪಡೆಯಿರಿ. ವ್ಯಾಪಾರಿಗಳು ಉತ್ತಮ ಆದಾಯ ಗಳಿಸುತ್ತಾರೆ. ಉದ್ಯಮಿಗಳು ಹೊಸ ಪಾಲುದಾರಿಕೆಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಮೊದಲು ಅದರ ಬಗ್ಗೆ ಅಧ್ಯಯನ ಮಾಡಿದರೆ ಒಳಿತು.

ಸಿಂಹ ರಾಶಿಯವರ ಹಣಕಾಸು ಭವಿಷ್ಯ (Leo Money Horoscope)

ದಿನದ ಎರಡನೇ ಭಾಗವು ಹಣ ದಾನ ಮಾಡಲು ಅಥವಾ ಒಡಹುಟ್ಟಿದವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಒಳ್ಳೆಯದು. ಉದ್ಯಮಿಗಳು ತಮ್ಮ ಸಂಗಾತಿಗಳಿಂದ ಹಣಕಾಸಿನ ಸಹಾಯವನ್ನು ಪಡೆಯುತ್ತಾರೆ. ಬಾಕಿ ಇರುವ ಎಲ್ಲಾ ಸಾಲವನ್ನು ನೀವು ಇಂದು ಪಾವತಿ ಮಾಡಲಿದ್ದೀರಿ.

ಕನ್ಯಾ ರಾಶಿಯವರ ಹಣಕಾಸು ಭವಿಷ್ಯ (Virgo Money Horoscope)

ಆರ್ಥಿಕ ಸಮಸ್ಯೆಗಳು ಕಾಡುವುದಿಲ್ಲ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಬೆಳಗಿನ ಸಮಯ ಉತ್ತಮ. ವಾಹನ ಖರೀದಿಸಲು ಇಂದು ಉತ್ತಮ ದಿನ. ವ್ಯಾಪಾರಸ್ಥರಿಗೆ ಇಂದು ಹಣದ ಕೊರತೆ ಇರುವುದಿಲ್ಲ. ಸ್ನೇಹಿತ ಅಥವಾ ಒಡಹುಟ್ಟಿದವರಿಗೆ ಸಂಬಂಧಿಸಿದ ಯಾವುದೇ ಹಣಕಾಸಿನ ಸಮಸ್ಯೆಯನ್ನು ಸಹ ನೀವು ಪರಿಹರಿಸಬಹುದು.

ತುಲಾ ರಾಶಿಯವರ ಹಣಕಾಸು ಭವಿಷ್ಯ (Libra Money Horoscope)

ನೀವು ಅನೇಕ ಮೂಲಗಳಿಂದ ಆರ್ಥಿಕ ಬೆಂಬಲ ಪಡೆಯುತ್ತೀರಿ. ಕೆಲವು ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಹೊಸ ಮನೆ ಖರೀದಿಸುವ ಸಾಧ್ಯತೆ ಇದೆ. ಹೊಸ ಕ್ಷೇತ್ರಗಳಲ್ಲಿ ವಿಸ್ತರಿಸಲು ಉದ್ಯಮಿಗಳಿಗೆ ಉತ್ತಮ ದಿನ ಮತ್ತು ಹಣದ ಕೊರತೆ ಇರುವುದಿಲ್ಲ.

ವೃಶ್ಚಿಕ ರಾಶಿಯವರ ಹಣಕಾಸು ಭವಿಷ್ಯ ( Scorpio money horoscope)

ಇಂದು ನೀವು ಹಣಕಾಸಿನ ವಿಚಾರದಲ್ಲಿ ಅದೃಷ್ಟವಂತರು. ಮಹಿಳಾ ಉದ್ಯಮಿಗಳು ಇಂದು ಯಶಸ್ಸನ್ನು ಕಾಣುವರು. ನೀವು ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಬಹುದು ಅಥವಾ ಹೂಡಿಕೆಯಾಗಿ ಆಸ್ತಿಯನ್ನು ಖರೀದಿಸಬಹುದು. ನಿಮ್ಮ ಪೂರ್ವಜರಿಗೆ ಸೇರಿರುವ ಆಸ್ತಿಯ ಪಾಲು ನಿಮಗೆ ಸಿಗಲಿದೆ.

ಧನು ರಾಶಿಯವರ ಹಣಕಾಸು ಭವಿಷ್ಯ (Sagittarius Money Horoscope)

ಹಣಕಾಸಿನ ಸ್ಥಿತಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಉತ್ತಮವಾಗಿರುವುದಿಲ್ಲ, ಖರ್ಚಿನ ಬಗ್ಗೆ ನಿಗಾ ಇರಲಿ. ನೀವು ಆಸ್ತಿಯ ಮೇಲಿನ ಕಾನೂನು ಹೋರಾಟವನ್ನು ಗೆಲ್ಲಬಹುದು. ಸ್ಟಾಕ್, ವ್ಯಾಪಾರದಂತಹ ಹೂಡಿಕೆಗಳು ಕೈ ಹಿಡಿಯುವುದಿಲ್ಲ. ಮನೆಯಲ್ಲಿ ಹಿರಿಯರ ಚಿಕಿತ್ಸೆಗಾಗಿ ನೀವು ಖರ್ಚುಗಳನ್ನು ಪೂರೈಸಬೇಕಾಗಬಹುದು.

ಮಕರ ರಾಶಿಯವರ ಹಣಕಾಸು ಭವಿಷ್ಯ (Capricorn Money Horoscope)

ದಿನದ ಮೊದಲಾರ್ಧದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಿರಿ. ಕಾನೂನು ಸಮಸ್ಯೆಗೆ ನೀವು ಇಂದು ದೊಡ್ಡ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ. ಕಷ್ಟದಲ್ಲಿರುವ ಸಂಬಂಧಿಗಳಿಗೆ ಸಹಾಯ ಮಾಡಲಿದ್ದೀರಿ. ಉದ್ಯಮಿಗಳು ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತಾರೆ, ಆದರೆ ವ್ಯಾಪಾರ ವಿಸ್ತರಣೆಗೆ ಒಂದು ದಿನ ಕಾಯಬೇಕಾಗುತ್ತದೆ.

ಕುಂಭ ರಾಶಿಯವರ ಹಣಕಾಸು ಭವಿಷ್ಯ (Aquarius Money Horoscope)

ಸಣ್ಣ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಆದರೆ ಇದು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ. ದೀರ್ಘಾವಧಿಯ ಹೂಡಿಕೆಯು ಭವಿಷ್ಯದಲ್ಲಿ ನಿಮಗೆ ಉತ್ತಮ ಆದಾಯವನ್ನು ನೀಡುತ್ತದೆ.

ಮೀನ ರಾಶಿಯವರ ಹಣಕಾಸು ಭವಿಷ್ಯ (Pisces Money Horoscope)

ನೀವು ಸಂಪತ್ತಿನ ದೊಡ್ಡ ಒಳಹರಿವನ್ನು ನೋಡದಿದ್ದರೂ, ಹಿಂದಿನ ಹೂಡಿಕೆಯು ಉತ್ತಮ ಆದಾಯವನ್ನು ತರುತ್ತದೆ ನೀವು ಮ್ಯೂಚುವಲ್ ಫಂಡ್‌ಗಳು ಮತ್ತು ಸ್ಥಿರ ಠೇವಣಿಗಳಲ್ಲಿ ಹೂಡಿಕೆಯನ್ನು ಪರಿಗಣಿಸಬಹುದು, ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಡಿ. ಹಿರಿಯರು ಮಕ್ಕಳಿಗೆ ಸಂಪತ್ತನ್ನು ಹಂಚುವ ಬಗ್ಗೆ ಯೋಚಿಸುತ್ತಾರೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು,ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ,ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.