September Horoscope; ಮೇಷದವರಿಗೆ ಕಷ್ಟ, ವೃ‍ಷಭದವರಿಗೆ ಭೂವಿವಾದ, ಮಿಥುನದವರಿಗೆ ಉದ್ಯೋಗ ಸಮಸ್ಯೆ- ಸೆಪ್ಟೆಂಬರ್ ತಿಂಗಳ ಗೋಚಾರ ಫಲ-monthly horoscope 2024 september check horoscope predictions for aries taurus gemini zodiac signs sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  September Horoscope; ಮೇಷದವರಿಗೆ ಕಷ್ಟ, ವೃ‍ಷಭದವರಿಗೆ ಭೂವಿವಾದ, ಮಿಥುನದವರಿಗೆ ಉದ್ಯೋಗ ಸಮಸ್ಯೆ- ಸೆಪ್ಟೆಂಬರ್ ತಿಂಗಳ ಗೋಚಾರ ಫಲ

September Horoscope; ಮೇಷದವರಿಗೆ ಕಷ್ಟ, ವೃ‍ಷಭದವರಿಗೆ ಭೂವಿವಾದ, ಮಿಥುನದವರಿಗೆ ಉದ್ಯೋಗ ಸಮಸ್ಯೆ- ಸೆಪ್ಟೆಂಬರ್ ತಿಂಗಳ ಗೋಚಾರ ಫಲ

Monthly Horoscope 2024 September: ಇಂಗ್ಲಿಷ್ ಕ್ಯಾಲೆಂಡರ್‌ನ ದಿನಗಳು ಉರುಳುತ್ತಿದ್ದು, ಸೆಪ್ಟೆಂಬರ್ ತಿಂಗಳ ಭವಿಷ್ಯ, ರಾಶಿಗಳ ಗೋಚಾರ ಫಲ ನೋಡಿಕೊಂಡು ಮುನ್ನಡೆಯುವವರು ಅನೇಕರು. ಹೀಗಾಗಿ, ಸಾಂಪ್ರದಾಯಿಕವಾಗಿ ಜ್ಯೋತಿಷ್ಯ ಶಾಸ್ತ್ರ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ನೀಡಿರುವ ಮೇಷ, ವೃಷಭ, ಮಿಥುನ ರಾಶಿಗಳ ಗೋಚಾರ ಫಲ ವಿವರ ಹೀಗಿದೆ.

Monthly Horoscope 2024; ಸೆಪ್ಟೆಂಬರ್ 2024ರ ತಿಂಗಳ ಭವಿಷ್ಯ; ಮೇಷ, ವೃಷಭ, ಮಿಥುನ ರಾಶಿಗಳ ಗೋಚಾರ ಫಲ ವಿವರ.
Monthly Horoscope 2024; ಸೆಪ್ಟೆಂಬರ್ 2024ರ ತಿಂಗಳ ಭವಿಷ್ಯ; ಮೇಷ, ವೃಷಭ, ಮಿಥುನ ರಾಶಿಗಳ ಗೋಚಾರ ಫಲ ವಿವರ.

ಸೆಪ್ಟೆಂಬರ್‌ ತಿಂಗಳ ಮಾಸ ಭವಿಷ್ಯ (Monthly Horoscope 2024 September): 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ತ್ವಶಾಸ್ತ್ರದ ಮಾರ್ಮಿಕ ನುಡಿ. ಇದು ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಹಲವರು ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Monthly Horoscope Of September 2024).

ಮೇಷ ರಾಶಿ; ಕಷ್ಟದ ಸನ್ನಿವೇಶ ಎದುರಾಗಲಿದೆ

ದೂರದ ಸಂಬಂಧಿಯೊಬ್ಬರಿಂದ ಕುಟುಂಬದಲ್ಲಿ ಶುಭಕಾರ್ಯವೊಂದು ನಡೆಯಲಿದೆ. ನೀವು ಕುಟುಂಬದಲ್ಲಿ ಶಾಂತಿ ನೆಲೆಸಲು ಕಾರಣರಾಗುವಿರಿ. ಉದ್ಯೋಗದಲ್ಲಿ ಒತ್ತಡದ ಸನ್ನಿವೇಶ ಉಂಟಾದರೂ ಸಂಧಾನದಿಂದ ಸರಿಪಡಿಸುವಿರಿ. ಕಷ್ಟ ನಷ್ಟದ ಸನ್ನಿವೇಶವನ್ನು ಧೈರ್ಯದಿಂದ ಎದುರಿಸಬಲ್ಲಿರಿ. ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯಲಿವೆ. ಹಣ ಕಾಸಿನ ವಿಚಾರದಲ್ಲಿ ಆತಂಕದ ಪರಿಸ್ಥಿತಿ ಉಂಟಾಗಬಹುದು. ವಿದ್ಯಾರ್ಥಿಗಳು ಸಹಪಾಠಿಗಳ ನೆರವಿನಿಂದ ಉನ್ನತಿ ಸಾಧಿವುತ್ತಾರೆ. ಅವಿರತ ದುಡಿಮೆಯಿಂದ ಮನಸ್ಸಿನಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ಸ್ವಗೃಹ ಭೂಲಾಭವಿದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಧನಾತ್ಮಕ ಫಲಿತಾಂಶ ದೊರೆಯುತ್ತದೆ. ಹೊಸ ವ್ಯಾಪಾರ ಆರಂಭಿಸಲು ಸೂಕ್ತ ಸಮಯವಲ್ಲ.

ವೃಷಭ ರಾಶಿ; ಭೂವಿವಾದದಲ್ಲಿ ತಲೆತೂರಿಸದಿರಿ

ಮನಸ್ಸಿನಲ್ಲಿ ಆದಾಯದ ಬಗ್ಗೆ ಆತಂಕವಿರುತ್ತದೆ. ಕೆಲಸ ಕಾರ್ಯಗಳು ಪೂರ್ಣಗೊಂಡರೂ ಸಂತೃಪ್ತಿ ಇರುವುದಿಲ್ಲ. ಕುಟುಂಬದಲ್ಲಿ ಹೊಂದಾಣಿಕೆಯ ವಾತಾವರಣ ಹೊಸ ಚೇತನ ನೀಡುತ್ತದೆ. ಉದ್ಯೋಗದಲ್ಲಿ ದೀರ್ಘಕಾಲದ ಸಮಸ್ಯೆಯೊಂದು ಹಿರಿಯರ ಸಹಾಯದಿಂದ ಬಗೆಹರಿಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟವಿರದು. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿಕೆಯಲ್ಲಿ ಉನ್ನತ ಮಟ್ಟದಲ್ಲಿ ಇರುತ್ತಾರೆ. ಕುಟುಂಬದವರೊಂದಿಗೆ ಚರ್ಚಿಸಿದ ನಂತರ ವ್ಯಾಪಾರದಲ್ಲಿ ಮುಂದುವರೆಯಿರಿ. ತಂದೆಗೆ ಸಂಬಂಧಪಟ್ಟ ಹಣದ ವ್ಯವಹಾರ ನಿಧಾನಗತಿಯಲ್ಲಿ ಸಾಗುತ್ತದೆ. ಚಿಂತೆ ಬೇಡ. ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಪಾಲ್ಗೊಳ್ಳುವಿರಿ. ಭೂವಿವಾದದಲ್ಲಿ ಮಧ್ಯಸ್ಥಿಕೆ ವಹಿಸದಿರಿ. ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.

ಮಿಥುನ ರಾಶಿ; ವಿದ್ಯಾಭ್ಯಾಸದಲ್ಲಿ ಮುಂದುವರಿಯುವ ಹಟ ಇಲ್ಲದಿದ್ದರೆ ಸಮಸ್ಯೆ ಹೆಚ್ಚು

ಕುಟುಂಬದಲ್ಲಿ ಐಕ್ಯತೆಯ ಕೊರತೆ ಕಂಡುಬರುತ್ತದೆ. ಉದ್ಯೋಗದಲ್ಲಿನ ಸಮಸ್ಯೆ ಪರರ ಸಹಾಯದಿಂದ ನಿವಾರಣೆಯಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಮಧ್ಯಮಗತಿಯ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳು ಹಠದಿಂದ ಅಭ್ಯಾಸದಲ್ಲಿ ಯಶಸ್ವಿಯಾಗುತ್ತಾರೆ. ಸೋದರರರಿಗೆ ಹಣ ಸಹಾಯ ಮಾಡಬೇಕಾಗುತ್ತದೆ. ಕೆಲಸ ಕಾರ್ಯಗಳ ನಡುವೆಯೂ ಕುಟುಂಬದ ಸದಸ್ಯರ ಜೊತೆ ಸಂತಸದಿಂದ ಬಾಳುವಿರಿ. ಬಿಡುವಿನ ವೇಳೆ ಎಲ್ಲರ ಜೊತೆಯಲ್ಲಿ ವಿಹಾರಧಾಮಕ್ಕೆ ಭೇಟಿ ನೀಡುವಿರಿ. ನಿಶ್ವಯವಾದ ವಿವಾಹ ಮುಂದೂಡುವಿರಿ. ಹಣಕಾಸಿನ ವ್ಯವಹಾರದಲ್ಲಿ ಲಾಭವಿದೆ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ತೋರಲು ಅವಕಾಶವೊಂದು ದೊರೆಯಲಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಿ. ಸ್ವಂತ ಬಳಕೆಗಾಗಿ ವಾಹನ ಕೊಳ್ಳುವಿರಿ. ಸಮಾಜಸೇವೆಗಾಗಿ ಹಣಸಹಾಯ ಮಾಡುವಿರಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.