September Horoscope; ಕಟಕದವರಿಗೆ ಹೊಣೆಗಾರಿಕೆ ಹೆಚ್ಚು, ಸಿಂಹದವರಿಗೆ ಉದ್ಯೋಗ ಸಮಸ್ಯೆ, ಕನ್ಯಾದವರಿಗೆ ಮಾತು ಮುತ್ತು ಎಂಬುದು ಅರಿವಾದೀತು-monthly horoscope 2024 september check horoscope predictions for cancer leo virgo zodiac signs sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  September Horoscope; ಕಟಕದವರಿಗೆ ಹೊಣೆಗಾರಿಕೆ ಹೆಚ್ಚು, ಸಿಂಹದವರಿಗೆ ಉದ್ಯೋಗ ಸಮಸ್ಯೆ, ಕನ್ಯಾದವರಿಗೆ ಮಾತು ಮುತ್ತು ಎಂಬುದು ಅರಿವಾದೀತು

September Horoscope; ಕಟಕದವರಿಗೆ ಹೊಣೆಗಾರಿಕೆ ಹೆಚ್ಚು, ಸಿಂಹದವರಿಗೆ ಉದ್ಯೋಗ ಸಮಸ್ಯೆ, ಕನ್ಯಾದವರಿಗೆ ಮಾತು ಮುತ್ತು ಎಂಬುದು ಅರಿವಾದೀತು

Monthly Horoscope 2024 September: ಇಂಗ್ಲಿಷ್ ಕ್ಯಾಲೆಂಡರ್‌ನ ದಿನಗಳು ಉರುಳುತ್ತಿದ್ದು, ಸೆಪ್ಟೆಂಬರ್ ತಿಂಗಳ ಭವಿಷ್ಯ, ರಾಶಿಗಳ ಗೋಚಾರ ಫಲ ನೋಡಿಕೊಂಡು ಮುನ್ನಡೆಯುವವರು ಅನೇಕರು. ಹೀಗಾಗಿ, ಸಾಂಪ್ರದಾಯಿಕವಾಗಿ ಜ್ಯೋತಿಷ್ಯ ಶಾಸ್ತ್ರ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ನೀಡಿರುವ ಕಟಕ, ಸಿಂಹ, ಕನ್ಯಾ ರಾಶಿಗಳ ಗೋಚಾರ ಫಲ ವಿವರ ಹೀಗಿದೆ.

Monthly Horoscope 2024; ಸೆಪ್ಟೆಂಬರ್ ತಿಂಗಳ ಭವಿಷ್ಯ- ಕಟಕ, ಸಿಂಹ, ಕನ್ಯಾ ರಾಶಿಗಳ ಗೋಚಾರ ಫಲ
Monthly Horoscope 2024; ಸೆಪ್ಟೆಂಬರ್ ತಿಂಗಳ ಭವಿಷ್ಯ- ಕಟಕ, ಸಿಂಹ, ಕನ್ಯಾ ರಾಶಿಗಳ ಗೋಚಾರ ಫಲ

ಸೆಪ್ಟೆಂಬರ್‌ ತಿಂಗಳ ಮಾಸ ಭವಿಷ್ಯ (Monthly Horoscope 2024 September): 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ತ್ವಶಾಸ್ತ್ರದ ಮಾರ್ಮಿಕ ನುಡಿ. ಇದು ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಹಲವರು ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Monthly Horoscope Of September 2024).

ಕಟಕ ರಾಶಿ; ಬಿಡುವಿಲ್ಲದ ಕೆಲಸ, ಹೊಣೆಗಾರಿಕೆ ಹೆಚ್ಚಲಿದೆ

ಕುಟುಂಬದಲ್ಲಿ ನಿಮ್ಮ ಜವಾಬ್ದಾರಿಯು ಹೆಚ್ಚಿನದಾಗುತ್ತದೆ. ಬಿಡುವಿಲ್ಲದ ಕೆಲಸ ಕಾರ್ಯಗಳು ಶಾಂತಿ ನೆಮ್ಮದಿ ಮರೆಮಾಡುತ್ತದೆ. ಸಮಾಜದ ಗಣ್ಯ ವ್ಯಕ್ತಿಯ ಸ್ನೇಹ ದೊರೆಯುತ್ತದೆ. ಉದ್ಯೋಗ ಬದಲ್ಸುವ ಬಗ್ಗೆ ಮಾತುಕತೆ ನಡೆಸುವಿರಿ. ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಲಾಭದಾಯಕ ಮಾರ್ಗದರ್ಶನ ಲಭಿಸುತ್ತದೆ. ಆದರೆ ಸಾಧ್ಯವಾಗುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಬಂಡವಾಳ ಹೂಡದಿರಿ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರುವುದಿಲ್ಲ. ಕೌಟುಂಬಿಕ ವಿಚಾರದಲ್ಲಿ ತಪ್ಪು ನಿರ್ಧಾರ ಕೈಗೊಳ್ಳುವಿರಿ. ಬೇಸರದ ಸನ್ನಿವೇಶದಿಂದ ದೂರ ಉಳಿಯಲು ಮೌನಕ್ಕೆ ಶರಣಾಗುವಿರಿ. ನೆಮ್ಮದಿ ಕಂಡುಕೊಳ್ಳಲು ಪ್ರಯತ್ನಿಸುವಿರಿ. ಕ್ರಮೇಣವಾಗಿ ಆದಾಯದಲ್ಲಿ ಹೆಚ್ಚಳ ಕಂಡು ಬರುತ್ತದೆ.

ಸಿಂಹ ರಾಶಿ; ಉದ್ಯೋಗದಲ್ಲಿ ಸಮಸ್ಯೆ, ಸಂತೋಷದ ಕೊರತೆ

ಹಠದ ಕಾರಣ ಕುಟುಂಬದ ಸಂತೋಷ ಮರೆಯಾಗುತ್ತದೆ. ಗಂಭೀರವಾದ ಗುಣವನ್ನು ಬೆಳೆಸಿಕೊಳ್ಳುವಿರಿ. ಅತಿಯಾದ ಆತ್ಮವಿಶ್ವಾಸ ಉದ್ಯೋಗದಲ್ಲಿ ಸಂದಿಗ್ಧವನ್ನು ಉಂಟುಮಾಡುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯಕ್ಕೆ ಕೊರತೆ ಕಂಡು ಬರುವುದಿಲ್ಲ. ಶಿಕ್ಷಣ ಕ್ಷೇತ್ರ ಗಮನಿಸುವುದಾದರೆ ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಉನ್ನತ ಮಟ್ಟ ತಲುಪುವರು. ಸರ್ಕಾರಿ ನೌಕರಿಯಲ್ಲಿ ಶುಭದಾಯಕ ವರ್ತಮಾನ ದೊರೆಯುತ್ತದೆ. ನಿರುದ್ಯೋಗಿಗಳಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ದೊರೆಯುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಕುಟುಂಬದ ಹಿರಿಯರೊಬ್ಬರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದೆ. ಹೊಸ ವಾಹನವನ್ನು ಕೊಳ್ಳುವ ಆಸೆ ಈಡೇರಲಿದೆ. ಮಕ್ಕಳ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ.

ಕನ್ಯಾ ರಾಶಿ; ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು

ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಫಲರಾಗುವಿರಿ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ದುಡುಕಿನಿಂದ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಅನುಭವಸ್ಥರ ಸಲಹೆಯಂತೆ ಕೆಲಸ ಕಾರ್ಯಗಳನ್ನು ಆರಂಭಿಸುವುದು ಒಳ್ಳೆಯದು. ಯೋಗ ಪ್ರಾಣಾಯಾಮದ ಅಭ್ಯಾಸವನ್ನು ರೂಡಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಆಕಸ್ಮಿಕವಾಗಿ ಎದುರಾಗಿದ್ದ ತೊಂದರೆಗಳು ಮರೆಯಾಗುತ್ತವೆ. ದುಡುಕಿನ ಮಾತು ಕತೆಯಿಂದ ನಿತ್ಯಜೀವನದಲ್ಲಿ ವಿರೋಧಾಭಾಸಗಳನ್ನು ಎದುರಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಬಂಡವಾಳ ಹೂಡುವಿರಿ. ಅನಪೇಕ್ಷಿತ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಅವಿವಾಹಿತರಿಗೆ. ವಿವಾಹ ಯೋಗವಿದೆ. ಆರೋಗ್ಯ ಸುಧಾರಣೆಗಾಗಿ ಹೆಚ್ಚಿನ ಹಣ ವೆಚ್ಚವಾಗಬಹುದು.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.