September Horoscope; ಮಕರದವರ ಆರೋಗ್ಯ ಜೋಪಾನ, ಕುಂಭದವರಿಗೆ ಅತಿಯಾಗಿ ಆಹಾರ ಸೇವನೆ ಸಮಸ್ಯೆ, ಮೀನ ರಾಶಿಯವರಿಗೆ ವಿಶ್ವಾಸವಿರಲಿ-monthly horoscope 2024 september check horoscope predictions for capricorn aquarius pisces zodiac signs sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  September Horoscope; ಮಕರದವರ ಆರೋಗ್ಯ ಜೋಪಾನ, ಕುಂಭದವರಿಗೆ ಅತಿಯಾಗಿ ಆಹಾರ ಸೇವನೆ ಸಮಸ್ಯೆ, ಮೀನ ರಾಶಿಯವರಿಗೆ ವಿಶ್ವಾಸವಿರಲಿ

September Horoscope; ಮಕರದವರ ಆರೋಗ್ಯ ಜೋಪಾನ, ಕುಂಭದವರಿಗೆ ಅತಿಯಾಗಿ ಆಹಾರ ಸೇವನೆ ಸಮಸ್ಯೆ, ಮೀನ ರಾಶಿಯವರಿಗೆ ವಿಶ್ವಾಸವಿರಲಿ

Monthly Horoscope 2024 September: ಇಂಗ್ಲಿಷ್ ಕ್ಯಾಲೆಂಡರ್‌ನ ದಿನಗಳು ಉರುಳುತ್ತಿದ್ದು, ಸೆಪ್ಟೆಂಬರ್ ತಿಂಗಳ ಭವಿಷ್ಯ, ರಾಶಿಗಳ ಗೋಚಾರ ಫಲ ನೋಡಿಕೊಂಡು ಮುನ್ನಡೆಯುವವರು ಅನೇಕರು. ಹೀಗಾಗಿ, ಸಾಂಪ್ರದಾಯಿಕವಾಗಿ ಜ್ಯೋತಿಷ್ಯ ಶಾಸ್ತ್ರ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ನೀಡಿರುವ ಮಕರ, ಕುಂಭ, ಮೀನ ರಾಶಿಗಳ ಗೋಚಾರ ಫಲ ವಿವರ ಹೀಗಿದೆ.

Monthly Horoscope 2024; ಸೆಪ್ಟೆಂಬರ್ 2024ರ ತಿಂಗಳ ಭವಿಷ್ಯ, ಮಕರ, ಕುಂಭ, ಮೀನ ರಾಶಿಗಳ ಗೋಚಾರ ಫಲ ವಿವರ
Monthly Horoscope 2024; ಸೆಪ್ಟೆಂಬರ್ 2024ರ ತಿಂಗಳ ಭವಿಷ್ಯ, ಮಕರ, ಕುಂಭ, ಮೀನ ರಾಶಿಗಳ ಗೋಚಾರ ಫಲ ವಿವರ

ಸೆಪ್ಟೆಂಬರ್‌ ತಿಂಗಳ ಮಾಸ ಭವಿಷ್ಯ (Monthly Horoscope 2024 September): 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ತ್ವಶಾಸ್ತ್ರದ ಮಾರ್ಮಿಕ ನುಡಿ. ಇದು ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಹಲವರು ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Monthly Horoscope Of September 2024).

ಮಕರ ರಾಶಿ; ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಕುಟುಂಬದಲ್ಲಿ ಪರಸ್ಪರ ಹೆಚ್ಚಿನ ಪ್ರೀತಿ ವಿಶ್ವಾಸ ಕಂಡು ಬರುತ್ತದೆ. ಉದ್ಯೋಗದಲ್ಲಿ ಕ್ರಮೇಣವಾಗಿ ಧನಾತ್ಮಕ ಫಲಿತಾಂಶ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ನಿರೀಕ್ಷಿಸಬಹುದು. ವಿದ್ಯಾರ್ಥಿಗಳು ಶ್ರಮವಿಲ್ಲದೆ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಅವಕಾಶವಿದೆ. ಸಂಗೀತ ಮತ್ತು ನೃತ್ಯದಲ್ಲಿ ಆಸಕ್ತಿ ಮೂಡುತ್ತದೆ. ಪಾಲುಗಾರಿಕೆಯ ವ್ಯಾಪಾರದಿಂದ ಹೊರ ಬರುವಿರಿ. ಕಾನೂನಾತ್ಮಕ ಹಣಕಾಸಿನ ವ್ಯವಹಾರದಲ್ಲಿ ಲಾಭವಿದೆ. ಸ್ಟಾಕ್ ಮತ್ತು ಷೇರಿನ ವ್ಯಾಪಾರದಲ್ಲಿ ಹೆಚ್ಚಿನ ಲಾಭಾಂಶ ದೊರೆಯಲಿದೆ. ಧಾರ್ಮಿಕ ಕೇಂದ್ರಕ್ಕೆ ಹಣದ ಸಹಾಯ ಮಾಡುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕುಂಭ ರಾಶಿ; ಅತಿಯಾದ ಆಹಾರ ಸೇವನೆ

ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುವ ನಿರ್ಧಾರ ಆಪತ್ತಿನಿಂದ ದೂರಮಾಡುತ್ತದೆ. ಹಣಕಾಸಿನ ತೊಂದರೆ ಇರದು. ಉದ್ಯೋಗದಲ್ಲಿ ಆತಂಕದ ಪರಿಸ್ಥಿತಿಯನ್ನು ದೂರ ಮಾಡುವಿರಿ. ಸಹೋದ್ಯೋಗಿಗಳ ಜೊತೆಯಲ್ಲಿ ಸ್ನೇಹದಿಂದ ನಡೆದುಕೊಳ್ಳುವಿರಿ. ಕಷ್ಟ ನಷ್ಟದಲ್ಲಿ ಇರುವವರ ಬಗ್ಗೆ ಅನುಕಂಪ ತೋರುವಿರಿ. ಪಾಲುಗಾರಿಕೆ ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವರು. ಅನಾವಶ್ಯಕ ಖರ್ಚು ವೆಚ್ಚಗಳು ನಿಮ್ಮನ್ನು ಕಂಗೆಡಿಸುತ್ತದೆ. ಸಂಗಾತಿ ಮತ್ತು ಮಕ್ಕಳ ಜೊತೆಯಲ್ಲಿ ಕಿರು ಪ್ರವಾಸ ಕೈಗೊಳ್ಳುವಿರಿ. ಅತಿಯಾದ ಆಹಾರ ಸೇವನೆ ಅನಾರೋಗ್ಯಕ್ಕೆ ದಾರಿಯಾಗುತ್ತದೆ. ಬೇಸರದ ವಿಚಾರವನ್ನು ಮರೆಮಾಚುವಿರಿ.

ಮೀನ ರಾಶಿ; ಮಾತಿನಲ್ಲಿ ದೃಢತೆ ಇರಲಿ

ಸ್ನೇಹಿತರ ಜೊತೆಗೂಡಿ ಮನರಂಜನಾ ಕೂಟ ಆಯೋಜಿಸುವಿರಿ. ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ಅಪೂರ್ಣಗೊಂಡ ಹಣಕಾಸಿನ ಯೋಜನೆಯನ್ನು ಪೂರ್ಣಗೊಳಿಸುವಿರಿ. ಉದ್ಯೋಗದಲ್ಲಿರುವ ಸಂಸ್ಥೆಯ ಮೂಲಕ ವಿದೇಶಕ್ಕೆ ತೆರಳುವ ಅವಕಾಶ ದೊರೆಯಲಿದೆ. ಕಷ್ಟವಾದರೂ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ವಿಶೇಷ ಅನುಕೂಲತೆಗಳು ದೊರೆಯುತ್ತವೆ. ಕೆಲಸ ಕಾರ್ಯಗಳಲ್ಲಿ ಬೇಸರ ಉಂಟಾಗಲಿದೆ. ನಿಮ್ಮ ಮಕ್ಕಳು ವಿಶೇಷವಾದ ಗೌರವಕ್ಕೆ ಪಾತ್ರರಾಗುತ್ತಾರೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ದಂಪತಿಗಳ ನಡುವೆ ಇದ್ದ ಮನಸ್ತಾಪವು ಕೊನೆಗೊಳ್ಳಲಿದೆ. ಆಡುವ ಮಾತಿನಲ್ಲಿ ದೃಢತೆ ಇರಲಿ. ದಾಂಪತ್ಯದಲ್ಲಿ ಯಾವುದೇ ಸಮಸ್ಯೆ ತಲೆದೋರದು. ಮನೆಯ ಸುತ್ತ ಮುತ್ತ ಗಿಡ ಮರಗಳನ್ನು ಬೆಳೆಸುವಿರಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.