September Horoscope; ತುಲಾದವರು ದುಡುಕಿದರೆ ಧನ ನಷ್ಟ, ವೃಶ್ಚಿಕದವರಿಗೆ ಸಂಬಂಧಿಕರ ವಿರೋಧ, ಧನುರಾಶಿಯವರಿಗೆ ಧನಾಗಮನ-monthly horoscope 2024 september check horoscope predictions for libra scorpio sagittarius zodiac signs sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  September Horoscope; ತುಲಾದವರು ದುಡುಕಿದರೆ ಧನ ನಷ್ಟ, ವೃಶ್ಚಿಕದವರಿಗೆ ಸಂಬಂಧಿಕರ ವಿರೋಧ, ಧನುರಾಶಿಯವರಿಗೆ ಧನಾಗಮನ

September Horoscope; ತುಲಾದವರು ದುಡುಕಿದರೆ ಧನ ನಷ್ಟ, ವೃಶ್ಚಿಕದವರಿಗೆ ಸಂಬಂಧಿಕರ ವಿರೋಧ, ಧನುರಾಶಿಯವರಿಗೆ ಧನಾಗಮನ

Monthly Horoscope 2024 September: ಇಂಗ್ಲಿಷ್ ಕ್ಯಾಲೆಂಡರ್‌ನ ದಿನಗಳು ಉರುಳುತ್ತಿದ್ದು, ಸೆಪ್ಟೆಂಬರ್ ತಿಂಗಳ ಭವಿಷ್ಯ, ರಾಶಿಗಳ ಗೋಚಾರ ಫಲ ನೋಡಿಕೊಂಡು ಮುನ್ನಡೆಯುವವರು ಅನೇಕರು. ಹೀಗಾಗಿ, ಸಾಂಪ್ರದಾಯಿಕವಾಗಿ ಜ್ಯೋತಿಷ್ಯ ಶಾಸ್ತ್ರ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ನೀಡಿರುವ ತುಲಾ, ವೃಶ್ಚಿಕ, ಧನು ರಾಶಿಗಳ ಗೋಚಾರ ಫಲ ವಿವರ ಹೀಗಿದೆ.

Monthly Horoscope 2024; ಸೆಪ್ಟೆಂಬರ್‌ 2024ರ ತಿಂಗಳ ಭವಿಷ್ಯ, ತುಲಾ, ವೃಶ್ಚಿಕ, ಧನು ರಾಶಿಗಳ ಗೋಚಾರ ಫಲ ವಿವರ.
Monthly Horoscope 2024; ಸೆಪ್ಟೆಂಬರ್‌ 2024ರ ತಿಂಗಳ ಭವಿಷ್ಯ, ತುಲಾ, ವೃಶ್ಚಿಕ, ಧನು ರಾಶಿಗಳ ಗೋಚಾರ ಫಲ ವಿವರ.

ಸೆಪ್ಟೆಂಬರ್‌ ತಿಂಗಳ ಮಾಸ ಭವಿಷ್ಯ (Monthly Horoscope 2024 September): 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ತ್ವಶಾಸ್ತ್ರದ ಮಾರ್ಮಿಕ ನುಡಿ. ಇದು ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಹಲವರು ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Monthly Horoscope Of September 2024).

ತುಲಾ ರಾಶಿ; ಹಣದ ವ್ಯವಹಾರದಲ್ಲಿ ದುಡುಕಬೇಡಿ

ದೊರೆಯುವ ಅನುಕೂಲತೆಗಳನ್ನು ಸಮರ್ಥಕವಾಗಿ ಬಳಸಿಕೊಳ್ಳುವಿರಿ. ವಿನಾಕಾರಣ ಮಾನಸಿಕ ಉದ್ವೇಗಕ್ಕೆಒತ್ತಡಕ್ಕೆ ಒಳಗಾಗುವಿರಿ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭಕ್ಕೆ ತಕ್ಕ ಖರ್ಚುವೆಚ್ಚಗಳು ಇರುತ್ತವೆ. ಕುಟುಂಬದ ಹಿರಿಯರ ಸಹಾಯ ಸಹಕಾರ ದೊರೆಯುತ್ತದೆ. ಆತ್ಮೀಯರೂ ನಿಮ್ಮ ಬೇಟಿಗಾಗಿ ಆಗಮಿಸಲಿದ್ದಾರೆ. ಆತ್ಮೀಯರ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ಸ್ವಂತ ಭೂಮಿ ಅಥವಾ ಮನೆಯನ್ನು ಕೊಳ್ಳುವ ಯೋಜನೆ ರೂಪಿಸುವಿರಿ. ಬೆಳ್ಳಿ ಮತ್ತು ಚಿನ್ನದ ಆಭರಣಗಳಿಗೆ ಹೆಚ್ಚಿನ ಹಣ ಬೇಕಾಗುತ್ತದೆ. ದುಡುಕಿನಿಂದ ಹಣದ ವ್ಯವಹಾರವನ್ನು ಆರಂಭಿಸದಿರಿ. ಮಕ್ಕಳ ಜೊತೆಯಲ್ಲಿ ಸಂತಸದಿಂದ ಬಾಳುವಿರಿ.

ವೃಶ್ಚಿಕ ರಾಶಿ; ಪರಸ್ಥಳಕ್ಕೆ ಪ್ರಯಾಣ ಸಾಧ್ಯತೆ

ಬಹುದಿನದಿಂದ ಕಾಡುತ್ತಿದ್ದ ಅನಾರೋಗ್ಯವು ಸುಧಾರಿಸುತ್ತದೆ. ಕುಟುಂಬದ ಆದಾಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಹಠವನ್ನು ತೊರೆದರೆ ಹಣದ ತೊಂದರೆ ಉಂಟಾಗುವುದಿಲ್ಲ. ಮನೆಯಲ್ಲಿ ವಿಶೇಷವಾದ ಕಾರ್ಯಕ್ರಮಗಳು ನಡೆಯಲಿವೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಜೊತೆ ಆತ್ಮೀಯತೆಯಿಂದ ವರ್ತಿಸಲು ಪ್ರಯತ್ನಿಸುವಿರಿ. ಸಂಬಂಧಿಕರ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ವಿರೋಧ ಉಂಟಾಗಲಿದೆ. ವ್ಯಾಪಾರ ವ್ಯವಹಾರಗಳು ಉತ್ತಮ ಪ್ರಗತಿಯಲ್ಲಿ ಗಳಿಸುತ್ತದೆ. ದೂರದ ಬಂಧುವೊಬ್ಬರ ಜೊತೆಯಲ್ಲಿ ವಿವಾಹ ನಿಶ್ಚಯವಾಗುತ್ತದೆ. ವ್ಯಾಪಾರೋದ್ದೇಶಕ್ಕಾಗಿ ಪರಸ್ಥಳಕ್ಕೆ ಪ್ರಯಾಣ ಬೆಳೆಸುವಿರಿ. ಮನೆಯಲ್ಲಿರುವ ಮಕ್ಕಳಿಗೆ ಕಿರು ಕಾಣಿಕೆಯನ್ನು ನೀಡುವಿರಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.

ಧನಸ್ಸು ರಾಶಿ; ಚಾಡಿ ಮಾತು ನಂಬಿದರೆ ಕಷ್ಟ

ಆತ್ಮೀಯರಿಗೆ ಹಣದ ಸಹಾಯ ನೀಡುವಿರಿ. ಆರೋಗ್ಯ ಉಳಿಸಿಕೊಳ್ಳಲು ಪ್ರಯತ್ನ ಪಡುವಿರಿ. ಸಂಪಾದಿಸಿದ ಹಣದಲ್ಲಿ ಬಹು ಭಾಗವನ್ನು ಗೃಹ ಕಾರ್ಯಗಳಿಗಾಗಿ ಬಳಸುವಿರಿ. ಸ್ವಂತ ಉದ್ದಿಮೆಯನ್ನು ಆರಂಭಿಸುವ ಪ್ರಯತ್ನವು ಕೈಗೂಡದು. ಸಂಗಾತಿಯ ಪ್ರಯತ್ನದಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಬಹು ದಿನಗಳ ನಂತರ ದೂರದೂರಿಗೆ ಪ್ರಯಾಣ ಬೆಳಿಸುವಿರಿ. ಸೋದರರ ಸಹಾಯದಿಂದ ಹಣದ ತೊಂದರೆ ದೂರವಾಗುತ್ತದೆ. ಯೋಚಿಸದೆ ಚಾಡಿ ಮಾತನ್ನು ನಂಬದಿರಿ. ವಿದ್ಯಾರ್ಥಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ವಿಶೇಷವಾದ ಸಾಧನೆಯನ್ನು ಮಾಡಲಿದ್ದಾರೆ. ಮಕ್ಕಳಿಗೆ ವಿವಾಹ ಯೋಗವಿದೆ.

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.