ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Monthly Horoscope: ತೊರೆದು ಬಂದ ಸಂಸ್ಥೆಯಲ್ಲೇ ಮತ್ತೆ ಉದ್ಯೋಗಕ್ಕೆ ಸೇರುವಿರಿ, ಶಾಲೆ ಆರಂಭಿಸಬೇಕೆಂಬ ಕನಸಿಗೆ ಚಾಲನೆ; ಮೇ ತಿಂಗಳ ಮಾಸ ಭವಿಷ್ಯ

Monthly Horoscope: ತೊರೆದು ಬಂದ ಸಂಸ್ಥೆಯಲ್ಲೇ ಮತ್ತೆ ಉದ್ಯೋಗಕ್ಕೆ ಸೇರುವಿರಿ, ಶಾಲೆ ಆರಂಭಿಸಬೇಕೆಂಬ ಕನಸಿಗೆ ಚಾಲನೆ; ಮೇ ತಿಂಗಳ ಮಾಸ ಭವಿಷ್ಯ

Monthly Horoscope Of May 2024: ಒಳಿತನ್ನು ಸ್ವಾಗತಿಸಿ, ಕೆಡಕನ್ನು ಎದುರಿಸುವುದೇ ಜೀವನ. ರಾಶಿ ಚಕ್ರಕ್ಕೆ ತಕ್ಕಂತೆ ವಿವಿಧ ರಾಶಿಗಳ ಮಾಸ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. 2024ರ ಮೇ ತಿಂಗಳಲ್ಲಿ ನಿಮ್ಮ ರಾಶಿಭವಿಷ್ಯ ಹೇಗಿರಲಿದೆ ತಿಳಿಯಿರಿ.

ಮೇ​ ತಿಂಗಳ ಮಾಸ ಭವಿಷ್ಯ
ಮೇ​ ತಿಂಗಳ ಮಾಸ ಭವಿಷ್ಯ

ಮೇ​ ತಿಂಗಳ ಮಾಸ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಹಲವರು ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Monthly Horoscope Of May 2024). 

ರಾಶಿಫಲ

ಮೇಷ

ಮಾತುಕತೆ ಮೂಲಕ ಕುಟುಂಬದಲ್ಲಿನ ಹಣಕಾಸಿನ ವಿವಾದಕ್ಕೆ ಪರಿಹಾರ ದೊರೆಯುತ್ತದೆ. ದಂಪತಿ ನಡುವೆ ಅನಾವಶ್ಯಕ ಭಿನ್ನಾಭಿಪ್ರಾಯವಿರುತ್ತದೆ. ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸದೆ ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುವಿರಿ. ಕುಟುಂಬದ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಲು ಪ್ರಯತ್ನಿಸುವಿರಿ. ಹಣಕಾಸಿನ ಯೋಜನೆ ರೂಪಿಸಲು ಆದಾಯ ಹೆಚ್ಚಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ಮಹತ್ತರ ಸಾಧನೆಯನ್ನು ಮಾಡಲಿದ್ದಾರೆ. ಉದ್ಯೋಗದ ಸಮಸ್ಯೆಗಳು ಮರೆಯಾಗಲಿವೆ. ಭೂ ವಿವಾದವೊಂದು ಸುಖಾಂತ್ಯಗೊಳ್ಳಲಿದೆ. ಹಿರಿಯ ಅಧಿಕಾರಿಗಳು ತಪ್ಪನ್ನು ಕ್ಷಮಿಸಿ ಹೊಸ ಅವಕಾಶವನ್ನು ನೀಡುತ್ತಾರೆ. ಮಕ್ಕಳಿಗೆ ಉದ್ಯೋಗ ದೊರೆಯಲಿದೆ. ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸುವಿರಿ.

ವೃಷಭ

ಕುಟುಂಬದಲ್ಲಿ ಪ್ರಮುಖ ಬದಲಾವಣೆಗಳು ನಿಮ್ಮಿಂದ ಉಂಟಾಗಲಿವೆ. ವೃತ್ತಿ ಕ್ಷೇತ್ರದಲ್ಲಿ ಗೌರವಯುತ ಸ್ಥಾನಮಾನವಿರುತ್ತದೆ. ಆದಾಯದಲ್ಲಿ ತೊಂದರೆ ಇರುವುದಿಲ್ಲ. ಮಕ್ಕಳಿಗೆ ದೊಡ್ಡ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಸಾರಿಗೆ ಸೇವೆ ಕಲ್ಪಿಸುವ ಮೂಲಕ ಹಣ ಗಳಿಸುವಿರಿ. ಬೇರೆಯವರ ಹಣಕಾಸಿನ ವಿವಾದ ಪರಿಹಸಿರುವಿರಿ. ಆತ್ಮೀಯರೇ ನಿಮ್ಮ ವಿರೋಧಿಗಳಾಗುತ್ತಾರೆ. ಮಧ್ಯಸ್ಥಿಕೆಯ ವ್ಯವಹಾರದಲ್ಲಿ ತೊಂದರೆ ಅನುಭವಿಸುವಿರಿ. ಚರ್ಮದ ತೊಂದರೆಯಿಂದ ಬಳಲಬಹುದು. ರಾಜಕೀಯ ಪ್ರವೇಶಿಸುವ ಆಸೆಯು ಈಡೇರುವ ಸಾಧ್ಯತೆಗಳಿವೆ. ದೀರ್ಘಕಾಲ ಅನಾರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ತಂದೆಯವರಿಂದ ಹಣದ ಸಹಾಯ ದೊರೆಯುತ್ತದೆ.

ಮಿಥುನ

ಒಮ್ಮೆ ತೆಗೆದುಕೊಳ್ಳುವ ತೀರ್ಮಾನಗಳನ್ನು ಬದಲಿಸುವುದಿಲ್ಲ. ಮನೆಯನ್ನು ಕೊಳ್ಳುವ ಅಥವಾ ಕಟ್ಟಿಸುವ ವಿಚಾರದಲ್ಲಿ ಒಮ್ಮತ ಉಂಟಾಗುವುದಿಲ್ಲ. ವಿದ್ಯಾರ್ಥಿಗಳು ನಿಶ್ಚಿತ ಗುರಿ ತಲುಪಲು ಸಫಲರಾಗುತ್ತಾರೆ. ಉನ್ನತ ಮಟ್ಟದ ಜೀವನ ನಡೆಸಲು ಪ್ರಯತ್ನಿಸುವಿರಿ. ನಷ್ಟದ ಕಾರಣ ನಿಂತುಹೋಗಿದ್ದ ವ್ಯಾಪಾರವನ್ನು ಪುನಃ ಆರಂಭಿಸುವಿರಿ. ಸುಲಭವಾಗಿ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಸಮಾಜ ಸೇವೆಯಲ್ಲಿ ತೊಡಗಿದವರಿಗೆ ಗೌರವಯುತ ಸ್ಥಾನ ಮಾನ ದೊರೆಯುತ್ತದೆ. ಸ್ತ್ರೀಯರಿಗೆ ಹಾರ್ಮೋನಿನ ತೊಂದರೆ ಉಂಟಾಗಬಹುದು. ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ.

ಕಟಕ

ಉತ್ತಮ ಆದಾಯ ಇರುವ ಕಾರಣ ಮಾನಸಿಕ ನೆಮ್ಮದಿ ಇರುತ್ತದೆ. ಕಷ್ಟವಾದರೂ ಮನಸ್ಸಿನ ಮೇಲೆ ಹಿಡಿತ ಸಾಧಿಸುವಿರಿ. ಯೋಚಿಸದೆ ಮಾತನಾಡುವ ಕಾರಣ ವಿವಾದಕ್ಕೆ ಸಿಲುಕುವಿರಿ. ಕುಟುಂಬದಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ಸಾದ್ಯವಾಗುವುದಿಲ್ಲ. ಕುಟುಂಬದಲ್ಲಿ ನೆಮ್ಮದಿ ನೆಲೆಸಲು ಕಾರಣರಾಗುವಿರಿ. ಆತುರದಿಂದ ಎಲ್ಲರೂ ತಮ್ಮ ತಮ್ಮ ವಾದದಲ್ಲಿ ಮುಳುಗುತ್ತಾರೆ. ನಿಮಗೆ ಇಷ್ಟವೆನಿಸುವ ವಾಹನ ಕೊಳ್ಳುವ ವಿಚಾರ ಮುಂದೆ ಹೋಗುತ್ತದೆ. ತಂದೆಯವರ ಆದಾಯದಲ್ಲಿ ಕೊರತೆ ಕಂಡು ಬರುತ್ತದೆ. ವಾಹನಚಾಲನೆಯಿಂದ ತೊಂದರೆ ಉಂಟಾಗುತ್ತದೆ. ಉದ್ಯೋಗವನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ.

ಸಿಂಹ

ಶಾಂತಿ ಸಂಯಮದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಹಣದ ತೊಂದರೆ ಕಾಣದು. ಖರ್ಚು ವೆಚ್ಚಗಳನ್ನು ಕಡಿಮೆ ಮಾಡಲು ವಿಫಲರಾಗುವಿರಿ. ಕುಟುಂಬದಲ್ಲಿ ಬಹಳ ದಿನದ ನಂತರ ಮಂಗಳ ಕಾರ್ಯವನ್ನು ನಡೆಸಿಕೊಡುವಿರಿ. ಸಮಯ ಸಂದರ್ಭಕ್ಕೆ ತಕ್ಕಂತೆ ವರ್ತಿಸಿ ವಿವಾದದಿಂದ ದೂರ ಉಳಿಯುವಿರಿ . ಕೃಷಿ ಕಾರ್ಯದಲ್ಲಿ ಆಸಕ್ತಿ ಮೂಡುತ್ತದೆ. ಸಂಗಾತಿಯ ವ್ಯಾಪಾರ ವ್ಯವಹಾರದಲ್ಲಿ ಪಾಲುಗಾರರಾಗುವಿರಿ. ಉದ್ಯೋಗದಲ್ಲಿ ಒತ್ತಡದ ಸನ್ನಿವೇಶ ಎದುರಾಗುತ್ತದೆ. ಸಂತಾನ ಲಾಭವಿದೆ. ಅಧಿಕಾರಿಗಳಿಗೆ ಸಹೋದ್ಯೋಗಿಗಳ ಜೊತೆಯಲ್ಲಿ ಉತ್ತಮ ಬಾಂಧವ್ಯ ಇರುವುದಿಲ್ಲ. ಶಾಂತಿ ಸಹನೆಯನ್ನು ಕಾಪಾಡಿಕೊಂಡಷ್ಟೂ ಒಳ್ಳೆಯದು.

ಕನ್ಯಾ

ಉತ್ತಮ ಆದಾಯ ಹೊಸ ಕನಸಿಗೆ ಕಾರಣವಾಗಲಿದೆ. ಹಣದ ವ್ಯವಹಾರದಲ್ಲಿನ ತೊಂದರೆ ದೂರವಾಗಲಿದೆ. ದೃಢವಾದ ಮನಸ್ಸಿದ್ದರೆ ವ್ಯಾಪಾರ ವ್ಯವಹಾರಗಳಲ್ಲಿ ತೊಂದರೆ ಇರಲಾರದು. ಕುಟುಂಬದ ರಕ್ಷಣೆಯ ಜವಾಬ್ದಾರಿಯನ್ನು ಹೊರುವಿರಿ. ಸಂಗಾತಿಯ ಜೊತೆಗೂಡಿ ಮಾಡುವ ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ಯಾರನ್ನೂ ಟೀಕಿಸದಿರಿ. ದಿಢೀರನೆ ಆರೋಗ್ಯದಲ್ಲಿ ತೊಂದರೆ ಎದುರಾಗಬಹುದು. ಹಣವನ್ನು ಖರ್ಚು ಮಾಡುವ ಮುನ್ನ ಸಾಧಕ ಬಾಧಕಗಳನ್ನು ನೋಡಿರಿ. ಬಂಧು ವರ್ಗದವರಿಗೆ ಹಣದ ಸಹಾಯ ಮಾಡುವಿರಿ. ಉಪಯೋಗಿಸುತ್ತಿರುವ ವಾಹನ ಬದಲಿಸುವಿರಿ. ಉದ್ಯೋಗದಲ್ಲಿ ಚೇತೋಹಾರಿ ಬೆಳವಣಿಗೆ ಕಂಡುಬರುತ್ತದೆ. ಸ್ವಗೃಹ ಭೂಲಾಭವಿದೆ.

ತುಲಾ

ಕೌಟುಂಬಿಕ ಜೀವನದಲ್ಲಿ ಹೊಸತನ ಮೂಡಲಿದೆ. ಹೊಸ ಅವಕಾಶಗಳು ನಿಮ್ಮ ಜೀವನವನ್ನು ರೂಪಿಸಲಿದೆ. ನಿಮ್ಮ ಕೆಲಸದಲ್ಲಿ ನೆರವಾಗಲು ಸಹೋದ್ಯೋಗಿಗಳು ಮುಂದೆ ಬರುತ್ತಾರೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಪ್ರತಿಷ್ಠಿತ ಕಂಪನಿಯಿಂದ ಕೆಲಸದ ಆಹ್ವಾನ ಬರಲಿದೆ. ಉನ್ನತ ಮಟ್ಟದ ಸ್ಥಾನ ಮಾನಗಳು ನಿಮ್ಮದಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಆತುರದ ತೀರ್ಮಾನ ತಾಳದೆ ಹೋದಲ್ಲಿ ಲಾಭವಿರುತ್ತದೆ. ನಿಮ್ಮ ಕಾರ್ಯ ವಿಸ್ತಾರವನ್ನು ಹೆಚ್ಚಿಸಲು ಹಿರಿಯರ ಸಲಹೆ ಪಡೆಯುವಿರಿ. ವಂಶದ ಆಸ್ತಿ ವಿವಾದವು ಮಾತುಕತೆಯಿಂದ ಸುಖಾಂತ್ಯವಾಗಲಿದೆ. ಮಕ್ಕಳು ನಿಮ್ಮ ರೀತಿ ನೀತಿಯನ್ನು ಅನುಸರಿಸುತ್ತಾರೆ. ಆರೋಗ್ಯವನ್ನು ಸ್ಥಿರವಾಗಿರಸಲು ಪ್ರಯತ್ನಿಸಿ. ಅತಿಯಾದ ಆತುರ ಒಳ್ಳೆಯದಲ್ಲ.

ವೃಶ್ಚಿಕ

ಉತ್ತಮ ಅವಕಾಶ ದೊರೆತರೂ ನೌಕರಿ ಬದಲಿಸುವುದಿಲ್ಲ. ನಿಮ್ಮಲ್ಲಿರುವ ಹಟದ ಗುಣದಿಂದಾಗಿ ತೊರೆದು ಬಂದ ಹಳೆಯ ಉದ್ಯೋಗ ಸೇರಬೇಕಾಗುತ್ತದೆ. ಕುಟುಂಬದಲ್ಲಿ ಗಲಿಬಿಲಿಯ ಸನ್ನಿವೇಶ ಉಂಟಾಗುತ್ತದೆ. ಮಕ್ಕಳ ಮದುವೆಯ ಮಾತುಕತೆ ನಡೆಯಲಿದೆ. ಕೆಲದಿನಗಳ ಕಾಲ ಹಣಕಾಸಿನ ವ್ಯವಹಾರವೊಂದು ಮುಂದೆ ಹೋಗಲಿದೆ. ಆರೋಗ್ಯದಲ್ಲಿ ಏರಿಳಿತಗಳು ತಲೆದೋರುತ್ತವೆ. ಹೊಸ ವ್ಯಾಪಾರವನ್ನು ಆರಂಭಿಸಿ ಉತ್ತಮ ಆದಾಯ ಗಳಿಸುವಿರಿ. ವಿರೋಧಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುವಿರಿ. ಸರ್ಕಾರಿ ಅಧಿಕಾರಿಗಳ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ಕಲಿಕೆ ಮುಂದುವರೆಸುತ್ತಾರೆ. ಮನಸ್ಸಿನ ಶಾಂತಿಗಾಗಿ ಜೀವನದ ರೀತಿಯನ್ನು ಬದಲಿಸುವಿರಿ.

ಧನಸ್ಸು

ಸಮಾಜದ ಪ್ರತಿಷ್ಠಿತ ವ್ಯಕ್ತಿಯಾಗಿ ಹೊರ ಹೊಮ್ಮುವಿರಿ. ಕುಟುಂಬದ ಪ್ರತಿಯೊಬ್ಬರ ಸಹಾಯ ದೊರೆಯುತ್ತದೆ. ಮಕ್ಕಳಿಗೆ ಕೆಲಸ ಕಾರ್ಯಗಳಲ್ಲಿ ಬೆಂಗಾವಲಾಗಿ ನಿಲ್ಲುವಿರಿ. ಸರ್ಕಾರಿ ಸಂಬಧಿತ ಸಂಸ್ಠೆಗಳಲ್ಲಿ ಉದ್ಯೋಗ ದೊರೆಯುತ್ತದೆ. ಸಮಾಜದ ಗಣ್ಯ ವ್ಯಕ್ತಿಯೊಬ್ಬರನ್ನು ಭೇಟಿ ಮಾಡುವಿರಿ. ಸ್ವಂತ ಶಾಲಾ ಕಾಲೇಜನ್ನು ಆರಂಭಿಸುವ ಆಸೆ ಉಂಟಾಗಲಿದೆ. ಹಣಕಾಸಿನ ಯೋಜನೆ ಯಶಸ್ವಿಯಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ವಿದ್ಯಾರ್ಥಿಗಳು ಏಕಾಂಗಿಯಾಗಿ ಗುರಿ ತಲುಪಲಿದ್ದಾರೆ. ಯೋಗ ವ್ಯಾಯಾಮದಿಂದ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತದೆ. ರಾಜಕೀಯ ಪ್ರವೇಶಿಸಲು ಅವಕಾಶವೊಂದು ದೊರೆಯುತ್ತದೆ. ಕೋಪದಿಂದ ಆತ್ಮೀಯರ ಸ್ನೇಹ ಕಳೆದುಕೊಳ್ಳುವಿರಿ.

ಮಕರ

ನಿಧಾನಗತಿಯ ಕೆಲಸ ಕಾರ್ಯದಿಂದ ನಿರೀಕ್ಷಿಸಿದ ಯಶಸ್ಸು ನಿಮ್ಮದಾಗುತ್ತದೆ. ಕ್ರಿಯಾಶೀಲ ಗುಣದಿಂದಾಗಿ ಕುಟುಂಬದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಉದ್ಯೋಗದಿಂದ ನಿರೀಕ್ಷೆಯಂತೆ ಹಣ ಗಳಿಸಲು ಸಾಧ್ಯವಾಗದು. ಸತತ ಪ್ರಯತ್ನದಿಂದ ವ್ಯಾಪಾರವೊಂದನ್ನು ಆರಂಭಿಸುವಿರಿ. ಕ್ರಮೇಣವಾಗಿ ಹಣಕಾಸಿನ ಸ್ಥಿತಿಯಲ್ಲಿ ಸ್ಥಿರತೆ ಕಂಡುಬರುತ್ತದೆ. ಅವಿವಾಹಿತರಿಗೆ ಸಂಬಂಧದಲ್ಲಿ ವಿವಾಹವಾಗುತ್ತದೆ. ಸಾಲದ ವ್ಯವಹಾರದಲ್ಲಿ ತೊಂದರೆ ಅನುಭವಿಸುವಿರಿ. ವಿದ್ಯಾರ್ಥಿಗಳು ನಿರ್ಭೀತಿಯಿಂದ ವ್ಯಾಸಂಗದಲ್ಲಿ ನಿರತರಾಗಲಿದ್ದಾರೆ. ಷೇರು ವ್ಯಾಪಾರ ವ್ಯವಹಾರದಲ್ಲಿ ಸಾಧಾರಣ ಲಾಭ ಗಳಿಸುವಿರಿ. ಮಕ್ಕಳ ಆರೋಗ್ಯದಲ್ಲಿ ಸ್ಥಿರತೆ ಇರುತ್ತದೆ.

ಕುಂಭ

ಆಡುವ ಮಾತಿನ ಮೇಲೆ ಜೀವನದ ಆಗುಹೋಗುಗಳು ನಿರ್ಧಾರವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಸಾಧಾರಣ ಆದಾಯ ಗಳಿಸುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿಯ ವಾತಾವರಣ ಇರಲಿದೆ. ಹೊಸ ಮನೆಯನ್ನು ಕೊಳ್ಳುವ ಯೋಜನೆ ರೂಪಿಸುವಿರಿ. ಕ್ರಮೇಣವಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಗೆಲ್ಲುವವರೆಗೂ ಪಟ್ಟು ಬಿಡದ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆಯನ್ನು ಮಾಡಲಿದ್ದಾರೆ. ಉದ್ಯೋಗದಲ್ಲಿ ಕೆಲವು ಬದಲಾವಣೆಗಳು ಘಟಿಸಲಿವೆ. ಎಲ್ಲರ ಜೊತೆಯಲ್ಲಿ ಸ್ನೇಹದಿಂದ ಇದ್ದಲ್ಲಿ ಕಷ್ಟ ನಷ್ಟಗಳು ಕಡಿಮೆ ಆಗಲಿವೆ. ಹೊಸ ವ್ಯಾಪಾರವನ್ನು ಆರಂಭಿಸದಿರಿ. ಸಂಬಂಧದಲ್ಲಿ ವಿವಾಹವಾಗುತ್ತದೆ. ವಾಸ ಸ್ಥಳವನ್ನು ಬದಲಿಸುವಿರಿ. ಯುವಕ ಯುವತಿಯರು ಸಾಹಸದ ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ.

ಮೀನ

ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದು. ತೆಗೆದುಕೊಂಡ ನಿರ್ಧಾರವನ್ನು ಬದಲಾಯಿಸಿದಲ್ಲಿ ತೊಂದರೆ ಉಂಟಾಗುತ್ತದೆ. ಪ್ರಯತ್ನಕ್ಕೆ ತಕ್ಕಂತೆ ಫಲಗಳು ದೊರೆಯಲಿದೆ. ಬುದ್ಧಿವಂತಿಕೆಯಿಂದ ಕೆಲಸವನ್ನು ಸುಲಭಗೊಳಿಸಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಅದೃಷ್ಟವಿದೆ. ಹವ್ಯಾಸಿ ಬರಹಗಾರರಿಗೆ ಶುಭವಿದೆ. ಪತ್ರಿಕಾ ಪ್ರತಿನಿಧಿಗಳಿಗೆ ವಿಶೇಷ ಸ್ಥಾನ ದೊರೆಯುತ್ತದೆ. ವ್ಯಾಪಾರದಲ್ಲಿ ಲಾಭವಿದೆ. ನೌಕರ ವೃಂದಕ್ಕೆ ಲಾಭದಾಯಕ ವರ್ತಮಾನವೊಂದು ಬರಲಿದೆ. ಕಾನೂನು ಪ್ರಕ್ರಿಯೆಯಲ್ಲಿ ಜಯ ಲಭಿಸುತ್ತದೆ. ನೀರಾವರಿ ಭೂಮಿ ಕೊಂಡು ಕೃಷಿ ಕೆಲಸ ಆರಂಭಿಸುವಿರಿ. ನಿಮ್ಮ ತಾಯಿಯ ಹೆಸರಲ್ಲಿನ ಆಸ್ತಿಯು ನಿಮಗೆ ಉಡುಗೊರೆಯಾಗಿ ದೊರೆಯುತ್ತದೆ. ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).