ಕನ್ನಡ ಸುದ್ದಿ  /  Astrology  /  Monthly Horoscope Astrological Prediction For March 2024 Zodiac Signs Kundali News In Kannada Sts

Monthly Horoscope: ನಿಮಗಿಷ್ಟವಾದ ವಸ್ತು ಕಳೆದು ಹೋಗಬಹುದು, ದಾಂಪತ್ಯದಲ್ಲಿರಲಿದೆ ಹೊಂದಾಣಿಕೆ; ಮಾರ್ಚ್​ ತಿಂಗಳ ರಾಶಿಭವಿಷ್ಯ

Monthly Horoscope Of March 2024: ಒಳಿತನ್ನು ಸ್ವಾಗತಿಸಿ, ಕೆಡಕನ್ನು ಎದುರಿಸುವುದೇ ಜೀವನ. ರಾಶಿ ಚಕ್ರಕ್ಕೆ ತಕ್ಕಂತೆ ವಿವಿಧ ರಾಶಿಗಳ ಮಾಸ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. 2024ರ ಆಗಸ್ಟ್ ತಿಂಗಳಲ್ಲಿ ಹೇಗಿರಲಿದೆ ನಿಮ್ಮ ರಾಶಿಭವಿಷ್ಯ ತಿಳಿಯಿರಿ.

ಮಾರ್ಚ್​ ತಿಂಗಳ ಮಾಸ ಭವಿಷ್ಯ
ಮಾರ್ಚ್​ ತಿಂಗಳ ಮಾಸ ಭವಿಷ್ಯ

ಮಾರ್ಚ್​ ತಿಂಗಳ ಮಾಸ ಭವಿಷ್ಯ: ʼನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಹಲವರು ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Monthly Horoscope Of March 2024)

ಮೇಷ

ಬುದ್ಧಿವಂತಿಕೆಯಿಂದ ಪ್ರತಿಯೊಂದು ವಿಚಾರವನ್ನು ಕಾರ್ಯರೂಪಕ್ಕೆ ತರುವಿರಿ. ನಿಮ್ಮಲ್ಲಿರುವ ಜ್ಞಾನವನ್ನು ಬೇರೆಯವರಿಗೂ ಹಂಚುವಿರಿ. ಅವಶ್ಯಕತೆ ಇದ್ದಲ್ಲಿ ಬೇರೆಯವರಿಗೆ ಹಣದ ಸಹಾಯ ಮಾಡುವಿರಿ. ಸದಾಕಾಲ ಚುರುಕುತನದಿಂದ ಕೆಲಸ ನಿರ್ವಹಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳ ಅವಕೃಪೆಗೆ ಒಳಗಾಗುವಿರಿ. ಕಷ್ಟಪಟ್ಟು ದುಡಿದ ಹಣವನ್ನು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸುವಿರಿ. ವಿದ್ಯಾರ್ಥಿಗಳು ಅನಾವಶ್ಯಕ ಚಿಂತೆ ಮತ್ತು ಒತ್ತಡಕ್ಕೆ ಒಳಗಾಗಬಾರದು. ಪ್ರತಿ ವಿಚಾರವನ್ನು ಆಸಕ್ತಿಯಿಂದ ಅರ್ಥೈಸಿಕೊಳ್ಳುವಿರಿ. ಇದರಿಂದಾಗಿ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ಸಮಾಜದಲ್ಲಿ ಉತ್ಸವ ಸ್ಥಾನಮಾನ ಗಳಿಸುವಿರಿ. ಯಾತ್ರಾ ಸ್ಥಳಕ್ಕೆ ಭೇಟಿ ಮಾಡಲು ಇಚ್ಚಿಸುವಿರಿ.

ವೃಷಭ

ನಿಮ್ಮೆಲ್ಲಾ ಬಹುತೇಕ ಆಸೆ ಆಕಾಂಕ್ಷಿಗಳು ಈಡೇರಲಿವೆ. ಹಣಕಾಸಿನ ತೊಂದರೆ ಬಾರದು. ಆದರೆ ಖರ್ಚು ವೆಚ್ಚಗಳ ಬಗ್ಗೆ ಗಮನವಿರಬೇಕು. ಹಣದ ಕೊರತೆ ಕಂಡುಬಂದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಕೃಷಿಕರಿಗೆ ವಿಶೇಷವಾದ ಶುಭಫಲಗಳು ದೊರೆಯಲಿವೆ. ಮಕ್ಕಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಒಳ್ಳೆ ಕೆಲಸಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ತಂದೆಗೆ ಹಣದ ಸಹಾಯ ಮಾಡುವಿರಿ. ದುಡುಕುತನ ತೋರದೆ ನಿಧಾನಗತಿಯ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಸೋದರ ಅಥವಾ ಸೋದರಿಯ ಜೀವನದಲ್ಲಿ ಆಶಾದಾಯಕ ತಿರುವುಗಳು ಕಂಡುಬರುತ್ತವೆ. ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳಬಹುದು. ಪ್ರತಿಯೊಬ್ಬರ ಸಲಹೆಯನ್ನು ಪಾಲಿಸದೆ ಹೋದರು ಆಲಿಸುವುದು ಒಳ್ಳೆಯದು.

ಮಿಥುನ

ಮನಕ್ಕೆ ಸರಿ ಎಣಿಸುವ ಕೆಲಸ ಕಾರ್ಯಗಳನ್ನು ಮಾತ್ರ ನಿರ್ವಹಿಸುವಿರಿ. ಆಪತ್ಕಾಲದಲ್ಲಿ ಧೈರ್ಯವು ನಿಮ್ಮನ್ನು ಕಾಪಾಡುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸುವಿರಿ. ಯಾವುದೇ ಕೆಲಸವಾದರೂ ಚಿಂತಿಸಿ ಆರಂಭಿಸುವಿರಿ. ದುಡುಕುತನ ಇರದ ಕಾರಣ ಹಣಕಾಸಿನ ತೊಂದರೆ ಕಾಣುವುದಿಲ್ಲ. ಕಣ್ಣಿನ ತೊಂದರೆ ಉಂಟಾಗಬಹುದು. ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಸ್ವಯಂ ಇಚ್ಛೆಯಿಂದ ವಹಿಸಿಕೊಳ್ಳುವಿರಿ. ಧಾರ್ಮಿಕ ಕ್ರಿಯಾ ವಿಧಿಗಳನ್ನು ನಡೆಸಲು ಸಹಾಯ ಮಾಡುವಿರಿ. ಒಂದೇ ಬಾರಿ ಹಲವು ಕೆಲಸಗಳನ್ನು ಮಾಡಬಲ್ಲ ಶಕ್ತಿ ಯುಕ್ತಿ ಇರುತ್ತದೆ. ಬೇರೆಯವರ ಪ್ರಭಾವಕ್ಕೆ ಸುಲಭವಾಗಿ ಮಣಿಯುವಿರಿ. ವಿದ್ಯಾರ್ಥಿಗಳು ಉತ್ತಮ ಅಂಕವನ್ನು ಗಳಿಸಲು ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು.

ಕಟಕ

ಕೇವಲ ಕುಟುಂಬದವರಿಗೆ ಮಾತ್ರವಲ್ಲದೆ ಹೊರಗಿನ ಜನರ ಮನಸ್ಸನ್ನು ಗೆಲ್ಲುವಿರಿ. ಜನರಿಗೆ ಉಪಯೋಗವಾಗುವಂತಹ ಕೆಲಸ ಕಾರ್ಯಗಳನ್ನು ಮಾಡುವಿರಿ. ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗದೆ ಹೋದಲ್ಲಿ ವಿಶೇಷ ಸಾಧನೆ ಮಾಡುವರು. ಸಂಗೀತ, ನಾಟ್ಯದಲ್ಲಿ ವಿಶೇಷ ಆಸಕ್ತಿ ತೋರುವಿರಿ. ಮನಸ್ಸಿನಲ್ಲಿರುವ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಉತ್ತಮ ಅನುಕೂಲತೆಗಳು ಕಂಡುಬರುತ್ತವೆ. ತಂದೆಯವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ಬುದ್ಧಿವಂತಿಕೆಯಿಂದ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುರಿ. ಕೆಲಸ ಕಾರ್ಯಗಳಲ್ಲಿ ಬೇರೆಯವರನ್ನು ಅವಲಂಬಿಸುವುದಿಲ್ಲ. ಯಾರನ್ನು ಸುಲಭವಾಗಿ ನಂಬುವುದು ಇಲ್ಲ. ಸದಾಕಾಲ ಚುರುಕುತನದಿಂದ ಕೆಲಸ ನಿರ್ವಹಿಸುವಿರಿ. ಸೋದರರ ಜೊತೆಯಲ್ಲಿ ಉತ್ತಮ ಸ್ಪಂದನೆ ಇರುತ್ತದೆ. ದುಡುಕಿ ಮಾತನಾಡದಿರಿ.

ಸಿಂಹ

ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಗಮನ ನೀಡಿರಿ. ಬೇರೆ ದಾರಿ ಕಾಣದೆ ವಿವಿಧ ರೀತಿಯ ಕೆಲಸಗಳನ್ನು ಒಬ್ಬರೇ ನಿರ್ವಹಿಸಬೇಕಾಗುತ್ತದೆ. ಯುವಕ ಯುವತಿಯರಿಗೆ ವಿಶೇಷವಾದಂತಹ ಸ್ಥಾನಮಾನ ಲಭಿಸುತ್ತದೆ. ದೈನಂದಿನ ವ್ಯಾಯಾಮದ ಉತ್ತಮ ಆರೋಗ್ಯವನ್ನು ಕಲ್ಪಿಸುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ಅಭ್ಯಾಸದಲ್ಲಿ ತೊಡಗಬೇಕಾಗುತ್ತದೆ. ಎಷ್ಟೇ ಬುದ್ಧಿವಂತರಾದರು ತಮ್ಮಲ್ಲಿರುವ ಬುದ್ದಿವಂತಿಕೆಯನ್ನು ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ. ಸೋದರ ಅಥವಾ ಸೋದರಿಗೆ ಯಂತ್ರೋಪಕರಣಗಳಿಂದ ಅನುಕೂಲತೆಗಳು ಉಂಟಾಗಲಿವೆ. ಸೋದರ ಮಾವನ ಜೊತೆಯಲ್ಲಿ ಅನಗತ್ಯ ಮನಸ್ತಾಪ ಉಂಟಾಗಬಹುದು. ತಲೆಗೆ ಪೆಟ್ಟಾಗಬಹುದು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಕನ್ಯಾ

ತಾಯಿಯವರ ಮಾನಸಿಕ ಶಕ್ತಿ ವೃದ್ಧಿಸುತ್ತದೆ. ಸುಖ ಸಂತೋಷದ ಜೀವನ ಅವರೊಂದಿಗೆ ನಡೆಸುವಿರಿ. ಯಾರಿಗೂ ತೊಂದರೆ ನೀಡದೆ ಜೀವನ ನಡೆಸುವಿರಿ. ಅವಶ್ಯಕತೆ ಇದ್ದಲ್ಲಿ ಅಪರಿಚಿತರಿಗೂ ಸಹಾಯ ಮಾಡುವಿರಿ. ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸುವಿರಿ. ಸ್ವಂತ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುವಿರಿ. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆ ಇರುತ್ತದೆ. ವೇಳೆಗೆ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗದು. ಇದರಿಂದ ನಿಶಕ್ತಿ ನಿಮ್ಮನ್ನು ಕಾಡಬಹುದು. ಸಂಗಾತಿಗೆ ಚರ್ಮಕ್ಕೆ ಸಂಬಂಧಿಸಿದ ದೋಷ ಉಂಟಾಗಬಹುದು. ಉತ್ತಮ ಆಹಾರ ಸೇವಿಸಿದಲ್ಲಿ ತೊಂದರೆ ಇರುವುದಿಲ್ಲ. ಅನಾವಶ್ಯಕ ಮಾನಸಿಕ ಒತ್ತಡ ಇರಲಿದೆ.

ತುಲಾ

ಸಮಾಜದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗುವಿರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚಿನ ಶ್ರದ್ಧೆ ತೋರಬೇಕು. ಆತುರದಲ್ಲಿ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಇದರಿಂದ ಹಿನ್ನೆಡೆ ಉಂಟಾಗಬಹುದು. ಸಮಾಜದ ಗಣ್ಯ ವ್ಯಕ್ತಿಗಳ ಸ್ನೇಹ ದೊರೆಯುತ್ತದೆ. ಬರವಣಿಗೆಯಲ್ಲಿ ಉತ್ತಮ ಅವಕಾಶ ಮತ್ತು ಯಶಸ್ಸನ್ನು ಗಳಿಸುವಿರಿ. ಚರ್ಮದ ದೋಷ ಕಂಡು ಬರಬಹುದು. ಕೈ ಕಾಲುಗಳಲ್ಲಿ ಊತದ ತೊಂದರೆ ಕಂಡು ಬರಬಹುದು. ನಿಕಟ ಸಂಬಂಧಿಕದ ಜೊತೆಯಲ್ಲಿ ವಾದವಿವಾದಗಳು ಎದುರಾಗಲಿವೆ. ಬುದ್ಧಿವಂತಿಕೆಯ ನಿರ್ಧಾರಗಳಿಂದ ಆಪತ್ತಿನಿಂದ ದೂರ ಉಳಿಯುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ವಿಶೇಷವಾದ ಆಸಕ್ತಿ ತೋರುವಿರಿ. ಸ್ನೇಹಿತರ ಸಹಾಯ ಸಹಕಾರ ಸದಾ ದೊರೆಯುತ್ತದೆ.

ವೃಶ್ಚಿಕ

ಸೋದರ ಮಾವನಿಗೆ ತೊಂದರೆ ಇದೆ. ತಾಯಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ಇರಲಿ. ನಿಮ್ಮಲ್ಲಿರುವ ಬುದ್ದಿ ಶಕ್ತಿಗೆ ಸವಾಲನೆಸುವ ಕೆಲಸ ಕಾರ್ಯಗಳು ದೊರೆಯಲಿವೆ. ಎಲ್ಲರ ಮನಸ್ಸಿಗೂ ಸಂತೋಷವಾಗುವಂತೆ ಮಾತನಾಡುವಿರಿ. ಅನಾಥರಿಗೆ ಸಹಾಯ ಮಾಡುವಿರಿ. ನಿಮಗೆ ಅರಿವಿಲ್ಲದಂತೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಮಂತ್ರ ತಂತ್ರಗಳಲ್ಲಿ ನಂಬಿಕೆ ಮತ್ತು ಕಲಿಯುವ ಆಸೆ ಉಂಟಾಗುತ್ತದೆ. ವಂಶದ ಹಿರಿಯರ ಸಹಾಯ ಸಹಕಾರ ದೊರೆಯುತ್ತದೆ. ಹೆಚ್ಚಿನ ಪ್ರಯತ್ನಪಟ್ಟಲ್ಲಿ ಸ್ವಂತ ಮನೆಯ ಆಸೆ ನೆರವೇರುತ್ತದೆ. ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುವ ಯೋಜನೆ ರೂಪಿಸುವಿರಿ.

ಧನಸ್ಸು

ಮನದ ಆಸೆಗಳು ಹೆಚ್ಚಲಿವೆ. ಅಪಾರ ಧೈರ್ಯವಿರುವ ಕಾರಣ ಅಪಾಯವೆನಿಸುವ ಕೆಲಸ ಕಾರ್ಯಗಳನ್ನು ಮಾಡುವಿರಿ. ತಂದೆ ತಾಯಿಯ ಸೌಖ್ಯಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ. ಯುವಕರಿಗೆ ಜೀವನ ರೂಪಿಸಿಕೊಳ್ಳಲು ಉತ್ತಮ ಅವಕಾಶಗಳು ದೊರೆಯಲಿವೆ. ಸ್ವಂತ ವಾಹನವನ್ನು ಕೊಳ್ಳುವಿರಿ. ನಿಮಗಿಷ್ಟವಾದ ವಸ್ತುವೊಂದು ಕಳೆದು ಹೋಗಬಹುದು ಗಮನ ಇರಲಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸಿ. ಬಂಧು-ಬಳಗದ ವರಜೊತೆಯಲ್ಲಿ ಉತ್ತಮ ಬಾಂಧವ್ಯ ಇರುವುದಿಲ್ಲ. ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಏರಿಳಿತ ಉಂಟಾಗುತ್ತದೆ. ಸಂಗಾತಿಗೆ ಅನಾವಶ್ಯಕ ಮಾನಸಿಕ ಒತ್ತಡ ಇರುತ್ತದೆ.

ಮಕರ

ಸೋದರರ ಸುಖ ಸಂತೋಷಕ್ಕೆ ಕಾರಣರಾಗುವಿರಿ. ವಂಶದ ಮನೆಗೆ ಸಂಬಂಧಿಸಿದ ವಿವಾದವು ಬಗೆಹರಿಯುತ್ತದೆ. ಸಂತಾನ ಲಾಭವಿದೆ. ಹಣದ ತೊಂದರೆ ಇರುವುದಿಲ್ಲ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಧೈರ್ಯ ಸಾಹಸದ ಗುಣ ಎಲ್ಲರಿಗೂ ಮಾದರಿಯಾಗುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನಮಾನಗಳು ಲಭಿಸುತ್ತದೆ. ತಂದೆ ಮತ್ತು ಕಿರಿಯ ಸೋದರ ನಡುವೆ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ. ತಾಯಿಯವರಿಗೆ ತವರು ಮನೆಯಿಂದ ಹಣದ ಸಹಾಯ ದೊರೆಯಲಿದೆ. ನಷ್ಟವನ್ನು ಲೆಕ್ಕಿಸದೆ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಬೇಸರ ಕಳೆಯಲು ಕುಟುಂಬದ ಎಲ್ಲರೊಂದಿಗೆ ದೀರ್ಘ ಕಾಲದ ಪ್ರವಾಸಕ್ಕೆ ತೆರಳುವಿರಿ. ಹೊಸ ವಾಹನವನ್ನು ಕೊಳ್ಳುವಿರಿ.

ಕುಂಭ

ಮಕ್ಕಳ ವಿಚಾರದಲ್ಲಿ ನಿಮ್ಮ ನಿರೀಕ್ಷೆ ಹುಸಿಯಾಗುವುದಿಲ್ಲ. ಮಕ್ಕಳು ವಿಶೇಷ ಸಾಧನೆಯಲ್ಲಿ ತೊಡಗುತ್ತಾರೆ. ಬೇರೆಯವರಿಗೆ ಬೇಸರವಾಗುವಷ್ಟು ಮಾತನಾಡುವಿರಿ. ಉತ್ತಮ ಹಾಸ್ಯದ ಮನೋಭಾವನೆ ಇರುತ್ತದೆ. ಶಾಸ್ತ್ರ ಸಂಪ್ರದಾಯಗಳಲ್ಲಿ ಆಸಕ್ತಿ ಮೂಡುತ್ತದೆ. ಮನಸ್ಸಿಗೆ ಇಷ್ಟವೆನಿಸುವ ಕೆಲಸ ಕಾರ್ಯಗಳನ್ನು ಮಾಡಲಿಚ್ಚಿಸುವಿರಿ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಎಂದಿಗೂ ಬದಲಾಯಿಸುವುದಿಲ್ಲ. ಕೈಹಿಡಿದ ಕೆಲಸ ಕಾರ್ಯಗಳನ್ನು ಯಶಸ್ಸು ಗಳಿಸುವವರೆಗೂ ರಹಸ್ಯವಾಗಿಡುವಿರಿ. ನಿಮ್ಮ ಮಾತಿನಲ್ಲಿ ಗೂಡಾರ್ಥವಿರುತ್ತದೆ. ವಿದ್ಯಾರ್ಥಿಗಳು ಉನ್ನತ ಯಶಸ್ಸು ಪಡೆಯಲಿದ್ದಾರೆ. ಹಣಕಾಸಿನ ತೊಂದರೆ ಇರುವುದಿಲ್ಲ. ಗುರುಗಳ ಅನುಗ್ರಹ ದೊರೆಯಲಿದೆ. ಆತ್ಮೀಯರ ಸಹಾಯ ಸಹಕಾರ ಯಶಸ್ಸಿಗೆ ಕಾರಣವಾಗಲಿದೆ. ಬೇರೆಯವರಿಗೆ ಕಷ್ಟವೆನಿಸುವ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಬಲ್ಲಿರಿ.

ಮೀನ

ವಿದ್ಯಾರ್ಥಿಗಳಿಗೆ ಶುಭ ಫಲಗಳು ದೊರೆಯಲಿವೆ. ನಡೆಯಬೇಕಿದ್ದ ವಿವಾಹವು ಅನಿವಾರ್ಯವಾಗಿ ಮುಂದೂಡಬೇಕಾದ ಬಹುದು. ವಿರೋಧಿಗಳ ಬಗ್ಗೆ ಎಚ್ಚರಿಕೆ ಇರಲಿ. ಮಂತ್ರ ತಂತ್ರದಲ್ಲಿ ನಂಬಿಕೆ ಆಸಕ್ತಿ ಮೂಡುತ್ತದೆ. ಎಲ್ಲರ ಮನಸ್ಸಿಗೂ ಸಂತಸ ಮೂಡುವಂತೆ ಮಾತನಾಡುವಿರಿ. ತೀರ್ಥಯಾತ್ರೆಗೆ ಕುಟುಂಬದ ಎಲ್ಲರೊಂದಿಗೆ ತೆರಳುವಿರಿ. ಸೋದರ ಸೋದರಿಯರ ಒಡನೆ ವಿಶೇಷವಾದ ಪ್ರೀತಿ ವಿಶ್ವಾಸ ಇರುತ್ತದೆ. ಎಡಗಣ್ಣಿಗೆ ತೊಂದರೆ ಉಂಟಾಗಬಹುದು. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ವಾದ ವಿವಾದಗಳಲ್ಲಿ ಸೋಲು ಉಂಟಾಗುವುದಿಲ್ಲ. ಮಾಡುವ ಕೆಲಸಗಳೆಲ್ಲ ಸರಿ ಎಂಬ ಭಾವನೆ ನಿಮಗಿರುತ್ತದೆ. ಒಮ್ಮೆ ತೆಗೆದುಕೊಳ್ಳುವ ತೀರ್ಮಾನಗಳನ್ನು ಬದಲಿಸದಿರಿ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).