ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Monthly Horoscope: ವೃತ್ತಿ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಗೌರವ, ಪ್ರೀತಿಸಿದವರೊಂದಿಗೆ ವಿವಾಹ ನಿಶ್ಚಯ; ಜೂನ್‌ ತಿಂಗಳ ಮಾಸ ಭವಿಷ್ಯ

Monthly Horoscope: ವೃತ್ತಿ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಗೌರವ, ಪ್ರೀತಿಸಿದವರೊಂದಿಗೆ ವಿವಾಹ ನಿಶ್ಚಯ; ಜೂನ್‌ ತಿಂಗಳ ಮಾಸ ಭವಿಷ್ಯ

Monthly Horoscope Of June 2024: ಒಳಿತನ್ನು ಸ್ವಾಗತಿಸಿ, ಕೆಡಕನ್ನು ಎದುರಿಸುವುದೇ ಜೀವನ. ರಾಶಿ ಚಕ್ರಕ್ಕೆ ತಕ್ಕಂತೆ ವಿವಿಧ ರಾಶಿಗಳ ಮಾಸ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. 2024ರ ಜೂನ್‌ ತಿಂಗಳಲ್ಲಿ ನಿಮ್ಮ ರಾಶಿಭವಿಷ್ಯ ಹೇಗಿರಲಿದೆ ತಿಳಿಯಿರಿ.

ಜೂನ್‌ ತಿಂಗಳ ಮಾಸ ಭವಿಷ್ಯ
ಜೂನ್‌ ತಿಂಗಳ ಮಾಸ ಭವಿಷ್ಯ

ಜೂನ್‌ ತಿಂಗಳ ಮಾಸ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಹಲವರು ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Monthly Horoscope Of June 2024).

ರಾಶಿಫಲ

ಮೇಷ

ಮೇಷ ರಾಶಿಯವರು ಈ ತಿಂಗಳು ಉತ್ತಮ ಫಲಗಳನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ಇದ್ದ ತೊಂದರೆ ಕ್ರಮೇಣವಾಗಿ ಮರೆಯಾಗುತ್ತದೆ. ಆದಾಯದಲ್ಲಿ ಪ್ರಗತಿ ಕಾಣಲಿದೆ. ಹಿರಿಯ ಸೋದರಿ ಅಥವ ಸೋದರನ ಜೀವನದ ತೊಂದರೆಗಳು ದೂರವಾಗಲು ಕಾರಣರಾಗುವಿರಿ. ಉನ್ನತ ಅಧಿಕಾರದ ಲಭ್ಯತೆ ಕಾಣುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಅಧಿಕಾರಿಗಳ ಪ್ರಶಂಸೆ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಅಭ್ಯಾಸದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ದೂರವಾಗಿದ್ದ ಕುಟುಂಬದ ಸದಸ್ಯರು ಮತ್ತೊಮ್ಮೆ ಒಂದೇ ಸೂರಿನಡಿ ಜೀವಿಸುತ್ತಾರೆ. ಬುದ್ಧಿವಂತಿಕೆಯ ಮಾತುಕತೆಯಿಂದ ವಾದ ವಿವಾದದಿಂದ ಪಾರಾಗುವಿರಿ. ದಂಪತಿ ನಡುವೆ ಹೊಂದಾಣಿಕೆಯ ಗುಣವಿರುತ್ತದೆ. ಗುರು ಶುಕ್ರರ ಸಂಯೋಗದಿಂದ ನೂತನ ದಂಪತಿಗಳ ಜೀವನ ಸಂತೋಷವಾಗಿರುತ್ತದೆ.

ವೃಷಭ

ವೃಷಭ ರಾಶಿಯವರಿಗೆ ಜೂನ್ ತಿಂಗಳಿನಲ್ಲಿ ಸಾಧಾರಣ ಫಲಿತಾಂಶ ದೊರೆಯುತ್ತವೆ. ಆತುರದ ತೀರ್ಮಾನ ತೆಗೆದುಕೊಳ್ಳದೆ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಾರೆ. ಮನದಲ್ಲಿ ಸದಾಕಾಲ ಧನಾತ್ಮಕ ಭಾವನೆಗಳು ಇರಲಿವೆ. ಉತ್ತಮ ಆದಾಯ ಇದ್ದರೂ ಖರ್ಚು ವೆಚ್ಚಗಳನ್ನು ನಿಯಂತ್ರಿಸಲಾರಿರಿ. ಉದ್ಯೋಗದಲ್ಲಿನ ಅಡ್ಡಿ ಆತಂಕಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವಿರಿ. ಸ್ಠಳೀಯ ಸಂಘ ಸಂಸ್ಠೆಗಳ ಆಡಳಿತ ದೊರೆಯುತ್ತದೆ. ವಂಶಾನುಗತವಾಗಿ ಬಂದ ವೃತ್ತಿಯನ್ನು ಅನುಸರಿಸುವಿರಿ. ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಸ್ವಂತ ವ್ಯಾಪಾರ ಇದ್ದಲ್ಲಿ ಅದನ್ನು ವಿಸ್ತರಿಸುವಿರಿ. ವಿದ್ಯಾರ್ಥಿಗಳು ಸ್ವಂತ ನಿರ್ಧಾರದಂತೆ ಉನ್ನತ ವಿದ್ಯಾಭ್ಯಾಸದ ಆಯ್ಕೆ ಮಾಡುತ್ತಾರೆ. ಹಣಕಾಸಿನ ತೊಂದರೆ ಇರುವುದಿಲ್ಲ. ಆದರೆ ಶುಭ ಕಾರ್ಯಗಳಿಗಾಗಿ ಹೆಚ್ಚಿನ ಹಣ ವಿನಿಯೋಗಿಸುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಬೇಕು. ದಂಪತಿ ನಡುವೆ ಹಣಕಾಸಿನ ವಿಚಾರವಾಗಿ ಅನಗತ್ಯ ವಾದ ವಿವಾದ ಇರಲಿವೆ. ಮಧುಮೇಹದಂಥ ದೋಷ ಉಳ್ಳವರು ಎಚ್ಚರಿಕೆಯಿಂದ ಇರಬೇಕು.

ಮಿಥುನ

ಮಿಥುನ ರಾಶಿಯಲ್ಲಿ ಜನಿಸಿರುವವರಿಗೆ ಉತ್ತಮ ಆದಾಯವಿರುತ್ತದೆ. ತೆಗೆದುಕೊಳ್ಳುವ ತೀರ್ಮಾನವನ್ನು ಸತತವಾಗಿ ಬದಲಾಯಿಸುವ ಕಾರಣ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಿಲ್ಲ. ಉದ್ಯೋಗ ಬದಲಾಯಿಸುವ ಪ್ರಯತ್ನಕ್ಕೆ ಫಲ ದೊರೆಯುತ್ತದೆ. ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಇರುವುದಿಲ್ಲ. ಆದಾಯಕ್ಕೆ ತಕ್ಕ ಖರ್ಚು ವೆಚ್ಚಗಳು ಎದುರಾಗಲಿವೆ. ಮಕ್ಕಳ ಸಲುವಾಗಿ ಖರ್ಚು ವೆಚ್ಚುಗಳು ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಗುರಿ ತಲುಪಲು ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಹಣದ ಕೊರತೆಯಿಂದ ಹೊರ ಬರಲು ಎರಡಕ್ಕಿಂತಲೂ ಹೆಚ್ಚಿನ ಉದ್ಯೋಗ ಮಾಡುವಿರಿ. ಸಾಲದ ವ್ಯವಹಾರದಿಂದ ದೂರ ಉಳಿಯುವಿರಿ. ಅತಿಯಾಸ ಆಸೆ ಇರದ ಕಾರಣ ನೆಮ್ಮದಿ ಇರುತ್ತದೆ. ನೆರೆಹೊರೆಯ ಜನರೊಂದಿಗೆ ವಾದ ವಿವಾದ ಇರಲಿವೆ. ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ. ಸಂಗಾತಿಯ ಸಹಾಯದಿಂದ ಹಣದ ಕೊರತೆ ದೂರವಾಗುತ್ತದೆ.

ಕಟಕ

ಕರ್ಕಾಟಕ ರಾಶಿಯವರು ಈ ತಿಂಗಳು ವಿಶೇಷ ಫಲಗಳನ್ನು ಪಡೆಯುತ್ತಾರೆ. ಆದರೆ ಅನಾವಶ್ಯಕವಾಗಿ ಬೇಡದ ವಿಚಾರಗಳಿಗೆ ಯೋಚನೆ ಮಾಡುತ್ತಾರೆ. ಅನಿರೀಕ್ಷಿತ ಧನಲಾಭದಿಂದಾಗಿ ನಿಮ್ಮ ಜೀವನ ಸುಖಮಯವಾಗಿರುತ್ತದೆ. ವೃತ್ತಿ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಗೌರವ ದೊರೆಯುತ್ತದೆ. ನಿಮ್ಮದೇ ತಪ್ಪಿನಿಂದಾಗಿ ಹಣದ ಕೊರತೆ ಉಂಟಾಗಬಹುದು. ಮಕ್ಕಳ ಮನಸ್ಸಿಗೆ ನೋವುಂಟಾಗುವ ಕೆಲಸ ಮಾಡುವುದಿಲ್ಲ. ಸಂಗಾತಿಗೆ ಉನ್ನತ ಅಧಿಕಾರ ದೊರೆಯುತ್ತದೆ. ಸ್ತೀಯರಿಗೆ ವಿಶೇಷ ಅನುಕೂಲತೆಗಳು ದೊರೆಯಲಿವೆ. ಆರೋಗ್ಯದಲ್ಲಿ ಎದುರಾಗಿದ್ದ ತೊಂದರೆ ನಿವಾರಣೆ ಆಗಲಿದೆ. ನವ ವಿವಾಹಿತರು ಸುಖ, ಸಂತೋಷದ ಜೀವನ ನಡೆಸುತ್ತಾರೆ. ಕುಟುಂಬದ ಸದಸ್ಯರ ಜೊತೆ ದೀರ್ಘಕಾಲದ ಪ್ರವಾಸ ಕೈಗೊಳ್ಳುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಕೈಕಾಲುಗಳಿಗೆ ಪೆಟ್ಟು ಬೀಳುತ್ತದೆ. ಮನೆಯಲ್ಲಿ ಇರುವ ಪುಟ್ಟಮಕ್ಕಳ ಆರೋಗ್ಯದ ಬಗ್ಗೆ ಗಮನವಹಿಸಿ.

ಸಿಂಹ

ಸರ್ಕಾರಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ನಿಮ್ಮಲ್ಲಿನ ಹಟದ ಸ್ವಭಾವದಿಂದಾಗಿ ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುವುದಿಲ್ಲ. ಕಾಲ ಕ್ರಮೇಣ ಜವಾಬ್ದಾರಿಯುತ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಅನಾವಶ್ಯಕ ವಿಚಾರಗಳಿಗಾಗಿ ಕುಟುಂಬದಲ್ಲಿ ವಾದ ವಿವಾದಗಳು ಇರಲಿವೆ. ಕಾನೂನಿನ ಹೋರಾಟದಲ್ಲಿ ಜಯ ಗಳಿಸುವಿರಿ. ಜನಸೇವೆ ಮಾಡುವ ಯೋಜನೆ ರೂಪಿಸುವಿರಿ. ಕೆಲವು ಸಂದರ್ಭಗಳಲ್ಲಿ ಗಲಿಬಿಲಿಗೆ ಒಳಗಾಗಿ ತಪ್ಪು ನಿರ್ಧಾರ ಕೈಗೊಳ್ಳುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಅಧಿಕಾರಿವರ್ಗಕ್ಕೆ ವರ್ಗವಾಗುವ ಸೂಚನೆಗಳಿವೆ. ಕೌಟುಂಬಿಕ ಜೀವನವು ಸಂತೃಪ್ತಿಯಿಂದ ಕೂಡಿರುತ್ತದೆ. ಆರೋಗ್ಯದ ಸಮಸ್ಯೆ ದೂರವಾಗುತ್ತವೆ. ಕುಟುಂಬದ ಹಿರಿಯರ ಜೊತೆ ಭಿನ್ನಾಭಿಪ್ರಾಯ ದೂರವಾಗುತ್ತವೆ.

ಕನ್ಯಾ

ಕನ್ಯಾರಾಶಿಯಲ್ಲಿ ಜನಿಸಿದವರಿಗೆ ನಿರಿಕ್ಷಿತ ಶುಭ ಫಲಗಳು ದೊರೆಯುತ್ತವೆ. ಆರಂಭಿಸಿದ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಜಯ ಲಭಿಸುತ್ತದೆ. ಬುದ್ಧಿವಂತಿಕೆಯ ನಿರ್ಧಾರದಿಂದ ನಿಮ್ಮಲ್ಲಿನ ಪ್ರತಿಭೆಗೆ ಒರೆ ಹಚ್ಚುವಂಥ ಜವಾಬ್ದಾರಿ ಎದುರಾಗಲಿದೆ. ಹಣಕಾಸಿನ ವಿಚಾರದಲ್ಲಿ ಪ್ರಗತಿ ಕಾಣಲಿದೆ. ಕುಟುಂಬದ ಸದಸ್ಯರು ನಿಮ್ಮ ಪರವಾಗಿ ಕೆಲಸ ಮಾಡುತ್ತಾರೆ. ವಿದ್ಯಾರ್ಥಿಗಳು ಹಿರಿಯರ ಸಹಾಯದಿಂದ ಉನ್ನತ ವಿದ್ಯಾಭ್ಯಾಸದಲ್ಲಿ ಮುಂದುವರೆಯುತ್ತಾರೆ. ಅವಿವಾಹಿತರಿಗೆ ಪ್ರೀತಿಸಿದವರೊಂದಿಗೆ ವಿವಾಹ ನಿಶ್ಚಯವಾಗುತ್ತದೆ. ಸ್ತ್ರಿಯರು ಕಠಿಣ ಪರಿಶ್ರಮದಿಂದ ಕೆಲಸದಲ್ಲಿ ಯಶಸ್ಸು ಗಳಿಸುತ್ತಾರೆ. ದಿನ ನಿತ್ಯದ ಅಗತ್ಯತೆಗೆ ತಕ್ಕಂಥ ಆದಾಯ ಇರಲಿದೆ. ದೂರವಾಗಿದ್ದ ಆಪ್ತರ ಒಲವನ್ನು ಗಳಿಸುವಿರಿ. ವೈವಾಹಿಕ ಜೀವನದ ಸಮಸ್ಯೆಗಳು ದೂರವಾಗಲಿವೆ.

ತುಲಾ

ತುಲಾ ರಾಶಿಯವರ ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ. ಬಹಳ ಎಚ್ಚರಿಕೆಯಿಂದ ಕುಟುಂಬದ ನಿರ್ಣಯಗಳನ್ನು ಕೈಗೊಳ್ಳುವಿರಿ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳ ಜೊತೆ ಸವಾಲುಗಳೂ ಎದುರಾಗಲಿವೆ. ಉತ್ತಮ ಅಭ್ಯಾಸಗಳಿಂದ ಆರೋಗ್ಯವನ್ನು ಹತೋಟಿಯಲ್ಲಿ ಇಡಲು ಸಾಧ್ಯ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಬದಲಾವಣೆಗಳು ಎದುರಾಗುತ್ತವೆ. ಮಕ್ಕಳ ಸಾಧನೆಯಲ್ಲಿ ಸಂತೋಷವನ್ನು ಕಾಣುವಿರಿ. ವಯಸ್ಸಿನ ಮಿತಿ ಇಲ್ಲದೆ ನಿಮ್ಮಲ್ಲಿ ಕಲಿಯುವ ಆಸೆ ಮತ್ತು ಉತ್ಸಾಹ ಉಂಟಾಗುತ್ತದೆ. ದಂಪತಿಗಳಲ್ಲಿ ಅನ್ಯೋನ್ಯತೆ ಇರಲಿದೆ. ಹಣಕಾಸಿನ ವಿಚಾರದಲ್ಲಿ ಏರಿಳಿತ ಇದ್ದರೂ ಖರ್ಚು ವೆಚ್ಚವನ್ನು ನಿಯಂತ್ರಿಸುವಿರಿ. ಸುದೀರ್ಘ ಪ್ರಯಾಣಕ್ಕೆ ತೆರಳುವಿರಿ. ಅಜೀರ್ಣದ ತೊಂದರೆ ಕಾಡಲಿದೆ. ಯಾರಿಂದಲೂ ಹಣದ ಸಹಾಯ ನಿರೀಕ್ಷಿಸದೆ ಸಹನೆಯಿಂದ ಬಾಳುವಿರಿ.

ವೃಶ್ಚಿಕ

ವೃಶ್ಚಿಕ ರಾಶಿಯಲ್ಲಿ ಜನಿಸಿದವರಿಗೆ ಆತ್ಮೀಯ ವ್ಯಕ್ತಿಗಳ ಸಹಾಯ ಸಹಕಾರ ದೊರೆಯುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ದೊರೆಯಲಿದೆ. ಕುಟುಂಬದ ಆಸ್ತಿಯಲ್ಲಿ ನ್ಯಾಯಯುತ ಪಾಲು ದೊರೆಯಲಿದೆ. ತಂದೆ ಮತ್ತು ಸೋದರಿಯ ನಡುವಿನ ಮನಸ್ತಾಪವು ದೂರವಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸರ ದೊರೆತು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ, ಪ್ರತಿಯೊಂದು ವಿಚಾರದಲ್ಲಿಯೂ ನಿರೀಕ್ಷಿತ ಬದಲಾವಣೆಗಳು ಎದುರಾಗಲಿವೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ. ಖ್ಯಾತ ವ್ಯಾಪಾರ ಸಂಸ್ಥೆಯಲ್ಲಿ ಪಾಲುದಾರಿಕೆ ದೊರೆಯುತ್ತದೆ. ನಿಮ್ಮ ವಿರುದ್ದದ ಷಡ್ಯಂತ್ರ ಯಶಸ್ವಿಯಾಗದು. ವಿದ್ಯಾರ್ಥಿಗಳ ಬಗ್ಗೆ ನಂಬಿಕೆ ಮತ್ತು ವಿಶ್ವಾಸವು ಹೆಚ್ಚುತ್ತದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ಸವಾಲೆನಿಸುವ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ನಿಮ್ಮಲ್ಲಿರುತ್ತದೆ. ಸಿಡುಕುತ ಕಡಿಮೆ ಮಾಡಿ ಶಾಂತಿ ಸಂಯಮವನ್ನು ಕಾಪಾಡಿಕೊಳ್ಳುವಿರಿ.

ಧನಸ್ಸು

ಧನಸ್ಸು ರಾಶಿಯವರ ಆರೋಗ್ಯದಲ್ಲಿ ತೊಂದರೆ ತಲೆದೋರುತ್ತದೆ. ಸಣ್ಣ ಪುಟ್ಟ ವಿಚಾರವಾದರೂ ಜಾಗರೂಗತೆಯಿಂದ ವ್ಯವಹರಿಸಬೇಕು. ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿದೆ. ಉದ್ಯೋಗ ಬದಲಾಯಿಸುವ ಸೂಚನೆ ಕಂಡುಬರಲಿವೆ. ಜೀವನದಲ್ಲಿನ ಅನಿರೀಕ್ಷಿತ ಬದಲಾವಣೆ ಬೇಸರ ಮೂಡಿಸುತ್ತವೆ. ವಿದ್ಯಾರ್ಥಿಗಳ ಹೊಸ ಬದಲಾವಣೆ ಕಲಿಕೆಯಲ್ಲಿನ ಆಸಕ್ತಿಯನ್ನು ಹೆಚ್ಚಿಸುತ್ತದೆ. ಮನಸ್ಸಿನಲ್ಲಿರುವ ಆಸೆ ಆಕಾಂಕ್ಷೆಗಳನು ಈಡೇರಿಸಿಕೊಳ್ಳಲು ಹೆಚ್ಚಿನ ಪ್ರಯತ್ನ ಬೇಕು. ಕುಟುಂಬದಲ್ಲಿ ಉಂಟಾಗುವ ಬದಲಾವಣೆಗಳಿಗೆ ಹೊಂದಿಕೊಂಡು ನಡೆಯಬೇಕಾಗುತ್ತದೆ. ಹೊಸ ಮನೆ ಕೊಳ್ಳಲು ಅಡೆತಡೆಗಳು ಎದುರಾಗಲಿವೆ. ಹಣಕಾಸಿನ ವಿಚಾರವನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಸ್ವಂತ ಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ.

ಮಕರ

ಮಕರ ರಾಶಿಯವರ ಜೀವನದಲ್ಲಿ ಪ್ರಗತಿಪರ ಬದಲಾವಣೆಗಳು ಉಂಟಾಗಲಿವೆ. ಮಕ್ಕಳ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಇರಲಿವೆ. ನಿಮ್ಮ ನೇತೃತ್ವದಲ್ಲಿ ಹೆಚ್ಚಿನ ಕೆಲಸಗಳು ನಡೆಯಲಿವೆ. ಬದಲಾವಣೆಗಳನ್ನು ಒಪ್ಪಿ ನಡೆವ ಕಾರಣ ಮನಸ್ಸಿನಲ್ಲಿ ಶಾಂತಿ ನೆಮ್ಮದಿ ಇರುತ್ತವೆ. ನಿಮ್ಮ ಸಾಮರ್ಥ್ಯಕ್ಕೆ ಸವಾಲೆನಿಸುವ ಸಮಸ್ಯೆಗಳು ಇರಲಿವೆ. ಉದ್ಯೋಗ ಬದಲಿಸುವಿರಿ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ. ಸ್ವಂತ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ ದೊರೆಯುತ್ತದೆ. ಕುಟುಂಬದಲ್ಲಿ ಪರಸ್ಪರ ವಿಶ್ವಾಸ ಇರಲಿದೆ. ಆರ್ಥಿಕ ಸಬಲತೆ ನೆಮ್ಮದಿಯನ್ನು ನೀಡುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಆರೋಗ್ಯದ ಬಗ್ಗೆ ಗಮನವಹಿಸಿ. ಹಣಕಾಸಿನ ವ್ಯವಹಾರದಲ್ಲಿ ಯಾರನ್ನೂ ನಂಬುವುದಿಲ್ಲ. ಹಣದ ಕೊರತೆ ಇರುವುದಿಲ್ಲ.

ಕುಂಭ

ಕುಂಭ ರಾಶಿಯವರು ಕಷ್ಟದ ಕೆಲಸ ಕಾರ್ಯಗಳಿಂದ ದೂರ ಉಳಿಯುತ್ತಾರೆ. ಸಂತೋಷದ ವರ್ತಮಾನವೊಂದು ನಿಮ್ಮ ಜೀವನಕ್ಕೆ ಹೊಸ ಅರ್ಥ ಕಲ್ಪಿಸುತ್ತದೆ. ವೃತ್ತಿಯಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಿರಿ. ಕುಟುಂಬದಲ್ಲಿ ಸಂಬಂಧವಿಲ್ಲದ ಚರ್ಚೆಗಳು ಗೊಂದಲ ಉಂಟು ಮಾಡಲಿದೆ. ಶಿಕ್ಷಕರ ಮಾರ್ಗದರ್ಶನವು ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣವಾಗಲಿದೆ. ಹಣಕಾಸಿನ ವ್ಯವಹಾರವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸುವಿರಿ. ದಾಂಪತ್ಯ ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಕೈಹಿಡಿದ ಕೆಲಸ ಕಾರ್ಯಗಳನ್ನು ಹಟದಿಂದ ಪೂರ್ಣಗೊಳಿಸುವಿರಿ. ಸುಲಭವಾಗಿ ಯಾರ ಮಾತನ್ನೂ ನಂಬುವುದಿಲ್ಲ.

ಮೀನ

ಮೀನ ರಾಶಿಯವರಿಗೆ ಸ್ಥಿರವಾದ ಮನಸ್ಸಿರುವುದಿಲ್ಲ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸ ಕಾರ್ಯಗಳು ದೊರೆಯಲಿವೆ. ಉದ್ಯೋಗದಲ್ಲಿ ಗುರುತರ ಬದಲಾವಣೆಗಳು ಉಂಟಾಗಲಿದೆ. ನಿಮ್ಮ ಮನದ ಆಸೆಗಳು ಕುಟುಂಬದ ಹಿರಿಯರ ಸಹಾಯದಿಂದ ಈಡೇರಲಿವೆ. ನಿಮ್ಮ ವೃತ್ತಿ ಜೀವನವನ್ನು ನೋಡಿದರೆ, ಈ ತಿಂಗಳು ಭರವಸೆಯ ಅವಕಾಶಗಳನ್ನು ತರುತ್ತದೆ. ನಿಮ್ಮ ಮಕ್ಕಳ ಸಹಯೋಗದಲ್ಲಿ ಪಾಲುದಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತಾರೆ. ನಿಮ್ಮಲ್ಲಿರುವ ಪ್ರತಿಭಾ ಕೌಶಲ್ಯಕ್ಕೆ ತಕ್ಕ ಅವಕಾಶ ದೊರೆಯುತ್ತದೆ. ದೊರೆಯುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವಿರಿ. ನಿಮ್ಮನ್ನು ದೃಷ್ಠಿದೋಷ ಕಾಡಲಿದೆ. ಸಮಾಜದಲ್ಲಿ ನಿಮಗೆ ಗಣ್ಯ ವ್ಯಕ್ತಿಯ ಸ್ಥಾನ ಲಭಿಸಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).