ಜೂನ್ ಮಾಸ ಭವಿಷ್ಯ: ಮೇಷ ರಾಶಿಯವರು ಉಳಿಸಿದ ಹಣ ಖರ್ಚು ಮಾಡುತ್ತಾರೆ, ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಸವಾಲುಗಳಿವೆ
ಜೂನ್ ತಿಂಗಳ ಮಾಸ ಭವಿಷ್ಯ: ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ 2025ರ ಜೂನ್ ತಿಂಗಳ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಕೆಲವು ರಾಶಿಯವರಿಗೆ ಸವಾಲುಗಳಿವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ತಿಂಗಳ ಭವಿಷ್ಯ ಇಲ್ಲಿದೆ.

'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ 2025ರ ಜೂನ್ ತಿಂಗಳ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಆದರೆ ಕೆಲವೇ ಕೆಲವು ರಾಶಿಯವರಿಗೆ ಸವಾಲುಗಳು ಎದುರಾಗುತ್ತವೆ. ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ತಿಂಗಳ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ಮೇಷ ರಾಶಿ
ನಿರೀಕ್ಷೆಯಂತೆ ಯಾವುದೇ ಕೆಲಸಗಳು ನಡೆಯುವುದಿಲ್ಲ. ದೊರೆಯುವ ಫಲಿತಾಂಶಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಉದ್ಯೋಗದಲ್ಲಿನ ನೂತನ ಕಟ್ಟು ಪಾಡುಗಳು ಬೇಸರವನ್ನು ಉಂಟುಮಾಡುತ್ತವೆ. ಹೆಚ್ಚಿನ ಪ್ರಯತ್ನದ ಫಲವಾಗಿ ಉದ್ಯೋಗವನ್ನು ಬದಲಿಸಲು ಸಾಧ್ಯವಾಗುತ್ತದೆ. ಸ್ವಂತ ವ್ಯಾಪಾರ ವ್ಯವಹಾರದ ಆದಾಯದಲ್ಲಿ ಕೊರತೆ ಇರುತ್ತದೆ. ನಿತ್ಯಜೀವನದಲ್ಲಿ ಅನೇಕ ಸವಾಲುಗಳು ಎದುರಾದರೂ ಧೈರ್ಯಗೆಡುವುದಿಲ್ಲ. ಸ್ವಂತ ಉದ್ದಿಮೆ ಇದ್ದಲ್ಲಿ ಉತ್ತಮ ಅನುಕೂಲತೆಗಳು ಕಂಡುಬರುತ್ತವೆ. ನಿರ್ಭಿತಿಯಿಂದ ನಿಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುವಿರಿ. ಕುಟುಂಬದಲ್ಲಿ ನಿಮ್ಮ ಕಾರಣ ಬಿಗುವಿನ ವಾತಾವರಣ ಉಂಟಾಗುತ್ತದೆ. ಹೊಂದಾಣಿಕೆಯ ಬುದ್ದಿ ಬೆಳಸಿಕೊಳ್ಳಲು ಪ್ರಯತ್ನಿಸುವಿರಿ. ದಾಂಪತ್ಯ ಜೀವನದಲ್ಲಿ ಬೇಸರದ ಸನ್ನಿವೇಶಗಳು ಇರಲಿವೆ. ಆತ್ಮೀಯರ ಆರೋಗ್ಯದಲ್ಲಿ ಏರಿಳಿತ ಇರುತ್ತದೆ. ಆತುರದಲ್ಲಿ ತಪ್ಪು ನಿರ್ಣಯಗಳನ್ನು ತೆಗೆದುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಸಂತೋಷ ನೆಮ್ಮದಿ ದೊರೆಯುತ್ತದೆ. ಉಳಿಸಿದ ಹಣವನ್ನು ಖರ್ಚು ಮಾಡುವಿರಿ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 8
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ನೀಲಿ ಬಣ್ಣ
ವೃಷಭ ರಾಶಿ
ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪುವಿರಿ. ಸೋಲನ್ನು ಗೆಲುವಾಗಿ ಮಾರ್ಪಡಿಸುವ ಬುದ್ದಿಶಕ್ತಿ ಇರುತ್ತದೆ. ನಿಮ್ಮ ಪ್ರಯತ್ನಗಳಿಗೆ ತಡವಾದರೂ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಉದ್ಯೋಗದಲ್ಲಿ ಯಾವುದೋ ಒಂದು ಸಮಸ್ಯೆ ಎದುರಾಗುತ್ತದೆ. ಸ್ವಂತ ವ್ಯಾಪಾರದಲ್ಲಿ ಹೆಚ್ಚಿನ ಆದಾಯ ದೊರೆಯುತ್ತದೆ. ದುಡುಕಿನ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ ಸಮಸ್ಯೆಗೆ ಸಿಲುಕುವಿರಿ. ಕಾದು ನೋಡುವ ತಂತ್ರ ಅನುಸರಿಸಿ. ವಿದ್ಯಾರ್ಥಿಗಳು ದೊರೆಯುವ ಅವಕಾಶಗಳನ್ನು ಸಮರ್ಥಕವಾಗಿ ಬಳಸಿಕೊಳ್ಳುತ್ತಾರೆ. ಕೌಟುಂಬಿಕ ಸಮಸ್ಯೆಗಳಿಗೆ ಸುಲಭದ ಪರಿಹಾರಗಳನ್ನು ಕಂಡುಹಿಡಿಯುವಿರಿ. ಕುಟುಂಬದಲ್ಲಿ ಅನಾವಶ್ಯಕವಾದ ವಾದ ವಿವಾದಗಳು ಇರುತ್ತವೆ. ಹಣಕಾಸಿನ ಸಮಸ್ಯೆಗಳನ್ನು ಮಾತುಕತೆಯಿಂದ ಬಗೆಹರಿಸುವಿರಿ. ಖರ್ಚು ವೆಚ್ಚಗಳಿಗೆ ನಿಯಂತ್ರಣ ಹೇರಬಲ್ಲಿರಿ. ಆದಾಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಆರೋಗ್ಯದಲ್ಲಿ ಇದ್ದ ಆತಂಕವು ಬಗೆಹರಿಯುತ್ತದೆ. ಪುಟ್ಟ ಮಕ್ಕಳಿಗೆ ಜ್ವರದ ತೊಂದರೆ ಇರುತ್ತದೆ. ಹಿರಿಯರ ಮಾರ್ಗದರ್ಶನವನ್ನು ಪಾಲಿಸುವಿರಿ.
ಪರಿಹಾರ: ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ನೇರಳೆ ಬಣ್ಣ
ಮಿಥುನ ರಾಶಿ
ಜೀವನದಲ್ಲಿ ಸೋಲು ಗೆಲುವು ಸಮಪ್ರಮಾಣದಲ್ಲಿ ಇರುತ್ತವೆ. ಉದ್ಯೋಗದಲ್ಲಿ ಅಸಾಧಾರಣ ಬದಲಾವಣೆಗಳು ಎದುರಾಗುತ್ತವೆ. ಇದರಿಂದ ನಿಮಗೆ ಉತ್ತಮ ಪಲಿತಾಂಶವು ದೊರೆಯುತ್ತದೆ. ಆತ್ಮವಿಶ್ವಾಸವು ಹೊಸ ಪ್ರಯೋಗಗಳಿಗೆ ಕಾರಣವಾಗುತ್ತವೆ. ಸಮಾಜದಲ್ಲಿ ನಾಯಕತ್ವದ ಅವಕಾಶ ದೊರೆಯುತ್ತದೆ. ದಿನ ಕಳೆದಂತೆ ಜೀವನದಲ್ಲಿ ಉತ್ತಮ ಗೆಲುವು ದೊರೆಯುತ್ತದೆ. ಮಕ್ಕಳ ಜೀವನದಲ್ಲಿ ಮಹತ್ತರ ತಿರುವುಗಳು ಉಂಟಾಗುತ್ತವೆ. ಮನದಲ್ಲಿ ಧನಾತ್ಮಕ ಚಿಂತನೆಗಳು ಇರಿತ್ತವೆ. ಶಾಂತಿ ನೆಮ್ಮದಿಯ ಜೀವನ ನಡೆಸುವಿರಿ. ನಿರ್ದಿಷ್ಟವಾದ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುವಿರಿ. ದೀರ್ಘಕಾಲದ ಪ್ರಯಾಣದ ಸೂಚನೆಗಳಿವೆ. ಸಹೋದ್ಯೋಗಿಗಳ ಜೊತೆಯಲ್ಲಿ ಉತ್ತಮ ಮನಸ್ಥಿತಿ ಇರುತ್ತದೆ. ವೈವಾಹಿಕ ಜೀವನದಲ್ಲಿ ಸಂತಸದ ವರ್ತಮಾನ ಇರಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮಗೊಳ್ಳುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರುವಿರಿ. ಅಜೀರ್ಣದ ತೊಂದರೆ ಇರುತ್ತದೆ. ಸೋಲಿನ ವೇಳೆ ನಿಮ್ಮ ಕೆಲಸ ಕಾರ್ಯದಿಂದ ದೂರ ಉಳಿಯುವಿರಿ.
ಪರಿಹಾರ: ಬಲಗೈಯಲ್ಲಿ ಬೆಳ್ಳಿಯ ಕೈಖಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 1
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಗುಲಾಬಿ ಬಣ್ಣ
ಕಟಕ ರಾಶಿ
ವಿಶ್ರಾಂತಿ ಇಲ್ಲದ ದುಡಿಮೆ ಇರುತ್ತದೆ. ನಿತ್ಯಜೀವನದಲ್ಲಿ ವೈರಾಗ್ಯದ ಭಾವನೆ ಇರುತ್ತದೆ. ಇದರ ಪರಿಣಾಮದಿಂದ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಸುಲಭವಾಗಿ ಬೇರೆಯವರನ್ನು ನಂಬುಂವುದಿಲ್ಲ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಆಪತ್ತಿನಲ್ಲಿ ಇದ್ದವರಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ. ಸೋದರರ ನಡುವೆ ಕೌಟುಂಬಿಕ ವಿಚಾರದಲ್ಲಿ ಬಿನ್ನಾಭಿಪ್ರಾಯ ಇರುತ್ತದೆ. ವಿದ್ಯಾರ್ಥಿಗಳಿಗೆ ಸುಲಭ ರೀತಿಯ ಯಶಸ್ಸು ದೊರೆಯುತ್ತದೆ. ಮನೆ ಮಂದಿಯ ಜೊತೆಯಲ್ಲಿ ಪ್ರವಾಸಿ ತಾಣಕ್ಕೆ ತೆರಳುವಿರಿ. ಕಠಿಣ ಪರಿಶ್ರಮದಿಂದ ಉದ್ಯೋಗದಲ್ಲಿ ಉನ್ನತ ಯಶಸ್ಸು ಕಾಣುವಿರಿ. ಕುಟುಂಬದ ಸದಸ್ಯರು ನಿಮ್ಮ ಕೆಲಸದಲ್ಲಿ ನೆರವಾಗುತ್ತಾರೆ. ದಂಪತಿಯಲ್ಲಿ ಭವಿಷ್ಯದ ಬಗ್ಗೆ ಆತಂಕ ಇರುತ್ತದೆ. ನಿಧಾನಗತಿಯಲ್ಲಿ ಆರ್ಥಿಕ ಪ್ರಗತಿ ಕಂಡುಬರಲಿದೆ. ಅನಾರೋಗ್ಯ ಇರುತ್ತದೆ. ಆತುರದ ಮನಸ್ಥಿತಿ ಇರುತ್ತದೆ.
ಪರಿಹಾರ: ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ