Monthly Horoscope: ಪ್ರತಿಭಾವಂತರಿಗೆ ಉತ್ತಮ ಅವಕಾಶ, ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಬೆಳವಣಿಗೆ; ಏಪ್ರಿಲ್ ತಿಂಗಳ ಮಾಸ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Monthly Horoscope: ಪ್ರತಿಭಾವಂತರಿಗೆ ಉತ್ತಮ ಅವಕಾಶ, ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಬೆಳವಣಿಗೆ; ಏಪ್ರಿಲ್ ತಿಂಗಳ ಮಾಸ ಭವಿಷ್ಯ

Monthly Horoscope: ಪ್ರತಿಭಾವಂತರಿಗೆ ಉತ್ತಮ ಅವಕಾಶ, ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಬೆಳವಣಿಗೆ; ಏಪ್ರಿಲ್ ತಿಂಗಳ ಮಾಸ ಭವಿಷ್ಯ

Monthly Horoscope Of April 2024: ಒಳಿತನ್ನು ಸ್ವಾಗತಿಸಿ, ಕೆಡಕನ್ನು ಎದುರಿಸುವುದೇ ಜೀವನ. ರಾಶಿ ಚಕ್ರಕ್ಕೆ ತಕ್ಕಂತೆ ವಿವಿಧ ರಾಶಿಗಳ ಮಾಸ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. 2024ರ ಏಪ್ರಿಲ್‌ ತಿಂಗಳಲ್ಲಿ ಹೇಗಿರಲಿದೆ ನಿಮ್ಮ ರಾಶಿಭವಿಷ್ಯ ತಿಳಿಯಿರಿ.

ಏಪ್ರಿಲ್‌ ತಿಂಗಳ ಮಾಸ ಭವಿಷ್ಯ
ಏಪ್ರಿಲ್‌ ತಿಂಗಳ ಮಾಸ ಭವಿಷ್ಯ

ಏಪ್ರಿಲ್‌​ ತಿಂಗಳ ಮಾಸ ಭವಿಷ್ಯ: ʼನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಹಲವರು ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Monthly Horoscope Of April 2024)

ರಾಶಿಫಲ

ಏಪ್ರಿಲ್ ತಿಂಗಳ ಪೂರ್ವಾರ್ಧದಲ್ಲಿ ಉತ್ತಮ ಫಲಗಳು ದೊರೆಯುತ್ತವೆ. ಆದರೆ ರವಿಯ ಜೊತೆ ರಾಹು ಇರುವ ಕಾರಣ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಒಳ್ಳೆಯದು. ಏಪ್ರಿಲ್‌ನ ಉತ್ತರಾರ್ಧದಲ್ಲಿ ರವಿಯು ಮೇಷದಲ್ಲಿ ಸಂಚರಿಸುತ್ತಾನೆ. ರವಿಯ ಯುತಿಯಲ್ಲಿ ಇರುತ್ತಾನೆ. ಮೇಷರಾಶಿಯು ರವಿಗೆ ಉಚ್ಚರಾಶಿ ಆಗಲಿದೆ. ಗುರುವು ಅದೇ ರಾಶಿಯಲ್ಲಿ ಸಂಚರಿಸುತ್ತಾನೆ. ಆದ್ದರಿಂದ ರವಿ ಮತ್ತು ಗುರುವಿನ ಸಂಯೋಗವಿರುತ್ತದೆ. ಇದನ್ನು ಜೀವಾತ್ಮ ಸಂಯೋಗ ಎನ್ನುತ್ತೇವೆ. ಆದ್ದರಿಂದ ತಿಂಗಳ ಮೊದಲಾರ್ಧದಲ್ಲಿ ಕೆಲವು ರಾಶಿಯವರಿಗೆ ಒತ್ತಡಗಳು ಇರಲಿವೆ. ಉತ್ತರಾರ್ಧದಲ್ಲಿ ಧನಾತ್ಮಕ ಫಲಗಳು ದೊರೆಯುತ್ತವೆ.

ಮೇಷ

ಕುಟುಂಬದ ಕೆಲಸ ಕಾರ್ಯಗಳಲ್ಲಿ ಇದ್ದ ಅಡ್ಡಿಆತಂಕಗಳು ನಿವಾರಣೆ ಆಗುತ್ತವೆ. ಆತುರದ ನಿರ್ಧಾರದಿಂದ ಹಣಕಾಸಿನ ಕೆಲಸ ಕಾರ್ಯಗಳನ್ನು ಆರಂಭಿಸಿದಲ್ಲಿ ತೊಂದರೆಗೆ ಸಿಲುಕುವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ. ಉದ್ಯೋಗವನ್ನು ಬದಲಾಯಿಸುವ ವಿಚಾರದಲ್ಲಿ ದುಡುಕದಿರಿ. ನಂಬುಗೆಯ ವ್ಯಕ್ತಿಯೊಬ್ಬರಿಂದ ಕೆಲಸ ಕಾರ್ಯದಲ್ಲಿ ಅಡಚಣೆ ಉಂಟಾಗಬಹುದು. ಕುಟುಂಬಕ್ಕೆ ಸಂಬಂಧಿಸಿದ ಭೂವಿವಾದ ದೂರವಾಗಲಿದೆ. ಅತಿಥಿಗಳ ಆಗಮನದಿಂದ ಸಂತಸಗೊಳ್ಳುವಿರಿ. ಸಾಲದ ಹಣವನ್ನು ಮರುಪಾವತಿ ಮಾಡುವಿರಿ. ಕೊಂಚ ಪ್ರಯಸದಿಂದ ವಿದೇಶ ಪ್ರವಾಸ ಮಾಡುವಿರಿ. ಅನಿರೀಕ್ಷಿತ ಖರ್ಚುವೆಚ್ಚಗಳು ಬೇಸರ ಮೂಡಿಸುತ್ತದೆ. ಕುಟುಂಬದವರೊಂದಿಗೆ ಪ್ರವಾಸಕ್ಕೆ ತೆರಳುವಿರಿ.

ವೃಷಭ

ಸದಾ ಭವಿಷ್ಯದ ಜೀವನದ ಬಗ್ಗೆ ಯೋಚನೆ ಕಾಡುತ್ತದೆ. ವಾಹನಗಳ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗದು. ಹಟದ ಗುಣದಿಂದ ಬಂಧು ಬಳಗದವರ ವಿರೋಧ ಎದುರಿಸುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆ ಲಭಿಸುತ್ತದೆ. ಹಣದ ಕೊರತೆಯನ್ನು ಸರಿದೂಗಿಸಲು ಕಡಿಮೆ ಬಂಡವಾಳದ ವ್ಯಾಪಾರವನ್ನು ಆರಂಭಿಸುವ ಯೋಜನೆ ಮುಂದೆ ಹೋಗಲಿದೆ. ಕುಟುಂಬದ ಹಿರಿಯರ ಸಲಹೆಯನ್ನು ಪಾಲಿಸುವಿರಿ. ದಾಂಪತ್ಯದಲ್ಲಿ ಉತ್ತಮ ಅನ್ಯೋನ್ಯತೆ ಇರುತ್ತದೆ. ಶಾಂತಿ ಸಹನೆಯಿಂದ ದೈನಂದಿನ ಕೆಲಸಗಳಲ್ಲಿ ವ್ಯವಹರಿಸಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮಿಥುನ

ಹಣಕಾಸಿನ ವಿಚಾರದಲ್ಲಿ ಕುಟುಂಬದ ಸದಸ್ಯರ ನಡುವೆ ಸಹಕಾರ ಇರುತ್ತದೆ. ದೂರದ ಬಂಧುವೊಬ್ಬರಿಗೆ ಹಣಕಾಸಿನ ಸಹಾಯ ಮಾಡುವಿರಿ. ಉದ್ಯೋಗದ ವಿಚಾರದಲ್ಲಿ ಆತಂಕ ಬೇಡ. ದೈನಂದಿನ ವಿಚಾರದಲ್ಲಿ ಸಮಯಕ್ಕೆ ತಕ್ಕಂತಹ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ಅವಿವಾಹಿತರಿಗೆ ಸಂಬಂಧಿಕರ ಅಥವಾ ಪರಿಚಯಸ್ಥರ ಜೊತೆ ವಿವಾಹವಾಗುತ್ತದೆ. ನಿಮ್ಮಲ್ಲಿನ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯೊಂದು ದೊರೆಯಲಿದೆ. ವಿದ್ಯಾರ್ಥಿಗಳಿಗೆ ವಿಶೇಷವಾದ ಗೌರವ ಲಭಿಸಲಿದೆ. ಸಾಲದ ವ್ಯವಹಾರದಲ್ಲಿ ತೊಂದರೆ ಎದುರಾಗಲಿದೆ. ಜಾಗ್ರತೆ ವಹಿಸಿರಿ. ಆರೋಗ್ಯದಲ್ಲಿ ಸುಧಾರಣೆ ಇರುತ್ತದೆ.

ಕಟಕ

ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಾಗಲಿದೆ. ಮಕ್ಕಳ ಆರೋಗ್ಯವನ್ನು ಸ್ಥಿರವಾಗಿರಿಸಲು ಎಚ್ಚರಿಕೆಯಿಂದ ನೋಡಿಕೊಳ್ಳಿರಿ. ನೀರಿನ ಜೊತೆ ಚೆಲ್ಲಾಟ ಆಡದಿರಿ. ಉದ್ಯೋಗದಲ್ಲಿ ಉನ್ನತಮಟ್ಟ ತಲುಪುವಿರಿ. ಕ್ರಮೇಣವಾಗಿ ಹಣಕಾಸಿನ ಪರಿಸ್ಥಿತಿಯಲ್ಲಿ ಸ್ಥಿರತೆ ಇರುತ್ತದೆ. ಕುಟುಂಬದಲ್ಲಿ ಮಂಗಳ ಕಾರ್ಯವೊಂದು ನಡೆಯಲಿದೆ. ಉನ್ನತ ವಿಧ್ಯಾಭ್ಯಾಸದ ಅವಕಾಶ ದೊರೆಯುತ್ತದೆ. ವಂಶದ ಆಸ್ತಿ ವಿವಾದದಲ್ಲಿ ಸಿಲುಕುತ್ತದೆ. ನ್ಯಾಯಸಮ್ಮತವಾಗಿ ಹಣಕಾಸಿನ ವ್ಯವಹಾರದ ಸಂಸ್ಥೆ ಆರಂಭಿಸುವಿರಿ. ಕಲುಷಿತ ಆಹಾರ ಸೇವನೆಯಿಂದ ಅರೋಗ್ಯದ ಸಮಸ್ಯೆ ಎದುರಾಗುತ್ತದೆ. ಕುಟುಂಬದ ವಿಶೇಷವಾದ ಕಾರ್ಯಕ್ರಮವನ್ನು ಮುಂದೂಡುವಿರಿ. ಮಕ್ಕಳೊಂದಿಗೆ ಕಿರುಪ್ರವಾಸಕ್ಕೆ ತೆರಳುವಿರಿ.

ಸಿಂಹ

ಹಣಕಾಸಿನ ವಿಚಾರವನ್ನು ಯಾರೊಂದಿಗೂ ಚರ್ಚಿಸುವುದಿಲ್ಲ. ಸಹೋದ್ಯೋಗಿಗಳನ್ನು ಸುಲಭವಾಗಿ ನಂಬುವುದಿಲ್ಲ. ಹಿರಿಯ ಅಧಿಕಾರಿಗಳ ಸಹಾಯ ಸಹಕಾರ ದೊರೆಯಲಿದೆ. ಜೀವನ ಸುಧಾರಿಸುತ್ತದೆ. ಆತ್ಮೀಯರ ಸಹಾಯದಿಂದ ವಿವಾಹ ನೆರವೇರುತ್ತದೆ. ದೊರೆಯುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದಿಲ್ಲ. ವಿದ್ಯಾರ್ಥಿಗಳ ನಿರೀಕ್ಷೆಗಳು ಹುಸಿಯಾಗುವುದಿಲ್ಲ. ಸಮಾಜದಲ್ಲಿ ಉನ್ನತ ಮಟ್ಟದ ಗೌರವ ದೊರೆಯಲಿದೆ. ಅವಕಾಶ ಇದ್ದರೂ ಅಧಿಕಾರದ ಆಸೆ ತೋರುವುದಿಲ್ಲ. ಯಾರಿಗೂ ಬುದ್ಧಿವಾದ ಹೇಳದಿರಿ. ಸೋದರಿಯ ಜೀವನದ ಸಮಸ್ಯೆಗೆ ಪರಿಹರಿಸುವಿರಿ. ಐಷಾರಾಮಿ ವಾಹನ ಕೊಳ್ಳುವಿರಿ.

ಕನ್ಯಾ

ಆತ್ಮೀಯರೊಬ್ಬರ ಕೆಲಸ ಕಾರ್ಯಗಳ ನಾಯಕತ್ವ ವಹಿಸುವಿರಿ. ಯಾವುದೇ ಕೆಲಸ ಕಾರ್ಯವಾದರೂ ಬುದ್ದಿವಂತಿಕೆಯಿಂದ ಜಯ ಸಾಧಿಸುವಿರಿ. ಕುಟುಂಬದ ಹಿರಿಯರ ಜವಾಬ್ದಾರಿ ದೊರೆಯುತ್ತದೆ. ಸ್ವಂತ ಆಯ್ಕೆಯಂತೆ ವಿವಾಹವಾಗುವುದು. ಉದ್ಯೋಗದಲ್ಲಿ ಕಾರ್ಯದ ಒತ್ತಡ ಹೆಚ್ಚಾಗಿರುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳು ಮಧ್ಯಮ ಗತಿಯಲ್ಲಿ ಸಾಗುತ್ತವೆ. ಮಾಡಿದ ತಪ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಮನಸ್ಸನ್ನು ಬದಲಿಸದಿರಿ. ಉಸಿರಿಗೆ ಸಂಬಧಿಸಿದ ತೊಂದರೆ ಇದ್ದಲ್ಲಿ ಎಚ್ಚರಿಕೆ ಇರಲಿ. ಯಾರಿಗೂ ನೋವಾಗದಂತೆ ಮಾತನಾಡಿ ಕಲಸ ಸಾಧಿಸುವಿರಿ. ಒಳಿತು ಕೆಡುಕನ್ನು ನೋಡದೆ ಬೇರೆಯವರನ್ನು ಟೀಕಿಸುವಿರಿ.

ತುಲಾ

ಸುಲಭವಾಗಿ ಆರಂಭಿಸಿದ ಕೆಲಸ ಕಾರ್ಯಗಳು ಕಾರ್ಯಗತಗೊಳ್ಳುತ್ತವೆ. ವಿದ್ಯಾರ್ಥಿಗಳಿಗೆ ಧನಾತ್ಮಕ ಫಲಿತಾಂಶಗಳು ದೊರೆಯುತ್ತವೆ. ಉದ್ಯೋಗದ ವಿಚಾರದಲ್ಲಿ ಸರಿಯಾದ ಅವಕಾಶಗಳನ್ನು ಆಯ್ಕೆಮಾಡಲು ವಿಫಲರಾಗುವಿರಿ. ವಿವಾಹ ಯೋಗವಿದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಕುಟುಂಬದ ಸದಸ್ಯರ ಜೊತೆ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ಆತುರದ ನಿರ್ಧಾರ ತೆಗೆದುಕೊಳ್ಳದಿರಿ. ಒಮ್ಮೆ ಮನಸ್ಸು ಮಾಡಿದಲ್ಲಿ ಯಾವುದು ಅಸಾಧ್ಯವಲ್ಲ. ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ ದೊರೆಯುತ್ತದೆ. ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ. ಮನದಲ್ಲಿ ನೆಮ್ಮದಿ ನೆಲೆಸಿರುತ್ತದೆ.

ವೃಶ್ಚಿಕ

ಕೆಲಸ ಕಾರ್ಯಗಳಲ್ಲಿ ಮೊದಲು ಅಡ್ಡಿ ಆತಂಕಗಳು ಎದುರಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಧನಾತ್ಮಕ ಫಲಿತಾಂಶಗಳು ದೊರೆಯುತ್ತವೆ. ಉತ್ತಮ ಯೋಜನಾ ತಂತ್ರವನ್ನು ಅಳವಡಿಸಿಕೊಂಡು ಯಶಸ್ಸು ಗಳಿಸುವಿರಿ. ಅನೇಕರಿಗೆ ಜೀವನದಲ್ಲಿ ಮುಂದೆ ಬರಲು ಸಹಾಯ ಮಾಡುವಿರಿ. ಸಮಾಜದ ಮುಖ್ಯಸ್ಥರಾಗಿ ಹೊರ ಹೊಮ್ಮವಿರಿ. ವಿನಾಕಾರಣ ಹಣ ಖರ್ಚು ಮಾಡುವಿರಿ. ಆರೋಗ್ಯದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಸಿಡುಕುತನ ಕಡಿಮೆ ಮಾಡಿಕೊಂಡಷ್ಟು ಒಳ್ಳೆಯದು. ಯಂತ್ರೋಪಕರಣಗಳ ವ್ಯಾಪರದಲ್ಲಿ ಲಾಭವಿದೆ. ವಾಹನ ಲಾಭವಿದೆ. ತಂದೆಯವರಿಗೆ ಹಣಕಾಸಿನ ವಿಚಾರದಲ್ಲಿ ಒತ್ತಡ ಇರುತ್ತದೆ.

ಧನಸ್ಸು

ಪ್ರತಿ ಕೆಲಸದಲ್ಲೂ ಹಿರಿಯರ ಸಹಾಯ ಸಹಕಾರ ದೊರೆಯುತ್ತದೆ. ಹಟದಿಂದ ಸ್ವಂತ ಉದ್ದಿಮೆಯನ್ನು ಆರಂಭಿಸುವಿರಿ. ಉದ್ಯೋಗದಲ್ಲಿ ಯಾವುದೇ ಹಿನ್ನೆಡೆ ಬಾರದು. ಹಣಕಾಸಿನ ವಿಚಾರದಲ್ಲಿ ದಿಟ್ಟ ನಿಲುವನ್ನು ತೆಗೆದುಕೊಳ್ಳಲು ವಿಫಲರಾಗುವಿರಿ. ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲೇ ಉದ್ಯೋಗ ಗಳಿಸುತ್ತಾರೆ. ಹಣಕಾಸಿಗೆ ಸಂಬಂಧಿಸಿದ ಸಂಶೋಧನೆಯಲ್ಲಿ ವಿಶಿಷ್ಟ ಸ್ಥಾನಮಾನ ಗಳಿಸುವಿರಿ. ಅಜೀರ್ಣದ ತೊಂದರೆ ಬಹುಕಾಲ ಕಾಡಬಹುದು. ಕೆಲಸ ಕಾರ್ಯಗಳು ನಡೆಯದೆ ಹೋದಲ್ಲಿ ಕೋಪಕ್ಕೆ ಒಳಗಾಗುವಿರಿ. ಹೊಸ ಮನೆ ಅಥವಾ ವಾಹನ ಕೊಳ್ಳುವ ತೀರ್ಮಾನಕ್ಕೆ ಬರುವಿರಿ. ಸಾಲದ ವ್ಯವಹಾರದಲ್ಲಿ ಬೇಸರ ಉಂಟಾಗಲಿದೆ.

ಮಕರ

ಅನಿರೀಕ್ಷಿತ ಜವಾಬ್ದಾರಿಯೊಂದು ನೆಮ್ಮದಿಯನ್ನು ಕಡಿಮೆ ಮಾಡುತ್ತದೆ. ಉದ್ಯೋಗದಲ್ಲಿ ಮಾಡುವ ತಪ್ಪಿಗೆ ದಂಡ ನೀಡದೆ ಹಿರಿಯ ಅಧಿಕಾರಿಗಳು ಮಾರ್ಗದರ್ಶನ ನೀಡಲಿದ್ದಾರೆ. ಹಣಕಾಸಿನ ವ್ಯವಹಾರದಲ್ಲಿ ಹಿನ್ನೆಡೆ ಇರಲಿದೆ. ದುಡುಕದೆ ಯೋಚಿಸಿ ಕೆಲಸ ಕಾರ್ಯಗಳನ್ನು ಆರಂಭಿಸುವುದು ಒಳ್ಳೆಯದು. ಅತಿಯಾದ ಕೆಲಸ ಕಾರ್ಯಗಳಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಸಮಾಜದ ಗಣ್ಯ ವ್ಯಕ್ತಿಯೊಬ್ಬರು ನಿಮ್ಮ ಸಹಾಯಕ್ಕೆ ಬರುತ್ತಾರೆ. ಸೋದರ ಸಹಾಯದಿಂದ ಸ್ವಂತಭೂಮಿ ಅಥವಾ ಮನೆಯನ್ನು ಕೊಳ್ಳುವಿರಿ. ಸಾಧ್ಯವಾದಷ್ಟು ಚುರುಕುತನದಿಂದ ವರ್ತಿಸಿ. ಯಾರೊಂದಿಗೂ ವಾದ ಮಾಡದಿರಿ. ನಿಮ್ಮ ಮಾತಿನಿಂದ ಬೇರೆಯವರಿಗೆ ಬೇಸರ ಉಂಟಾಗಬಹುದು.

ಕುಂಭ

ಕುಟುಂಬದವರು ಹೆಮ್ಮೆ ಪಡುವಂತ ಕೆಲಸವನ್ನು ಆರಂಭಿಸುವಿರಿ. ನಿಮ್ಮಲ್ಲಿ ಹುದುಗಿದ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ಲಭ್ಯವಾಗುತ್ತದೆ. ಪ್ರಯತ್ನಕ್ಕೆ ತಕ್ಕಂತೆ ಆದಾಯ ಇರುತ್ತದೆ. ಸೋದರನ ಮಾತಿನಿಂದ ಕುಟುಂಬದಲ್ಲಿ ಬಿರುಕು ಉಂಟಾಗಬಹುದು. ಆರೋಗ್ಯದಲ್ಲಿ ತೊಂದರೆ ಇದೆ. ಉದ್ಯೋಗದಲ್ಲಿ ವಿಶಿಷ್ಟ ಸ್ಥಾನ ಮಾನ ದೊರೆತು ಅಧಿಕಾರಿಗಳ ಪ್ರಶಂಸೆ ಗಳಿಸುವಿರಿ. ವಿಶೇಷ ಅಧ್ಯಯನಕ್ಕೆ ವಿದೇಶಕ್ಕೆ ಪ್ರಯಾಣ ಬೆಳೆಸುವಿರಿ. ಸಾಲದ ವ್ಯವಹಾರ ಮಾಡದಿರಿ. ಆರೋಗ್ಯದ ಬಗ್ಗೆ ಗಮನ ಇರಲಿ. ಮನದಲ್ಲಿನ ವಿಚಾರವನ್ನು ಎಲ್ಲರ ಜೊತೆ ಹಂಚಿಕೊಂಡಲ್ಲಿ ಸಮಸ್ಯೆಗಳು ಪರಿಹಾರಗೊಳ್ಳಲಿವೆ. ಮಾತಿನಲ್ಲಿ ನಯ ವಿನಯ ರೂಢಿಸಿಕೊಳ್ಳಿರಿ.

ಮೀನ

ಕೊಟ್ಟ ಮಾತನ್ನು ಮರೆಯುವಿರಿ. ಸ್ವಂತ ಉದ್ಯಮ ಆರಂಭಿಸುವ ಯೋಚನೆ ಮೂಡುತ್ತದೆ. ಸ್ಥಿರವಾದ ನಿರ್ಧಾರಗಳಿಗೆ ಬದ್ಧರಾದಲ್ಲಿ ನೂತನ ಸಾಧನೆ ಮಾಡಬಹುದು. ಹಿತೈಷಿಗಳ ಸಹಾಯ ಸಹಕಾರದಿಂದ ಸುಖಜೀವನ ನಡೆಸುವಿರಿ. ಕುಟುಂಬದ ಕೆಲಸಕಾರ್ಯಗಳು ನಿಮ್ಮನ್ನು ಅವಲಂಭಿಸಿರುತ್ತದೆ. ಸಮಾಜದಲ್ಲಿ ವಿಶೇಷ ಗೌರವಧಾರಗಳು ಲಭಿಸುತ್ತದೆ. ಹಣದ ಕೊರತೆಯಿಂದ ಪಾರಾಗಲು ಭೂ ವ್ಯವಹಾರವನ್ನು ಆರಂಭಿಸುವಿರಿ. ಆರೋಗ್ಯದ ಬಗ್ಗೆ ಗಮನ ಇರಲಿ. ಸುಗಮವಾಗಿ ನಡೆಯದ ಕೆಲಸ ಕಾರ್ಯಗಳನ್ನು ಬೇಸರದಿಂದ ಅಪೂರ್ಣಗೊಳಿಸುವಿರಿ . ಕೈಕಾಲುಗಳಲ್ಲಿ ಶಕ್ತಿಯ ಕೊರತೆ ಕಂಡುಬರುತ್ತದೆ. ತಾಯಿ ಮತ್ತು ಮಕ್ಕಳ ನಡುವಿನ ಮನಸ್ತಾಪವು ಕೊನೆಗೊಳ್ಳಲಿದೆ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.