ಮಹಾಭಾರತ: ಒಳ್ಳೆಯ ಕಾರ್ಯಗಳಿಂದ ಎಲ್ಲರ ಮನಸ್ಸನ್ನು ಸೆಳೆದ ಕುಂತಿ; ಪಾಂಡುವಿನ ರಾಜ್ಯಭಾರದ ಯಶಸ್ಸಿನ ಕಥೆ-mythology mahabharata success story of pandu kingdom kunti won the hearts of all with her good deeds sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಭಾರತ: ಒಳ್ಳೆಯ ಕಾರ್ಯಗಳಿಂದ ಎಲ್ಲರ ಮನಸ್ಸನ್ನು ಸೆಳೆದ ಕುಂತಿ; ಪಾಂಡುವಿನ ರಾಜ್ಯಭಾರದ ಯಶಸ್ಸಿನ ಕಥೆ

ಮಹಾಭಾರತ: ಒಳ್ಳೆಯ ಕಾರ್ಯಗಳಿಂದ ಎಲ್ಲರ ಮನಸ್ಸನ್ನು ಸೆಳೆದ ಕುಂತಿ; ಪಾಂಡುವಿನ ರಾಜ್ಯಭಾರದ ಯಶಸ್ಸಿನ ಕಥೆ

ಮಹಾಭಾರತ ಧಾರ್ಮಿಕ ಹಾಗೂ ಪೌರಾಣಿಯ ಮಹಾಕಾವ್ಯಗಳಲ್ಲಿ ಒಂದು. ಕುರುಕ್ಷೇತ್ರದದ ಯುದ್ಧ ಹಾಗೂ ನಂತರ ಘಟನೆಗಳನ್ನು ಮಹಾಭಾರತದಲ್ಲಿ ವಿವರಿಸಲಾಗಿದೆ. ಪಾಂಡು ರಾಜನು ಕಾಡು ಮೃಗಗಳ ಬೇಟೆಗಾಗಿ ಕಾಡಿಗೆ ತೆರಳುತ್ತಾನೆ. ಈ ವೇಳೆ ಕಿಂದಮ ಎಂಬ ಋಷಿ ದಂಪತಿ ಶಾಪಕ್ಕೆ ಗುರಿಯಾಗಿದ್ದು ಯಾಕೆ ಎಂದುನ್ನು ತಿಳಿಯಿರಿ. (ಬರಹ: ಎಚ್. ಸತೀಶ್, ಜ್ಯೋತಿಷಿ)

ಮಹಾಭಾರತದಲ್ಲಿ ಪಾಂಡುವಿನ ರಾಜ್ಯಭಾರದ ಯಶಸ್ಸಿನ ಕಥೆ ಹಾಗೂ ತನ್ನ ಕಾರ್ಯಗಳಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಕುಂತಿಯ ಕಥೆ  ಓದಿ.
ಮಹಾಭಾರತದಲ್ಲಿ ಪಾಂಡುವಿನ ರಾಜ್ಯಭಾರದ ಯಶಸ್ಸಿನ ಕಥೆ ಹಾಗೂ ತನ್ನ ಕಾರ್ಯಗಳಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಕುಂತಿಯ ಕಥೆ ಓದಿ.

ಮಹಾಭಾರತದ ಮುಂದುವರಿದ ಭಾಗದಲ್ಲಿ ದಿನ ಕಳೆದಂತೆ ಕುಂತಿಯು ಬೆಳೆದು ನಿಲ್ಲುತ್ತಾಳೆ. ತರುಣಿಯಾದ ಕುಂತಿಯು ತನ್ನ ಒಳ್ಳೆಯ ಕೆಲಸ ಕಾರ್ಯಗಳಿಂದ ಎಲ್ಲರ ಮನಸ್ಸನ್ನು ಸೆಳೆಯುತ್ತಾಳೆ. ಈ ನಡುವೆ ರಾಜ, ಕುಂತಿಗೆ ವಿವಾಹ ಮಾಡಬೇಕೆಂಬ ಆಸೆ ಉಂಟಾಗುತ್ತದೆ. ಈ ಕಾರಣದಿಂದ ಸ್ವಯಂವರವನ್ನು ಏರ್ಪಡಿಸುತ್ತಾನೆ. ಸ್ವಯಂವರಕ್ಕೆ ರಾಜಾಧಿರಾಜರುಗಳನ್ನು ಆಹ್ವಾನಿಸುತ್ತಾನೆ. ಪಾಂಡು ಮಹಾರಾಜನಿಗೂ ಆಹ್ವಾನ ತಲುಪುತ್ತದೆ. ಎಲ್ಲರಂತೆ ತಾನು ಸಹ ವಿವಾಹದ ಆಕಾಂಕ್ಷಿಯಾಗಿ ಸ್ವಯಂವರ ಮಂಟಪವನ್ನು ತಲುಪುತ್ತಾನೆ. ಮಹಾಸಾಧ್ವಿ ಕುಂತಿಯು ಅನೇಕ ರಾಜ ಮಹಾರಾಜರ ನಡುವೆ ಪಾಂಡುವಿಗೆ ಸ್ವಯಂವರದ ಹಾರವನ್ನು ಹಾಕಿ ವರಿಸುತ್ತಾಳೆ.

ಪಾಂಡುವಿನ ಅಣ್ಣನಾದ ಧೃತರಾಷ್ಟ್ರನಿಗೆ ದೃಷ್ಟಿ ಇರದ ಕಾರಣ ಅನಿವಾರ್ಯವಾಗಿ ಪಾಂಡುವೆ ಚಕ್ರವರ್ತಿಯಾಗುತ್ತಾನೆ. ಮನಸ್ಸಿಲ್ಲದೆ ಹೋದರು ಎಲ್ಲರ ಒತ್ತಾಯವು ಇದಕ್ಕೆ ಕಾರಣವಾಗುತ್ತದೆ. ಪಾಂಡುವು ಮಹಾರಾಜನಾದ ನಂತರ ರಾಜಸ್ಥಾನದಲ್ಲಿ ಧೃತರಾಷ್ಟ್ರನಿಗೆ ವಿಶೇಷವಾದಂತಹ ಸ್ಥಾನಮಾನ ದೊರೆಯುತ್ತದೆ. ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನವಾರೂ ಅದರ ಅಂತಿಮ ನಿರ್ಧಾರವು ಧೃತರಾಷ್ಟ್ರನದೇ ಆಗಿರುತ್ತಿತ್ತು. ಕೌಟುಂಬಿಕ ವಿಚಾರವಾಗಲಿ, ರಾಜತಾಂತ್ರಿಕ ವಿಚಾರವಾಗಲಿ ಧೃತರಾಷ್ಟ್ರನ ಒಪ್ಪಿಗೆ ಇಲ್ಲದೆ ಪಾಂಡುವು ಮುಂದುವರೆಯುತ್ತಿರಲಿಲ್ಲ. ಪಾಂಡುವಿನ ಈ ನಡವಳಿಕೆ ಎಲ್ಲರಲ್ಲಿಯೂ ಸಂತಸವನ್ನು ಮೂಡಿಸುತ್ತದೆ.

ಭೀಷ್ಮನ ಒಪ್ಪಿಗೆಯನ್ನು ಪಡೆದ ಪಾಂಡು ರಾಜನು ಶಲ್ಯ ಮಹಾರಾಜನ ತಂಗಿಯಾದ ಮಾದ್ರಿಯನ್ನು ಎರಡನೆಯ ಪತ್ನಿಯಾಗಿ ಸ್ವೀಕರಿಸುತ್ತಾನೆ. ಈ ನಡುವೆ ಪರಮ ಪತಿವ್ರತೆಯಾದ ಗಾಂಧಾರಿಯು ನನಗೆ ನೂರು ಮಕ್ಕಳು ಬೇಕೆಂದು ಗುರುಗಳಲ್ಲಿ ವಿನಂತಿಸಿಕೊಳ್ಳುತ್ತಾಳೆ. ಗುರುವಿನ ಅನುಗ್ರಹದಂತೆ ಗಾಂಧಾರಿಯೂ ಗರ್ಭಿಣಿಯಾಗುತ್ತಾಳೆ. ಎಂದಿನಂತೆ ತನ್ನ ಕರ್ತವ್ಯ ಪಾಲನೆಗಾಗಿ ಪಾಂಡುರಾಜನು ಕಾಡು ಮೃಗಗಳ ಬೇಟೆಗಾಗಿ ಕಾಡಿಗೆ ತೆರಳುತ್ತಾನೆ. ಕಿಂದಮ ಎಂಬ ಋಷಿ ದಂಪತಿ ಅಲ್ಲಿರುತ್ತೆ. ಅವರು ಜಿಂಕೆಯ ರೂಪದಲ್ಲಿ ಸಂತೋಷದಿಂದ ಸಮಯಕಳೆಯುತ್ತಿರುತ್ತಾರೆ. ಆಗ ಪಾಂಡುರಾಜನು ಪ್ರಾಣಿಗಳ ಬೇಟೆಯಾಡುತ್ತ ಅಲ್ಲಿಗೆ ಬರುತ್ತಾನೆ.

ಇವನಿಗೆ ನಿಜದ ಪರಿವಿಲ್ಲದೆ ಋಷಿ ದಂಪತಿಗಳಿಗೆ ಬಾಣದಿಂದ ಹೊಡೆದು ಗಾಯಗೊಳಿಸುತ್ತಾನೆ. ಇದರಿಂದ ಕೋಪಗೊಂಡ ಋಷಿ ದಂಪತಿ ಪಾಂಡು ರಾಜನನ್ನು ಶಪಿಸುತ್ತಾರೆ. ರಾಜನಾದವನು ಮೃಗಗಳ ಬೇಟೆಯಾಡಲೇಬೇಕು. ಅದು ತಪ್ಪಲ್ಲ. ಆದರೆ ನೀನು ಸಂತೋಷದಿಂದ ಕಾಲ ಕಳೆಯುತ್ತಿದ್ದ ದಂಪತಿಯಾದ ನಮಗೆ ಬಾಣವನ್ನು ಬಿಟ್ಟು ತೊಂದರೆ ನೀಡಿರುವೆ. ಇದು ಆಕ್ಷಮ್ಯ ಅಪರಾಧ. ಆದ್ದರಿಂದ ನನ್ನ ಶಾಪವನ್ನು ನೀನು ಅನುಭವಿಸಲೇಬೇಕು ಎಂದು ನಿನ್ನ ಸತಿಯ ಜೊತೆ ಎಂದು ನೀನು ಸೇರುವೆಯೋ ಅಂದೇ ನಿನಗೆ ಮರಣ ಪ್ರಾಪ್ತಿಯಾಗುತ್ತದೆ ಎಂದು ಶಪವನ್ನು ಕೊಟ್ಟನು.

ಋಷಿ ದಂಪತಿ ನೀಡಿದ ಶಾಪವನ್ನು ಕೇಳಿ ಪಾಂಡುರಾಜುನು ಧೈರ್ಯಗೆಡುತ್ತಾನೆ. ತಾನು ಅರಿಯದೆ ಮಾಡಿದ ತಪ್ಪಿಗೆ ನೀವು ನೀಡಿದ ಶಿಕ್ಷೆ ಸರಿಯೇ ಎಂದು ಋಷಿದಂಪತಿಗೆ ಪ್ರಶ್ನಿಸುತ್ತಾನೆ. ಆಗ ಅವರು ಜೀವನದಲ್ಲಿ ಬಂದಿದ್ದನ್ನು ಒಪ್ಪಿಕೊಳ್ಳಲೇಬೇಕು. ತಿಳಿದೊ ತಿಳಿಯದೆಯೋ ಮಾಡಿದ ತಪ್ಪು ತಪ್ಪೇ. ನನ್ನ ಶಾಪವನ್ನು ನಾನು ಮರಳಿ ಪಡೆಯಲಾರೆ. ಇದನ್ನು ನೀನು ಅನುಭವಿಸಿಯೇ ತೀರಬೇಕು ಎಂದು ತಿಳಿಸುತ್ತಾರೆ. ಇದರಿಂದ ಮನನೊಂದ ಪಾಂಡುರಾಜುನು ಮರಳಿ ಅರಮನೆಯ ಕಡೆ ನಡೆಯುತ್ತಾನೆ. ಭೀಷ್ಮನನ್ನು ಭೇಟಿ ಮಾಡಿ ನಡೆದ ವಿಚಾರವನ್ನು ತಿಳಿಸುತ್ತಾನೆ. ಅಲ್ಲದೆ ತನ್ನ ಉಳಿದ ಆಯುಷ್ಯವನ್ನು ಕಾಡಿನಲ್ಲಿಯೇ ಕಳೆಯಲು ತೀರ್ಮಾನಿಸುತ್ತಾನೆ.

ಅಣ್ಣನಾದ ಧೃತರಾಷ್ಟ್ರನ ಒಪ್ಪಿಗೆಯನ್ನು ಪಡೆದ ನಂತರ ತನ್ನ ಪತ್ನಿಯರಾದ ಕುಂತಿ ಮತ್ತು ಮಾದ್ರಿಯರೊಂದಿಗೆ ಕಾಡಿಗೆ ತೆರಳುತ್ತಾನೆ. ಮನಸ್ಸಿಗೆ ಶಾಂತಿ ನೆಮ್ಮದಿ ಇಲ್ಲದೆ ಹಲವಾರು ಪ್ರದೇಶಗಳಿಗೆ ಭೇಟಿ ನೀಡುತ್ತಾನೆ. ಕೊನೆಗೊಮ್ಮೆ ವಿಧಿಯನ್ನು ಎದುರಿಸಿ ಬಾಳಲು ಯಾರಿಂದಲೂ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರುತ್ತಾನೆ. ಕಡೆಗೆ ಗಂದಮಾದನ ಎಂಬ ಪರ್ವತಕ್ಕೆ ನನ್ನ ಪತ್ನಿಯರ ಜೊತೆಗೂಡಿ ಬರುತ್ತಾನೆ. ಕೆಲವು ದಿನಗಳ ನಂತರ ಹಂಸಕೂಟ ಶ್ರೇಣಿಯನ್ನು ದಾಟಿ ಶತಶೃಂಗಪರ್ವತದ ತಪ್ಪಲಿಗೆ ಬರುತ್ತಾನೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.