ನಕ್ಷತ್ರ ಭವಿಷ್ಯ 2025; ಜನ್ಮನಕ್ಷತ್ರಗಳನ್ನು ಆಧರಿಸಿದ ವರ್ಷ ಭವಿಷ್ಯ ಹುಡುಕುತ್ತಿದ್ದೀರಾ, ಇಲ್ಲಿವೆ 27 ನಕ್ಷತ್ರಗಳ ಗುಣಲಕ್ಷಣ ಮತ್ತು ಭವಿಷ್ಯ
2025 Nakshatra Horoscope: ಹೊಸ ಕ್ಯಾಲೆಂಡರ್ ವರ್ಷ 2025ರಲ್ಲಿ ರಾಶಿ ಭವಿಷ್ಯದಂತೆಯೇ ಜನ್ಮನಕ್ಷತ್ರ ಆಧರಿಸಿದ ವರ್ಷ ಭವಿಷ್ಯ ಹುಡುಕಾಡುವುದು ಸಹಜ. 2025ರ ನಕ್ಷತ್ರ ಭವಿಷ್ಯದಂತೆ 27 ನಕ್ಷತ್ರಗಳ ಗುಣಲಕ್ಷಣ ಮತ್ತು ವರ್ಷ ಭವಿಷ್ಯದ ವಿವರ ಇಲ್ಲಿದೆ.
2025 Nakshatra Horoscope: ಹೊಸ ವರ್ಷದ ಹೊಸ್ತಿಲಲ್ಲಿ ಇದ್ದೇವೆ. ಕ್ಯಾಲೆಂಡರ್ ವರ್ಷಗಳ ಪ್ರಕಾರ 2024 ಉರುಳುತ್ತ ಸಾಗಿದ್ದು, ಇನ್ನೇನು ಕೊನೆಯ ಹಂತದಲ್ಲಿದ್ದು, ಎಲ್ಲರೂ 2025ನೇ ಇಸವಿಯನ್ನು ಬರಮಾಡಿಕೊಳ್ಳಲು ಸಿದ್ದತೆ ನಡೆಸಿದ್ದಾರೆ. ಹೊಸ ವರ್ಷ 2025ರಲ್ಲಿ ಸಂಕಷ್ಟಗಳು ಕರಗಿ ಹೊಸ ಅವಕಾಶ, ಸಂಪತ್ತು, ಸಮೃದ್ಧಿ ನಿರೀಕ್ಷಿಸುತ್ತ, ಒಳಿತನ್ನು ಬಯಸುತ್ತ ಆಶಾವಾದಿಗಳಾಗಿ ಮುಂದುವರಿಯುವುದು ಮನುಷ್ಯ ಸಹಜ ನಡೆ. ಈ ಅವಧಿಯಲ್ಲಿ ಬಹುತೇಕರು ತಮ್ಮ ಜನ್ಮ ರಾಶಿಗೆ ಅನುಗುಣವಾದ ಭವಿಷ್ಯ ಗಮನಿಸುತ್ತಾರೆ. ಅದೇ ರೀತಿ ಜನ್ಮ ನಕ್ಷತ್ರಕ್ಕೆ ಅನುಗುಣವಾದ ವರ್ಷ ಭವಿಷ್ಯವನ್ನೂ ಗಮನಿಸುತ್ತಾರೆ. ನಕ್ಷತ್ರದ ಗುಣಲಕ್ಷಣಗಳು ಮತ್ತು ಅದನ್ನು ಆಧರಿಸಿದ ಭವಿಷ್ಯವಾದ ಕಾರಣ ಇದು ಬಹುತೇಕ ಮಟ್ಟಿಗೆ ನಿಜವಾಗುತ್ತದೆ ಎಂಬ ನಂಬಿಕೆ ಅನೇಕರದ್ದು. ಅದರಂತೆ, 2025ರ ನಕ್ಷತ್ರ ಭವಿಷ್ಯ ಹುಡುಕುವುದು ಸಹಜ. 27 ನಕ್ಷತ್ರಗಳ 2025ರ ನಕ್ಷತ್ರ ಭವಿಷ್ಯ ವಿವರವನ್ನು ಬಿಡಿ ಬಿಡಿಯಾಗಿ ವಿವರವಾಗಿ ಸರಣಿಯಂತೆ ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಪ್ರಕಟಿಸಲಾಗಿದೆ. ಈಗ ಆ ಎಲ್ಲ ನಕ್ಷತ್ರ ಭವಿಷ್ಯಗಳನ್ನು ಒಂದೆಡೆ ಸುಲಭವಾಗಿ ಸಿಗುವಂತಾಗಲಿ ಎಂದು ಇದೇ ಕಾಪಿಯಲ್ಲಿ ಒದಗಿಸಲಾಗಿದೆ. ಆಸಕ್ತರು ತಮ್ಮ ತಮ್ಮ ಜನ್ಮ ನಕ್ಷತ್ರದ ವಿವರ ನಕ್ಷತ್ರ ಭವಿಷ್ಯವನ್ನು ಆಯಾ ಶೀರ್ಷಿಕೆ ಕ್ಲಿಕ್ ಮಾಡಿ ಓದಬಹುದು.
ನಕ್ಷತ್ರ ಭವಿಷ್ಯ 2025: ಜನ್ಮ ನಕ್ಷತ್ರಕ್ಕೆ ಅನುಗುಣವಾದ 27 ನಕ್ಷತ್ರಗಳ 2025ರ ವರ್ಷ ಭವಿಷ್ಯ
ಅಶ್ವಿನಿ ನಕ್ಷತ್ರ ಭವಿಷ್ಯ 2025: ವರ್ಷ ಭವಿಷ್ಯ 2025ರ ಪ್ರಕಾರ, ಅಶ್ವಿನಿ ನಕ್ಷತ್ರದವರು 2025ನೇ ಇಸವಿಯಲ್ಲಿ ಮೊದಲ ಆರು ತಿಂಗಳು ಆರೋಗ್ಯ ಜೋಪಾನ ಮಾಡಿಕೊಳ್ಳಬೇಕು. ನಂತರದ ಅವಧಿಯಲ್ಲಿ ಹಲವು ರೀತಿಯ ಸನ್ನಿವೇಶಗಳ ಕಾರಣ ಕದಡಿದ ಸಂಸಾರ ಸಾಗರದಲ್ಲಿ ಭಾವಯಾನ ಮಾಡಬೇಕಾಗಿ ಬರುತ್ತದೆ. ವರ್ಷ ಭವಿಷ್ಯದ ವಿವರ ಹೀಗಿದೆ ಅಶ್ವಿನಿ ನಕ್ಷತ್ರ ವರ್ಷ ಭವಿಷ್ಯ 2025; ಮೊದಲ ಆರು ತಿಂಗಳು ಆರೋಗ್ಯ ಜೋಪಾನ, ನಂತರ ಕದಡಿದ ಸಂಸಾರ ಸಾಗರದಲ್ಲಿ ಭಾವಯಾನ
ಭರಣಿ, ಕೃತಿಕಾ ನಕ್ಷತ್ರ ಭವಿಷ್ಯ 2025: ಭರಣಿ ನಕ್ಷತ್ರದವರಿಗೆ ವಿದೇಶ ಪ್ರಯಾಣ ಯೋಗ ಇದೆ. ಕೃತಿಕಾ ನಕ್ಷತ್ರದವರಿಗೆ ಉದ್ಯೋಗದಲ್ಲಿ ಉನ್ನತಿ ಸಾಧ್ಯತೆ ಇದ್ದು, ಎರಡೂ ನಕ್ಷತ್ರದಲ್ಲಿ ಜನಿಸಿದವರು ಹಣಕಾಸಿನ ವಿಚಾರದಲ್ಲಿ ಹಾಸಿಗೆ ಇದ್ದಷ್ಟೇ ಕಾಲುಚಾಚ ಬೇಕು ಎಂಬ ಆಡುನುಡಿಯನ್ನು ಮರೆಯಬಾರದು ಎನ್ನುತ್ತಿದೆ ನಕ್ಷತ್ರ ಭವಿಷ್ಯ. ಭರಣಿ, ಕೃತಿಕಾ ನಕ್ಷತ್ರ ಭವಿಷ್ಯದ ವಿವರ ಹೀಗಿದೆ - ಭರಣಿ ನಕ್ಷತ್ರದವರಿಗೆ ವಿದೇಶ ಪ್ರಯಾಣ ಯೋಗ, ಕೃತಿಕಾ ನಕ್ಷತ್ರದವರಿಗೆ ಉದ್ಯೋಗದಲ್ಲಿ ಉನ್ನತಿ ಸಾಧ್ಯತೆ
ರೋಹಿಣಿ, ಮಾರ್ಗಶಿರಾ ನಕ್ಷತ್ರ ಭವಿಷ್ಯ 2025: ರೋಹಿಣಿ ನಕ್ಷತ್ರದವರಿಗೆ ಇದು ಕುತೂಹಲಕರ ವರ್ಷವಾಗಿದ್ದು, ಶುಭಫಲಗಳಿವೆ. ಅದೇ ರೀತಿ, ಮಾರ್ಗಶಿರಾ ನಕ್ಷತ್ರದವರು ವರ್ಷ ಪೂರ್ತಿ ಹುಷಾರಾಗಿರಬೇಕು. ಕೆಲವು ಕೆಟ್ಟ ಫಲಗಳಿರುವ ಕಾರಣ ಆಗ ಬಗ್ಗೆ ನಿಗಾವಹಿಸದೇ ಇದ್ದರೆ ಶುಭ ಫಲಗಳೂ ಕೈತಪ್ಪಿ ಹೋಗಬಹುದು. ಈ ಎರಡೂ ನಕ್ಷತ್ರದವರು ವಿವರಕ್ಕೆ ಮುಂದೆ ಓದಿ. ರೋಹಿಣಿ ನಕ್ಷತ್ರದವರಿಗೆ ಇದು ಕುತೂಹಲಕರ ವರ್ಷ, ಮಾರ್ಗಶಿರಾ ನಕ್ಷತ್ರದವರು ಹುಷಾರಾಗಿರಬೇಕು
ಆರ್ದ್ರಾ, ಪುನರ್ವಸು ನಕ್ಷತ್ರ ಭವಿಷ್ಯ 2025: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನ್ಮ ನಕ್ಷತ್ರ ಆಧಾರಿತ ವರ್ಷ ಭವಿಷ್ಯ ಗಮನಿಸುವವರಿದ್ದಾರೆ. 2025ರ ಭವಿಷ್ಯ ಹೇಗಿರಬಹುದು ಎಂಬ ಕುತೂಹಲ ಸಹಜ. ಅದರಂತೆ, ನಕ್ಷತ್ರ ಭವಿಷ್ಯ 2025ರ ಪ್ರಕಾರ ಈ ಬಾರಿ ಆರ್ದ್ರಾ ನಕ್ಷತ್ರದವರು ಸಖತ್ ಮಿಂಚಲಿದ್ದಾರೆ. ಅದೇ ರೀತಿ, ಪುನರ್ವಸು ನಕ್ಷತ್ರದವರು ಶ್ರೀರಾಮಚಂದ್ರನಂತೆ ಕಂಗೊಳಿಸುವರು ಎಂದು ನಕ್ಷತ್ರ ಭವಿಷ್ಯ ಹೇಳುವುದಾದರೂ ವಿವರ ಹೀಗಿದೆ. ಸಖತ್ ಮಿಂಚಲಿದ್ದಾರೆ ಆರ್ದ್ರಾ ನಕ್ಷತ್ರದವರು, ಶ್ರೀರಾಮಚಂದ್ರನಂತೆ ಕಂಗೊಳಿಸುವರು ಪುನರ್ವಸು ನಕ್ಷತ್ರದವರು
ಪುಷ್ಯ, ಆಶ್ಲೇಷಾ ನಕ್ಷತ್ರ ಭವಿಷ್ಯ 2025: ಹೊಸ ವರ್ಷದ ಅಂದರೆ 2025ರ ರಾಶಿ ಭವಿಷ್ಯ ನೋಡಿದ್ರಾ? ನಕ್ಷತ್ರ ಭವಿಷ್ಯಕ್ಕಾಗಿ ಹುಡುಕಾಡ್ತಾ ಇದ್ದೀರಾ, ಇಲ್ಲಿದೆ ಪುಷ್ಯ ಮತ್ತು ಆಶ್ಲೇಷಾ ನಕ್ಷತ್ರ ಭವಿಷ್ಯ. ನಕ್ಷತ್ರ ಭವಿಷ್ಯ 2025ರ ಪ್ರಕಾರ, ಪುಷ್ಯದವರಿಗೆ ಜೀವನ ಪಾಠಶಾಲೆಯಲ್ಲಿ ಕಠಿಣ ಶಿಕ್ಷಣ ಸಿಕ್ಕರೆ, ಆಶ್ಲೇಷಾದವರಿಗೆ ವರ್ಷಾರಂಭ ಕಡುಕಷ್ಟ, ಅದಾಗಿ ಆನಂದ ಸಾಗರವಾಗಲಿದೆ ಎಂದು ನಕ್ಷತ್ರ ಭವಿಷ್ಯ ಹೇಳುತ್ತದೆ. ಆದಾಗ್ಯೂ ಪೂರ್ಣ ವಿವರ ಹೀಗಿದೆ - ಪುಷ್ಯದವರಿಗೆ ಜೀವನ ಪಾಠಶಾಲೆಯಲ್ಲಿ ಕಠಿಣ ಶಿಕ್ಷಣ, ಆಶ್ಲೇಷಾದವರಿಗೆ ವರ್ಷಾರಂಭ ಕಡುಕಷ್ಟ, ಅದಾಗಿ ಆನಂದ ಸಾಗರ
ಮಾಘ , ಪೂರ್ವ ಫಲ್ಗುಣಿ ನಕ್ಷತ್ರ ಭವಿಷ್ಯ 2025: ರಾಶಿ ಭವಿಷ್ಯ ಹುಡುಕುವುದರ ಜತೆಗೆ ನಕ್ಷತ್ರ ಭವಿಷ್ಯವನ್ನೂ ಹುಡುಕುತ್ತಿರುತ್ತೀರಿ ಅಲ್ವ, ಮಾಘ ಮತ್ತು ಪೂರ್ವ ಫಲ್ಗುಣಿ ನಕ್ಷತ್ರದವರ 2025ರ ನಕ್ಷತ್ರ ಭವಿಷ್ಯ ಕುತೂಹಲಕರವಾಗಿದೆ. ಮಾಘದವರು ಮಾಗುವಿಕೆಗೆ ಒಳಾಗಬಹುದಾದ ವರ್ಷ, ಪೂರ್ವ ಫಲ್ಗುಣಿ ಬದುಕು ರಹಸ್ಯ, ನಿಗೂಢಗಳೇ ಹೆಚ್ಚು. ವಿವರಗಳಿಗೆ ಈ ಮಾಹಿತಿ ಕಡೆಗೊಮ್ಮೆ ಗಮನಹರಿಸಿ - ಮಾಘದವರು ಮಾಗುವಿಕೆಗೆ ಒಳಾಗಬಹುದಾದ ವರ್ಷ, ಪೂರ್ವ ಫಲ್ಗುಣಿ ಬದುಕು ರಹಸ್ಯ, ನಿಗೂಢಗಳೇ ಹೆಚ್ಚು
ಉತ್ತರ ಫಲ್ಗುಣಿ, ಹಸ್ತ ನಕ್ಷತ್ರ ಭವಿಷ್ಯ 2025: ಹೊಸ ಕ್ಯಾಲೆಂಡರ್ ವರ್ಷ ಶುರುವಾಗಲು ಇನ್ನೇನು ಕೆಲವು ದಿನಗಳು ಬಾಕಿ ಇವೆ. 2024ರ ಕೊನೆಯ ತಿಂಗಳಲ್ಲಿ ನಾವಿದ್ದೇವೆ. ಅನೇಕು ಈಗಾಗಲೇ 2025 ರಾಶಿಭವಿಷ್ಯ, ಹೊಸ ವರ್ಷ ಭವಿಷ್ಯಗಳನ್ನು ಓದಿರಬಹುದು. ನಕ್ಷತ್ರ ಭವಿಷ್ಯ ಗಮನಿಸುವವರೂ ಇದ್ದಾರೆ. ರಾಶಿಚಕ್ರಗಳ ವ್ಯವಸ್ಥೆಯಲ್ಲಿ ಜನ್ಮ ನಕ್ಷತ್ರಕ್ಕೆ ವಿಶೇಷ ಮಹತ್ವವಿದೆ. ಅದರಂತೆ ಇಲ್ಲಿ, ಉತ್ತರ ಫಲ್ಗುಣಿ ಮತ್ತು ಹಸ್ತ ಜನ್ಮ ನಕ್ಷತ್ರದವರ ನಕ್ಷತ್ರ ಭವಿಷ್ಯ 2025ರ ವಿವರ - ಉತ್ತರ ಫಲ್ಗುಣಿಯವರಿಗೆ ಆರೋಗ್ಯವೇ ಭಾಗ್ಯ ಎಂಬುದನ್ನು ನೆನಪಿಸುವ ವರ್ಷ, ಹಸ್ತ ನಕ್ಷತ್ರದವರ ಆರೋಗ್ಯ ಜೋಪಾನ
ಚಿತ್ರಾ, ಸ್ವಾತಿ ನಕ್ಷತ್ರ ಭವಿಷ್ಯ 2025: ಹೊಸ ಕ್ಯಾಲೆಂಡರ್ ವರ್ಷವನ್ನು ಬರಮಾಡಿಕೊಳ್ಳುವ ಸಂದರ್ಭ. 2025ರ ಹೊಸ್ತಿಲಲ್ಲಿ ರಾಶಿಭವಿಷ್ಯ ನೋಡಿದರೆ ಸಾಕೆ, ನಕ್ಷತ್ರ ಭವಿಷ್ಯವನ್ನೂ ನೋಡಬೇಡವೆ, ಅನೇಕರು ನಕ್ಷತ್ರ ಭವಿಷ್ಯಕ್ಕಾಗಿ ಹುಡುಕಾಡುತ್ತಿರುವುದು ಸಹಜ. ಮಾಹಿತಿಗೋಸ್ಕರ 2025ರ ನಕ್ಷತ್ರ ಭವಿಷ್ಯದಲ್ಲಿ ಚಿತ್ರಾ ನಕ್ಷತ್ರ ಮತ್ತು ಸ್ವಾತಿ ನಕ್ಷತ್ರ ಭವಿಷ್ಯದ ವಿವರ- ಚಿತ್ರಾ ನಕ್ಷತ್ರದವರಿಗೆ ವೃತ್ತಿಯಲ್ಲಿ ಏಳಿಗೆ, ಸ್ವಾತಿ ನಕ್ಷತ್ರದವರು ಸಂಗಾತಿ ಆಯ್ಕೆಯಲ್ಲಿ ಮೋಸ ಹೋಗದಿರಿ
ವಿಶಾಖ, ಅನುರಾಧಾ ನಕ್ಷತ್ರ ಭವಿಷ್ಯ 2025: ನಕ್ಷತ್ರ ಭವಿಷ್ಯ 2025ರ ಪ್ರಕಾರ, ವಿಶಾಖ ನಕ್ಷತ್ರದವರಿಗೆ ಈ ವರ್ಷ ಉದ್ಯೋಗದಲ್ಲಿ ಉನ್ನತಿ, ಉದ್ಯೋಗ ಬದಲಾವಣೆಗೆ ಅವಕಾಶ ಎದುರಾಗಲಿದೆ. ಇನ್ನೊಂದೆಡೆ, ಅನುರಾಧಾ ನಕ್ಷತ್ರದವರಿಗೆ ತಾಯಿ ನೆರಳು ಸಮಸ್ಯೆಯಾಗಿ ಕಾಡಬಹುದು. ವಿಶಾಖ, ಅನುರಾಧಾ ನಕ್ಷತ್ರ ಭವಿಷ್ಯ ವಿವರ - ವಿಶಾಖದವರಿಗೆ ಉದ್ಯೋಗ ಬದಲಾವಣೆಗೆ ಅವಕಾಶ; ಅನುರಾಧಾದವರಿಗೆ ತಾಯಿ ನೆರಳೇ ಸಮಸ್ಯೆ
ಜ್ಯೇಷ್ಠ, ಮೂಲಾ ನಕ್ಷತ್ರ ಭವಿಷ್ಯ 2025: ಹೊಸ ವರ್ಷದಲ್ಲಿ ಜ್ಯೇಷ್ಠದಲ್ಲಿ ಜನಿಸಿದವರ ಆರೋಗ್ಯ, ಹಣಕಾಸು ಜೋಪಾನ ಮಾಡಿಕೊಳ್ಳಬೇಕು. ಶುಭ ಫಲಗಳು ಹೆಚ್ಚಿವೆ. ಇನ್ನು ಮೂಲಾ ನಕ್ಷತ್ರದವರಿಗೆ ಉದ್ಯೋಗ ಚಿಂತನೆ ಹೆಚ್ಚಾಗಿರಲಿದ್ದು, ಶುಭಫಲ ಮತ್ತು ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಾಗಿದೆ. ಜ್ಯೇಷ್ಠ, ಮೂಲಾ ನಕ್ಷತ್ರ ಭವಿಷ್ಯ ವಿವರ - ಜ್ಯೇಷ್ಠದಲ್ಲಿ ಜನಿಸಿದವರ ಆರೋಗ್ಯ, ಹಣಕಾಸು ಜೋಪಾನ, ಮೂಲಾ ನಕ್ಷತ್ರದವರಿಗೆ ಉದ್ಯೋಗ ಚಿಂತನೆ
ಪೂರ್ವಾಷಾಢ, ಉತ್ತರಾಷಾಢ ನಕ್ಷತ್ರ ಭವಿಷ್ಯ 2025; ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಚಕ್ರ ವ್ಯವಸ್ಥೆಯಲ್ಲಿರುವ ನಕ್ಷತ್ರಗಳ ಗುಣಲಕ್ಷಣ, ನಕ್ಷತ್ರ ಭವಿಷ್ಯದ ಬಗ್ಗೆ ಕುತೂಹಲ ಸಹಜ. 2025ರ ನಕ್ಷತ್ರ ಭವಿಷ್ಯದ ಪ್ರಕಾರ, ಪೂರ್ವಾಷಾಢ ನಕ್ಷತ್ರದವರು ಸಾಮಾಜಿಕ ಬದುಕಿನಲ್ಲಿ ಹುಷಾರು ಇರಬೇಕು. ಅಂತೆಯೇ, ಉತ್ತರಾಷಾಢದವರಿಗೆ ಮುಂಗೋಪವೇ ದೊಡ್ಡ ಸವಾಲು. ಎಚ್ಚರದಿಂದ ಇರಬೇಕು. ನಕ್ಷತ್ರ ಭವಿಷ್ಯ ವಿವರ - ಪೂರ್ವಾಷಾಢ ನಕ್ಷತ್ರದವರು ಸಾಮಾಜಿಕ ಬದುಕಿನಲ್ಲಿ ಹುಷಾರು, ಉತ್ತರಾಷಾಢದವರಿಗೆ ಮುಂಗೋಪವೇ ದೊಡ್ಡ ಸವಾಲು
ಶ್ರವಣ, ಧನಿಷ್ಠ ನಕ್ಷತ್ರ ಭವಿಷ್ಯ 2025: ಹೊಸ ವರ್ಷ ಶುಭ ಫಲ ಇರಲಿ, ಒಳಿತಾಗಲಿ ಎಂದು ಹಾರೈಸುವುದರ ಜೊತೆಗೆ ಹೊಸ ವರ್ಷದ ರಾಶಿಫಲ ಗಮನಿಸುವುದು ವಾಡಿಕೆ. ಅದರಂತೆ 2025ರ ನಕ್ಷತ್ರ ಭವಿಷ್ಯ ಪ್ರಕಾರ, ಶ್ರವಣ ನಕ್ಷತ್ರದವರಿಗೆ ಈ ಬಾರಿ ಅನುಕೂಲಕರ ಜೀವನ ಇದೆಯಾದರೂ ಸಂಕಷ್ಟವೂ ಇದೆ. ಧನಿಷ್ಠ ನಕ್ಷತ್ರವರಿಗೆ ಧರ್ಮಕಾರ್ಯದತ್ತ ಒಲವು ಹೆಚ್ಚಾಗಲಿದ್ದು, ಇನ್ನು ಕೆಲವು ಅಚ್ಚರಿಗಳಿವೆ. ನಕ್ಷತ್ರ ಭವಿಷ್ಯ ವಿವರ - ಶ್ರವಣ ನಕ್ಷತ್ರದವರಿಗೆ ಅನುಕೂಲಕರ ಜೀವನ, ಧನಿಷ್ಠ ನಕ್ಷತ್ರದವರಿಗೆ ಧರ್ಮಕಾರ್ಯದತ್ತ ಒಲವು
ಶತಭಿಷ, ಪೂರ್ವಾಭಾದ್ರ ನಕ್ಷತ್ರ ಭವಿಷ್ಯ 2025: ಹೊಸ ವರ್ಷ 2025ರಲ್ಲಿ ಶುಭ ಫಲ ಸಿಗಬೇಕು, ಸಂಕಷ್ಟಗಳು ಕರಗಿಹೋಗಬೇಕು ಎಂಬುದು ಎಲ್ಲರ ಆಶಯ. ಈಗಾಗಲೇ ಬಹುತೇಕರು ರಾಶಿ ಭವಿಷ್ಯ ನೋಡಿರುತ್ತಾರೆ. 2025ರ ನಕ್ಷತ್ರ ಭವಿಷ್ಯದ ಪ್ರಕಾರ, ಈ ವರ್ಷ ಶತಭಿಷ ನಕ್ಷತ್ರದವರಿಗೆ ನಿದ್ದೆಗೆಡುವ ವರ್ಷವಾಗಿರಲಿದೆ. ಅದೇ ರೀತಿ, ಪೂರ್ವಾಭಾದ್ರದವರು ಹಣಕಾಸಿನ ಬಗ್ಗೆ ಎಚ್ಚರವಾಗಿರಿ ಎಂದು ವರ್ಷ ಭವಿಷ್ಯ ಹೇಳಿದ್ದು, ಪೂರ್ಣ ವಿವರ ಹೀಗಿದೆ - ಶತಭಿಷ ನಕ್ಷತ್ರದವರಿಗೆ ನಿದ್ದೆಗೆಡುವ ವರ್ಷ, ಪೂರ್ವಾಭಾದ್ರದವರು ಹಣಕಾಸಿನ ಬಗ್ಗೆ ಎಚ್ಚರವಾಗಿರಿ
ಉತ್ತರಾಭಾದ್ರಾ, ರೇವತಿ ನಕ್ಷತ್ರ ಭವಿಷ್ಯ 2025; ಹೊಸ ವರ್ಷ 2025ರಲ್ಲಿ ಎಲ್ಲವೂ ಶುಭವಾಗಿರಬೇಕು ಎಂಬ ಆಶಯದೊಂದಿಗೆ ಬಹುತೇಕರು ರಾಶಿಭವಿಷ್ಯ ಗಮನಿಸಿರುತ್ತೀರಿ. ಜನ್ಮ ನಕ್ಷತ್ರ ಪ್ರಕಾರ ಇರುವ ನಕ್ಷತ್ರ ಭವಿಷ್ಯ ಹುಡುಕುತ್ತೀರಾದರೆ, ಉತ್ತರಾಭಾದ್ರಾದವರಿಗೆ ಉದ್ಯೋಗದಲ್ಲಿ ಮುನ್ನಡೆಯ ವರ್ಷ. ಅದೇ ರೀತಿ, ರೇವತಿಯವರು ವರ್ಷಾಂತ್ಯದಲ್ಲಿ ಎಚ್ಚರದಿಂದಿರಿ ಎಂದು 2025ರ ನಕ್ಷತ್ರ ಭವಿಷ್ಯ ಹೇಳುತ್ತಿದೆ. ಪೂರ್ಣ ವಿವರ ಹೀಗಿದೆ - ಉತ್ತರಾಭಾದ್ರಾದವರಿಗೆ ಉದ್ಯೋಗದಲ್ಲಿ ಮುನ್ನಡೆಯ ವರ್ಷ, ರೇವತಿಯವರು ವರ್ಷಾಂತ್ಯದಲ್ಲಿ ಎಚ್ಚರದಿಂದಿರಿ