ನಕ್ಷತ್ರ ಭವಿಷ್ಯ 2025; ಶತಭಿಷ ನಕ್ಷತ್ರದವರಿಗೆ ನಿದ್ದೆಗೆಡುವ ವರ್ಷ, ಪೂರ್ವಾಭಾದ್ರದವರು ಹಣಕಾಸಿನ ಬಗ್ಗೆ ಎಚ್ಚರವಾಗಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಕ್ಷತ್ರ ಭವಿಷ್ಯ 2025; ಶತಭಿಷ ನಕ್ಷತ್ರದವರಿಗೆ ನಿದ್ದೆಗೆಡುವ ವರ್ಷ, ಪೂರ್ವಾಭಾದ್ರದವರು ಹಣಕಾಸಿನ ಬಗ್ಗೆ ಎಚ್ಚರವಾಗಿರಿ

ನಕ್ಷತ್ರ ಭವಿಷ್ಯ 2025; ಶತಭಿಷ ನಕ್ಷತ್ರದವರಿಗೆ ನಿದ್ದೆಗೆಡುವ ವರ್ಷ, ಪೂರ್ವಾಭಾದ್ರದವರು ಹಣಕಾಸಿನ ಬಗ್ಗೆ ಎಚ್ಚರವಾಗಿರಿ

Nakshatra Horoscope: ಹೊಸ ವರ್ಷ 2025ರಲ್ಲಿ ಶುಭ ಫಲ ಸಿಗಬೇಕು, ಸಂಕಷ್ಟಗಳು ಕರಗಿಹೋಗಬೇಕು ಎಂಬುದು ಎಲ್ಲರ ಆಶಯ. ಈಗಾಗಲೇ ಬಹುತೇಕರು ರಾಶಿ ಭವಿಷ್ಯ ನೋಡಿರುತ್ತಾರೆ. 2025ರ ನಕ್ಷತ್ರ ಭವಿಷ್ಯದ ಪ್ರಕಾರ, ಈ ವರ್ಷ ಶತಭಿಷ ನಕ್ಷತ್ರದವರಿಗೆ ನಿದ್ದೆಗೆಡುವ ವರ್ಷವಾಗಿರಲಿದೆ. ಅದೇ ರೀತಿ, ಪೂರ್ವಾಭಾದ್ರದವರು ಹಣಕಾಸಿನ ಬಗ್ಗೆ ಎಚ್ಚರವಾಗಿರಿ ಎಂದು ವರ್ಷ ಭವಿಷ್ಯ ಹೇಳಿದೆ.

ನಕ್ಷತ್ರ ಭವಿಷ್ಯ 2025; ಶತಭಿಷ ನಕ್ಷತ್ರದವರಿಗೆ ನಿದ್ದೆಗೆಡುವ ವರ್ಷ, ಪೂರ್ವಾಭಾದ್ರದವರು ಹಣಕಾಸಿನ ಬಗ್ಗೆ ಎಚ್ಚರವಾಗಿರಿ ಎಂದು ನಕ್ಷತ್ರ ಭವಿಷ್ಯ ಹೇಳುತ್ತಿದೆ.
ನಕ್ಷತ್ರ ಭವಿಷ್ಯ 2025; ಶತಭಿಷ ನಕ್ಷತ್ರದವರಿಗೆ ನಿದ್ದೆಗೆಡುವ ವರ್ಷ, ಪೂರ್ವಾಭಾದ್ರದವರು ಹಣಕಾಸಿನ ಬಗ್ಗೆ ಎಚ್ಚರವಾಗಿರಿ ಎಂದು ನಕ್ಷತ್ರ ಭವಿಷ್ಯ ಹೇಳುತ್ತಿದೆ.

Nakshatra Horoscope: ಕ್ಯಾಲೆಂಡರ್ ವರ್ಷ 2024 ಮುಗಿದು 2025 ಶುರುವಾಗುವ ಹೊತ್ತು. ಹೊಸ ವರ್ಷ ಶುಭ ಫಲಗಳೇ ಹೆಚ್ಚಾಗಿರಲಿ ಎಂದು ಎಲ್ಲರೂ ದೇವರನ್ನು ಬೇಡಿಕೊಳ್ಳುವ ಹೊತ್ತು. ಈ ವರ್ಷ ಎದುರಿಸಿದ ಸಂಕಷ್ಟಗಳು ಕರಗಿ ಹೋಗಲಿ. ಹೊಸ ಭರವಸೆ ಮೂಡಲಿ ಎಂದು ಆಶಿಸುತ್ತ ಅನೇಕರು ರಾಶಿಫಲಗಳನ್ನು ಗಮನಿಸುತ್ತೀರಿ. ಜನ್ಮನಕ್ಷತ್ರಗಳಿಗೆ ಅನುಗುಣವಾದ ನಕ್ಷತ್ರ ಭವಿಷ್ಯದ ಕಡೆಗೂ ಗಮನಹರಿದಿರುತ್ತದೆ. ಇದರಂತೆ 2025ರ ನಕ್ಷತ್ರ ಭವಿಷ್ಯದ ಪ್ರಕಾರ, ಈ ವರ್ಷ ಶತಭಿಷ ನಕ್ಷತ್ರದವರಿಗೆ ನಿದ್ದೆಗೆಡುವ ವರ್ಷವಾಗಬಹುದು. ಅದೇ ರೀತಿ, ಪೂರ್ವಾಭಾದ್ರದವರು ಹಣಕಾಸಿನ ಬಗ್ಗೆ ಎಚ್ಚರವಾಗಿರಿ ಎಂದು ನಕ್ಷತ್ರ ಭವಿಷ್ಯ ಹೇಳಿದ್ದು, ಪೂರ್ಣ ವಿವರ ಇಲ್ಲಿದೆ.

ಶತಭಿಷ ನಕ್ಷತ್ರದವರ ಗುಣಲಕ್ಷಣಗಳು

ಜ್ಯೋತಿಷ್ಯ ಶಾಸ್ತ್ರದ ರಾಶಿಚಕ್ರ ವ್ಯವಸ್ಥೆಯಲ್ಲಿ 24ನೇ ನಕ್ಷತ್ರ ಶತಭಿಷ. ಇದು ಕುಂಭ ರಾಶಿಯ ವ್ಯಾಪ್ತಿಯಲ್ಲಿದೆ. ವೃತ್ತ ಅಥವಾ 100 ವೈದ್ಯರು, ನಕ್ಷತ್ರಗಳು ಅಥವಾ ಹೂವುಗಳು ಈ ನಕ್ಷತ್ರದ ಸಂಕೇತವಾಗಿದ್ದು, ವರುಣ ದೇವರು ಇದರ ಅಧಿಪತಿ.ಈ ನಕ್ಷತ್ರವು ರಾಹು ಗ್ರಹದ ಆಳ್ವಿಕೆಯಲ್ಲಿದೆ. ಶತಭಿಷ ಎಂದರೆ ಭೇಷಜ (ಔಷಧ) ಎಂಬ ವೈದ್ಯಕೀಯ ಪದವನ್ನು ಸಂಕೇತಿಸುತ್ತದೆ. ಇದು ಮುಚ್ಚಳ ಹೊಂದಿದ ಭರಣಿಯ ಕಲ್ಪನೆಯನ್ನು ಒದಗಿಸುತ್ತದೆ. ಇನ್ನು ಶತಭಿಷ ನಕ್ಷತ್ರದಲ್ಲಿ ಜನಿಸಿದವರು ಸತ್ಯವಂತರು, ಸ್ಪಷ್ಟ ಗ್ರಹಿಕೆ ಮತ್ತು ಮಹತ್ವಾಕಾಂಕ್ಷೆ ಹೊಂದಿದವರು. ಆದಾಗ್ಯೂ ಅವರು ಮುಕ್ತವಾಗಿ ಬೆರೆಯುವುದಿಲ್ಲ. ರಹಸ್ಯ ಕಾಪಾಡಿಕೊಳ್ಳುತ್ತ ಏಕಾಂತವನ್ನು ಬಯಸುವವರು ಎಂದು ಹೇಳಲಾಗುತ್ತದೆ.

ಶತಭಿಷ ನಕ್ಷತ್ರ ಭವಿಷ್ಯ 2025; ಅಧಿಕಾರ, ಮನ್ನಣೆಗಾಗಿ ಹಪಹಪಿ, ನಿದ್ದೆ ಕೆಡಬೇಕಾದ ವರ್ಷ

ಹೊಸ ವರ್ಷ 2025ರ ನಕ್ಷತ್ರ ಭವಿಷ್ಯ ಪ್ರಕಾರ, ಶತಭಿಷ ನಕ್ಷತ್ರದಲ್ಲಿ ಜನಿಸಿದವರಿಗೆ ಈ ವರ್ಷವು ತುಂಬ ಅನುಕೂಲಕರ. ವ್ಯಕ್ತಿತ್ವವು ಕೂಡ ಗಮನಾರ್ಹ ಬದಲಾವಣೆಯನ್ನು ದಾಖಲಿಸುತ್ತಿದ್ದು, ಪ್ರಬುದ್ಧತೆಯನ್ನು ರೂಢಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಈ ನಕ್ಷತ್ರದವರು ಅಧಿಕಾರ ಮತ್ತು ಮನ್ನಣೆಗಾಗಿ ಹಂಬಲಿಸುತ್ತಾರೆ. ಈ ವರ್ಷ ಅತ್ಯುತ್ತಮವಾದುದು ಏನಾದರೂ ಮಾಡಬೇಕು ಎಂದು ಬಯಸುತ್ತೀರಿ. ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಂಡು ಮುನ್ನಡೆಯುವಿರಿ. ಎಲ್ಲರಿಗಿಂತ ಭಿನ್ನವಾಗಿ ಎದ್ದು ಕಾಣಬೇಕು ಎಂಬ ನಿಮ್ಮ ಬಯಕೆಯನ್ನು ಅದು ಎತ್ತಿ ತೋರಿಸುತ್ತದೆ. ನಿಮ್ಮ ಅನನ್ಯ ಪ್ರತಿಭೆ ಮತ್ತು ಸಾಮರ್ಥ್ಯಗಳಿಗಾಗಿ ನೀವು ಖ್ಯಾತಿಯನ್ನು ಪಡೆಯಬಹುದು. ನಿಮ್ಮ ಆದರ್ಶ ವಿಹಾರಕ್ಕಾಗಿ ನೀವು ದೂರದ ಭೂಮಿ ಅಥವಾ ಜಾಗಕ್ಕೆ ಪ್ರಯಾಣಿಸಬಹುದು.

ಶಿಕ್ಷಣ, ಮನೆ ಖರೀದಿ ಅಥವಾ ವ್ಯಾಪಾರ ವಿಸ್ತರಣೆ ಮುಂತಾದ ಉದ್ದೇಶಗಳಿಗಾಗಿ ನೀವು ಸಾಲವನ್ನು ಬಯಸಿದರೆ, ನಿಮಗೆ ಈ ವರ್ಷ ಅದು ಸಿಗುವ ಸಾಧ್ಯತೆ ಇದೆ. ಆದಾಗ್ಯೂ, ಕೆಲವು ಕೆಟ್ಟ ಅಭ್ಯಾಸಗಳು ಅಥವಾ ನಿಮ್ಮ ನಡವಳಿಕೆಯಿಂದ ಉದ್ಭವಿಸಬಹುದಾದ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಆಸೆಗಳಿಂದಾಗಿ ನೀವು ಅತಿಯಾಗಿ ಖರ್ಚು ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬಹುದು. ಇದು ಹಣಕಾಸಿನ ತೊಂದರೆಗೆ ಕಾರಣವಾಗಬಹುದು. ಏಕೆಂದರೆ ಐಷಾರಾಮಿ ಸಾಲಗಳನ್ನು ತೆಗೆದುಕೊಳ್ಳುವುದು ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾಗುವುದಿಲ್ಲ. ಅಂತಹ ಸಾಲಗಳಿಂದ ತೊಂದರೆ, ಸಂಕಷ್ಟವೇ ಹೆಚ್ಚು. ಇದಲ್ಲದೆ, ನಿಮಗೆ ನಿದ್ದೆಯ ತೊಂದರೆ ಉಂಟಾಗಬಹುದು. ವರ್ಷವಿಡೀ ನಿದ್ದೆಯ ಸಮಸ್ಯೆ ಕಾಡಬಹುದು. ಒಟ್ಟಿನಲ್ಲಿ 2025ರಲ್ಲಿ ಶುಭ ಫಲವೇ ಹೆಚ್ಚು ಇರಲಿದೆ.

ಪೂರ್ವಾಭಾದ್ರ ನಕ್ಷತ್ರದವರ ಗುಣಲಕ್ಷಣಗಳು

ಜ್ಯೋತಿಷ್ಯ ಶಾಸ್ತ್ರದ ರಾಶಿಚಕ್ರ ವ್ಯವಸ್ಥೆಯಲ್ಲಿ ಪೂರ್ವಾಭಾದ್ರ ನಕ್ಷತ್ರವು 25ನೇ ಸ್ಥಾನದಲ್ಲಿದೆ. ಇದು ಕುಂಭ ಮತ್ತು ಮೀನ ರಾಶಿಗಳ ವ್ಯಾಪ್ತಿಯಲ್ಲಿದೆ. ಎರಡು ಮುಖಗಳನ್ನು ಹೊಂದಿರುವ ಮನುಷ್ಯ ಅಥವಾ ಶವ ಸಂಸ್ಕಾರದ ಮಂಚದ ಮುಂಭಾಗದ ಕಾಲುಗಳು ಈ ನಕ್ಷತ್ರದ ಸಂಕೇತ. ಅಜೈಕಪಾದ ಈ ನಕ್ಷತ್ರದ ಅಧಿಪತಿಯಾಗಿದ್ದು, ನಕ್ಷತ್ರವು ಗುರುಗ್ರಹದ ಆಳ್ವಿಕೆಯಲ್ಲಿದೆ. ಇನ್ನು ನಕ್ಷತ್ರದ ಗುಣಲಕ್ಷಣಗಳನ್ನು ಹೇಳುವುದಾದರೆ, ಪೂರ್ವಾಭಾದ್ರ ನಕ್ಷತ್ರದವರು ಭಾವುಕರು, ಪರಿವರ್ತನಾಶೀಲರು, ಆದರ್ಶವಾದಿಗಳು. ಅನುರೂಪರಲ್ಲದೇ ಇದ್ದರೂ ಪ್ರಭಾವಿಗಳಾಗಿದ್ದು, ವಾಗ್ಮಿಗಳೂ ಆಗಿರಬಹುದು. ಸಿನಿಕತನ, ವಿಲಕ್ಷಣ ಭಾವ ಇದ್ದರೂ ಆತಂಕಗೊಳ್ಳುವವರು.

ಪೂರ್ವಾಭಾದ್ರ ನಕ್ಷತ್ರ ಭವಿಷ್ಯ 2025; ಹಣಕಾಸಿನ ವಿಚಾರದಲ್ಲಿ ಎಚ್ಚರ, ಒಟ್ಟಾರೆ ಶುಭಫಲ

ನಕ್ಷತ್ರ ಭವಿಷ್ಯದ ಪ್ರಕಾರ 2025ರಲ್ಲಿ ಪೂರ್ವಾಭಾದ್ರ ನಕ್ಷತ್ರದವರಿಗೆ ಆಸೆಗಳು ಈಡೇರಲಿದ್ದು, ಆತ್ಮವಿಶ್ವಾಸ ಹೆಚ್ಚಾಗಲಿದೆ. ವರ್ಷಾರಂಭವು ಆತ್ಮವಿಶ್ವಾಸ ಹೆಚ್ಚಳದೊಂದಿಗೆ ಆಗಲಿದ್ದು, ಮಾನಸಿಕ ಸ್ಥೈರ್ಯ ಹೆಚ್ಚಾಗಲಿದೆ. ನಿಮ್ಮ ಮಕ್ಕಳ ಶಿಕ್ಷಣ, ಪ್ರಣಯ, ಹೆರಿಗೆ ಮತ್ತು ಇತರ ಮಗುವಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಹೆಚ್ಚು ಹಣವನ್ನು ಖರ್ಚು ಮಾಡುತ್ತೀರಿ. ಇದು ಅಧ್ಯಯನಕ್ಕೆ ಉತ್ತಮ ಸಮಯ, ಮತ್ತು ನೀವು ಆಯ್ಕೆ ಮಾಡಿದ ಶಾಲೆ ಅಥವಾ ಕಾಲೇಜಿನಲ್ಲಿ ನೀವು ಬಯಸುವ ವಿಷಯಗಳು ಅಥವಾ ಸ್ಟ್ರೀಮ್‌ಗಳನ್ನು ಆಯ್ಕೆ ಮಾಡಿ ಕಲಿಯಲು ಶುರುಮಾಡಿಕೊಳ್ಳಬಹುದು. ಪೂರ್ವ ಭಾದ್ರಪದ ನಕ್ಷತ್ರದ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಅಥವಾ ಉನ್ನತ ಶಿಕ್ಷಣಕ್ಕಾಗಿ, ವಿಶೇಷವಾಗಿ ಭಾಷೆಗಳು, ಗಣಿತ ಮತ್ತು ಲೆಕ್ಕಶಾಸ್ತ್ರದಲ್ಲಿ ತಯಾರಿ ನಡೆಸುತ್ತಿರುವವರಿಗೆ ಇದು ಅನುಕೂಲಕರ ವರ್ಷವಾಗಿದೆ. ಶಿಕ್ಷಕರು, ಮಾರ್ಗದರ್ಶಕರು ಅಥವಾ ತಂದೆಯ ವ್ಯಕ್ತಿಗಳ ಬೆಂಬಲ ಲಭ್ಯವಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಲು ನಿಮಗೆ ಕುಟುಂಬ ಸದಸ್ಯರು ಸಹಾಯ ಮಾಡುತ್ತಾರೆ.

ಪೂರ್ವಾಭಾದ್ರ ನಕ್ಷತ್ರದಲ್ಲಿ ಜನಿಸಿದ ಮಾತೆಯಾಗಿ, ನಿಮ್ಮ ಮಗುವನ್ನು ಬೆಳೆಸುವಲ್ಲಿ ಕುಟುಂಬದ ಸದಸ್ಯರ ಬೆಂಬಲವನ್ನು ನೀವು ಹೊಂದಿರುತ್ತೀರಿ. ಷೇರುಪೇಟೆ ವ್ಯವಹಾರದ ಬಗ್ಗೆ ಎಚ್ಚರವಿರಲಿ. ಇದರಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿದರೆ ಲಾಭವಿದ್ದರೂ ಎಚ್ಚರಿಕೆಯ ಮತ್ತು ತಿಳಿವಳಿಕೆಯ ಹೂಡಿಕೆ ಒಳ್ಳೆಯದು. ಆದಾಗ್ಯೂ, ನಿಮ್ಮ ವೈಯಕ್ತಿಕ ಹಣಕಾಸು ಸ್ಥಿತಿಗತಿ ಮತ್ತು ಪ್ರಸ್ತುತ ದಶಾವು ಅನುಕೂಲಕರವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಪ್ರತಿಕೂಲ ಪರಿಸ್ಥಿತಿಗಳು ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು. 2025ರ ಅಕ್ಟೋಬರ್ 19 ರಿಂದ ಡಿಸೆಂಬರ್ 4 ರ ವರೆಗಿನ ಅವಧಿಯು ವಿಶೇಷವಾಗಿ ನಿಮಗೆ ಮಹತ್ವದ್ದು. ನೀವು ಯಾರನ್ನು ನಂಬುತ್ತೀರೋ ಅವರ ಬಗ್ಗೆ ಜಾಗರೂಕರಾಗಿರಿ, ಏಕೆಂದರೆ ಸ್ನೇಹಿತರು ಮತ್ತು ಹಿತೈಷಿಗಳು ಎಂದು ತೋರುವ ವ್ಯಕ್ತಿಗಳು ವಾಸ್ತವವಾಗಿ ವಿರೋಧಿಗಳಾಗಿರಬಹುದು. ಉದ್ಯೋಗದಲ್ಲಿರುವವರು ಈ ಸಮಯದಲ್ಲಿ ಹೆಚ್ಚುವರಿ ಪ್ರಯತ್ನವನ್ನು ಮಾಡಬೇಕಾಗಬಹುದು ಮತ್ತು ಇತರರ ತಂತ್ರಗಳನ್ನು ಆಳವಾಗಿ ತನಿಖೆ ಮಾಡುವುದನ್ನು ತಪ್ಪಿಸಬೇಕು. ಸಕಾರಾತ್ಮಕವಾಗಿ ಹೇಳುವುದಾದರೆ, ಈ ಅವಧಿಯು ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ಕಾನೂನು ವಿಷಯಗಳಿಗೆ ಅನುಕೂಲಕರವಾಗಿದೆ. ಒಟ್ಟಾರೆಯಾಗಿ, ಈ ವರ್ಷವು ವೈಯಕ್ತಿಕ ಬೆಳವಣಿಗೆ, ಆರ್ಥಿಕ, ಹಣಕಾಸು ಪ್ರಗತಿ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗೆ ಪ್ರಯೋಜನಕಾರಿ ಎಂಬ ಭರವಸೆಯ ಲಕ್ಷಣಗಳು ಗೋಚರಿಸುತ್ತವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.