ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗುರು, ಮಂಗಳ, ಕೇತುವಿನಿಂದ ಸಿಂಹ ರಾಶಿಯಲ್ಲಿ ರೂಪುಗೊಳ್ಳಲಿದೆ ನವ ಪಂಚಮ ಯೋಗ; ವೃಷಭ ಸೇರಿದಂತೆ 3 ರಾಶಿಯವರಿಗೆ ಸಕಲ ಸೌಭಾಗ್ಯ

ಗುರು, ಮಂಗಳ, ಕೇತುವಿನಿಂದ ಸಿಂಹ ರಾಶಿಯಲ್ಲಿ ರೂಪುಗೊಳ್ಳಲಿದೆ ನವ ಪಂಚಮ ಯೋಗ; ವೃಷಭ ಸೇರಿದಂತೆ 3 ರಾಶಿಯವರಿಗೆ ಸಕಲ ಸೌಭಾಗ್ಯ

Nava Panchama Yoga: ಗ್ರಹಗಳು ಆಗ್ಗಾಗ್ಗೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತವೆ. ಇದರ ಪರಿಣಾಮ ಗುರು ಮಂಗಳ ಕೇತುವಿನಿಂದ ಸಿಂಹ ರಾಶಿಯಲ್ಲಿ ನವ ಪಂಚಮ ಯೋಗ ರೂಪುಗೊಳ್ಳಲಿದ್ದು ವೃಷಭ ಸೇರಿದಂತೆ 3 ರಾಶಿಯವರಿಗೆ ಸಕಲ ಸೌಭಾಗ್ಯ ದೊರೆಯಲಿದೆ.

ಗುರು ಮಂಗಳ ಕೇತುವಿನಿಂದ ಸಿಂಹ ರಾಶಿಯಲ್ಲಿ ರೂಪುಗೊಳ್ಳಲಿದೆ ನವ ಪಂಚಮ ಯೋಗ
ಗುರು ಮಂಗಳ ಕೇತುವಿನಿಂದ ಸಿಂಹ ರಾಶಿಯಲ್ಲಿ ರೂಪುಗೊಳ್ಳಲಿದೆ ನವ ಪಂಚಮ ಯೋಗ

ನವ ಪಂಚಮ ಯೋಗ: ಗ್ರಹಗಳ ಸಂಚಾರವು ಮನುಷ್ಯನ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತದೆ. ಕೆಲವೊಮ್ಮೆ ಕೆಲವು ರಾಶಿಗಳಿಗೆ ಒಳಿತಾದರೆ, ಕೆಲವರಿಗೆ ಬಹಳ ಸಮಸ್ಯೆ ಉಂಟು ಮಾಡುತ್ತದೆ. ಜ್ಯೋತಿಷ್ಯದಲ್ಲಿ ಗುರುವಿನ ಸಂಕ್ರಮಣಕ್ಕೆ ಕೂಡಾ ಬಹಳ ವಿಶೇಷ ಸ್ಥಾನವಿದೆ.

ಮೇ 1 ರಿಂದ ಶುಭಕಾರಕ ಗುರುವು ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದಕ್ಕೆ ವಿರುದ್ಧವಾಗಿ, ಕೇತುವು ಅಕ್ಟೋಬರ್ 2023 ರಿಂದ ಕನ್ಯಾರಾಶಿಯಲ್ಲಿ ಹಿಮ್ಮುಖ ಹಂತದಲ್ಲಿ ಪ್ರಯಾಣಿಸುತ್ತಿದೆ. ಈ ಎರಡು ಗ್ರಹಗಳು ಆಯಾ ರಾಶಿಗಳಲ್ಲಿ ನೆಲೆಗೊಂಡಿರುವುದರಿಂದ ನವ ಪಂಚಮ ಯೋಗ ಉಂಟಾಗುತ್ತದೆ. ಈ ಯೋಗವು ಸಿಂಹ ರಾಶಿಯಲ್ಲಿ ಉಂಟಾಗುತ್ತದೆ.

ನವ ಪಂಚಮ ಯೋಗ ಎಂದರೇನು?

ಗುರು ಅಥವಾ ಮಂಗಳ ಅಥವಾ ಕೇತು ಗ್ರಹಗಳು 9 ಹಾಗೂ 5ನೇ ಮನೆಗಳಲ್ಲಿ ವಿಶೇಷ ಸ್ಥಾನಗಳಲ್ಲಿದ್ದಾಗ ಈ ಯೋಗವು ರೂಪುಗೊಳ್ಳುತ್ತದೆ. ಮಂಗಳ ಮತ್ತು ಕೇತು ಒಂಬತ್ತನೇ ಮನೆಯಲ್ಲಿದ್ದು ಗುರು ಐದನೇ ಮನೆಯಲ್ಲಿದ್ದರೆ ನವ ಪಂಚಮ ಯೋಗ ಉಂಟಾಗುತ್ತದೆ. ದೇವರ ಗುರುವೆಂದು ಪರಿಗಣಿಸಲ್ಪಟ್ಟ ಗುರುವು ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಆದ್ದರಿಂದ ಈ ವರ್ಷ ಅವರು ವೃಷಭ ರಾಶಿಯಲ್ಲಿ ಪ್ರಯಾಣಿಸುತ್ತಾನೆ.

ಗುರು ಗ್ರಹದ ಸಂಚಾರವು ಕೆಲವು ರಾಶಿಗಳ ಮೇಲೆ ದೊಡ್ಡ ಪ್ರಭಾವವನ್ನು ಬೀರುತ್ತಿದೆ. ಗುರುವಿನ ಅನುಗ್ರಹದಿಂದ ಈ ರಾಶಿಯವರು ಅದೃಷ್ಟವಂತನಾಗುತ್ತಾರೆ. ಸಮಸ್ಯೆಗಳು ಕಣ್ಮರೆಯಾಗುತ್ತವೆ. ಜೀವನವು ಸಂಪತ್ತು ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. ಅಡೆತಡೆಗಳು ಮತ್ತು ಸಮಸ್ಯೆಗಳು ನಿವಾರಣೆಯಾಗುತ್ತವೆ.

ಮೇ ತಿಂಗಳಲ್ಲಿ ನವಪಂಚಮ ಯೋಗ ರೂಪುಗೊಂಡಿರುವುದರಿಂದ, ಗುರು ಮತ್ತು ಕೇತುಗಳ ವಿಶೇಷ ಸ್ಥಾನಗಳಿಂದಾಗಿ, ಕೆಲವು ರಾಶಿಯವರು ಅದೃಷ್ಟ ಅನುಭವಿಸುತ್ತಾರೆ. ಆರ್ಥಿಕ ಲಾಭ ಮತ್ತು ಉತ್ತಮ ಸಾಧನೆಗಳನ್ನು ಅನುಭವಿಸಲು ಅವಕಾಶಗಳಿವೆ. ನವ ಪಂಚಮ ಯೋಗವು ಯಾವ ರಾಶಿಯವರಿಗೆ ಒಳ್ಳೆಯದು ನೋಡೋಣ.

ವೃಷಭ

ಈ ರಾಶಿಯವರು ಕೆಲವು ದಿನಗಳಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸಗಳು ಮತ್ತೆ ಆರಂಭವಾಗುತ್ತದೆ. ನವಪಂಚಮ ಯೋಗವು ನಿಮಗೆ ಎಲ್ಲಾ ರೀತಿಯಿಂದಲೂ ಒಳ್ಳೆಯದು ಮಾಡುತ್ತದೆ. ಹಿರಿಯ ಅಧಿಕಾರಿಗಳು ನಿಮಗೆ ಸಹಾಯ ಮಾಡುತ್ತಾರೆ. ಮತ್ತೊಬ್ಬರ ಬೇಜವಾಬ್ದಾರಿ ನಿಮಗೆ ವರದಾನವಾಗಲಿದೆ. ಈ ಸಮಯದಲ್ಲಿ ಅದೃಷ್ಟ ನಿಮ್ಮದಾಗಿದೆ. ನೀವು ಮಾಡುವ ಪ್ರತಿಯೊಂದರಲ್ಲೂ ಯಶಸ್ಸು ದೊರೆತು ಎಲ್ಲರಿಗೂ ನಿಮ್ಮ ಸಾಮರ್ಥ್ಯಗಳನ್ನು ತಿಳಿಯುವಂತೆ ಮಾಡುತ್ತದೆ. ನಿಮ್ಮ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಬುದ್ಧಿವಂತಿಕೆಯು ಸಂವಹನ ಕೌಶಲ್ಯಗಳನ್ನು ಸುಧಾರಿಸುತ್ತದೆ. ಪಾಲುದಾರಿಕೆ ವ್ಯವಹಾರ ಮಾಡುವವರಿಗೆ ಹಣ ಗಳಿಸುವ ಅವಕಾಶ ದೊರೆಯುತ್ತದೆ.

ಸಿಂಹ

ಸಿಂಹ ರಾಶಿಯ 10 ನೇ ಮನೆಯಲ್ಲಿ ನವ ಪಂಚಮ ಯೋಗ ಉಂಟಾಗುತ್ತದೆ . ಇದು ನಿಮಗೆ ತುಂಬಾ ಸಹಾಯ ಮಾಡುತ್ತದೆ. ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಬೇಕಾಗಬಹುದು. ಉದ್ಯೋಗಿಗಳಿಗೆ ಸುಧಾರಣೆ ಮತ್ತು ಪ್ರಗತಿಗೆ ಸ್ಪಷ್ಟ ಮಾರ್ಗ ದೊರೆಯುತ್ತದೆ. ಉದ್ಯಮಿಗಳಿಗೆ ಇದು ಬಹಳ ಲಾಭದಾಯಕವಾಗಲಿದೆ. ಸಂಬಳ ಹೆಚ್ಚಾಗಲಿದೆ. ಬಹಳ ದಿನಗಳಿಂದ ನಿಮಗೆ ಸಾಲ ವಾಪಸ್‌ ನೀಡಬೇಕಿದ್ದವರು ಹುಡುಕಿ ಬರುತ್ತಾರೆ. ಸಮರ್ಪಣೆ ಮತ್ತು ಬದ್ಧತೆಯಿಂದ, ನೀವು ಯಾವುದೇ ಅಡೆತಡೆಗಳನ್ನು ಜಯಿಸಬಹುದು. ಕಾನೂನು ವಿಷಯಗಳಲ್ಲಿ ಯಶಸ್ವಿಯಾಗುವಿರಿ. ಸ್ವಂತ ವಾಹನ ಅಥವಾ ಮನೆಯು ಉದ್ದೇಶವನ್ನು ಪೂರೈಸುತ್ತದೆ.

ಮಕರ

ಮಕರ ರಾಶಿಯವರು ನವ ಪಂಚಮ ಯೋಗದಿಂದ ಹೆಚ್ಚಿನ ಲಾಭ ಪಡೆಯುತ್ತಾರೆ. ಕಾನೂನು ಸಮಸ್ಯೆಯಿಂದ ಹೋರಾಡುತ್ತಿರುವ ಜನರು ಈ ಯೋಗದಿಂದ ಎಲ್ಲಾ ಸಮಸ್ಯೆಯಿಂದ ಹೊರ ಬರುತ್ತಾರೆ. ಅಧಿಕಾರಿಗಳು ಉದ್ಯೋಗಿಗಳ ಕೆಲಸ ಮತ್ತು ಶ್ರದ್ಧೆಯನ್ನು ಮೆಚ್ಚುತ್ತಾರೆ. ಈ ಸಮಯದಲ್ಲಿ ನಿಮ್ಮ ಮೇಲ್ವಿಚಾರಕರು ನಿಮ್ಮ ಕಾರ್ಯ ಕ್ಷಮತೆಯಿಂದ ಸಂತೋಷ ಪಡುತ್ತಾರೆ. ಕೆಲಸದಲ್ಲಿ ನಿಮಗೆ ಪ್ರಮುಖ ಜವಾಬ್ದಾರಿಯನ್ನು ನೀಡುವ ಸಾಧ್ಯತೆಯಿದೆ. ಜೀವನದ ಎಲ್ಲಾ ಅಂಶಗಳಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಆರ್ಥಿಕವಾಗಿ ಲಾಭ ದೊರೆಯುತ್ತದೆ. ಪ್ರೀತಿಪಾತ್ರರ ಜೊತೆ ಸಮಯ ಕಳೆಯುವ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದ ಅನ್ವೇಷಣೆಯಲ್ಲಿ ಯಶಸ್ವಿಯಾಗುತ್ತಾರೆ. ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ನಿಮ್ಮ ಬಾಂಧವ್ಯ ವೃದ್ಧಿಸಲಿದೆ. ಇದು ಭವಿಷ್ಯದಲ್ಲಿ ನಿಮಗೆ ಬಹಳ ಒಳ್ಳೆಯದಾಗಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.