ಸಸ್ಯ, ಹಂಸಗಳ ಚಿತ್ರಕಲೆ ಸೇರಿದಂತೆ ಹೊಸ ವರ್ಷಕ್ಕೆ ನಿಮ್ಮ ಆತ್ಮೀಯರಿಗೆ ಈ ವಾಸ್ತು ಉಡುಗೊರೆಗಳನ್ನು ನೀಡಬಹುದು
New Year 2025: ಜನರು ಹೊಸ ವರ್ಷವನ್ನು ದೇವರ ಪೂಜೆಯಿಂದ ಆರಂಭಿಸುತ್ತಾರೆ. ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ಸಹ ನೀಡಿ ಶುಭ ಹಾರೈಸುತ್ತಾರೆ. ಈ ಸಮಯದಲ್ಲಿ ನಿಮ್ಮ ಆತ್ಮೀಯರಿಗೆ ಸಸ್ಯ, ಹಂಸಗಳ ಚಿತ್ರಕಲೆ ಸೇರಿದಂತೆ ವಾಸ್ತು ಶಾಸ್ತ್ರದ ಪ್ರಕಾರ ಉಡುಗೊರೆಗಳನ್ನು ನೀಡುವುದು ಅವರಿಗೆ ಅದೃಷ್ಟವನ್ನು ತರಬಹುದು.
ಸನಾತನ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಾಸ್ತು ಶಾಸ್ತ್ರದ ಪ್ರಕಾರ, ಉಡುಗೊರೆಗಳನ್ನು ನೀಡುವುದು ಸಂಬಂಧಗಳನ್ನು ಬಲಪಡಿಸುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಮನೆಯಲ್ಲಿ ಸಂತೋಷವೂ ಹೆಚ್ಚುತ್ತದೆ. 2025 ರ ಹೊಸ ವರ್ಷದ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯನ್ನು ನೀಡಲು ನೀವು ಯೋಚಿಸುತ್ತಿದ್ದರೆ ಇಲ್ಲಿ ತಿಳಿಸುವ ಈ ಉಡುಗೊರೆಗಳನ್ನು ನೀವು ಕೊಡಬಹುದು. ಹೊಸ ವರ್ಷವು ಎಲ್ಲರಿಗೂ ಬಹಳಷ್ಟು ಸಂತೋಷ ನೀಡುತ್ತದೆ. ವಾಸ್ತುಒಬ್ಬರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು ಮತ್ತು ನಕಾರಾತ್ಮಕ ಶಕ್ತಿಯಿಂದ ಪರಿಹಾರ ಪಡೆಯಬಹುದು.
- ಹೊಸ ವರ್ಷದ ದಿನ ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಉಡುಗೊರೆಯಾಗಿ ಮನಿ ಪ್ಲಾಂಟ್, ತುಳಸಿ, ಬಿದಿರುಗಿಡ ಸೇರಿದಂತೆ ಇನ್ನಿತರ ಮಂಗಳಕರವಾದ ಸಸ್ಯವನ್ನು ನೀಡಬಹುದು. ಈ ಗಿಡಗಳನ್ನು ನೀಡುವುದರಿಂದ ಲಕ್ಷ್ಮಿ ದೇವಿಯು ಮನೆಯಲ್ಲಿ ಸದಾ ನೆಲೆಸುತ್ತಾಳೆ ಮತ್ತು ಆರ್ಥಿಕ ಲಾಭದ ಸಾಧ್ಯತೆಗಳಿವೆ ಎಂದು ನಂಬಲಾಗಿದೆ. ಅಲ್ಲದೆ ವ್ಯಕ್ತಿಯ ಅದೃಷ್ಟವೂ ಬೆಳಗಬಹುದು.
- ಹೊಸ ವರ್ಷದಂದು ಫೆಂಗ್ ಶೂಯಿ ಐಟಂಗಳಾದ ಲಾಫಿಂಗ್ ಬುದ್ಧ, ಡ್ರೀಮ್ ಕ್ಯಾಚರ್, ವಿಂಡ್‌ಚೈಮ್ಸ್, ಮಿನಿ ವಾಟರ್ ಫೌಂಟೆನ್, ಏಳು ಕುದುರು ಚಿತ್ರಕಲೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. ಈ ವಸ್ತುಗಳು ವಾಸ್ತು ದೋಷಗಳ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ . ಅಲ್ಲದೆ, ಮನೆಯಲ್ಲಿ ಧನಾತ್ಮಕ ಶಕ್ತಿಯು ಹರಡುತ್ತದೆ.
ಇದನ್ನೂ ಓದಿ: ಮೈಸೂರು ಯೋಗಾನರಸಿಂಹ ದೇವಸ್ಥಾನದಲ್ಲಿ ಜನವರಿ 1 ರಂದು ತಿರುಪತಿ ಮಾದರಿ ಲಾಡು ಪ್ರಸಾದ ಹಂಚಿಕೆ
- ವಾಸ್ತು ಶಾಸ್ತ್ರದ ಪ್ರಕಾರ ಬೆಳ್ಳಿಯು ಮಂಗಳಕರವಾದ ಲೋಹವಾಗಿದೆ, ಆದ್ದರಿಂದ ನೀವು ಹೊಸ ವರ್ಷದ ದಿನ ಯಾರಿಗಾದರೂ ಬೆಳ್ಳಿಯ ನಾಣ್ಯವನ್ನು ಉಡುಗೊರೆಯಾಗಿ ನೀಡಬಹುದು. ಬೆಳ್ಳಿ ನಾಣ್ಯವನ್ನು ನೀಡುವುದರಿಂದ ವ್ಯಕ್ತಿಯು ಯಾವಾಗಲೂ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಹಾಗೆಯೇ ಜೀವನದಲ್ಲಿ ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ. ಇದಲ್ಲದೆ, ಶ್ರೀ ಯಂತ್ರವನ್ನು ಉಡುಗೊರೆಯಾಗಿ ನೀಡಬಹುದು. ಇದರಿಂದ ತಾಯಿ ಲಕ್ಷ್ಮಿ ಸಂತುಷ್ಟಗೊಳ್ಳುತ್ತಾಳೆ.
- ಹೊಸ ವರ್ಷದ ದಿನ ಬುಧವಾರದಂದು, ಗಣೇಶನ ವಿಗ್ರಹವನ್ನು ಸಹ ಉಡುಗೊರೆಯಾಗಿ ನೀಡಬಹುದು. ಗಣಪತಿಯನ್ನು ಭಕ್ತಿಪೂರ್ವಕವಾಗಿ ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಮತ್ತು ಕೆಲಸದಲ್ಲಿನ ಅಡೆತಡೆಗಳಿಂದ ಪರಿಹಾರ ನೀಡುತ್ತದೆ ಎಂದು ನಂಬಲಾಗಿದೆ. ಹಾಗೆಯೇ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ.
- ವಾಸ್ತು ಪ್ರಕಾರ ನೀವು ಗೋಮತಿ ಚಕ್ರ ವೃಕ್ಷವನ್ನು ಕೂಡಾ ನೀಡಬಹುದು. ಇದು ಮನೆಗೆ ಅದೃಷ್ಟವನ್ನು ತರುತ್ತದೆ, ಗೋಮತಿ ಚಕ್ರ ಇರುವ ಮನೆ ಅದೃಷ್ಟದಿಂದ ಬೆಳಗುತ್ತದೆ. ಜೊತೆಗೆ ಉತ್ತಮ ಆರೋಗ್ಯ ಕೂಡಾ ಹೊಂದಬಹುದು ಎಂದು ನಂಬಲಾಗಿದೆ.
ಇದನ್ನೂ ಓದಿ: 2025ರಲ್ಲಿ ಈ ರಾಡಿಕ್ಸ್ ಸಂಖ್ಯೆಯ ಜನರ್ ವಿಘ್ನ ನಿವಾರಕನನ್ನು ಪೂಜಿಸಿದರೆ ಎಲ್ಲದರಲ್ಲೂ ಯಶಸ್ಸು
- ಇದರ ಜೊತೆಗೆ ವಾಸ್ತು ಆಮೆ, ಹಾರ್ಸ್ ಶೂ, ಹಂಸಗಳ ಚಿತ್ರಕಲೆ, ಚಿನ್ನದ ಗೂಬೆಗಳನ್ನು ಕೂಡಾ ನೀವು ವಾಸ್ತು ಪ್ರಕಾರ ನಿಮ್ಮ ಆತ್ಮೀಯರಿಗೆ ನೀಡಬಹುದು. ಹೊಸ ವರ್ಷದಂದು ಈ ವಸ್ತುಗಳನ್ನು ನಿಮ್ಮ ಮನೆಗೆ ಕೂಡಾ ತರಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope