ಚೀನಾ ಪದ್ಧತಿ ವರ್ಷ ಭವಿಷ್ಯ 2025: ಮೇಕೆ ಗುಂಪಿಗೆ ಸೇರಿದವರ ಸಂಬಂಧಗಳು ಸುಧಾರಿಸಲಿದೆ, ಬೆನ್ನು ನೋವಿನ ಸಮಸ್ಯೆ ಕಾಡಬಹುದು
ಜ್ಯೋತಿಷ್ಯದ ನಂಬಿಕೆ ಒಂದೊಂದು ದೇಶದಲ್ಲಿ ಒಂದೊಂದು ಥರ. ಇಂದಿನ ವರ್ಷ ಭವಿಷ್ಯಕ್ಕೆ ಚೀನಾದಲ್ಲಿ ಅನುಸರಿಸುವ ಜ್ಯೋತಿಷ್ಯ ನಂಬಿಕೆ ಆಧರಿಸಿ ವಿವರ ನೀಡಲಾಗಿದೆ. ಚೀನಾದಲ್ಲಿ ಒಂದು ವರ್ಷಕ್ಕೆ ಒಂದು ಪ್ರಾಣಿಯ ಚಿಹ್ನೆ. ಅಂದರೆ 12 ವರ್ಷಕ್ಕೆ 12 ಪ್ರಾಣಿ. ಈ ಪದ್ಧತಿಯಲ್ಲಿ 8ನೇ ಚಿಹ್ನೆಯು ಮೇಕೆ ಆಗಿರುತ್ತದೆ. 2025ರಲ್ಲಿ ಮೇಕೆ ರಾಶಿಯವರ ಭವಿಷ್ಯ ಹೇಗಿರುತ್ತೆ ನೋಡೋಣ.
ವರ್ಷ ಭವಿಷ್ಯ 2025 ಚೀನಾ ಪದ್ಧತಿ: ಇಲ್ಲಿ ನೀಡಿರುವುದು 2025ರ ವರ್ಷ ಭವಿಷ್ಯ. ಆದರೆ ಇದು ಭಾರತದಲ್ಲಿ ಅಲ್ಲ, ಚೀನಾ ದೇಶದಲ್ಲಿ ಅನುಸರಿಸುವ ವಿಧಾನ. ಅಲ್ಲಿ ಹನ್ನೆರಡು ವರ್ಷಕ್ಕೆ ಒಂದು ಚಕ್ರ. ಅಂದರೆ ಪ್ರತಿ ವರ್ಷಕ್ಕೆ ಒಂದರಂತೆ ಹನ್ನೆರಡು ವರ್ಷಕ್ಕೆ ಒಂದೊಂದು ಪ್ರಾಣಿಯ ಚಿಹ್ನೆಯನ್ನು ಇರಿಸಿಕೊಂಡಿದ್ದಾರೆ. ಹನ್ನೆರಡು ವರ್ಷದ ನಂತರ ಅವೇ ಆರಂಭದಿಂದ ಪುನರಾವರ್ತನೆ ಆಗುತ್ತವೆ. ಹಾಗೆ ಅದು ಶುರುವಾಗುವುದು ಇಲಿಯಿಂದ. ಆ ನಂತರ ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಕುರಿ, ಕೋತಿ, ಹುಂಜ, ನಾಯಿ ಮತ್ತು ಹಂದಿ. ಥೇಟ್ ಭಾರತದಲ್ಲಿ ಇರುವಂತೆಯೇ; ಆದರೆ ಇಲ್ಲಿ ಮೇಷದಿಂದ ಮೀನದ ತನಕ ಹೆಸರನ್ನು ನೀಡಿದ್ದೇವೆ. ಆದರೆ ಚೀನಾದಲ್ಲಿ ಒಂದೊಂದು ಇಸವಿಗೆ ಒಂದೊಂದು ಪ್ರಾಣಿಗಳ ಹೆಸರನ್ನು ನೀಡುತ್ತಾರೆ. ಆ ಇಡೀ ವರ್ಷದಲ್ಲಿ ಯಾವುದೇ ತಿಂಗಳು ಅಥವಾ ದಿನದಂದು ಹುಟ್ಟಿದರೂ ಅವರಿಗೆ ಆ ಪ್ರಾಣಿಯೇ ರಾಶಿ ಅಂದುಕೊಳ್ಳಬೇಕು. 2025ನೇ ಇಸವಿಯನ್ನು ಪ್ರತಿನಿಧಿಸುವುದು ‘ಮರದ ಹಾವು (ವುಡ್ ಸ್ನೇಕ್)‘. ಇನ್ನು ಯಾರೆಲ್ಲಾ ‘ಮೇಕೆ‘ಯನ್ನು ಪ್ರತಿನಿಧಿಸುತ್ತಾರೋ ಅವರ ವರ್ಷ ಭವಿಷ್ಯ ಈ ಲೇಖನದಲ್ಲಿದೆ.
ಮೇಕೆ ರಾಶಿಯನ್ನು ಪ್ರತಿನಿಧಿಸುವವರಿಗೆ 2025 ಹಲವು ಬದಲಾವಣೆಗಳನ್ನು ತರಲಿದೆ. ಇದು ನಿಮ್ಮ ಭವಿಷ್ಯದಲ್ಲಿ ಒಳ್ಳೆಯ ಫಲಗಳನ್ನು ನೀಡಲಿದೆ. ಈ ಬದಲಾವಣೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ನೀವು ಯಾವುದೇ ವಿಚಾರವಾದರೂ ಆತುರದ ನಿರ್ಧಾರ ಕೈಗೊಳ್ಳುವುದನ್ನು ತಪ್ಪಿಸಿ, ಏನೇ ವಾದ ವಿವಾದಗಳಿದ್ದರೂ ತಾಳ್ಮೆಯಿಂದ ಎಲ್ಲವನ್ನೂ ಪರಿಹರಿಸಲು ಯತ್ನಿಸಿ.
1955, 1967, 1979, 1991, 2003, 2015, ಹಾಗೂ 2027 ರಲ್ಲಿ ಜನಿಸಿದವರು ʼಮೇಕೆʼ ಗುಂಪಿಗೆ ಸೇರಿದವರು
ಉದ್ಯೋಗ-ವೃತ್ತಿ ಭವಿಷ್ಯ
2025 ರಲ್ಲಿ ವೃತ್ತಿಜೀವನದ ಹಾದಿ ನಿಮಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಉದ್ಯೋಗ ಬದಲಿಸಲು ಬಯಸುವವರು, ವಿದ್ಯಾಭ್ಯಾಸ ಮುಗಿಸಿ ಹೊಸ ಉದ್ಯೋಗ ಮಾಡುತ್ತಿರುವವರಿಗೆ ಇದು ಉತ್ತಮವಾಗಿದೆ. ನಿಮ್ಮ ಗುರಿಗಳನ್ನು ನೆನಪಿಡಿ. ನಿಮಗೆ ಸೂಕ್ತ ಎನಿಸುವಂಥ ಕೆಲಸಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ. ಆದರೆ ಪರಿಶೀಲಿಸದೆ ಮೋಸದ ಬಲೆಗೆ ಬೀಳಬೇಡಿ. ಈಗಾಗಲೇ ಉದ್ಯೋಗದಲ್ಲಿ ಇರುವವರು ನಿಮ್ಮ ಪ್ರತಿಭೆಯನ್ನು ಇನ್ನಷ್ಟು ಪ್ರದರ್ಶಿಸುವ ಕೆಲಸ ಆಗಬೇಕು. ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಬೇಕು. ನಿಮ್ಮ ಮೇಲಧಿಕಾರಿಗಳಿಗೆ ನೀವು ಮೇಲಿನ ಸ್ಥಾನಕ್ಕೆ ಅರ್ಹರು ಎಂಬುದನ್ನು ನೀವು ತೋರಿಸಬೇಕು. ತಡವಾದರೂ ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಹೆಚ್ಚಿನ ಒತ್ತಡವಿದ್ದರೂ ತಾಳ್ಮೆಯಿಂದಲೇ ಕೆಲಸ ಮುಂದುವರೆಸಿ, ಆತುರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಬಿಡಿ.
ಹಣಕಾಸು ಭವಿಷ್ಯ
ಹೂಡಿಕೆಯ ದೃಷ್ಟಿಕೋನದಿಂದ, ಈ ವರ್ಷ ಯಾವುದೇ ಅಪಾಯ ಇರುವುದಿಲ್ಲ. ಆದರೂ ಕುದುರೆ ಗುಂಪಿಗೆ ಸೇರಿದವರು ಕಡಿಮೆ ಸಮಯದಲ್ಲಿ ಹೆಚ್ಚಿನ ಆದಾಯ ಮಾಡಲು ಆತುರ ಮಾಡಬಾರದು. ಬದಲಿಗೆ ದೀರ್ಘಾವಧಿಯ ಹೂಡಿಕೆಗೆ ಗಮನ ನೀಡಬೇಕು. ಈ ವರ್ಷ ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳಲು ಮತ್ತು ಹೂಡಿಕೆ ಮಾಡುವ ಮೊದಲು ಹಣಕಾಸು ತಜ್ಞರನ್ನು ಸಂಪರ್ಕಿಸುವುದು ಉತ್ತಮ ಸಮಯ. ಜೊತೆಗೆ ಮ್ಯೂಚುವಲ್ ಫಂಡ್‌ಗಳ ಕಡೆಗೂ ನೀವು ಗಮನ ಹರಿಸಬಹುದು. ಇದೇ ರೀತಿ ನೀವು ಚಿನ್ನ, ಬೆಳ್ಳಿಯಂಥ ಭೌತಿಕ ಸ್ವತ್ತುಗಳ ಮೇಲೆ ಕೂಡಾ ಹೂಡಿಕೆ ಮಾಡಬಹುದು. ನೀವು ಹಣಕಾಸಿನ ಪರಿಸ್ಥಿತಿಯನ್ನು ಎದುರಿಸುವಾಗ ಇದು ನಿಮಗೆ ಬಹಳ ಸಹಾಯಕ್ಕೆ ಬರಬಹುದು.
ಪ್ರೀತಿ-ಪ್ರೇಮ, ಮದುವೆ ಭವಿಷ್ಯ
ಪ್ರೀತಿ, ಪ್ರೇಮ ಸಂಬಂಧಗಳ ವಿಚಾರದಲ್ಲಿ ಈ ವರ್ಷ ಮೇಕೆ ರಾಶಿಯವರಿಗೆ ಬಹಳ ಅನುಕೂಲವಾಗಿದೆ. ಆದರೆ ಯಾರೊಂದಿಗೆ ಮಾತನಾಡುವಾಗಲೂ ನೀವು ಬಹಳ ತಾಳ್ಮೆಯಿಂದಿರಬೇಕು ಮತ್ತು ಜಾಗರೂಕರಾಗಿರಬೇಕು. ಒಂಟಿ ಜನರಿಗೆ ಪ್ರಣಯ ಭಾವನೆಗಳನ್ನು ಅನುಭವಿಸಲು ಹೊಸ ಅವಕಾಶಗಳಿವೆ. ಆದರೆ ನೀವು ಯಾವುದೇ ಹೊಸ ಸಂಬಂಧ ಪ್ರಾರಂಭಿಸುವ ಮುನ್ನ ನಿಮ್ಮಿಬ್ಬರ ನಡುವೆ ಕೆಮಿಸ್ಟ್ರಿ ಹೊಂದಾಣಿಕೆ ಆಗಲಿದೆಯೇ ಎಂಬುದರ ಬಗ್ಗೆ ಪರಿಶೀಲಿಸಿ. ಪ್ರಾಮಾಣಿಕತೆಯು ನಿಮ್ಮಿಬ್ಬ ನಡುವಿನ ಬಂಧವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಒಬ್ಬರ ಇಷ್ಟ, ಬೇಕು ಬೇಡಗಳನ್ನು ಮೊದಲು ಅರ್ಥ ಮಾಡಿಕೊಳ್ಳಿ. ಬ್ಯುಸಿ ಕೆಲಸಗಳ ನಡುವೆ ನಿಮ್ಮ ಸಂಗಾತಿಗೆ ಸ್ವಲ್ಪ ಸಮಯ ಕೊಡಿ. ನಿಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಈ ವರ್ಷ ಉತ್ತಮವಾಗಿದೆ.
ಆರೋಗ್ಯ ಭವಿಷ್ಯ
ನೀವು ಉತ್ತಮ ಆರೋಗ್ಯ ಹೊಂದಬೇಕಾದರೆ ನಿಮ್ಮ ಜೀವನಶೈಲಿಯತ್ತ ಗಮನ ಹರಿಸಿ. ನಿಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಸರಿಪಡಿಸುವಲ್ಲಿ ಇದು ಉತ್ತಮ ಸಮಯವಾಗಿದೆ. ಉದರಸಂಬಂಧಿ ಸಮಸ್ಯೆಗಳು ಕಾಡಬಹುದು. ಜೊತೆಗೆ ಬೆನ್ನು, ಮಂಡಿ ನೋವು ಉಂಟಾಗಬಹುದು. ಸ್ಥಾನ ಬದಲಿಸದೆ ನೀವು ಬಹಳ ಹೊತ್ತು ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ನಿಮಗೆ ಬೆನ್ನು ನೋವಿನ ಸಮಸ್ಯೆ ಕಾಡಬಹುದು. ಆದ್ದರಿಂದ ನೀವು ಹೆಚ್ಚು ಸಮಯ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದರೆ ಆಗ್ಗಾಗ್ಗೆ ಎದ್ದು ಓಡಾಡಿ. ಸ್ವಲ್ಪ ವಿಶ್ರಾಂತಿ ಪಡೆದು ನಂತರ ಕೆಲಸ ಮುಂದುವರೆಸಿ. ಒಂದೇ ಸಮಯ ದೈಹಿಕ ವ್ಯಾಯಾಮ ಮಾಡುವವರಿಗೆ ಮಂಡಿ ನೋವು ಕಾಡಬಹುದು. ಆದ್ದರಿಂದ ನಿಮ್ಮ ದೇಹಕ್ಕೆ ಒಗ್ಗಬಹುದಾದ ಅಗತ್ಯವಾದ ಸಣ್ಣ ಪುಟ್ಟ ವ್ಯಾಯಾಮಗಳ ಬಗ್ಗೆ ಗಮನ ಹರಿಸಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.