New Year 2025: ಹೊಸ ವರ್ಷದ ಮೊದಲ ದಿನ ಈ ವಸ್ತುಗಳನ್ನು ನೋಡಿದ್ರೆ ಲಕ್ಷ್ಮೀದೇವಿಯ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ
ಲಕ್ಷ್ಮೀದೇವಿ ಸಂಪತ್ತಿನ ಅಧಿದೇವತೆ. ಲಕ್ಷ್ಮೀಯ ಆಶೀರ್ವಾದವಿದ್ದರೆ ಜೀವನದಲ್ಲಿ ಎಲ್ಲವೂ ಒಳಿತಾಗುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಹೊಸ ವರ್ಷದ ಆರಂಭದ ದಿನ ಈ ವಸ್ತುಗಳನ್ನು ನೋಡಿದ್ರೆ ಲಕ್ಷ್ಮೀದೇವಿಯು ಹಣದ ಮಳೆಯನ್ನು ಸುರಿಸುತ್ತಾಳೆ. ಹಾಗಾದರೆ ಲಕ್ಷ್ಮೀದೇವಿಯ ಸಂಪೂರ್ಣ ಆಶೀರ್ವಾದ ಪಡೆಯಲು ಹೊಸ ವರ್ಷದ ಮೊದಲ ದಿನ ಯಾವುದನ್ನು ನೋಡಬೇಕು ನೋಡಿ.
ಹೊಸ ವರ್ಷದ ಮೊದಲನೇ ದಿನ ಎಲ್ಲರೂ ಹೊಸ ವರ್ಷದ ಶುಭಾಶಯಗಳು (Happy New Year 2025) ಎಂದು ಹಾರೈಸುವುದನ್ನು ನಾವು ನೋಡಿದ್ದೇವೆ. ಹೊಸ ವರ್ಷವನ್ನು ಧನಾತ್ಮಕ ರೀತಿಯಿಂದ ಪ್ರಾರಂಭಿಸಿದರೆ ವರ್ಷವಿಡೀ ಯಾವುದೇ ತೊಂದರೆಗಳು ಬರುವುದಿಲ್ಲ ಎಂದು ಭಾವಿಸಲಾಗುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ. ಹೊಸ ವರ್ಷವನ್ನು ಹೇಗೆಲ್ಲಾ ಬರಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲರೂ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಮುಂಬರುವ ವರ್ಷದಲ್ಲಿ ಏನೇನು ಸಾಧಿಸಬೇಕು ಎಂದು ಯೋಚಿಸುತ್ತಿದ್ದಾರೆ.
ಮುಂದಿನ ವರ್ಷದ ರಾಶಿ ಫಲಗಳನ್ನು ಕೆಲವರು ಓದಿಕೊಂಡಿರುತ್ತಾರೆ. ಭವಿಷ್ಯದಲ್ಲಿ ಯಾವ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಜೀವನದಲ್ಲಿ ಸುಖ, ಶಾಂತಿ ಸಮೃದ್ಧಿ ನೆಲೆಸುತ್ತದೆ ಎಂಬುದರ ಬಗ್ಗೆ ಯೋಜನೆಗಳನ್ನು ಸಹ ಮಾಡುತ್ತಿದ್ದಾರೆ. ಇದಲ್ಲದೆ, ಮನೆಯಲ್ಲಿ ಲಕ್ಷ್ಮೀದೇವಿಯು ಸದಾ ವಾಸಿಸುವಂತಾಗಲು ಆ ತಾಯಿಯನ್ನು ಹೇಗೆ ಪೂಜಿಸಬೇಕು ಎಂದೂ ತಿಳಿದುಕೊಂಡಿದ್ದಾರೆ.
ಕೇವಲ ಲಕ್ಷ್ಮೀದೇವಿಯನ್ನು ಪೂಜಿಸಿದರೆ ಸಾಕಾಗುವುದಿಲ್ಲ. ಲಕ್ಷ್ಮೀಗೆ ಪ್ರಿಯವಾದ ವಸ್ತುಗಳನ್ನು ನೋಡುವುದು ಮತ್ತು ಕೆಲಸಗಳನ್ನು ಮಾಡುವುದರಿಂದ ದೇವಿಯನ್ನು ಇನ್ನಷ್ಟು ಸಂತುಷ್ಠಳಾಗುತ್ತಾಳೆ. ಹೊಸ ವರ್ಷದ ದಿನದಂದು ನೀವು ಯಾವ ರೀತಿ ನಡೆದುಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿಯು ಹಣದ ಮಳೆಯನ್ನು ಸುರಿಸುತ್ತಾಳೆ. ಹಾಗಾದರೆ ಹೊಸ ವರ್ಷದ ಮೊದಲ ದಿನ ಯಾವುದನ್ನು ನೋಡುವುದರಿಂದ ಶುಭವಾಗಲಿದೆ ನೋಡಿ.
ಹೊಸ ವರ್ಷವನ್ನು ಈ ವಸ್ತುಗಳನ್ನು ನೋಡುವ ಮೂಲಕ ಪ್ರಾರಂಭಿಸಿ
ಬಿಳಿ ಹೂವು ಅಥವಾ ಆನೆ: ಹೊಸ ವರ್ಷದ ಮೊದಲನೆಯ ದಿನ ಬೆಳಿಗ್ಗೆ ನೀವು ಬಿಳಿ ಹೂವುಗಳು ಅಥವಾ ಆನೆಯನ್ನು ನೋಡಿದರೆ ಅದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಇವುಗಳು ಹಣವನ್ನು ತರುತ್ತವೆ. ಲಕ್ಷ್ಮೀದೇವಿಯ ಕೃಪಾಕಟಾಕ್ಷ ನಿಮ್ಮ ಮೇಲಾಗಲಿದೆ. ಇವುಗಳನ್ನು ನೋಡಿದರೆ ಲಕ್ಷ್ಮೀದೇವಿಯು ನಿಮ್ಮ ಮನೆಗೆ ಬರುತ್ತಾಳೆ ಎಂದು ತಿಳಿಯಬಹುದು. ಅದೃಷ್ಟ ಕೂಡ ನಿಮ್ಮ ಮನೆಯ ಬಾಗಿಲನ್ನು ಬಡಿಯುತ್ತದೆ ಎಂದು ನೀವು ಭಾವಿಸಬೇಕು.
ಹಕ್ಕಿ ಗೂಡು: ಹೊಸ ವರ್ಷದ ಮೊದಲ ದಿನದಂದು ನೀವು ಹಕ್ಕಿಯ ಗೂಡನ್ನು ನೋಡಿದರೆ, ಅದು ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಈ ವರ್ಷದ ಆರಂಭದಲ್ಲಿ ಹಕ್ಕಿಯ ಗೂಡು ಕಂಡುಬಂದರೆ ಜೀವನದಲ್ಲಿ ಸಂತೋಷ ತುಂಬಿರಬಹುದು. ಇದರಿಂದ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಮನೆಯ ಸಮೀಪ ಹಕ್ಕಿ ಗೂಡು ಇರುವುದು ಧನಾತ್ಮಕ ಚಿಹ್ನೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಹಕ್ಕಿ ಗೂಡನ್ನು ತೆಗೆಯುವ ಬದಲು ಸುರಕ್ಷಿತ ಸ್ಥಳದಲ್ಲಿ ಇಡಬೇಕು.
ಮಂಗಳಕರ ಶಬ್ದ ಕೇಳುವುದು: ಜ್ಯೋತಿಷಿಗಳ ಪ್ರಕಾರ ಶಂಖ ನಾದ ಅಥವಾ ಗಂಟೆಯ ನಿನಾದ ಕೇಳಿದರೆ ಹೊಸ ವರ್ಷವು ಶುಭವನ್ನು ತರಲಿದೆ. ಇದು ಉತ್ತಮ ಶಕ್ತಿಯ ಸಂಕೇತವಾಗಿದೆ. ಹಕ್ಕಿಗಳ ಚಿಲಿಪಿಲಿ ಬಹಳ ಮಧುರವಾಗಿರುತ್ತದೆ. ಇವುಗಳ ಸದ್ದು ಕೇಳಿದರೂ ಹೊಸ ವರುಷ ಚೆನ್ನಾಗಿರಲಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಇಂತಹ ಶಬ್ದಗಳನ್ನು ಕೇಳಿದರೆ ನಿಮ್ಮ ಮನೆಗೆ ಲಕ್ಷ್ಮೀದೇವಿ ಬರುತ್ತಾಳೆ ಎಂದರ್ಥ. ಹೊಸ ವರ್ಷದ ಮೊದಲ ದಿನ ನೀವು ಕನಸಿನಲ್ಲಿ ಚಿನ್ನ, ಬೆಳ್ಳಿ, ಮತ್ತು ಹಣವನ್ನು ನೋಡಿದರೂ, ಹೊಸ ವರ್ಷದಲ್ಲಿ ನಿಮ್ಮ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ. ಯಾವುದೇ ಹಣದ ಕೊರತೆ ಉಂಟಾಗುವುದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಹಾಗೆಯೇ ಈ ಶಬ್ದಗಳನ್ನು ಕೇಳುವುದರಿಂದ ಒಂಟಿಯಾಗಿರುವವರಿಗೆ ಜೀವನ ಸಂಗಾತಿ ಸಿಗುತ್ತಾರೆ ಎಂಬ ನಂಬಿಕೆಯೂ ಇದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)