Happy New Year: ಹೊಸ ವರ್ಷ ಮೊದಲ ದಿನ 4 ಯೋಗಗಳ ಸಂಯೋಗ, ಇದರಿಂದ ವಿವಿಧ ಕ್ಷೇತ್ರದವರಿಗೆ ಸಿಗಲಿದೆ ವಿಶೇಷ ಲಾಭ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Happy New Year: ಹೊಸ ವರ್ಷ ಮೊದಲ ದಿನ 4 ಯೋಗಗಳ ಸಂಯೋಗ, ಇದರಿಂದ ವಿವಿಧ ಕ್ಷೇತ್ರದವರಿಗೆ ಸಿಗಲಿದೆ ವಿಶೇಷ ಲಾಭ

Happy New Year: ಹೊಸ ವರ್ಷ ಮೊದಲ ದಿನ 4 ಯೋಗಗಳ ಸಂಯೋಗ, ಇದರಿಂದ ವಿವಿಧ ಕ್ಷೇತ್ರದವರಿಗೆ ಸಿಗಲಿದೆ ವಿಶೇಷ ಲಾಭ

New Year Astrology 2025: ಹೊಸ ವರ್ಷದ ಮೊದಲ ದಿನ. ಈ ದಿನಕ್ಕೆ ಜ್ಯೋತಿಷ್ಯದಲ್ಲೂ ವಿಶೇಷ ಮಹತ್ವವಿದೆ. ಈ ದಿನವು 4 ಶುಭಯೋಗಗಳನ್ನು ಹೊತ್ತು ತಂದಿದೆ. ಈ ಯೋಗಗಳಿಂದ ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿ ಸಾಕಷ್ಟು ಲಾಭವಾಗಲಿದೆ. 2025ರ ಜನವರಿ 1 ರಂದು ಯಾವೆಲ್ಲಾ ಶುಭಯೋಗಗಳಿವೆ, ಇದರಿಂದ ಏನೆಲ್ಲಾ ಲಾಭವಾಗಲಿದೆ ಎಂಬ ವಿವರ ಇಲ್ಲಿದೆ.

ಜ್ಯೋತಿಷ್ಯದಲ್ಲಿ 2025ರ ಜನವರಿ 1ರ ವಿಶೇಷ
ಜ್ಯೋತಿಷ್ಯದಲ್ಲಿ 2025ರ ಜನವರಿ 1ರ ವಿಶೇಷ (PC: pinterest)

New Year Astrology 2025: ಕಾಲಚಕ್ರ ಉರುಳಿದೆ. 2024ನೇ ವರ್ಷ ಅಂತ್ಯವಾಗಿ, 2025ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹೊಸ ವರ್ಷ ಎಂದರೆ ಒಂದಿಷ್ಟು ಹೊಸ ನಿರೀಕ್ಷೆಗಳಿರುವುದು ಸಹಜ. ಜ್ಯೋತಿಷ್ಯದ ಪ್ರಕಾರ 2025ರ ಜನವರಿ 1ಕ್ಕೆ ವಿಶೇಷ ಮಹತ್ವವಿದೆ. ಈ ದಿನವು ಜ್ಯೋತಿಷ್ಯದ ದೃಷ್ಟಿಕೋನದಿಂದ ಮಂಗಳಕರ ಎನ್ನಿಸಿದೆ. ಈ ದಿನ 4 ಮಂಗಳಕರ ಯೋಗಗಳು ಸಂಭವಿಸಲಿವೆ. ಇದರಿಂದ ಜನವರಿ 1 ಇನ್ನಷ್ಟು ವಿಶೇಷವಾಗಿದೆ. 2025ನೇ ವರ್ಷವು ವ್ಯಾಪಾರ, ವ್ಯವಹಾರಿಗಳಿಗೆ ಉತ್ತಮ ವರ್ಷವಾಗಿದೆ. ವ್ಯಾಪಾರದಲ್ಲಿ ಹೊಸ ಎತ್ತರವನ್ನು ಮುಟ್ಟಬಹುದು. ಶುಕ್ರ ಮತ್ತು ಶನಿಯ ಸಂಯೋಜನೆಯು ವ್ಯಾಪಾರ ವಲಯದಲ್ಲಿ ಹೂಡಿಕೆ ಮತ್ತು ವಿಸ್ತರಣೆಗೆ ಹೊಸ ಅವಕಾಶಗಳನ್ನು ತರುತ್ತದೆ. ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಈ ವರ್ಷ ಉದ್ಯಮಿಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಈ ವರ್ಷ ಶುಭಗಳಿಗೆಯಿಂದ ಆರಂಭವಾಗಲಿದೆ.

ಹೊಸ ವರ್ಷದ ಶುಭ ಯೋಗಗಳು

ಉತ್ತರಾಷಾಢ ನಕ್ಷತ್ರ

ಜನವರಿ 1 ರಂದು ಉತ್ತರಾಷಾಢ ನಕ್ಷತ್ರದ ಸಂಯೋಜನೆ ಸಂಭವಿಸುತ್ತದೆ. ಈ ನಕ್ಷತ್ರವು ಯಶಸ್ಸು, ಸಮೃದ್ಧಿ ಮತ್ತು ನಿರ್ಣಯವನ್ನು ಸಂಕೇತಿಸುತ್ತದೆ. ಒಳ್ಳೆಯ ಕಾರ್ಯಗಳು ಮತ್ತು ಹೊಸ ಆರಂಭಗಳಿಗೆ ಇದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಬಾಲವ ಕರಣ

ವರ್ಷದ ಮೊದಲ ದಿನ ಬಾಲವ ಕರಣ, ಇದು ಮಂಗಳಕರ ಮತ್ತು ಪ್ರಗತಿಯ ಸಂಕೇತವಾಗಿದೆ. ವ್ಯವಹಾರ, ಕುಟುಂಬ ಮತ್ತು ವೈಯಕ್ತಿಕ ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ತರುವುದನ್ನು ಪ್ರತಿನಿಧಿಸುತ್ತದೆ.

ವ್ಯಾಘಾತ ಯೋಗ

ವ್ಯಾಘಾತ ಯೋಗವನ್ನು ಸ್ವಲ್ಪ ಕಷ್ಟಕರವೆಂದು ಪರಿಗಣಿಸಲಾಗಿದೆ. ಆದರೆ, ಇಂದು ಬುಧಗ್ರಹದ ಪ್ರಭಾವದಿಂದ ಈ ಯೋಗವು ಸಮತೋಲನದಲ್ಲಿದೆ. ಈ ಯೋಗವು ನಿಮ್ಮ ಕೆಲಸದಲ್ಲಿನ ಅಡೆತಡೆಗಳನ್ನು ನಿವಾರಿಸುವ ಮೂಲಕ ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ.

ಶುಕ್ರ-ಶನಿ ಸಂಯೋಗ

ಹೊಸ ವರ್ಷವು ಶುಕ್ರ ಮತ್ತು ಶನಿಯ ಸಂಯೋಗದೊಂದಿಗೆ ಪ್ರಾರಂಭವಾಗುತ್ತದೆ. ಈ ಸಂಯೋಜನೆಯು ವ್ಯವಹಾರದಲ್ಲಿ ಪ್ರಗತಿಯನ್ನು ಸೂಚಿಸುತ್ತದೆ. ಜನರ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಶುಕ್ರವು ಸಂಪತ್ತು, ಐಷಾರಾಮಿ ಮತ್ತು ಕಲೆಗಳ ಸಂಕೇತವಾಗಿದೆ. ಶನಿಯು ಕಠಿಣ ಪರಿಶ್ರಮ, ಶಿಸ್ತು ಮತ್ತು ಸ್ಥಿರತೆಯ ಸಂಕೇತವಾಗಿದೆ. ಈ ಎರಡು ಗ್ರಹಗಳ ಸಂಯೋಜನೆಯು ಸಮಾಜ ಮತ್ತು ವೈಯಕ್ತಿಕ ಜೀವನದಲ್ಲಿ ಸ್ಥಿರತೆ ಮತ್ತು ಪ್ರಗತಿಯನ್ನು ತರುತ್ತದೆ. ಶನಿಯ ಪ್ರಭಾವವು ಸಮಾಜದಲ್ಲಿ ಸ್ಥಿರತೆ ಮತ್ತು ಶಿಸ್ತು ತರುತ್ತದೆ. ಅದರ ಪರಿಣಾಮ ಜನರ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷ ತುಂಬಿರುತ್ತದೆ. ಸಾಮಾಜಿಕ ಮಟ್ಟದಲ್ಲಿ ಈ ವರ್ಷ ಸಾಮೂಹಿಕ ಪ್ರಗತಿಯನ್ನು ಪ್ರತಿನಿಧಿಸುತ್ತದೆ.

ಗಣೇಶನ ವಾರ

ಜನವರಿ 1 ಈ ವರ್ಷ ಬುಧವಾರ ಬಂದಿರುವುದರಿಂದ ಇಂದು ಗಣೇಶನ ದಿನ. ಗಣೇಶನ ದರ್ಶನ ಮಾಡಿ. ಗಣೇಶನನ್ನು ಆರಾಧಿಸುವ ಮೂಲಕ ವರ್ಷವನ್ನು ಪ್ರಾರಂಭಿಸಿ. ಜನವರಿ 1 ರಂದು ಶುಭ ಯೋಗಗಳಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸುವುದು ಲಾಭದಾಯಕವಾಗಿದೆ. ಹೊಸ ವರ್ಷವು ದಾನ ಮತ್ತು ಬಡವರ ಸೇವೆಗೆ ಮಂಗಳಕರವಾಗಿದೆ. ಇದರಿಂದ ಒಳಿತಾಗಲಿದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯ ಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.