ಅಚ್ಚರಿ ಎನಿಸುವಂಥ ಜ್ಞಾಪಕಶಕ್ತಿ, ವೃದ್ಧಾಪ್ಯದಲ್ಲೂ ಯಾರನ್ನೂ ಅವಲಂಬಿಸುವುದಿಲ್ಲ; 29ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ-numerology characteristic of people who born on date 29 date of birth astrology in kannada sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅಚ್ಚರಿ ಎನಿಸುವಂಥ ಜ್ಞಾಪಕಶಕ್ತಿ, ವೃದ್ಧಾಪ್ಯದಲ್ಲೂ ಯಾರನ್ನೂ ಅವಲಂಬಿಸುವುದಿಲ್ಲ; 29ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ

ಅಚ್ಚರಿ ಎನಿಸುವಂಥ ಜ್ಞಾಪಕಶಕ್ತಿ, ವೃದ್ಧಾಪ್ಯದಲ್ಲೂ ಯಾರನ್ನೂ ಅವಲಂಬಿಸುವುದಿಲ್ಲ; 29ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ

Birth Date Astrology: ಯಾವುದೇ ವ್ಯಕ್ತಿಯ ಗ್ರಹಗತಿಗಳನ್ನು ನೋಡುವಾಗ ಜನ್ಮ ದಿನಾಂಕವನ್ನು ಪರಿಗಣಿಸಲಾಗುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಹೇಗಿರಬಹುದು ಎಂದು ಅಂದಾಜಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆಯೂ ಅವರ ಗುಣಧರ್ಮ ಹೇಗಿದೆ ಎಂಬುದನ್ನು ಹೇಳಬಹುದು. 29ನೇ ತಾರೀಕಿನಂದು ಜನಿಸಿದವರ ಗುಣಲಕ್ಷಣ ತಿಳಿಯಿರಿ.

ಅಚ್ಚರಿ ಎನಿಸುವಂಥ ಜ್ಞಾಪಕಶಕ್ತಿ, ವೃದ್ಧಾಪ್ಯದಲ್ಲೂ ಯಾರನ್ನೂ ಅವಲಂಬಿಸುವುದಿಲ್ಲ; 29ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ
ಅಚ್ಚರಿ ಎನಿಸುವಂಥ ಜ್ಞಾಪಕಶಕ್ತಿ, ವೃದ್ಧಾಪ್ಯದಲ್ಲೂ ಯಾರನ್ನೂ ಅವಲಂಬಿಸುವುದಿಲ್ಲ; 29ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ (PC: Canva)

ಇವರದ್ದು ತಪ್ಪನ್ನು ಸರಿ ಪಡಿಸುವ ಗುಣ. ಎಂದಿಗೂ ತಪ್ಪುಹಾದಿ ಹಿಡಿಯದ ಇವರು ತನ್ನ ಜೊತೆಗಾರರನ್ನು ಸರಿದಾರಿಯಲ್ಲಿ ಕರೆದೊಯ್ಯುತ್ತಾರೆ. ಇವರಲ್ಲಿ ಕ್ಷಮಾಗುಣ ಇರುತ್ತದೆ. ಇವರಲ್ಲಿನ ನಿಸ್ವಾರ್ಥ ಮನೋಭಾವನೆ ಎಲ್ಲರಲ್ಲೂ ಹೊಸ ಹುಮ್ಮಸ್ಸು ತುಂಬುತ್ತದೆ. ಸಂತೃಪ್ತಿಯ ಜೀವನ ನಡೆಸುವಿರಿ. ಇವರ ಮುಖದಲ್ಲಿ ವಿಶೇಷವಾದ ತೇಜಸ್ಸು ನೆಲೆಸಿರುತ್ತದೆ. ಮನಸ್ಸಿಗೆ ಒಪ್ಪುವವರ ಸ್ನೇಹ ಮಾತ್ರ ಮಾಡುತ್ತಾರೆ.

ನಂಬಿದವರನ್ನು ಕೈ ಬಿಡುವುದಿಲ್ಲ

ಈ ದಿನಾಂದಂದು ಜನಿಸಿದವರು ತಮ್ಮನ್ನು ನಂಬಿದವರನ್ನು ಕಷ್ಟಗಳಿಂದ ಪಾರು ಮಾಡುತ್ತಾರೆ. ಮಕ್ಕಳನ್ನು ಗೆಲುವಿನ ಹಾದಿಯಲ್ಲಿ ನಡೆಸುತ್ತಾರೆ. ತಮ್ಮ ವಯಸ್ಸಿನ ವ್ಯಕ್ತಿಗಳ ನಡುವೆ ನಾಯಕನಾಗಿ ಮುಂದುವರೆಯುತ್ತಾರೆ. ಅಧಿಕಾರದ ಹಂಬಲವಿರುವುದಿಲ್ಲ. ಆದರೆ ತಾನಾಗಿಯೇ ದೊರೆಯುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಸದಾಕಾಲ ಒಳ್ಳೆಯ ಕೆಲಸಗಳನ್ನು ಮಾಡಲು ಇಚ್ಚಿಸುತ್ತಾರೆ. ಗುರು ಹಿರಿಯರ ಆಶೀರ್ವಾದದಲ್ಲಿ ನಂಬಿಕೆ ಇರುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳನ್ನು ನೆರವೇರಿಸಲು ಮೊದಲ ಸಾಲಿನಲ್ಲಿ ನಿಂತಿರುತ್ತಾರೆ. ಜೀವನದಲ್ಲಿ ಸದಾಕಾಲ ಅನುಕೂಲಕರ ಬದಲಾವಣೆಗಳು ಎದುರಾಗುತ್ತವೆ. ರುಚಿಕರ ಆಹಾರ ಎಂದರೆ ಬಹಳ ಇಷ್ಟ. ಅಡುಗೆಯಲ್ಲೂ ಆಸಕ್ತಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ತುಂಬಿರಲು ಕಾರಣರಾಗುತ್ತಾರೆ.

ಇವರಿಗೆ ಒಪ್ಪುವಂತಹ ಸಂಗಾತಿಯ ಜೊತೆ ವಿವಾಹವಾಗುತ್ತದೆ. ವಿದ್ಯಾಭ್ಯಾಸದಲ್ಲಿ ಸದಾ ಉನ್ನತ ಸಾಧನೆ ಮಾಡುತ್ತಾರೆ. ಇವರಿಗೆ ಅಚ್ಚರಿ ಎನಿಸುವಂಥ ಜ್ಞಾಪಕಶಕ್ತಿ ಇರುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬದಲ್ಲಿನ ಪೂರ್ಣ ಹೊಣೆಗಾರಿಕೆ ದೊರೆಯುತ್ತದೆ. ಸಮಾಜದ ಗಣ್ಯವ್ಯಕ್ತಿಯಾಗಿ ಬಾಳುತ್ತಾರೆ. ಪ್ರಭಾವಿ ವ್ಯಕ್ತಿ ಆದರೂ ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸುವುದಿಲ್ಲ. ಶಿಕ್ಷಕರಾದಲ್ಲಿ ತಮ್ಮ ಅನುಭವ ಮತ್ತು ವಿದ್ಯೆಯನ್ನು ಎಲ್ಲರಿಗೂ ಹಂಚುವರು. 

ಇವರ ಸಲಹೆ ಮತ್ತು ಸಹಾಯವನ್ನು ಅರಸಿ ಬಂದವರಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಹಾಯ ಮಾಡುವರು. ಇವರಿಗೆ ಅಪಾರವಾದ ಧೈರ್ಯ ಇರುತ್ತದೆ. ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಾರೆ. ಇವರ ಮನಸ್ಸನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ತಮ್ಮ ರೀತಿ ನೀತಿಯ ಬಗ್ಗೆ ಇವರಿಗೆ ಹೆಮ್ಮೆ ಇರುತ್ತದೆ. ಆತ್ಮವಿಶ್ವಾಸವೂ ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ಬೇರೆಯವರ ಮಾತನ್ನು ಒಪ್ಪಿಕೊಳ್ಳುವುದಿಲ್ಲ.

ವೃದ್ದಾಪ್ಯದಲ್ಲಿಯೂ ಮತ್ತೊಬ್ಬರನ್ನು ಅವಲಂಬಿಸುವುದಿಲ್ಲ

ಉದ್ಯೋಗದಲ್ಲಿ ಅಧಿಕಾರಿಗಳಿಗೆ ಸರಿಸಮಾನವಾದ ಸ್ಥಾನ ಮಾನವನ್ನು ಗಳಿಸುತ್ತಾರೆ. ಇವರಿಗೆ ಕೆಲಸ ನೀಡುವ ಅಥವಾ ಆಶ್ರಯ ನೀಡುವ ವ್ಯಕ್ತಿಗಳಿಗೆ ತೊಂದರೆ ಆಗಲು ಬಿಡುವುದಿಲ್ಲ. ಇವರನ್ನು ನಂಬಿದವರಿಗೆ ಎಂದಿಗೂ ಕೇಡು ಉಂಟಾಗುವುದಿಲ್ಲ. ಒಳ್ಳೆಯ ಕೆಲಸ ಕಾರ್ಯಗಳಲ್ಲಿ ಎಲ್ಲರಿಗೂ ಮಾದರಿಯಾಗುತ್ತಾರೆ. ಲಿಂಗ, ಜಾತಿ ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದೇ ಮನೋಭಾವನೆಯಿಂದ ಕಾಣುತ್ತಾರೆ. 

ದಾಂಪತ್ಯ ಜೀವನವು ಸುಖ ಸಂತೋಷಗಳಿಂದ ಕೂಡಿರುತ್ತದೆ. ಸಂಗಾತಿ ಮತ್ತು ಮಕ್ಕಳ ಜೊತೆ ಶಾಂತಿ ಸಂಯಮದಿಂದ ವರ್ತಿಸುತ್ತಾರೆ. ಆದರೆ ತಮ್ಮ ಮಾತನ್ನು ಕೇಳದೇ ಹೋದಲ್ಲಿ ಅತಿಯಾದ ಕೋಪಕ್ಕೆ ಒಳಗಾಗುತ್ತಾರೆ. ವಿದ್ಯೆಯ ಪ್ರಚಾರಕ್ಕಾಗಿ ಶಾಲಾ ಕಾಲೇಜು ಅಥವಾ ಬೋಧನಾಕೇಂದ್ರವನ್ನು ಆರಂಭಿಸುತ್ತಾರೆ. ಕೆಲವೊಮ್ಮೆ ಜೀವನದಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ಮುಖದಲ್ಲಿ ಗಂಭೀರತೆ ಇದ್ದರೂ ವ್ಯಕ್ತಿತ್ವದಲ್ಲಿ ಬೇರೆಯದ್ದೇ ಆಗಿರುತ್ತದೆ.

ಬೇರೆಯವರ ಸಹಾಯ ಮತ್ತು ಪ್ರಭಾವ ಇಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಧಿಕಾರ ಗಳಿಸುತ್ತಾರೆ. ಹೆತ್ತವರ ಜೀವಿತಾವಧಿಯಲ್ಲಿಯೇ ಇವರು ಸಮಾಜದ ಪ್ರತಿಷ್ಠಿತ ವ್ಯಕ್ತಿಯಾಗಿ ಬಾಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಜವಾಬ್ದಾರಿಯನ್ನು ಒಪ್ಪಿಕೊಳ್ಳುತ್ತಾರೆ. ದೂರವಾದ ಬಂಧು ಬಳಗದವರನ್ನು ಒಂದು ಗೂಡಿಸುವಲ್ಲಿ ಸಫಲರಾಗುತ್ತಾರೆ. ತಮ್ಮ ಇಳಿ ವಯಸ್ಸಿನಲ್ಲೂ ಯಾರೊಬ್ಬರನ್ನು ಆಶ್ರಯಿಸದೆ ಬದುಕಲು ನಿರ್ಧರಿಸುತ್ತಾರೆ. ಮಕ್ಕಳ ಮತ್ತು ಒಳ್ಳೆಯ ಮನಸ್ಸಿನ ಆತ್ಮೀಯರ ಆಶ್ರಯವನ್ನೂ ಬಯಸದೇ ಸ್ವತಂತ್ರ ಜೀವನ ನಡೆಸುತ್ತಾರೆ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.