ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಚಿಕ್ಕ ವಯಸ್ಸಲ್ಲೇ ಕುಟುಂಬದ ಜವಾಬ್ದಾರಿ ಹೊರುತ್ತಾರೆ, ಸಹೋದ್ಯೋಗಿಗಳನ್ನು ಪ್ರೀತಿಯಿಂದ ಕಾಣುತ್ತಾರೆ; 30ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ

ಚಿಕ್ಕ ವಯಸ್ಸಲ್ಲೇ ಕುಟುಂಬದ ಜವಾಬ್ದಾರಿ ಹೊರುತ್ತಾರೆ, ಸಹೋದ್ಯೋಗಿಗಳನ್ನು ಪ್ರೀತಿಯಿಂದ ಕಾಣುತ್ತಾರೆ; 30ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ

Birth Date Astrology: ಯಾವುದೇ ವ್ಯಕ್ತಿಯ ಗ್ರಹಗತಿಗಳನ್ನು ನೋಡುವಾಗ ಜನ್ಮ ದಿನಾಂಕವನ್ನು ಪರಿಗಣಿಸಲಾಗುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಹೇಗಿರಬಹುದು ಎಂದು ಅಂದಾಜಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆಯೂ ಅವರ ಗುಣಧರ್ಮ ಹೇಗಿದೆ ಎಂಬುದನ್ನು ಹೇಳಬಹುದು. 30ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ ಹೀಗಿದೆ.

ಚಿಕ್ಕ ವಯಸ್ಸಲ್ಲೇ ಕುಟುಂಬದ ಜವಾಬ್ದಾರಿ ಹೊರುತ್ತಾರೆ, ಸಹೋದ್ಯೋಗಿಗಳನ್ನು ಪ್ರೀತಿಯಿಂದ ಕಾಣುತ್ತಾರೆ; 30ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ
ಚಿಕ್ಕ ವಯಸ್ಸಲ್ಲೇ ಕುಟುಂಬದ ಜವಾಬ್ದಾರಿ ಹೊರುತ್ತಾರೆ, ಸಹೋದ್ಯೋಗಿಗಳನ್ನು ಪ್ರೀತಿಯಿಂದ ಕಾಣುತ್ತಾರೆ; 30ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ (PC: Canva)

ಈ ದಿನಾಂಕದಲ್ಲಿ ಜನಿಸಿರುವವರಿಗೆ ಬಹಳ ಆತ್ಮವಿಶ್ವಾಸವಿರುತ್ತದೆ. ಇವರು ಸಮಾಜದಲ್ಲಿ ಉನ್ನತ ಸ್ಥಾನವನ್ನು ಬಯಸುತ್ತಾರೆ. ಪ್ರತಿಯೊಬ್ಬರಿಂದಲೂ ಗೌರವ ನಿರೀಕ್ಷಿಸುತ್ತಾರೆ. ವಯಸ್ಸಿನ ಅಂತರವಿಲ್ಲದೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುವುದು ಇವರಲ್ಲಿರುವ ವಿಶೇಷ ಗುಣ. ಇವರಿಗೆ ಐಷಾರಾಮಿ ಜೀವನ ಇಷ್ಟವಾಗದು. ಆದರೆ ಬಡತನದಲ್ಲಿ ಬಾಳಲು ಇಷ್ಟ ಪಡುವುದಿಲ್ಲ. ಈ ಕಾರಣದಿಂದ ಚಿಕ್ಕ ವಯಸ್ಸಿನಲ್ಲಿಯೇ ಹಣ ಸಂಪಾದನೆಯಲ್ಲಿ ತೊಡಗುತ್ತಾರೆ.

ಶುಚಿ ಇಲ್ಲದ ಆಹಾರ ಸೇವನೆಯಿಂದ ಅನಾರೋಗ್ಯ

ಈ ದಿನಾಂಕದಲ್ಲಿ ಜನಿಸಿದವರಿಗೆ ಉತ್ತಮ ಆರೋಗ್ಯ ವಿರುತ್ತದೆ. ಆದರೆ ಕೆಲವರು ಮಿತಿಮೀರಿದ ಅಥವಾ ಶುಚಿ ಇಲ್ಲದ ಆಹಾರ ಸೇವನೆಯಿಂದ ತೊಂದರೆಗೆ ಒಳಗಾಗುತ್ತಾರೆ. ತಮ್ಮ ಕಷ್ಟದ ದಿನಗಳಲ್ಲಿಯೂ ಸಹಾಯ ಕೇಳಿಸಿ ಬಂದವರಿಗೆ ಸಹಾಯ ಮಾಡುತ್ತಾರೆ. ಇವರ ಮುಖದಲ್ಲಿ ವಿಶೇಷ ತೇಜಸ್ಸು ಇರುತ್ತದೆ. ಇವರ ಕಂಠ ಮಾಧುರ್ಯ ಎಲ್ಲರನ್ನೂ ಗೆಲ್ಲುತ್ತದೆ. ಇವರು ಸಮಾಜದಲ್ಲಿನ ಲೋಪ ದೋಷಗಳನ್ನು ಸರಿಪಡಿಸಲು ಬಯಸುತ್ತಾರೆ. ಉದ್ಯೋಗದಲ್ಲಿ ಉನ್ನತ ಪದವಿ ದೊರೆತರೂ ಸಾಮಾನ್ಯರಂತೆ ಬದುಕುವುದು ಇವರ ಗುಣ. ತಮ್ಮ ಸಹೋದ್ಯೋಗಿಗಳನ್ನು ಸೋದರ ಸೋದರಿಯಂತೆ ನೋಡಿಕೊಳ್ಳುತ್ತಾರೆ. ರಾಜಕೀಯ ಕ್ಷೇತ್ರ ಇವರಿಗೆ ಇಷ್ಟವಾಗುವುದಿಲ್ಲ. ಆದರೆ ಇವರುಗಳು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿ ಬಾಳುತ್ತಾರೆ. ಎಲ್ಲರನ್ನೂ ಗೌರವಿಸುವ ಇವರು ಬೇರೆಯವರಿಂದ ಅಷ್ಟೇ ಗೌರವ ನಿರೀಕ್ಷಿಸುತ್ತಾರೆ.

ಇವರಿಗೆ ಉತ್ತಮ ಉದ್ಯೋಗವಿರುತ್ತದೆ. ಹಾಗೆಯೇ ಕಷ್ಟವಿಲ್ಲದ ಜೀವನವೂ ಇರುತ್ತದೆ. ವಿವಾಹದ ನಂತರ ಇವರ ಜೀವನ ಸುಖಮಯವಾಗಿರುತ್ತದೆ. ಇವರ ಮನಸ್ಸನ್ನು ಅರಿಯುವ ಸಂಗಾತಿ ದೊರೆಯುತ್ತಾರೆ. ಈ ಸಂಖ್ಯೆಯಲ್ಲಿ ಜನಿಸಿದವರು ಗೌರವ ಉಳಿಸಿಕೊಳ್ಳಲು ಯಾವುದೇ ತ್ಯಾಗಕ್ಕೂ ಸಿದ್ಧವಾಗುತ್ತಾರೆ. ತಂದೆ ಮತ್ತು ಸಂಗಾತಿಯ ಮೇಲೆ ವಿಶೇಷವಾದ ಪ್ರೀತಿ ನಂಬಿಕೆ ಇರುತ್ತದೆ. ಯಾವುದೇ ರಹಸ್ಯವಿಲ್ಲದೆ ಕುಟುಂಬದವರ ಜೊತೆ ಹಣಕಾಸಿನ ವಿಚಾರವನ್ನು ಚರ್ಚಿಸುತ್ತಾರೆ. ಹಣದ ತೊಂದರೆ ಇವರಿಗೆ ಇರುವುದಿಲ್ಲ. ಆದರೆ ಗಳಿಸಿದ ಹಣವನ್ನೆಲ್ಲಾ ವೆಚ್ಚ ಮಾಡುತ್ತಾರೆ. ಸಂಬಂಧದಲ್ಲಿ ವಿವಾಹವಾಗಲು ಇಷ್ಟಪಡುವುದಿಲ್ಲ. ಸಾಮಾನ್ಯವಾಗಿ ಇವರು ತಂದೆಯ ಮನಸ್ಸಿಗೆ ಅನುಗುಣವಾಗಿ ವಿವಾಹವಾಗುತ್ತಾರೆ. ಹೆತ್ತವರಿಗೆ ಎಂದಿಗೂ ನಿರಾಶೆ ಮಾಡಲು ಇಷ್ಟಪಡುವುದಿಲ್ಲ.

ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿ

ಈ ದಿನಾಂಕದಲ್ಲಿ ಜನಿಸಿದ ಮಹಿಳೆಯರಿಗೆ ಸುಲಭವಾಗಿ ಉನ್ನತ ಅಧಿಕಾರ ಲಭ್ಯವಾಗುತ್ತದೆ. ಇವರಿಗೆ ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಹೆಚ್ಚಿನ ಜವಾಬ್ದಾರಿ ದೊರೆಯುತ್ತದೆ. ಸದಾಕಾಲ ಯಾವುದಾದರೂ ಒಂದು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಕುಲದಲ್ಲೇ ಇವರಿಗೆ ವಿಶೇಷ ಸ್ಥಾನಮಾನ ದೊರೆಯುತ್ತದೆ. ವಂಶದಲ್ಲಿಯೇ ಇವರು ನೆನಪಿನಲ್ಲಿ ಇರುವಂಥ ಕೆಲಸವನ್ನು ಮಾಡುತ್ತಾರೆ. ಸಂಗೀತ ನಾಟ್ಯದಂಥ ಸಾಂಪ್ರದಾಯಿಕ ಕಲೆಗಳು ಇವರಿಗೆ ತಿಳಿದಿರುತ್ತದೆ. ಕೊಳಲು ವಾದ್ಯ ಎಂದರೆ ಬಹಳ ಇಷ್ಟ.

ಇವರು ಅನೇಕ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ. ಬಯಸದೇ ಹೋದರೂ ಅಸಾಧಾರಣ ಜನಪ್ರಿಯತೆ ಗಳಿಸುತ್ತಾರೆ. ಕುಟುಂಬದ ಎಲ್ಲರ ಆರೋಗ್ಯವನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಅತಿಯಾದ ಆಸೆ ಇಲ್ಲದೆ ಒಂದೇ ಉದ್ಯೋಗದಲ್ಲಿ ಬಹುಕಾಲ ಇರುತ್ತಾರೆ. ತಮ್ಮ ಒಳ್ಳೆಯ ಮನಸ್ಸಿನಿಂದ ಸಹೋದ್ಯೋಗಿಗಳ ಮನಸ್ಸನ್ನು ಗೆಲ್ಲುತ್ತಾರೆ. ಸಣ್ಣ ಪ್ರಮಾಣದ ಕೆಲಸವಾದರೂ ಹೆಚ್ಚಿನ ಆಸಕ್ತಿ ತೋರಿ ಕಾರ್ಯ ನಿರ್ವಹಿಸುತ್ತಾರೆ. ಪ್ರಾಣಿಗಳನ್ನು ಸಾಕುವುದೆಂದರೆ ಇವರಿಗೆ ಆಗುವುದಿಲ್ಲ. ಆದರೆ ಪ್ರಾಣಿಗಳ ಪೋಷಣೆಗೆ ಸಹಾಯ ಮಾಡುತ್ತಾರೆ. ಸ್ವಂತ ಬಳಕೆಗಾಗಿ ಐಷಾರಾಮಿ ವಾಹನವೂ ಇವರ ಬಳಿ ಇರುತ್ತದೆ. ಆದಾಯದಲ್ಲಿ ಯಾವುದೇ ಬದಲಾವಣೆ ಉಂಟಾದರೂ ಗಂಭೀರವಾಗಿ ಸ್ವೀಕರಿಸುವುದಿಲ್ಲ.

ಇಳಿ ವಯಸ್ಸಿನಲ್ಲೂ ಕೆಲಸ ಮಾಡುವ ಉತ್ಸಾಹ

ಕಷ್ಟ ಸುಖಗಳನ್ನು ಸಮಾನ ಭಾವನೆಯಲ್ಲಿ ಸ್ವೀಕರಿಸುತ್ತಾರೆ. ಇಳಿ ವಯಸಿನಲ್ಲಿಯೂ ಸಹ ಕೆಲಸ ಕಾರ್ಯಗಳನ್ನು ಮಾಡಿ ಸ್ವತಂತ್ರ ಜೀವನವನ್ನು ನಡೆಸುತ್ತಾರೆ. ಪ್ರಯಾಣ ಮಾಡುವುದೆಂದರೆ ಇವರಿಗೆ ಬಲು ಆಸೆ. ಆದರೆ ಹೆಚ್ಚಿನ ಹಣ ವಿನಿಯೋಗಿಸುವುದಿಲ್ಲ. ಜನರ ಗುಂಪಿನಲ್ಲಿ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವುದು ಇವರಿಗೆ ಸಂತಸ ಉಂಟು ಮಾಡುತ್ತದೆ. ಇವರ ಮಕ್ಕಳು ಗುರು ಹಿರಿಯರನ್ನು ಗೌರವ ಭಾವನೆಯಿಂದ ನೋಡುತ್ತಾರೆ.

ಈ ವ್ಯಕ್ತಿಗಳ ಮೇಲೆ ಕುಟುಂಬದವರ ಮತ್ತು ಬಂಧು ಬಳಗದವರ ಪ್ರೀತಿ ವಿಶ್ವಾಸ ಸದಾ ಕಾಲ ಇರುತ್ತದೆ. ವಯಸ್ಸಾದರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಆತ್ಮೀಯರಿಂದ ಇವರು ಹೊಗಳಿಕೆಯನ್ನು ಇಷ್ಟಪಡುತ್ತಾರೆ. ಸಾಲದ ಹಣದಿಂದ ಜನರೊಂದಿಗೆ ವೈರತ್ವ ಉಂಟಾಗುತ್ತದೆ ಎಂಬ ಭಾವನೆ ಇವರಲ್ಲಿರುತ್ತದೆ. ಆದ್ದರಿಂದ ಸಾಲದ ವ್ಯವಹಾರ ಇವರಿಗೆ ಇಷ್ಟವಾಗದು.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).