ನವೆಂಬರ್ 28ರ ಸಂಖ್ಯಾಶಾಸ್ತ್ರ: ಈ ದಿನಾಂಕಗಳಲ್ಲಿ ಜನಿಸಿದವರಿಗೆ ಆರ್ಥಿಕ ಲಾಭ ಹೆಚ್ಚು, ಎಲ್ಲಾ ರಾಡಿಕ್ಸ್ ಸಂಖ್ಯೆಯವರ ಅದೃಷ್ಟ ಹೀಗಿದೆ
ನವೆಂಬರ್ 28ರ ಸಂಖ್ಯಾಶಾಸ್ತ್ರ: ಜ್ಯೋತಿಷ್ಯದಂತೆ, ಸಂಖ್ಯಾಶಾಸ್ತ್ರವೂ ಜನರ ಭವಿಷ್ಯ, ಮನೋಧರ್ಮ ಹಾಗೂ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ಪ್ರತಿಯೊಂದು ಹೆಸರಿನ ಪ್ರಕಾರ ರಾಶಿಚಕ್ರವಿರುವಂತೆಯೇ, ಪ್ರತಿ ಸಂಖ್ಯೆಯ ಪ್ರಕಾರ ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸಂಖ್ಯೆಗಳಿವೆ. ನವೆಂಬರ್ 28ರ ಗುರುವಾರ ನಿಮ್ಮ ಭವಿಷ್ಯ, ವ್ಯಕ್ತಿತ್ವನ್ನು ತಿಳಿಯಿರಿ.
ನವೆಂಬರ್ 28ರ ಸಂಖ್ಯಾಶಾಸ್ತ್ರ: ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಸಂಖ್ಯೆಗಳನ್ನು ಕಂಡುಹಿಡಿಯಲು, ನೀವು ನಿಮ್ಮ ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷವನ್ನು ಯುನಿಟ್ ಅಂಕಿಗೆ ಸೇರಿಸಿ ನಂತರ ಬರುವ ಸಂಖ್ಯೆ ನಿಮ್ಮ ಅದೃಷ್ಟ ಸಂಖ್ಯೆಯಾಗುತ್ತದೆ. ಉದಾಹರಣೆಗೆ, ತಿಂಗಳ 7, 16 ಮತ್ತು 29 ರಂದು ಜನಿಸಿದ ಜನರು ಸಂಖ್ಯೆ 7 ಅನ್ನು ಹೊಂದಿರುತ್ತಾರೆ. 1-9 ರಾಡಿಕ್ಸ್ ಸಂಖ್ಯೆಯನ್ನು ಹೊಂದಿರುವವರಿಗೆ ನವೆಂಬರ್ 28 ರ ಗುರುವಾರ ಹೇಗಿರುತ್ತದೆ ಎಂದು ತಿಳಿಯಿರಿ.
ಸಂಖ್ಯೆ-1: ಈ ಸಂಖ್ಯೆಯವರಿಗೆ ಉತ್ತಮ ದಿನವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳಿಂದ ಬೆಂಬಲ ಇರುತ್ತದೆ. ತಂದೆಯ ಸಹಾಯದಿಂದ ಆರ್ಥಿಕ ಲಾಭದ ಸೂಚನೆಗಳಿವೆ. ಕುಟುಂಬದ ಸದಸ್ಯರು ಒಳ್ಳೆಯ ಸುದ್ದಿ ನೀಡಬಹುದು. ಅನಗತ್ಯ ಚರ್ಚೆಗಳನ್ನು ತಪ್ಪಿಸಿ. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ.
ಸಂಖ್ಯೆ-2: ನಿಮಗೆ ಪ್ರಯೋಜನಕಾರಿ ದಿನವಾಗಲಿದೆ. ನೀವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರಿಗೆ ಬೆಂಬಲ ಸಿಗಲಿದೆ. ಒಡಹುಟ್ಟಿದವರೊಂದಿಗಿನ ಸಂಬಂಧಗಳು ಬಲವಾಗಿರುತ್ತವೆ. ವ್ಯವಹಾರದಲ್ಲಿ ಲಾಭ ಹೆಚ್ಚಾಗಲಿದೆ. ಮಾನಸಿಕ ಒತ್ತಡವನ್ನು ತೊಡೆದುಹಾಕುವಿರಿ.
ಸಂಖ್ಯೆ-3: ರಾಡಿಕ್ಸ್ 3 ರ ಹೊಂದಿರುವವರಿಗೆ ಸಾಮಾನ್ಯ ದಿನವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಉದ್ಯೋಗದಲ್ಲಿರುವವರಿಗೆ ಪ್ರಗತಿಯ ಹಾದಿ ತೆರೆಯುತ್ತದೆ. ಅದೃಷ್ಟವಶಾತ್, ಸ್ಥಗಿತಗೊಂಡ ಕೆಲವು ಕಾರ್ಯಗಳು ಪೂರ್ಣಗೊಳ್ಳುತ್ತವೆ. ಮಕ್ಕಳಿಗೆ ಬೆಂಬಲ ಸಿಗಲಿದೆ.
ಸಂಖ್ಯೆ-4: ಈ ಸಂಖ್ಯೆಯವರಿಗೆ ಏರಿಳಿತಗಳಿಂದ ತುಂಬಿದ ದಿನವಾಗಿರುತ್ತದೆ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ, ಇಲ್ಲದಿದ್ದರೆ ಆರ್ಥಿಕ ನಷ್ಟವಾಗಬಹುದು. ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ವ್ಯಾಪಾರ ಮಾಡುವವರ ಕೆಲಸದ ಕ್ಷೇತ್ರದಲ್ಲಿ ಲಾಭಗಳು ಇರುತ್ತವೆ. ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗುವಿರಿ.
ಸಂಖ್ಯೆ-5: ನಿಮಗೆ ಉತ್ತಮ ದಿನವಾಗಲಿದೆ. ಹಳೆಯ ಸ್ನೇಹಿತನನ್ನು ಭೇಟಿಯಾಗುತ್ತೀರಿ. ಜೀವನ ಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳಲಿವೆ. ಒಡ ಹುಟ್ಟಿದವರೊಂದಿಗಿನ ನೆನಪುಗಳನ್ನು ಉಲ್ಲಾಸಗೊಳಿಸಬಹುದು. ಅನಗತ್ಯ ಚರ್ಚೆಗಳಿಂದ ದೂರವಿರಿ.
ಸಂಖ್ಯೆ-6: ಈ ಸಂಖ್ಯೆಯವರಿಗೆ ಉತ್ತಮ ದಿನವಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುವಿರಿ. ಮಾನಸಿಕ ಒತ್ತಡ ನಿವಾರಣೆಯಾಗಲಿದೆ. ಹೂಡಿಕೆಗೆ ಉತ್ತಮ ಅವಕಾಶಗಳು ಸಿಗಲಿವೆ. ಕುಟುಂಬದೊಂದಿಗೆ ಎಲ್ಲಿಗಾದರೂ ಸಣ್ಣ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡುತ್ತೀರಿ.
ಸಂಖ್ಯೆ-7: ರಾಡಿಕ್ಸ್ ಸಂಖ್ಯೆ 7 ಅನ್ನು ಹೊಂದಿರುವವರಿಗೆ ಮಧ್ಯಮ ಫಲತಾಂಶಗಳು ಇರುತ್ತವೆ. ಉದ್ಯೋಗದಲ್ಲಿರುವವರಿಗೆ ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ವ್ಯವಹಾರದಲ್ಲಿ ಬೆಳವಣಿಗೆಗೆ ಅವಕಾಶಗಳು ಇರುತ್ತವೆ. ಪ್ರಯಾಣ ಮಾಡುವಾಗ ಎಚ್ಚರಿಕೆ ವಹಿಸಿ. ಅಪರಿಚಿತ ಜನರೊಂದಿಗೆ ಹಣದ ವಿಷಯಗಳಲ್ಲಿ ಜಾಗರೂಕರಾಗಿರಿ.
ಸಂಖ್ಯೆ-8: ದೈಹಿಕ ಸಂತೋಷಗಳು ಹೆಚ್ಚಾಗುತ್ತವೆ. ಮಾನಸಿಕ ಒತ್ತಡ ನಿವಾರಣೆಯಾಗಲಿದೆ. ಹಣದ ನಷ್ಟದ ಚಿಹ್ನೆಗಳಿವೆ, ಆದ್ದರಿಂದ ಹಣಕಾಸಿನ ವಿಷಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಯು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು.
ಸಂಖ್ಯೆ-9: ನೀವು ಹೊಸ ಜನರನ್ನು ಭೇಟಿಯಾಗುತ್ತೀರಿ. ಸಾಮಾಜಿಕ ಗೌರವ ಹೆಚ್ಚಾಗುತ್ತದೆ. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಿ. ನೀವು ವ್ಯವಹಾರದಲ್ಲಿ ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ. ಒಡಹುಟ್ಟಿದವರು ಆರ್ಥಿಕವಾಗಿ ಸಹಾಯ ಮಾಡಬೇಕಾಗಬಹುದು.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.