ಈ ದಿನಾಂಕಗಳಲ್ಲಿ ಹುಟ್ಟಿದವರು ನಿಮ್ಮ ಜೀವನಕ್ಕೆ ಬಂದರೆ ಭಾರಿ ಅದೃಷ್ಟ; ಕೊರೆತೆಯೇ ಇರುವುದಿಲ್ಲ, ಸಂತೋಷದಿಂದ ಬಾಳುವಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ದಿನಾಂಕಗಳಲ್ಲಿ ಹುಟ್ಟಿದವರು ನಿಮ್ಮ ಜೀವನಕ್ಕೆ ಬಂದರೆ ಭಾರಿ ಅದೃಷ್ಟ; ಕೊರೆತೆಯೇ ಇರುವುದಿಲ್ಲ, ಸಂತೋಷದಿಂದ ಬಾಳುವಿರಿ

ಈ ದಿನಾಂಕಗಳಲ್ಲಿ ಹುಟ್ಟಿದವರು ನಿಮ್ಮ ಜೀವನಕ್ಕೆ ಬಂದರೆ ಭಾರಿ ಅದೃಷ್ಟ; ಕೊರೆತೆಯೇ ಇರುವುದಿಲ್ಲ, ಸಂತೋಷದಿಂದ ಬಾಳುವಿರಿ

ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಮನುಷ್ಯನ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು. ಈ ದಿನಾಂಕಗಳಲ್ಲಿ ಜನಿಸಿದವರು ನಿಮ್ಮ ಜೀವನಕ್ಕೆ ಪ್ರವೇಶಿಸಿದರೆ ನೀವು ತುಂಬಾ ಅದೃಷ್ಟವಂತರು.

ಸಂಖ್ಯಾಶಾಸ್ತ್ರದ ಪ್ರಕಾರ, ಈ ದಿನಾಂಕಗಳಲ್ಲಿ ಜನಿಸಿದವರು ನಿಮ್ಮ ಜೀವನದಲ್ಲಿ ಪ್ರವೇಶಿದರು, ನೀವು ತುಂಬಾ ಅದೃಷ್ಟವಂತರು. ಸಂತೋಷಕ್ಕೆ ಕೊರತೆಯೇ ಇರುವುದಿಲ್ಲ
ಸಂಖ್ಯಾಶಾಸ್ತ್ರದ ಪ್ರಕಾರ, ಈ ದಿನಾಂಕಗಳಲ್ಲಿ ಜನಿಸಿದವರು ನಿಮ್ಮ ಜೀವನದಲ್ಲಿ ಪ್ರವೇಶಿದರು, ನೀವು ತುಂಬಾ ಅದೃಷ್ಟವಂತರು. ಸಂತೋಷಕ್ಕೆ ಕೊರತೆಯೇ ಇರುವುದಿಲ್ಲ

ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಅನೇಕ ವಿಷಯಗಳನ್ನು ತಿಳಿಯಬಹುದು. ಸಂಖ್ಯಾಶಾಸ್ತ್ರದ ಆಧಾರದ ಮೇಲೆ, ಒಬ್ಬ ವ್ಯಕ್ತಿಯ ನಡವಳಿಕೆ ಹೇಗಿರುತ್ತದೆ, ಜೊತೆಗೆ ಅವರ ಪ್ರೀತಿಯ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಸಂಖ್ಯಾಶಾಸ್ತ್ರದ ಆಧಾರದ ಮೇಲೆ, ವ್ಯಕ್ತಿಯ ಜೀವನದಲ್ಲಿ ಸಂಭವಿಸಲಿರುವ ವಿಷಯಗಳ ಬಗ್ಗೆಯೂ ಗೊತ್ತಾಗುತ್ತದೆ. ಈ ದಿನಾಂಕಗಳಲ್ಲಿ ಜನಿಸಿದವರು ನಿಮ್ಮ ಸಂಗಾತಿಯಾಗಿ ಬಂದರೆ ಪೂರ್ಣ ಹೃದಯದಿಂದ ನಿಮ್ಮನ್ನು ಪ್ರೀತಿಸುತ್ತಾರೆ. ತುಂಬಾ ರೋಮ್ಯಾಟಿಂಗ್ ಜೀವನ್ನು ನಡೆಸಬಹುದು. ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸಂಖ್ಯಾಶಾಸ್ತ್ರದ ಪ್ರಕಾರ, 5, 14 ಮತ್ತು 23 ರಂದು ಜನಿಸಿದವರ ರಾಡಿಕ್ಸ್ ಸಂಖ್ಯೆ 5 ಆಗಿರುತ್ತದೆ. ಬುಧ ಈ ಸಂಖ್ಯೆಯ ಅಧಿಪತಿ. ಬುದ್ಧಿವಂತಿಕೆ, ಸಂವಹನ ಮತ್ತು ವ್ಯವಹಾರದ ಏಜೆಂಟ್ ಆಗಿದ್ದಾನೆ.

ರಾಡಿಕ್ಸ್ ಸಂಖ್ಯೆ 5 ಹೊಂದಿರುವವರ ಜೀವನ ಹೇಗಿರುತ್ತೆ

ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕ 5 ಹೊಂದಿರುವವರು ತುಂಬಾ ಬುದ್ಧಿವಂತರು. ಸಂದರ್ಭಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇತರರನ್ನು ಸುಲಭವಾಗಿ ಮೆಚ್ಚಿಸುತ್ತಾರೆ. ಉತ್ತಮ ಸಂವಹನ ಕೌಶಲ್ಯಗಳನ್ನು ಸಹ ಹೊಂದಿರುತ್ತಾರೆ.

ವ್ಯವಹಾರದಲ್ಲಿ ಯಶಸ್ಸು

ರಾಡಿಕ್ಸ್ ನಂ 5 ಹೊಂದಿರುವವರು ವ್ಯವಹಾರದಲ್ಲಿ ಸುಲಭವಾಗಿ ಯಶಸ್ವಿಯಾಗುತ್ತಾರೆ, ಅಪಾಯಗಳನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುವುದಿಲ್ಲ. ಹೊಸ ರೀತಿಯಲ್ಲಿ ಲಾಭ ಗಳಿಸಲು ಪ್ರಯತ್ನಿಸುತ್ತಾರೆ. ಈ ಸಂಖ್ಯೆಯವರು ತಮ್ಮ ಆಲೋಚನೆಗಳು ಮತ್ತು ಬುದ್ಧಿವಂತಿಕೆಯಿಂದ ಇತರರನ್ನು ಸುಲಭವಾಗಿ ಮೆಚ್ಚಿಸಬಹುದು.

ರಾಡಿಕ್ಸ್ ಸಂಖ್ಯೆ 5 ಹೊಂದಿರುವವರ ಪ್ರೀತಿಯ ಜೀವನ

ಇವರು ಪ್ರೀತಿಯ ಬಗ್ಗೆ ತುಂಬಾ ಗಂಭೀರವಾಗಿರುತ್ತಾರೆ. ಭಾವುಕ ವ್ಯಕ್ತಿತ್ವದವರು. ಪ್ರೀತಿಯಲ್ಲಿ ಬಿದ್ದರೂ, ಪ್ರೀತಿಸುವ ವ್ಯಕ್ತಿಗೆ ತಕ್ಷಣ ಹೇಳುವುದಿಲ್ಲ. ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಅವರು ಪ್ರೀತಿಸುವವರನ್ನು ಪೂರ್ಣ ಹೃದಯದಿಂದ ಪ್ರೀತಿಸುತ್ತಾರೆ. ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ. ಸಂಗಾತಿಯ ಭಾವನೆಗಳನ್ನು ಸಹ ಅರ್ಥಮಾಡಿಕೊಳ್ಳುತ್ತಾರೆ. ಇವರ ದಾಂಪತ್ಯ ಜೀವನ ತುಂಬಾ ಸಖವಾಗಿ ಹಾಗೂ ಸಂತೋಷದಿಂದ ಕೂಡಿರುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.