ನೀವು ಲವ್ ಮ್ಯಾರೇಜ್ ಆಗ್ತೀರಾ ಅಥವಾ ಅರೇಂಜ್ ಮ್ಯಾರೇಜ್? ಸಂಖ್ಯೆ ಹೇಳುತ್ತೆ ನಿಮ್ಮ ದಾಂಪತ್ಯದ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನೀವು ಲವ್ ಮ್ಯಾರೇಜ್ ಆಗ್ತೀರಾ ಅಥವಾ ಅರೇಂಜ್ ಮ್ಯಾರೇಜ್? ಸಂಖ್ಯೆ ಹೇಳುತ್ತೆ ನಿಮ್ಮ ದಾಂಪತ್ಯದ ಭವಿಷ್ಯ

ನೀವು ಲವ್ ಮ್ಯಾರೇಜ್ ಆಗ್ತೀರಾ ಅಥವಾ ಅರೇಂಜ್ ಮ್ಯಾರೇಜ್? ಸಂಖ್ಯೆ ಹೇಳುತ್ತೆ ನಿಮ್ಮ ದಾಂಪತ್ಯದ ಭವಿಷ್ಯ

ಮದುವೆ ಜೀವನದ ಬಹುಮುಖ್ಯ ಹಂತ. ಕೆಲವೊಬ್ಬರು ಲವ್‌ ಮ್ಯಾರೇಜ್‌ ಇಷ್ಟಪಟ್ಟರೆ, ಇನ್ನೂ ಕೆಲವರಿಗೆ ಪ್ರೀತಿ ಪ್ರೇಮ ಎಂಬುದರಲ್ಲಿ ಅಷ್ಟೊಂದು ಆಸಕ್ತಿ ಇರುವುದಿಲ್ಲ. ಮದುವೆ ಯಾರೊಂದಿಗೆ ಆಗುತ್ತೇವೆ ಎನ್ನುವುದು ಹುಟ್ಟುವಾಗಲೇ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹಾಗಿದ್ದರೆ ನೀವು ಲವ್‌ ಮ್ಯಾರೇಜ್‌ ಆಗ್ತೀರಾ ಅಥವಾ ಅರೇಂಜ್‌ ಮದುವೆಯಾ ಎಂಬುದನ್ನು ತಿಳಿಯಿರಿ.

ನೀವು ಲವ್ ಮ್ಯಾರೇಜ್ ಆಗ್ತೀರಾ ಅಥವಾ ಅರೇಂಜ್ ಮ್ಯಾರೇಜ್?
ನೀವು ಲವ್ ಮ್ಯಾರೇಜ್ ಆಗ್ತೀರಾ ಅಥವಾ ಅರೇಂಜ್ ಮ್ಯಾರೇಜ್? (Pexel)

ಬದುಕಿನ ಪ್ರಮುಖ ಘಟ್ಟ ಮದುವೆ. ಒಬ್ಬರು ಇಬ್ಬರಾಗುವ ಮಹತ್ವದ ನಿರ್ಧಾರ ಮಾಡಿದ ಬಳಿಕ ದಾಂಪತ್ಯ ಜೀವನಕ್ಕೆ ಜೀವನಕ್ಕೆ ಕಾಲಿಡುವುದು ಅರ್ಥಪೂರ್ಣ. ಮದುವೆಗೂ ಮೊದಲು ಸಂಬಂಧ ಕೂಡಿ ಬರಲು ಜಾತಕ ನೋಡುವ ಕ್ರಮವಿದೆ. ಸಂಬಂಧ ಕೂಡಿಬಂದರೆ ಮಾತ್ರ ಮದುವೆಯಾಗುವ ಕ್ರಮವಿದೆ. ಸಂಖ್ಯಾಶಾಸ್ತ್ರದ ಸಂಖ್ಯೆಗಳ ಸಾಮ್ಯತೆ ಮೂಲಕ ನೀವು ಲವ್ ಮ್ಯಾರೇಜ್ ಆಗುತ್ತೀರಾ ಅಥವಾ ಅರೇಂಜ್‌ ಮ್ಯಾರೇಜ್ ಆಗುತ್ತೀರಾ ಎಂಬುದನ್ನು ಅಂದಾಜಿಸಬಹುದು. ಜನ್ಮದಿನಾಂಕದ ಆಧಾರದಲ್ಲಿ ನಿಮ್ಮದು ಪ್ರೇಮವಿವಾಹ ಅಥವಾ ನಿಶ್ಚಯಿತ ವಿವಾಹ ಎಂಬುದನ್ನು ತಿಳಿಯೋಣ.

ಈ ದಿನಾಂಕಗಳಲ್ಲಿ ಜನಿಸಿದವರು ಅರೇಂಜ್‌ ಮ್ಯಾರೇಜ್‌ ಆಗಬಹುದು

  • ಸಂಖ್ಯೆ 8 (ಯಾವುದೇ ತಿಂಗಳ 8, 18 ಮತ್ತು 26 ರಂದು ಜನಿಸಿದ ಜನರು)

ಈ ರಾಡಿಕ್ಸ್‌ ಸಂಖ್ಯೆಯ ವ್ಯಕ್ತಿಗಳು ತಮ್ಮ ಕೆಲಸ, ಸಾಧನೆ, ಗುರಿ ಎಂದು ಸದಾ ಬ್ಯುಸಿಯಾಗುತ್ತಾರೆ. ಅವರು ತಮ್ಮ ಗುರಿ ಮತ್ತು ವೃತ್ತಿಜೀವನಕ್ಕೆ ಹೆಚ್ಚು ಒತ್ತು ನೀಡುವುದರಿಂದ ವ್ಯವಸ್ಥಿತ ವಿವಾಹ ಹಾಗೂ ಸ್ಥಿರವಾದ ಕುಟುಂಬ ಜೀವನದ ಕುರಿತು ಯೋಚಿಸಬಹುದು. ಮದುವೆಯ ಬಗ್ಗೆ ನಿಧಾನವಾಗಿ ಯೋಚಿಸಿ ಅರೇಂಜ್‌ ಮ್ಯಾರೇಜ್‌ ಆಗುವ ಸಾಧ್ಯತೆ ಹೆಚ್ಚು.

  • ಸಂಖ್ಯೆ 4 (ಯಾವುದೇ ತಿಂಗಳ 14, 22 ಮತ್ತು 31 ರಂದು ಜನಿಸಿದವರು)

ಈ ವ್ಯಕ್ತಿಗಳು ಸಾಂಪ್ರದಾಯಿಕ ನಂಬಿಕೆಗಳಿಗೆ ಹೆಸರುವಾಸಿ. ಸಹಜವಾಗಿಯೇ ಇವರು ನಿಶ್ಚಯಿತ ವಿವಾಹಕ್ಕೆ ಚೆನ್ನಾಗಿ ಹೊಂದಿಕೊಳ್ಳಬಹುದು. ಕುಟುಂಬ ಯೋಜನೆ ಬಗ್ಗೆ ನಿಧಾನವಾಗಿ ಯೋಚನೆ ಮಾಡಿ ನಿಶ್ಚಯಿತ ವಿವಾಹವಾಗುತ್ತಾರೆ.

ಈ ದಿನಾಂಕಗಳಲ್ಲಿ ಜನಿಸಿದವರು ಪ್ರೇಮ ವಿವಾಹ ಆಗಬಹುದು

  • ಸಂಖ್ಯೆ 5 (ಯಾವುದೇ ತಿಂಗಳ 5, 14 ಅಥವಾ 23ರಂದು ಜನಿಸಿದವರು)

ಈ ರಾಡಿಕ್ಸ್‌ ಸಂಖ್ಯೆಯ ಜನರು ಸ್ವಾತಂತ್ರ್ಯ ಜೀವಿಗಳು. ಅವರ ಸಾಹಸಮಯ ಸ್ವಭಾವದಿಂದಾಗಿ, ಅವರು ಪ್ರತಿದಿನವೂ ಹೊಸತನವನ್ನು ಅನ್ವೇಷಿಸಲು ಬಯಸುತ್ತಾರೆ. ಅವರು ತಮ್ಮ ಉತ್ಸಾಹ ಮತ್ತು ತಮ್ಮ ಬಯಕೆಯನ್ನು ಪೂರೈಸುವ ಸಲುವಾಗಿ ಅಸಾಂಪ್ರದಾಯಿಕ ಮಾರ್ಗದಲ್ಲಿ ಹೋಗಬಹುದು. ಆ ಮೂಲಕ ಪ್ರೇಮ ವಿವಾಹಕ್ಕೆ ಮುಂದಾಗಬಹುದು.

  • ಸಂಖ್ಯೆ 3 (ಯಾವುದೇ ತಿಂಗಳ 3, 12, 21 ರಂದು ಜನಿಸಿದವರು)

ಇವರು ಬಾಯಿಬಡುಕರು. ಸೃಜನಶೀಲತೆ ಇಷ್ಟಪಡುತ್ತಾರೆ. ಒಬ್ಬರತ್ತ ಬೇಗನೆ ಆಕರ್ಷಿತರಾಗಿ ತಮ್ಮ ಸಂಗಾತಿಯೊಂದಿಗೆ ನಿಕಟ ಬಂಧವನ್ನು ಹಂಚಿಕೊಳ್ಳುತ್ತಾರೆ. ಅದರೊಂದಿಗೆ ಪ್ರೇಮ ವಿವಾಹಕ್ಕೆ ಮನಸ್ಸು ಮಾಡುತ್ತಾರೆ.

  • ಸಂಖ್ಯೆ 6 (ಯಾವುದೇ ತಿಂಗಳ 6, 15, 24 ರಂದು ಜನಿಸಿದ ಜನರು)

ಜವಾಬ್ದಾರಿ ಹಾಗೂ ಕುಟುಂಬದ ಬಗ್ಗೆ ಹೆಚ್ಚು ಕಾಳಜಿಯುಳ್ಳವರು. ಇವರು ಸಂಬಂಧದಲ್ಲಿ ಸಾಮರಸ್ಯ ಮತ್ತು ಸಮತೋಲನ ಕಾಪಾಡುತ್ತಾರೆ. ಇದು ಅವರನ್ನು ಆಳವಾದ ಪ್ರಣಯ ಬಂಧದತ್ತ ಬೀಳೀಸಬಹುದು.

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.